POLICE BHAVAN KALABURAGI

POLICE BHAVAN KALABURAGI

31 October 2011

GULBARGA DIST REPORTED CRIMES

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ
: ಶ್ರೀ ಮತಿ ಸರುಬಾಯಿ ಗಂಡ ಶಿವಲಿಂಗಪ್ಪ ಗುಡ್ಡಡಗಿ ಉ: ಕೂಲಿ ಕೆಲಸ ಸಾ: ಜಗತ ಗುಲಬರ್ಗಾ ರವರು ನಾನು ರಾತ್ರಿ 8 -00 ಸುಮಾರಿಗೆ ಮಹಾ ನಗರ ಪಾಲಿಕೆ ಎದುರುಗಡೆ ರೋಡಿನ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಜಗತ ಸರ್ಕಲ್ ಕಡೆಯಿಂದ ಮೋ/ಸೈಕಲ್ CHESSI NO:MD2DHDKZUCF43902 ENGINE NO: DKGBUF58923 ನೇದ್ದನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 137/11 ಕಲಂ: 279 .338 ಐ.ಪಿ.ಸಿ ಸಂ:187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕಳ್ಳತನ ಪ್ರಕರಣ :

ಅಶೋಕ ನಗರ ಠಾಣೆ : ಶ್ರೀ ಗುರುಪುತ್ರ ತಂದೆ ಮಹಾಂತಪ್ಪ ಯರಗಲ್ ಸಾ|| ಜೀವನ ಪ್ರಕಾಶ ಶಾಲೆ ಹತ್ತಿರ ಹಳೆ ಜೇವರ್ಗಿ ರೋಡ ಗುಲಬರ್ಗಾ ರವರು ನಾನು ದಿನಾಂಕ:29/10/2011 ರಂದು ರಾತ್ರಿ 9:00 ಗಂಟೆಯವರೆಗೆ ವೆಲ್ಡಿಂಗ ವರ್ಕ ಶಾಪ ಕೆಲಸ ಮುಗಿಸಿಕೊಂಡು ಅಂಗಡಿಗೆ ಕೀಲಿ ಹಾಕಿಕೊಂಡು ಹೋಗಿರುತ್ತೇನೆ ದಿನಾಂಕ:30/10/2011 ರಂದು ಬೆಳಿಗ್ಗೆ ಬಂದು ನೋಡಲಾಗಿ ಅಂಗಡಿಯ ಕೀಲಿ ಮುರಿದಿದ್ದು ಅಂಡಿಯಲ್ಲಿದ್ದ ಕಟಾರ ಮಶೀನ್, ವೆಲ್ಡಿಂಗ ಮಶೀನ್, ಕಬ್ಬಿಣದ ತುಕಡಿಗಳು, ಗ್ರಾಂಡರ್ ಮಶೀನ್ ಹೀಗೆ ಸುಮಾರು ಸುಮಾರು 10,750/- ಬೆಲೆ ಬಾಳುವ ಸಾಮಾನುಗಳು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಕಳ್ಲತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:118/2011 ಕಲಂ:457,380 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ :
ಕಮಲಾಪೂರ ಠಾಣೆ
: ಶ್ರೀ ಸುಭಾಶ್ಚಂದ್ರ ತಂದೆ ಶಾಂತಪ್ಪಾ ಮೂಲಗೆ ಸಾಃ ಬೆಳಕೋಟಾ ಪುರ್ನವಸತಿ ಕೇಂದ್ರ ಕಮಲಾಪೂರ ರವರು ನನ್ನ ಅಣ್ಣನ ಮಗಳಾದ ಸಂಗೀತಾ ಇವಳಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಹೈದ್ರಾಬಾದ ದಿಂದ ನಮ್ಮೂರಿಗೆ ಬಂದು ಹಬ್ಬ ಮುಗಿಸಿಕೊಂಡು ಹೊಗುತ್ತಿದ್ದಾಗ ನಾನು, ನನ್ನ ಅಣ್ಣನ ಹೆಂಡತಿಯಾದ ನಾಗಮ್ಮಾ ಇಬ್ಬರು ಕೂಡಿಕೊಂಡು ಸಂಗೀತಾ ಇವಳಿಗೆ ಹೈದ್ರಾಬಾದಕ್ಕೆ ಕಳುಹಿಸಲು ಕಮಲಾಪೂರ ಬಸ್ಸ ಸ್ಟ್ಯಾಂಡಕ್ಕೆ ಬಂದು ಬಸ್ಸ ಹತ್ತಿಸಿ ಮರಳಿ ಮನೆಗೆ ಬರುತ್ತಿರುವಾಗ ಸರಕಾರಿ ಪದವಿ ಪೂರ್ವ ಕಾಲೇಜಿನ ಹನುಮಾನದ ದೇವರ ಗುಡಿಯ ಹತ್ತಿರ ಕಾರ ನಂ. ಕೆಎ:32, ಎಂ:5513 ನೇದ್ದರ ಚಾಲಕನಾದ ಶಿವರಾಜ ತಂದೆ ಚೋಳಪ್ಪಾ ನಂದಿ ವಯ: 51 ವರ್ಷ ಸಾಃ ವಿದ್ಯಾ ನಗರ ಗುಲಬರ್ಗಾ ಈತನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನನ್ನ ಅತ್ತಿಗೆ ನಾಗಮ್ಮಾ ಇವಳಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 134/2011 ಕಲಂ. 279, 337 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ :
ಕಮಲಾಪೂರ ಠಾಣೆ
: ಶ್ರೀ. ದತ್ತಾತ್ರೀ ತಂದೆ ಮಾಣಿಕರಾವ ಶ್ರೀಮಾಳೆ ಸಾಃ ಹಲಬರ್ಗಾ ತಾಃ ಭಾಲ್ಕಿ ಜಿಃ ಬೀದರ ರವರು ನಾವು ಹೊಸ ಹುಂಡಾಯಿ ಸ್ಯಾಂಟ್ರೋ ಕಾರ ನಂ. ಎಂಹೆಚ್:24, ವಿಃ4415 ನೇದ್ದನ್ನು ಖರಿದಿ ಮಾಡಿರುವದರಿಂದ ಪೂಜೆ ಮಾಡಿಸಲು ದೇವಲ ಗಾಣಗಾಪೂರಕ್ಕೆ ನಾನು, ನನ್ನ ಹೆಂಡತಿ, ಮಕ್ಕಳು ಹಾಗು ನನ್ನ ಭಾವನ ಮಗ ಮಚೇಂದ್ರ ಎಲ್ಲರೂ ಕೂಡಿಕೊಂಡು ಹೋಗಿ ಮರಳಿ ನಮ್ಮೂರಿಗೆ ಬರುತ್ತಿರುವಾಗ ಕಿಣ್ಣಿಸಡಕ ಗ್ರಾಮದ ಮುಲ್ಲಾ ಮಾರಿ ಸೇತುವೆ ದಾಟುತ್ತಿರುವಾಗ ನಮ್ಮ ಎದುರುಗಡೆಯಿಂದ ಟಾಟಾ ಇಂಡಿಗೋ ಕಾರ ನಂ.ಎಪಿ:10,ಎಕೆ:6517ನೇದ್ದು ಇದ್ದು ಅದರ ಚಾಲಕನ ಹೆಸರು ಡಾ|| ಜಯವಂತ ತಂದೆ ದತ್ತಾತ್ರೇಯರಾವ ಗುತ್ತೇದಾರ ಸಾಃಚಿಟಗುಪ್ಪಾ ತಾಃಹುಮನಾಬಾದ ಜಿಃಬೀದರ ಹಾಃವಃಸಿಕಿಂದ್ರಾಬಾದ (ಎಪಿ) ಕಾರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನಿಂದ ಚಲಾಯಿಸಿಕೊಂಡು ಬಂದು ನಮ್ಮ ಕಾರಿನ ಬಲ ಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿರುತ್ತಾನೆ . ನನಗೆ ಮತ್ತು ನನ್ನ ಹೆಂಡತಿಗೆ ಗಾಯಗಳಾಗಿರುತ್ತವೆ . ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 135/2011 ಕಲಂ 279, 337 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.


 

No comments: