POLICE BHAVAN KALABURAGI

POLICE BHAVAN KALABURAGI

27 October 2011

GULBARGA DIST REPORTED CRIMES


ಅಪಘಾತ ಪ್ರಕರಣ:

ಸಂಚಾರಿ ಪೊಲೀಸ್ ಠಾಣೆ : ಶಿವರಾಯ ತಂದೆ ಭೀಮಶ್ಯಾ ಭಾಗೋಡಿ ಸಾಃಬಡಾರೋಜಾ ಗುಲಬರ್ಗಾ ರವರು ನನನ್ ಮಗನಾದ ಪ್ರಜ್ವಲ ಇತನು ಬಯಲು ಕಡೆಗೆ ಹೋದಾಗ ಬೀಬಿ ರೋಜಾ ಶಾಲೆಯ ಎದುರಿಗೆ ಜೀಪ ನಂ ಎಪಿ 29 ಬಿ.ಎಲ್ 786 ನೇದ್ದರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡೆಸಿ ತನ್ನ ವಾಹನ ಸಮೇತ ಓಡಿಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 66/2011 ಕಲಂ 279, 337, ಐಪಿಸಿ & 187 ಐ,ಎಮ,ವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ:

ಗ್ರಾಮೀಣ ಠಾಣೆ: ಶ್ರೀ ಕಾಶಿನಾಥ ತಂದೆ ಈರಣ್ಣಾ ವರನಾಳ ಸಾ: ಶೆಳ್ಳಗಿ ಗ್ರಾಮ ತಾ:ಚಿತ್ತಾಪೂರ ರವರು ನಾನು ನನ್ನ ತಂಗಿ ರಾಜಶ್ರೀ ಶೆಳ್ಳಗಿ ಗ್ರಾಮದಿಂದ ಹಿರೋ ಹೊಂಡಾ ಸ್ಪೆಂಡರ ಕೆಎ 51 ಕ್ಯೂ 2167 ಮೇಲೆ ದೀಪಾವಳಿ ಹಬ್ಬ ಸಂತೆ ಕುರಿತು ಗುಲಬರ್ಗಾಕ್ಕೆ ಬಂದು ಸಂತೆ ಮುಗಿಸಿಕೊಂಡು ಮರಳಿ ಶೆಳ್ಳಗಿ ಹೊರಟಿದ್ದು ಮಧ್ಯಾಹ್ನ ಸುಮಾರಿಗೆ ತಾವರಗೇರಾ ಕ್ರಾಸ ಹತ್ತಿರ ಹಿಂದಿನಿಂದ ಕಾರ ನಂಬರ ಕೆಎ 32 ಬಿ 3361 ಚಾಲಕ ಅತಿವೇಗ ಮತ್ತು ನಿರ್ಲಕ್ಷತನದಿಂದ ಅಡ್ಡಾ ತಿಡ್ಡಿ ನಡೆಸುತ್ತಾ ನನ್ನ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದು ಹಾಗೇ ಕಾರ ಹುಮನಾಬಾದ ಕಡೆ ಓಡಿಸಿಕೊಂಡು ಹೋಗಿದ್ದು ನನಗೆ ಮತ್ತು ಮತ್ತು ರಾಜಶ್ರೀ ಇಬ್ಬರಿಗೆ ತಲೆ ಹಿಂದೆ ರಕ್ತಗಾಯ ಮತ್ತು ಅಲ್ಲಿಲ್ಲಿ ಮೈಮೇಲೆ ರಕ್ತಗಾಯವಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 316/2011 ಕಲಂ. 279, 337 ಐಪಿಸಿ ಸಂ.187 ಎಂ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಮುಜಾಗ್ರತೆ ಪ್ರಕರಣ:

ಗ್ರಾಮೀಣ ಠಾಣೆ: ಹಣಮಂತ ತಂದೆ ನಾಗಪ್ಪ ಕಟ್ಟಿಮನಿ ಸಾ: ತಾಜಸುಲ್ತಾನಪೂರ ರವರು ದಿನಾಂಕ 26-10-11 ರಂದು ಸಾಯಂಕಾಲ್ ಸುಮಾರಿಗೆ ತಾಜಸುಲ್ತಾನಪೂರ ಕ್ರಾಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು ಬರುವ ಹೋಗುವ ಜನರಿಗೆ ತೊಂದರೆ ಕೊಡುತ್ತಾ ಸಾರ್ವಜನಿಕ ಶಾಂತತೆ ಭಂಗವುಂಟು ಮಾಡುತ್ತಿರುವದರಿಂದ ಮುಂಜಾಗೃತ ಕ್ರಮ ಅಡಿಯಲ್ಲಿ ಠಾಣೆ ಗುನ್ನೆ ನಂ: 315/2011 ಕಲಂ 110 ಇ&ಜಿ ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಮಾನಸಿಕ ಹಿಂಸೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಗೃಹಿಣೆ :

ಚಿಂಚೋಳಿ ಪೊಲೀಸ ಠಾಣೆ:
ಸುಶೀಲಬಾಯಿ ಗಂಡ ಅಮರಸಿಂಗ್ ಪವಾರ ಸಾ: ಬಗದಲ್ ತಾಂಡಾ(ಎ) ತಾ:ಜಿ: ಬೀದರ ರವರು ನನ್ನ ಹಿರಿಯ ಮಗಳಾದ ಅನಿತಾಬಾಯಿ ಇವಳಿಗೆ ಪುಂಡಲೀಕ ತಂದೆ ಬಾಜೀರಾಮ ರಾಠೋಡ ಸಾ: ಪಾಲತ್ಯಾನ ತಾಂಡಾ ಇತನೊಂದಿಗೆ ಮದುವೆ ಮಾಡಿ ಕೊಟ್ಟಿದ್ದು. ನನ್ನ ಅಳಿಯ ಪುಂಡಲೀಕ ಇತನು ಕುಡಿಯುವ ಮತ್ತು ಜೂಜಾಟ ಆಡುವ ಚಟಕ್ಕೆ ಅಂಟಿಕೊಂಡಿದ್ದು ನನ್ನ ಮಗಳಿಗೆ ಹಣ ಕೊಡು ಅಂತಾ ಜಗಳ ಮಾಡುತ್ತಿದ್ದು ಹಣ ಕೊಡದಿದ್ದರೆ ಹೋಡಿ ಬಡಿ ಮಾಡುತ್ತಿದ್ದನು. ನಿನ್ನೆ ದಿನಾಂಕ: 25.10.2011 ರಂದು ರಾತ್ರಿ 11.00 ಗಂಟೆಗೆ ನನ್ನ ಅಳಿಯ ಪುಂಡಲೀಕ ಇತನು ನನ್ನ ಮಗಳಿಗೆ 200/- ರೂಪಾಯಿ ಕೊಡು ಅಂತಾ ಕೇಳಿದಕ್ಕೆ ನನ್ನ ಮಗಳು ಹಣ ಕೊಡದ ಕಾರಣ ಪುಂಡಲೀಕ ಇತನು ನನ್ನ ಮಗಳ ಜೋತೆ ಜಗಳ ಮಾಡಿ ಹೋಡೆ ಬಡೆ ಮಾಡಿದ್ದು ಅದಕ್ಕೆ ನನ್ನ ಮಗಳು ತನ್ನ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಮೈ ಸುಟ್ಟಿಕೊಂಡಿರುತ್ತಾಳೆ ಆಸ್ಪತ್ರೆಯಲ್ಲಿ ಉಪಚಾರ ಪಡೆಯುವ ಕಾಲಕ್ಕೆ ಮೃತ ಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಂಶದ ಠಾಣೆ ಗುನ್ನೆ ನಂ: 129/2011 ಕಲಂ 498 (ಎ) 306 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.


No comments: