POLICE BHAVAN KALABURAGI

POLICE BHAVAN KALABURAGI

26 October 2011

GULBARGA DIST REPORTED CRIMES

ಕಳ್ಳತನ ಪ್ರಕರಣ :

ಎಂ.ಬಿ.ನಗರ ಪೊಲೀಸ್ ಠಾಣೆ : ಶ್ರೀ ನವೀನ ಕುಮಾರ ತಂದೆ ಶಿವಶರಣಪ್ಪ ರಾಜೆ ಸಾಃ ಎಲ್.ಐ.ಜಿ 4, 03 ನೇ ಹಂತ ಆದರ್ಶ ನಗರ ಗುಲಬರ್ಗಾ ರವರು ನನ್ನ ಹಿರೋ ಹೊಂಡಾ ಸಿ.ಬಿ.ಝಡ್ ನಂ. ಟಿ. ಕೆ.ಎ 32 ಟಿ.ಆರ 1167 ಅಃಕಿ 45,000/- ರೂ. ನೇದ್ದನ್ನು ಗಣೇಶ ನಗರದಲ್ಲಿರುವ ನನ್ನ ಸ್ನೇಹಿತನಾದ ಅಜಯ ತಂದೆ ಬಾಬುರಾವ ಚವ್ಹಾಣ ಇವರ ಮನೆಯ ಮುಂದೆ ದಿನಾಂಕಃ 04/10/2011 ರಂದು ಮದ್ಯಾಹ್ನ ನಿಲ್ಲಿಸಿ ನಾನು ಮತ್ತು ನನ್ನ ಸ್ನೇಹಿತರಾದ ಅಜಯ, ಮಹ್ಮದ ಅಲಿ, ಮಜರೋದ್ದಿನ ಎಲ್ಲರೂ ಕೂಡಿಕೊಂಡು ಹುಮನಾಬಾದ ರಿಂಗ್ ರೋಡ ಕಡೆಗೆ ನನ್ನ ಸ್ನೇಹಿತನ ಕಾರಿನಲ್ಲಿ ಹೋದೆವು. ಅಲ್ಲಿ ನಮ್ಮ ಕಾರು ಅಪಘಾತ ಹೊಂದಿದ್ದು, ಅಪಘಾತದಲ್ಲಿ ನನ್ನ ಬಲಗಾಲು ಮುರಿದಂತೆ ಆಗಿ ನಾನು ಆಸ್ಪತ್ರೆಗೆ ಉಪಚಾರಕ್ಕಾಗಿ ಸೇರಿಕೆಯಾಗಿದ್ದು ನಂತರ ದಿನಾಂಕಃ 05/10/2011 ರಂದು ಸಾಯಂಕಾಲ 05:00 ಗಂಟೆಗೆ ನನ್ನ ತಮ್ಮ ಹರೀಷ ತಂದೆ ಪರಮೇಶ್ವರ ಇತನು ನನ್ನ ಮೋಟಾರ ಸೈಕಲ ತರಲು ಹೋದಾಗ ಸದರಿ ಮೋಟಾರ ಸೈಕಲ ನಿಲ್ಲಿಸಿದ ಸ್ಥಳದಲ್ಲಿ ಇರಲಿಲ್ಲಾ. ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಎಲ್ಲಾ ಕಡೆ ಹುಡುಕಾಡಿದರೂ ಸಿಗಲಿಲ್ಲಾ. ನಾನು ಉಪಚಾರ ಕುರಿತು ಆಸ್ಪತ್ರೆಯಲ್ಲಿದ್ದ ಕಾರಣ ಠಾಣೆಗೆ ಬಂದು ಅರ್ಜಿ ಕೊಡಲು ತಡವಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ
ಗುನ್ನೆ ನಂ. 150/2011 ಕಲಂ. 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕಳ್ಳತನ ಪ್ರಕರಣ :

ಎಂ.ಬಿ.ನಗರ ಪೊಲೀಸ್ ಠಾಣೆ : ಶ್ರೀ ಭೀಮರಾವ ತಂದೆ ಭೀಮಶಪ್ಪ ರಾಮನಹಳ್ಳಿ ಸಾಃ 13 ನೇ ಕ್ರಾಸ್ ತಾರಫೇಲ್ ಗುಲಬರ್ಗಾ ರವರು ನಾನು ದಿನಾಂಕಃ 23/10/2011 ರಂದು ಬೆಳಗ್ಗೆ ಹಿರೋ ಹೊಂಡಾ ಸ್ಪೆಂಡರ್ ಪ್ಲಸ್ ಮೋಟಾರ ಸೈಕಲ್ ನಂ. ಕೆ.ಎ 35 ಕೆ. 8849 ಅಃಕಿಃ 22,000/- ರೂ. ನೇದ್ದನ್ನು ಬಸವೇಶ್ವರ ಆವರಣದಲ್ಲಿ ನಾನು ಪ್ರತಿ ದಿನದಂತೆ ನಿಲ್ಲಿಸಿದ್ದು ನನ್ನ ಕೆಲಸ ಮುಗಿಸಿಕೊಂಡು ಮದ್ಯಾಹ್ನ ಊಟಕ್ಕೆ ಮನೆಗೆ ಹೋಗಲು ಹೊರಗಡೆ ಬಂದಾಗ ನಾನು ನಿಲ್ಲಿಸಿ ಸ್ಥಳದಲ್ಲಿ ವಾಹನ ಇರಲಿಲ್ಲಾ. ಸುತ್ತ ಮುತ್ತ ಹುಡುಕಾಡಲಾಗಿ ಸಿಗಲಿಲ್ಲ. ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 149/2011 ಕಲಂ. 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ:
ಫರಹತಾಬಾದ ಠಾಣೆ
:
ಶ್ರೀ
ಖಾಜಾ ಮೈನೋದ್ದೀನ ತಂದೆ ಪತ್ತೆ ಅಹ್ಮದ ಸಾ: ಜೆಂಡೆ ಗಲ್ಲಿ ಎಮ್.ಎಸ್.ಕೆ.ಮಿಲ್ಲ ಗುಲಬರ್ಗಾ ರವರು ನಮ್ಮ ಲಾರಿಯ ಚಾಲಕನು ಸುರೇಶ ಇತನು ದಿನಾಂಕ: 17-9-2011 ರಂದು ಬೆಳಗ್ಗೆ 6-00 ಗಂಟೆಯ ಸುಮಾರಿಗೆ ಲಾರಿ ನಂ: ಎಮ್.ಹೆಚ್-38 ಡಿ-170 ನೇದ್ದರಲ್ಲಿ ಸಿಮೆಂಟ ಲೋಡ ಮಾಡಿಕೊಂಡು ಗುಲಬರ್ಗಾದಿಂದ ಸುರಪೂರಕ್ಕೆ ಹೋಗುವ ಕುರಿತು ಚಲಾಯಿಸಿಕೊಂಡು ಫರಹತಾಬಾದ ದಾಟಿ ಸರಡಗಿ(ಬಿ) ಪೆಟ್ರೊಲ್ ಬಂಕ ಹತ್ತಿರ ನಮ್ಮ ಲಾರಿ ಚಾಲಕನು ತನ್ನ ವಾಹನವನ್ನು ಅತಿವೇಗದಿಂದ
, ಅಲಕ್ಷನದಿಂದ ನಡೆಯಿಸಿಕೊಂಡು ಹೋಗಿ ಪಲ್ಟಿ ಮಾಡಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 201/2011 ಕಲಂ 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ

ವೈದ್ಯರ ನಿರ್ಲಕ್ಷತನದಿಂದ 4 ದಿವಸದ ಮಗು ಸಾವು :
ಬ್ರಹ್ಮಪೂರ ಠಾಣೆ :
ಶ್ರೀಮತಿ.ರೇಣುಕಾ ಗಂಡ ಸದಾಶಿವ ಕೂಡಿ, ಸಾ||ಗಂಗಾನಗರ ಬ್ರಹ್ಮಪೂರ ಗುಲಬರ್ಗಾ ರವರು ನಾನು ದಿನಾಂಕ: 22/10/2011 ರಂದು ಹೆರಿಗೆ ಸಲುವಾಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆಯಾಗಿದ್ದು, ಹೆರಿಗೆ ಕಾಲದಲ್ಲಿ ಜಿಲ್ಲಾ ವೈದ್ಯಾಧಿಕಾರಿಗಳು ಕರ್ತವ್ಯ ನಿರತ ವೈದ್ಯರಾದ ಡಾ|| ಸಂಯೋಜಿತಾ ಕುಲಕರ್ಣಿ ಹಾಗೂ ಅವರ ಸಹಾಯಕರು ಸರಿಯಾದ ಸುರಕ್ಷತಾ ಕ್ರಮ ಕೈಕೊಳ್ಳದೆ ನಿರ್ಲಕ್ಷತನದಿಂದ ವ್ಯಾಕುಮ ಮಷೀನ ಸಹಾಯದಿಂದ ಹೆರಿಗೆ ಮಾಡಿಸಿದ್ದು, ಹೆರಿಗೆ ಸಮಯದಲ್ಲಿ ಜನಿಸಿದ ಗಂಡು ಮಗುವಿಗೆ ತೊಂದರೆಯಾಗಿರುವದರಿಂದ ಹೆಚ್ಚಿನ ಉಪಚಾರ ಕುರಿತು ವಾತ್ಸಲ್ಯ ಆಸ್ಪತ್ರೆಗೆ ಸೇರಿಕೆಯಾಗಿದ್ದು ಆಸ್ಪತ್ರೆಯಲ್ಲಿ ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ: 26/10/2011 ರಂದು ಬೆಳಿಗ್ಗೆ 0630 ಗಂಟೆಗೆ ನನ್ನ 4 ದಿವಸದ ಗಂಡು ಮಗು ಮೃತಪಟ್ಟಿದ್ದು, ಮಗುವಿನ ಮರಣಕ್ಕೆ ಕಾರಣರಾದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 201/11 ಕಲಂ:304(ಎ) ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹಲ್ಲೆ ಪ್ರಕರಣ :

ಅಶೋಕ ನಗರ ಠಾಣೆ
:ಶ್ರೀ ಸಿದ್ದು @ ಸಿದ್ದಯ್ಯ ತಂದೆ ಬಸಯ್ಯ ಸ್ವಾಮಿ ಸಾ|| ಮೆಳಕುಂದಾ ತಾ||ಜಿ|| ಗುಲಬರ್ಗಾ ಹಾ.ವ|| ಕೇಂದ್ರ ಬಸ್ ನಿಲ್ದಾಣ ಕ್ಯಾಂಟಿನ ಗುಲಬರ್ಗಾ ರವರು ನಾನು ಕೇಂದ್ರ ಬಸ್ ನಿಲ್ದಾಣದಲ್ಲಿ ಸುಮಾರು 1 ವರ್ಷದಿಂದ ಅಡುಗೆ ಕೆಲಸ ಮಾಡಿಕೊಂಡು ಇರುತ್ತೆನೆ. ದಿನಾಂಕ 25/10/2011 ರಂದು ರಾತ್ರಿ 8 ಗಂಟೆಗೆ ನನ್ನ ಕೆಲಸ ಮುಗಿದ ನಂತರ ಬಸ್ ನಿಲ್ದಾಣದ ಎದುರುಗಡೆ ತಿರುಗಾಡುತ್ತಾ ಕಪಿಲಾ ಲಾಡ್ಜ ಹತ್ತಿರ 9-30 ಪಿ.ಎಂ ಕ್ಕೆ ಬಂದಾಗ ಬಸವರಾಜ ಮತ್ತು ರಾಜು ಹಾಗು ಇನ್ನೂ ಇಬ್ಬರೂ ಕೂಡಿಕೊಂಡು ಹಣ ಕೊಡು ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮುಖಕ್ಕೆ ಬೆನ್ನಿಗೆ ಅಲ್ಲಲ್ಲಿ ಹೊಡೆದು ಗಾಯಪಡಿಸಿದಲ್ಲದೆ ಹಣ ಕೊಡದಕ್ಕೆ ನನಗೆ ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 115/2011 ಕಲಂ 323, 504, 506 ಸಂ. 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: