POLICE BHAVAN KALABURAGI

POLICE BHAVAN KALABURAGI

22 October 2011

GULBARGA DIST REPORTED CRIMES

ನಿಂಬರ್ಗಾ ಠಾಣೆ :ಶ್ರೀ ರಾಜಕುಮಾರ ತಂದೆ ಗುಂಡಪ್ಪ ಆಳಂದ ಸಾ|| ದುತ್ತರಗಾಂವ ರವರು, ದಿನಾಂಕ 20/10/11 ರಂದು ನಾನು ಮತ್ತು ನಮ್ಮ ಗ್ರಾಮದ ಸಿದ್ದಾರಾಮ ಹತ್ತರಕಿ ಮತ್ತು ವೀರಣ್ಣಾ ಶಿರೂರ ಇವರು ಮಂಗಾಣೆಯವರ ಹೊಲ ಸರ್ವೆ ನಂ. 59/03 ನೇದ್ದರಲ್ಲಿ ಜೋಳ ಬಿತ್ತಣೆ ಮಾಡಿ ಅದೆ ಹೊಲದಲ್ಲಿ ಇನ್ನು ಬಿತ್ತನೆ ಮಾಡಬೇಕಾಗಿದ್ದರಿಂದ ರಾತ್ರಿ ಅದೆ ಹೊಲದಲ್ಲಿ ಎಲ್ಲರೂ ಮಲಗಿಕೊಂಡಾಗ ಮಧ್ಯ ರಾತ್ರಿ 01.00 ಗಂಟೆ ಸುಮಾರಿಗೆ ಎಲ್ಲರೂ ನಿದ್ರೆಯಲ್ಲಿದ್ದಾಗ ನನಗೆ ಯಾರೋ ಬಡಿಗೆಯಿಂದ ಹೊಡೆದಿದ್ದರಿಂದ ಚೀರಾಡುವಷ್ಟರಲ್ಲಿ ಪಕ್ಕದಲ್ಲಿ ಮಲಗಿದ್ದ ಎರಡು ಜನರು ಎದ್ದು ನೋಡಲು ಯಾರೋ 3 ಜನರಿದ್ದು ಅವರು ಬಡಿಗೆಯಿಂದ, ಸಿದ್ದಾರಾಮ ಹತ್ತರಕಿ ಮತ್ತು ಬೀರಣ್ಣಾ ಇವರಿಗೂ ಹೊಡೆದು ಒಳಪೆಟ್ಟು ಮಾಡಿದ್ದು, ಅವರಿಗೆ ನೀವು ಯಾರು ಇದ್ದೀರಿ ಅಂತ ಮಾಡನಾಡಿಸಿದರೂ ಸಹ ಅವರು ಮಾತನಾಡಿರುವದಿಲ್ಲಾ, ಅವರ ಹೊಡೆತಕ್ಕೆ ತಾಳದೆ ಒಂದೆ ಸವನೆ ಚೀರಾಡುತ್ತಿರುವಾಗ ಅಲ್ಲಿಂದ ಅವರು ಓಡಿಹೋದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆ ಗುನ್ನೆ ನಂ. 116/2011 ಕಲಂ 324, 34 ಐಪಿಸಿ. ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.

No comments: