POLICE BHAVAN KALABURAGI

POLICE BHAVAN KALABURAGI

23 October 2011

GULBARGA DIST REPORTED CRIMES

ಗ್ರಾಮೀಣ ಠಾಣೆ : ಶ್ರೀ ಮಹ್ಮದ ಅಲಿ ತಂದೆ ಲಾಡ್ಲೆಸಾಬ ವಗ್ದರಗಿ ಸಾ:ಜಾಫರಾಬಾದ ತಾ:ಜಿ:ಗುಲ್ಬರ್ಗಾ ರವರು,ನಮ್ಮ ಮನೆಯಲ್ಲಿ ಹೈನು ಮತ್ತು ಮನೆಯ ಉಪಯೋಗಕ್ಕಾಗಿ ಎರಡು ಎಮ್ಮೆಗಳನ್ನು ಸಾಕಿದ್ದು ಸದರಿ ಎಮ್ಮೆ ಗಳು ನಾಲು ಬೆಳಿಗ್ಗೆ ಮೇಯಿಸುವ ಮನುಷ್ಯ ಬಂದು ಮೇಯಿಸಲು ಹೊಡೆದುಕೊಂಡು ಹೋಗಿ ಸಾಯಂ ಕಾಲ ಮನೆಗೆ ತಂದು ಬಿಡುತ್ತಿದ್ದು ಅದೇ ರೀತಿ ದಿ: 9-10-11 ರಂದು ರಾತ್ರಿ ನಾವು ಊಟ ಮಾಡಿ 11 ಗಂಟೆ ಯವರೆಗೆ ಮಲಗುವಾಗ ನೋಡಲಾಗಿ ಮನೆಯ ಮುಂದೆ ಕಟ್ಟಿದ್ದು ಇದ್ದವು ಬೆಳಿಗ್ಗೆ 6 ಗಂಟೆಗೆ ಎದ್ದು ನೋಡಲಾಗಿ ನಮ್ಮ ಮನೆಯಲ್ಲಿ ಕಟ್ಟಿದ್ದ ಎರಡು ಎಮ್ಮೆಗಳು ಇರದೆ ಬಿಚ್ಚುಕೊಂಡು ಹೋಗಿರಬಹುದೆಂದು ಎಲ್ಲ ಕಡೆಗೆ ಹುಡುಕಾಡಲಾಗಿ ಸದರಿ ನಮ್ಮ ಎಮ್ಮೆಗಳು ಸಿಗಲಿಲ್ಲ. ಸದರಿ ನಮ್ಮ ಎರಡು ಎಮ್ಮೆಗಳ ಅಂದಾಜು ಕಿಮ್ಮತ್ತು ಒಟ್ಟು 40000/- ರೂ. ಎರಡು ಎಮ್ಮೆಗಳು ದಿ: 9-10-11 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕಳುವುಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆ ಗುನ್ನೆ ನಂ. 308/2011 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮೀಣ ಠಾಣೆ : ಶ್ರೀ ಬಸವರಾಜ ತಂದೆ ಶಾಂತಪ್ಪ ಪಾಟೀಲ ಸಾ: ರೇವಣಸಿದ್ದೇಶ್ವರ ಕಾಲನಿ ಗುಲಬರ್ಗಾ ರವರು, ದಿ: 21-10-11 ರಂದು ರಾತ್ರಿ 8 ಗಂಟೆಗೆ ನನ್ನ ಕೆಲಸದಿಂದ ಮರಳಿ ಮನೆಗೆ ಬಂದು ನನ್ನ ಕಾರ ಕೆಎ 32 ಎಮ್‌‌ 9897 ಮನೆಯ ಮುಂದೆ ನಿಲ್ಲಿಸಿರುತ್ತೇನೆ. ದಿನಾಂಕ 22/10/11 ರಂದು ಮುಂಜಾನೆ 5:30 ಗಂಟೆಗೆ ಎದ್ದು ನೋಡಿದ್ದಾಗ ನನ್ನ ಕಾರು ಮನೆಯ ಮುಂದೆ ಇರಲಿಲ್ಲ. ಅದನ್ನು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಕಳವು ಮಾಡಿ ಕೊಂಡು ಹೋಗಿರುತ್ತಾರೆ. ಎಲ್ಲಾ ಕಡೆ ಹುಡುಕಾಡಿದರೂ ಕಾರು ಸಿಕ್ಕಿರುವುದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆ ಗುನ್ನೆ ನಂ 309/11 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದೆ.

ಆಳಂದ ಠಾಣೆ : ಶ್ರೀ ಕುತಬೋದ್ದಿನ್ ತಂದೆ ಅಬ್ದುಲ ರಹಮನ್ ಬುಡ ಸಾ: ಬಂದರವಾಡ ಗಲ್ಲಿ ನಾನು ದಿ: 21-10-11 ರಂದು ಸಾಯಂಕಾಲ 5.30 ಪಿಎಮ್ ಕ್ಕೆ ನಮ್ಮ ಓಣಿಯಲ್ಲಿರುವ ಮೌಲಾನ ದರ್ಗಾದ ಒಳಗಡೆ ಕಂಪೌಂಡನಲ್ಲಿರುವ ಕಟ್ಟೆಯ ಮೇಲೆ ನಾನು ಮಲಗಿಕೊಂಡು ಮಾತಾಡುತ್ತಿದಾಗ ಅನ್ಸರ ಸಾಬ ಇವರ ಮಗ ಉಮರ್ ಅಲೀ ಇತನು ಬಂದು ಎಲ್ಲರಿಗೂ ಬೈಯುತ್ತ ನನ್ನ ಗಲ್ಲಕ್ಕೆ ಹೊಡೆದನು. ನನಗೆ ಯಾಕೆ ಹೊಡೆಯುತ್ತಿ? ಅಂತಾ ಕೇಳಿದ್ದಕ್ಕೆ ಮತ್ತೆ ಅವಾಚ್ಯ ಶಬ್ದಗಳಿಂದ ಬೈಯ್ದು ಕಲ್ಲಿನಿಂದ ಹೊಡೆಬಡೆ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಗುನ್ನೆ ನಂ. 246/2011 ಕಲಂ 323.324.504 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

No comments: