POLICE BHAVAN KALABURAGI

POLICE BHAVAN KALABURAGI

14 October 2011

GULBARGA DIST REPORTED CRIMES

ಅಪಘಾತ ಪ್ರಕರಣ :ಸಂಚಾರಿ ಪೊಲೀಸ್ ಠಾಣೆ : ಶಿವಕುಮಾರ ತಂದೆ ಶಿವಣಶರಣಪ್ಪ ಕೊರಳ್ಳಿ ಸಾ: ಕಡಗಂಚಿ ತಾ: ಆಳಂದ ಹಾವ:ಕೇಕ್ ಕಾರ್ನರ್ ಬೇಕರಿ ಗಂಜ್ ಗುಲಬರ್ಗಾ ರವರುನಾನು ದಿನಾಂಕ 13-10-2011 ರಂದು ರಾತ್ರಿ 8:30 ಗಂಟೆ ಸುಮಾರಿಗೆ ಕೇಕ್ ಕಾರ್ನರ್ ಬೇಕರಿಯಿಂದ ಊಟ ಮಾಡುವ ಕುರಿತು ಹೊರಟು ಗಂಜ್ ಬಸ್ ನಿಲ್ದಾಣದ ಮುಂದೆ ನಡೆದುಕೊಂಡು ಹೋಗುವಾಗ ಎಮ್.ಎ.ಟಿ ಕ್ರಾಸ್ ಕಡೆಯಿಂದ ಮೋಟಾರ ಸೈಕಲ ನಂ : ಕೆಎ.32/ವಾಯ್ 6722 ನೇದ್ದರ ಸವಾರನು ತನ್ನ ವಾಹನ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಗಾಯಪಡಿಸಿ ತನ್ನ ವಾಹನ ಸ್ಥಳದಲ್ಲಿಯೇ ಬಿಟ್ಟು ಓಡಿಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 63/2011 ಕಲಂ 279, 337 ಐಪಿಸಿ ಸಂಗಡ 187 ಐ,ಎಮ,ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ವರದಕ್ಷಿಣೆ ಪ್ರಕರಣ :

ಸೇಡಂ ಪೊಲೀಸ ಠಾಣೆ: ಶ್ರೀ ರೇವಶೆಟ್ಟಿ ತಂದೆ ಸಿದ್ದಣ್ಣ ಭದ್ರೆ ಸಾ|| ಸೂಗುರ (ಕೆ), ತಾ|| ಚಿತ್ತಾಪೂರ ರವರು ನನ್ನ ತಂಗಿಯಾದ ಬಸಮ್ಮ ಇವಳಿಗೆ ಸಟಪಟನಳ್ಳಿ ಗ್ರಾಮದ ಮಲ್ಲಣ್ಣ ಸಿರಗೇರಿ ಇವರ ಮಗನಾದ ಬಸವರಾಜ ಸಿರಗೇರಿ ಇತನೊಂದಿಗೆ ಸಂಪ್ರದಾಯದ ಪ್ರಕಾರ ಮದುವೆ ಮಾಡಿಕೊಟ್ಟಿದ್ದು. ನನ್ನ ತಂಗಿಗೆ ಮೂರು ಜನ ಮಕ್ಕಳು ಇರುತ್ತವೆ. ಈಗ ಸುಮಾರು 4-5 ವರ್ಷಗಳಿಂದ ನನ್ನ ತಂಗಿ ಗಂಡ ಬಸವರಾಜ ಹಾಗೂ ಆಕೆಯ ಅತ್ತೆ ಜಗದೇವಿ ಮಾವ ಮಲ್ಲಣ್ಣ ಇವರು ಸಾಲ ಬಹಳವಾಗಿದೆ ತವರು ಮನೆಯಿಂದ 50,000/- ರೂಪಾಯಿ ತೆಗೆದುಕೊಂಡು ಬಾ ಅಂತ ಆಗಾಗ ಪೀಡಿಸುತ್ತಿದ್ದು, ಅಂತಾ ಮಾನಸಿಕವಾಗಿ ತೊಂದರೆಕೊಟ್ಟು ಕೈಯಿಂದ ಹೊಡೆಬಡೆ ಮಾಡುತ್ತಿದ್ದಳು. ತಂಗಿ ಗಂಡ ವಿನಾಕಾರಣ ಆಗಾಗ ಅವಾಚ್ಯ ಶಬ್ದಗಳಿಂದ ಬೈಯಿತಿದ್ದು, ನೀನು ಭೂಮಿಗೆ ಭಾರವಿದ್ದಿ, ನೀನು ಯಾವುದಾದರು ದಾರಿ ನೋಡಿಕೊ ಅಂತ ಪಿಡಿಸುತ್ತಿದ್ದು ಈ ವಿಷಯ ನನಗೆ ನನ್ನ ತಂಗಿ ಆಗಾಗ ಹಬ್ಬ-ಹರಿದಿನಗಳಲ್ಲಿ ಬಂದಾಗ ಹಾಗೂ ಫೋನನಲ್ಲಿ ಹೇಳುತ್ತಿದ್ದಳು. ಅತ್ತೆ ಮಾವ ದೈಹಿಕವಾಗಿ ಹಾಗೂ ಮಾನಸೀಕವಾಗಿ ತ್ರಾಸ್ ಕೊಡುತ್ತಿದ್ದರು. ಆಗ ನಾನು ಊರಿನ ಹಿರಿಯರಿಗೆ ಕರೆದುಕೊಂಡು ಸಟಪಟನಳ್ಳಿಗೆ ಬಂದು ನನ್ನ ತಂಗಿ ಗಂಡ ಬಸವರಾಜ ಅತ್ತೆ ಜಗದೇವಿ ಮಾವ ಮಲ್ಲಣ್ಣ ಇವರಿಗೆ ಬುದ್ದಿವಾದ ಹೇಳಿ ನಗದು ಹಣ 15,000/- ರೂಪಾಯಿ ಕೊಟ್ಟು ಹೋಗಿದ್ದು. ಇರುತ್ತದೆ. ಆದರೂ ಸಹ ಇನ್ನೂ 35,000/- ರೂಪಾಯಿ ತೆಗೆದುಕೊಂಡುಬಾ ಅಂತ ಕಿರುಕುಳ ಕೊಡುತ್ತಿದ್ದಾರೆ ಅಂತ ಫೋನ ನನಗೆ ಕಿರುಕುಳ ಬಹಳ ಹೆಚ್ಚಾಗಿದೆ ನಾನು ಬದುಕುವದಿಲ್ಲ, ಸತ್ತು ಹೋಗುತ್ತೇನೆ. ಅಂತ ತಿಳಿಸಿದಳು ನಾನು ನನ್ನ ತಂಗಿಗೆ ನಾಳೆ ಬಂದು ಎಲ್ಲಾ ಸರಿ ಮಾಡುತ್ತೇನೆ ಎಂದು ಹೇಳಿದೇನು.ಆದರೆ ದಿನಾಂಕ:13-10-2011 ರಂದು ರಾತ್ರಿ 11=00 ಗಂಟೆಗೆ ಸಟಪಟನಳ್ಳಿಯಿಂದ ತಮ್ಮ ಧನಶೆಟ್ಟಿ ಈತನ ಮೊಬೈಲಗೆ ಪೋನ ಮಾಡಿ ನಿನ್ನ ತಂಗಿ ಬಸಮ್ಮ ಇವಳು ಸತ್ತಿರುತ್ತಾಳೆ ಅಂತ ತಿಳಿಸಿರುತ್ತಾರೆ. ನನ್ನ ತಂಗಿಯ ಸಾವಿಗೆ ಕಾರಣರಾದ ಗಂಡ ಬಸವರಾಜ ಅತ್ತೆ ಜಗದೇವಿ ಮತ್ತು ಮಾವ ಮಲ್ಲಣ್ಣ ಸಿರಗೇರಿ ಇವರು ಕಾರಣರಾಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ:178/2011 ಕಲಂ.323, 504, 498(ಎ), 306 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹಲ್ಲೆ ಪ್ರಕರಣ :
ಜೇವರ್ಗಿ ಪೋಲಿಸ ಠಾಣೆ :

ಶ್ರೀಮತಿ ಈರಮ್ಮ ಗಂಡ ವೆಂಕಟೇಶ ದಾಸರ ಸಾ: ರಾಂಪೂರ ತಾ: ಜೇವರ್ಗಿ ರವರು ನಾನು ಮತ್ತು ನನ್ನ ಗಂಡ ನಮ್ಮ ಮನೆಯ ಮುಂದೆ ಕುಳಿತುಕೊಂಡಾಗ ನಮ್ಮೂರ, ಚಂದ್ರಶೇಖರ ತಂದೆ ಸಾಬಯ್ಯ ದಾಸರ ಮತ್ತು ಅವನ ಮಕ್ಕಳಾದ ಬಾಬು, ಹೊನ್ನಯ್ಯ ಇವರು ಬಂದು ನನ್ನ ಗಂಡ ವೆಂಕಟೇಶ ಇತನು ಚಂದ್ರಶೇಖರ ಇತನ ಹೆಂಡತಿಗೆ ಚಾಡಿ ಮಾಡಿಸಿದ್ದಾನೆ ಅಂತಾ ಜಗಳ ತೆಗೆದು ನನ್ನ ಗಂಡನಿಗೆ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ನಾನು ಮತ್ತು ನನ್ನ ಸವತಿ ವೆಂಕಟಮ್ಮ ಇಬ್ಬರೂ ಕೂಡಿ ಬಿಡಿಸಲು ಹೋದಾಗ ಅವರೆಲ್ಲಾರೂ ಕೂಡಿ ನನ್ನಗೆ ಕಲ್ಲಿನಿಂದ ಹೊಡೆದು ಗುಪ್ತ ಪೆಟ್ಟು ಪಡಿಸಿ ನನ್ನ ಸವತಿಗೆ ಕೂದಲು ಹಿಡಿದು ಎಳೆದಾಡಿ ನೆಲಕ್ಕೆ ಕೆಡುವಿದಾಗ ಅವಳಿಗೆ ಟೋಂಕಕ್ಕೆ ಗುಪ್ತ ಪೇಟ್ಟು ಆಗಿರುತ್ತದೆ. ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 179/2011 ಕಲಂ 323, 324, 354, 504, 506, ಸಂಗಡ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: