POLICE BHAVAN KALABURAGI

POLICE BHAVAN KALABURAGI

15 October 2011

GULBARGA DIST REPORTED CRIMES

ಹೊಟ್ಟೆ ಬೇನೆ ತಾಳಲಾರದೆ ತನ್ನ 8 ತಿಂಗಳ ಹಸುಳೆಯನ್ನು ಬಾವಿಯಲ್ಲಿ ಹಾಕಿ ತಾನು ಆತ್ಮಹತ್ಯೆ ಮಾಡಿಕೊಂಡ ಮಹಿಳೆ :
ಮುಧೋಳ ಪೊಲೀಸ್ ಠಾಣೆ:
ಶ್ರೀ ಮನೋಹರ ತಂದೆ ರಾಬರ್ಟ ಸಾ|| ಬುರುಗಪಲ್ಲಿ ರವರು ನನ್ನ ಮದುವೆ ಸಂತೋಷಮ್ಮಾ ಇವಳೊಂದಿಗೆ 8 ವರ್ಷದ ಹಿಂದೆ ಆಗಿದ್ದು ನನಗೆ ಇಬ್ಬರು ಗಂಡು ಮಕ್ಕಳಾಗಿದ್ದು ನನ್ನ ಹೆಂಡತಿಯಾದ ಸಂತೋಷಮ್ಮಾ ಇವಳಿಗೆ ಹೊಟ್ಟೆಬೇನೆ ಇದ್ದು ಆಸ್ಪತ್ರೆಗೆ ತೋರಿಸಿದರೂ ಆರಾಮಾಗಿರುವುದಿಲ್ಲಾ. ದಿನಾಂಕ: 12-10-2011 ರಂದು ರಾತ್ರಿ 09-00 ಗಂಟೆಯ ಸುಮಾರಿಗೆ ಮನೆಯಲ್ಲಿ ಊಟ ಮಾಡಿ ಮಲಗಿದ್ದೆವು ಮಧ್ಯ ರಾತ್ರಿ ದಿನಾಂಕ: 13-10-2011 ರಂದು 01-00 ಗಂಟೆಯ ಸುಮಾರಿಗೆ ನಾನು ಎದ್ದು ನೋಡಿದಾಗ ನನ್ನ ಹೆಂಡತಿ ಸಂತೋಷಮ್ಮಾ ಹಾಗೂ ನನ್ನ ಮಗ ನವಿನ ಕುಮಾರ 8 ತಿಂಗಳು ಮಗು ಮನೆಯಲ್ಲಿ ಇರಲಿಲ್ಲಾ. ನಾನು ರಾತ್ರಿ ಹುಡುಕಾಡಲಾಗಿ ಇಂದು ಮದ್ಯಾಹ್ನ 12-00 ಗಂಟೆಯ ಸುಮಾರಿಗೆ ನಮ್ಮ ಹೊಲದ ಬಾವಿಯಲ್ಲಿ ನನ್ನ ಮಗ ನವೀನ ಕುಮಾರ ಈತನ ಮೃತದೇಹ ನೀರಿನಲ್ಲಿ ತೇಲಿದ್ದು ಗೊತ್ತಾಗಿ ನಾನು ಅಲ್ಲಿಗೆ ಹೋಗಿ ನೋಡಲಾಗಿ ನನ್ನ ಹೆಂಡತಿ ಹಾಗೂ ನನ್ನ ಮಗನ ಮೃತದೇಹ ನೀರಿನಲ್ಲಿದ್ದು ನನ್ನ ಹೆಂಡತಿಯಾದ ಸಂತೋಷಮ್ಮಾ ಇವಳ ಹೊಟ್ಟೆಯ ಬೇನೆ ತಾಳಲಾರದೆ ಜೀವನದಲ್ಲಿ ಜಿಗುಪ್ಸೆಗೊಂಡು ನನ್ನ ಮಗ ನವೀನ ಕುಮಾರ ಈತನಿಗೆ ಬಾವಿಯಲ್ಲಿ ಹಾಕಿ ತಾನು ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 99/2011 ಕಲಂ: 302 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಳ್ಳಲಾಗಿದೆ .

ಅಪಘಾತ ಪ್ರಕರಣ ಒಂದು ಸಾವು :

ಮಳಖೇಡ ಪೊಲೀಸ ಠಾಣೆ : ನಾಗಪ್ಪ ತಂದೆ ಸಿದ್ದಪ್ಪ ಪುಜಾರಿ ಸಾ|| ತುಮಕುಂಟಾ ರವರು ನಾನು ಮತ್ತು ಮಲ್ಲಿನಾಥ ತಂದೆ ನಾಗಣ್ಣ ಪುಜಾರಿ ಇಬ್ಬರು ಕುಡಿಕೊಂಡು ಮಲ್ಲಿನಾಥನ ಅತ್ತಿಗೆ ಶರಣಮ್ಮ ಇವಳ ಊರಾದ ರಿಬ್ಬನಪಲ್ಲಿ ಗ್ರಾಮಕ್ಕೆ ಹೋಗಿ ಭೆಟ್ಟಿ ನೀಡಿ ವಾಪಸ್ಸು ಬರುವಾಗ ಮೋಟಾರ ಸೈಕಲ್ ನಂ: ಕೆ.ಎ 33 ಈ-2546 ನಡೆಸುತ್ತ ಸೇಡಂ ಗುಲಬರ್ಗಾ ರೋಡಿನ ಮೇಲೆ ಹುಡಾ (ಕೆ) ಗೇಟಿನ ಬರುತ್ತಿರುವಾಗ ಗುಲಬರ್ಗಾ ಕಡೆಯಿಂದ ಒಂದು ಜೀಪ ನೇದ್ದರ ಚಾಲಕನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ಜೀಪ ಅನ್ನು ನಡೆಸುತ್ತ ಬಂದು ನಮ್ಮ ಮೋಟಾರು ಸೈಕಲ್ ನೇದ್ದಕ್ಕೆ ಡಿಕ್ಕಿ ಹೊಡೆದನು . ನಾನು ಮತ್ತು ಮಲ್ಲಿನಾಥನು ಸ್ಥಳದಲ್ಲಿ ಕೆಳಗೆ ಬಿದ್ದೆವು . ಮಲ್ಲಿನಾಥನು ಸ್ಥಳದಲ್ಲಿಯೆ ಭಾರಿ ಗಾಯ ಹೊಂದಿ ಮೃತಪಟ್ಟಿದ್ದು ನನಗೆ ಅಲ್ಲಲ್ಲಿ ತರಚಿದ ಗಾಯ ಮತ್ತು ಗುಪ್ತ ಪೆಟ್ಟಾಗಿದ್ದು ಸಕಾರಿ ಆಸ್ಪತ್ರೆ ಮಳಖೇಡ ಬಂದು ಉಪಚಾರ ಪಡೆಯುತ್ತಿದ್ದೆನೆ.ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 94/2011 ಕಲಂ 279.337.304(ಎ) ಐಪಿಸಿ ಸಂಗಡ 187 ಐ.ಎಮ್.ವಿ ಆಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈ ಕೊಳ್ಳಲಾಗಿದೆ.

ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:
ಶ್ರೀಮತಿ ಅನ್ನಪೂರ್ಣ @ ಅನೀತಾ ಗಂಡ  ಶಿವಶರಣ ಸಿಂಗೆ ಸಾ|| ದರ್ಗಾಶಿರೂರ್ ರವರು ನಾನು   ದಿನಾಂಕ 11/10/2011 ರಂದು  ಸಾಯಂಕಾಲ 5 ಗಂಟೆ  ಸುಮಾರಿಗೆ   ಮನೆಯಲ್ಲಿದ್ದಾಗ  ನಮ್ಮ ಮನೆ ಮುಂದಿನ  ಅಂಗಳದಲ್ಲಿ  ಬಂದು ದಿನೇಶ  ತಂದೆ  ಶಿವಲಿಂಗಪ್ಪ ಸಿಂಗೆ ರವರು ಬಂದು  ನನಗೆ   ನಮ್ಮ ತಾಯಿಯ  ಸಂಗಡ   ಜಗಳ ತಗೆಯುತ್ತಿದ್ದಿ  ಅತಾ ಅವಾಚ್ಯವಾಗಿ ಬೈದು ನನಗೆ ಯಾಕೆ ಬೈಯುತ್ತಿ  ಅಂತಾ  ಅಂದಿದಕ್ಕೆ ನಿನ್ನದು  ಬಹಳ ಆಗಿದೆ  ಅನ್ನುತ್ತಾ  ಕೈಯಿಂದ ಎಡಗಡೆ  ಕಪಾಳಕ್ಕೆ  ಎದೆಯ ಮೇಲೆ  ಹೊಟ್ಟೆಯ ಮೇಲೆ  ತೆಲೆಯ ಮೇಲೆ  ಕಿವಿಯ  ಮೇಲೆ ಹೊಡೆದು  ಸೀರಿ  ಹಿಡಿದು  ಏಳೆದಾಡಿರುತ್ತಾನೆ   ಅವರ  ತಾಯಿಯಾದ  ಇಮಲಾಬಾಯಿಯಸಹ  ಹೊಲದ ವಿಷಯದ ಬಗ್ಗೆ  ಜಗಳ   ತಗೆಯುತ್ತಿರುತ್ತಾಳೆ ಅಂತಾ ಹೊಡೆ ಬಡೆ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 64/2011  ಕಲಂ 323,324,354,504,506  ಸಂಗಡ   34  ಐಪಿಸಿ  ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಳ್ಳಲಾಗಿದೆ ..

No comments: