POLICE BHAVAN KALABURAGI

POLICE BHAVAN KALABURAGI

14 October 2011

GULBARGA DIST REPORTED CRIMES


ಗುಲಬರ್ಗಾ ಜಿಲ್ಲೆಯ ಕುಖ್ಯಾತ ರೌಡಿ ಖಲೀಮ್ ಹಾಗು ಆತನ ಇಬ್ಬರ ಸಹಚರರ ಬಂದನ, 2 ನಾಡ ಪಿಸ್ತೂಲ್ ವಶ.

ಮಾನ್ಯ ಎಸ್.ಪಿ. ಸಾಹೇಬ ಗುಲಬರ್ಗಾ, ಅಪರ ಎಸ್.ಪಿ. ಸಾಹೇಬರು ಗುಲಬರ್ಗಾ ಮತ್ತು ಡಿ.ಎಸ್.ಪಿ. (ಬಿ) ಉಪ ವಿಭಾಗ ಗುಲಬರ್ಗಾರವರ ಮಾರ್ಗ ದರ್ಶನದಲ್ಲಿ ಶ್ರೀ ಡಿ.ಜಿ. ರಾಜಣ್ಣ ಪೊಲೀಸ್ ಇನ್ಸಪೇಕ್ಟರ್ ರೋಜಾ ಠಾಣೆ, ಶ್ರೀ ಬಿ.ಪಿ.ಚಂದ್ರಶೇಖರ ವೃತ್ತ ನಿರೀಕ್ಷಕರು ಎಂ.ಬಿ.ನಗರ ವೃತ್ತ , ಪಂಡಿತ ಸಗರ್ ಪಿ.ಎಸ್.ಐ ವಿಶ್ವ ವಿದ್ಯಾಲಯ ಠಾಣೆ, ಪಿ.ಎಸ್.ಐ ವೀರಣ್ಣಾ ಕುಂಬಾರ್, ಎ.ಎಸ್.ಐ ಭೀಮಶಾ, ಎ.ಎಸ್.ಐ ಉದಂಡಪ್ಪಾ ಹೆಚ್.ಸಿ ಶಿವಪುತ್ರಪ್ಪಾ ಮತ್ತು ಪೊಲೀಸ್ ಪೇದೆಗಳಾದ ಶರಣಬಸಪ್ಪಾ, ಅಯ್ಯೂಬ, ಅಂಬಾಜಿ, ವೈಜನಾಥ, ಅಶೋಕ, ಮಲ್ಲಿಕಾರ್ಜುನ್, ವಿಶ್ವನಾಥ, ಅಂಬಾದಾಸ ಮತ್ತು ಅಶೋಕ ಇವರೆಲ್ಲರೂ ಖಚಿತ ಮಾಹಿತಿ ಆಧರಿಸಿ ಹೋಗಿ ಬಿಲಾಲಾಬಾದ ಬಡಾವಣೆಯಲ್ಲಿರುವ ಬಾಂಬೆ ಹೋಟೆಲ ಹತ್ತಿರ ಸಾರ್ವಜನಿಕರಿಗೆ ಪಿಸ್ತೂಲ ತೂರಿಸಿ ಹೆದರಿಸುತ್ತಿರುವ ಮೀರ್ಜಾ ಅಕಬರ್ ಕಲೀಮ್ ಬೇಗ ತಂದೆ ಮೀರ್ಜಾ ಮೆಹಬೂಬ ಬೇಗ್ ವಯಾ:35 ವರ್ಷ ಉ: ರೀಯಲ್ ಏಸ್ಟೇಟ ವ್ಯಾಪಾರ ಸಾ: ಮದೀನಾ ಮಂಜೀಲ ಮನೆ ನಂ:7-1202/22 ಎ ಕೆ.ಬಿ.ಎನ್ ಇಂಜಿನಿಯರಿಂಗ ಕಾಲೇಜ ಎದುರುಗಡೆ ಬಿಲಾಲಾಬಾದ ಗುಲಬರ್ಗಾ, ಮಹ್ಮದ ಫಾರೂಖ @ ಜೀಕನ ಫಾರೂಖ ತಂದೆ ಬಾಬು ಮೀಯಾ ವಯಾ: 22 ವರ್ಷ ಉ: ಚಿಕನ ಮತ್ತು ಮೀನಿನ ವ್ಯಾಪಾರ್ ಜಾತಿ ಮುಸ್ಲಿಂ ಸಾ: ಬಿಲಾಲಾಬಾದ ಮಜೀದಿ ಹತ್ತಿರ ಬಿಲಾಲಾಬಾದ ಗುಲಬರ್ಗಾ, ಮತ್ತು ಅಜರ ಉರ್ ಹಾಜಿ ತಂದೆ ಮಜರ ಉರ್ ಹಾಜಿ ವಯಾ:25 ವರ್ಷ ಉ: ಬಿ.ಎಸ್.ಸಿ ವಿಧ್ಯಾರ್ಥಿ ಸಾ: ಮನೆ ನಂ:6-996 ರಂಗಿನ ಮಜೀದಿ ಹತ್ತಿರ ಮೋಮಿನಪುರ್ ಗುಲಬರ್ಗಾ ಈ ಮೂರು ಜನರರನ್ನು ವಶಕ್ಕೆ ತೆಗೆದುಕೊಂಡು ಅವರಿಂದ 2 ಕಂಟ್ರಿ ಮೇಡ ಫೀಸ್ತೂಲ್ ಹಾಗೂ 11 ಜೀವಂತ ಗುಂಡುಗಳು ಹಾಗೂ 6 ಮೊಬೈಲಗಳು ವಶ ಪಡಿಸಿಕೊಂಡಿರುತ್ತಾರೆ. ಇತನು ದಿನಾಂಕ: 25-09-2011ರಂದು ಬಿಲಾಲಾಬಾದ ಬಾಂಬೆ ಹೋಟೆಲ ಹತ್ತಿರ ಝಾಕಿ ಖಾನ ಇವರಿಗೆ ಮಾರಣಾಂತಿಕ ಹಲ್ಲೆ ಮಾಡಲು ಉಪಯೋಗಿಸಿದ ರಾಡ್ ಸಹ್ ಜಪ್ತಿ ಮಾಡಲಾಗಿದೆ ಇತನು ಗುಲಬರ್ಗಾ ನಗರ ಮತ್ತು ಜಿಲ್ಲೆಯಲ್ಲಿ ಅನೇಕ ಕಡೆ ಸುಮಾರು 25 ಕ್ಕೂ ಹೆಚ್ಚು ಪ್ರಕರಣಗಳು ಈತನ ವಿರುದ್ದ ದಾಖಲಾಗಿರುತ್ತವೆ. ರೌಡಿ ಮಿರ್ಜಾ ಅಕ್ಬರ ಖಲೀಮ್ ಬೇಗ ಇತನ ವಿರುದ್ದ ಹೈದ್ರಬಾದ, ಬೀದರ ನಗರಗಳಲ್ಲಿ ಪ್ರಕರಣ ದಾಖಲಾಗಿರುತ್ತವೆ . ಇತನನ್ನು ಮತ್ತು ಸಹಚರರನ್ನು ದಸ್ತಿಗಿರಿ ಮಾಡಿದ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಯವರಿಗೆ ಇಲಾಖಾ ವತಿಯಿಂದ ಸೂಕ್ತ ಬಹುಮಾನ ಘೋಷಿಸಲಾಗಿದೆ.

No comments: