POLICE BHAVAN KALABURAGI

POLICE BHAVAN KALABURAGI

14 October 2011

GULBARGA DISTRICT REPORTED CRIMES

ಕಳ್ಳತನ ಪ್ರಕರಣ :
ಅಶೋಕ ನಗರ ಠಾಣೆ
ಶ್ರೀ ಮನೋಹರ ತಂದೆ ಖಂಡೋಬಾ ಮಹಿಂದ್ರಕರ ಸಾ: ವರ್ದಾನಗರ ಉದನೂರ ರೋಡ ಗುಲಬರ್ಗಾ ರವರು ನನ್ನ ಮಗ ಪ್ರವೀಣ ಇತನು ಕೆಲಸದ ನಿಮಿತ್ಯ ಜೇವರ್ಗಿಗೆ ಹೋಗಿದ್ದು ನಾನು ಸಹ 11:00 ಗಂಟೆ ಸುಮಾರಿಗೆ ಧನಂಜಯ ಡವಲಪರ್ಸ್ ನಲ್ಲಿ ಕೆಲಸ ಕುರಿತು ಹೋಗುವಾಗ ಹೆಂಡತಿ ಮತ್ತು ಸೋಸೆ ಬಟ್ಟೆ ಖರಿದಿ ಮಾಡಲು ಮತ್ತು ಹೋಲಿಯಲಿಕ್ಕೆ ಹಾಕಲು ಮಾರ್ಕೆಟಗೆ ಹೋಗಿ ಬರುವುದಾಗಿ ತಿಳಿಸಿದ್ದು ನಾನು ಹೊರಗಡೆ ಹೋಗಿ ಮರಳಿ ಮನೆಗೆ ಬಂದು ನೋಡಲು ಮನೆಯ ಬಾಗಿಲು ತೆರೆದಿದ್ದು ಒಳಗಡೆ ಹೋಗಿ ನೋಡಲಾಗಿ ಬೀರು ಬಾಗಿಲು ತೆಗೆದಿದ್ದು ತಕ್ಷಣ ತನ್ನ ಹೆಂಡತಿ ಮತ್ತು ಮಗನನ್ನು ತಿಳಿಸಿದ್ದು ದಸರಾ ಹಬ್ಬದ ನಿಮಿತ್ಯ ಪೂಜೆಗೆಂದು ಕೆಳಕಂಡ ಬಂಗಾರದ ಒಡವೆಗಳನ್ನು ಸುಮಾರು 3, 60, ಸಾವಿರ ಮೌಲ್ಯದ ಆಭರಗಣಗಳು ಬ್ಯಾಂಕಿನ ಲಾಕರದಿಂದ ತಂದ್ದಿದ್ದು ಮತ್ತು ನಗದು ಹಣ 20,000/- ರೂಪಾಯಿಗಳು ಯಾರೊ ಕಳ್ಳರು ಕಳುವು ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಮೇಲಿಂದ ಠಾಣೆ ಗುನ್ನೆ ನಂ:111/2011 ಕಲಂ:454,380 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಮಂಜಾಗ್ರತೆ ಕ್ರಮ :

ಎಂ.ಬಿ.ನಗರ ಪೊಲೀಸ್ ಠಾಣೆ : ಶ್ರೀನಿವಾಸರೆಡ್ಡಿ ಸಿ.ಪಿ.ಸಿ 611 ರವರು ಗುಡ್ ಮಾರ್ನಿಂಗ್ ಕರ್ತವ್ಯದಿಂದ ಬರುವಾಗ ಒಬ್ಬ ಆರೋಪಿಯನ್ನು ಹಾಜರು ಪಡಿಸಿದ್ದು ಇತನು ದಿನಾಂಕಃ 13/10/2011 ರಂದು ಬೆಳಗ್ಗೆ ಗುಬ್ಬಿ ಕಾಲೋನಿಯ ರಂಗದಾಳೆ ರವರ ಮನೆಯ ಹತ್ತಿರ 04:30 ಗಂಟೆಗೆ ಹೋದಾಗ ಅಲ್ಲಿ ಒಬ್ಬ ವ್ಯಕ್ತಿ ಅನುಮಾನಸ್ಪದ ರೀತಿಯಲ್ಲಿ ಓಡಾಡುತ್ತಿದ್ದು, ಆತನ ಹೆಸರು ಗೋಪಾಲ ತಂದೆ ವಿನೋದ ಸಾಃ ಬಸ್ ನಿಲ್ದಾಣ ಹಿಂದುಗಡೆ ಗುಲಬರ್ಗಾ ಅಂತಾ ತಿಳಿಸಿದನು. ಸದರಿಯವನನ್ನು ಪುನಃ ವಿಚಾರಿಸಲು ಅವನು ತನ್ನ ನಿಜವಾದ ಹೆಸರು ಸಂತೋಷ ತಂದೆ ಅಣ್ಣಾರಾವ ಭಜಂತ್ರಿ ವಯಃ 21 ವರ್ಷ ಉಃ ವಿದ್ಯಾರ್ಥಿ ಜಾತಿ: ಪ.ಜಾತಿ (ಮಾದರ) ಸಾಃ ಗಾಜಿಪೂರ ಅತ್ತರ ಕಂಪೌಂಡ ಗುಲಬರ್ಗಾ ಅಂತಾ ತಿಳಿಸಿದನು. ಸದರಿಯವನನ್ನು ಹಾಗೆಯೇ ಬಿಟ್ಟಲ್ಲಿ ಯಾವುದಾದರೂ ಸ್ವತ್ತಿನ ಅಪರಾಧ ಮಾಡಬಹುದೆಂದು ತಿಳಿದು ಠಾಣೆಗೆ ಕರೆ ತಂದು ಮುಂದಿನ ಕ್ರಮ ಜರುಗಿಸಬೇಕು ಅಂತಾ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 143/2011 ಕಲಂ.109 ಸಿ.ಆರ್.ಪಿಸಿ. ನೆದ್ದರ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಜೂಜಾಟ ಪ್ರಕರಣ

ಎಂ.ಬಿ.ನಗರ ಪೊಲೀಸ್ ಠಾಣೆ :ಪ್ರಶಾಂತ ತಂದೆ ರಾಜು ಬಿರಾದಾರ ಸಂಗಡ 6 ಜನರು ಎಲ್ಲರೂ ಸಾಃ ಗುಲಬರ್ಗಾ ರವರು ದಿನಾಂಕ 13/10/2011 ರಂದು 5:30 ಪಿ.ಎಮ ಕ್ಕೆ ವಿದ್ಯಾನಗರದಲ್ಲಿರುವ ಮಲ್ಲಿಕಾರ್ಜುನ ಗಡಿಯ ಹತ್ತಿರ ಖುಲ್ಲಾ ಜಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಂದರ-ಬಾಹರ ಇಸ್ಪೆಟ ಜುಜಾಟ ಆಡುತ್ತಿರುವಾಗ ಪಿ.ಎಸ್.ಐ ರವರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಅವರಿಂದ ನಗದು ಹಣ 6,635/- ರೂ ಮತ್ತು 52 ಎಸ್ಪೆಟ ಎಲೆಗಳು ಜಪ್ತಿ ಮಾಡಿದ್ದರಿಂದ ಠಾಣಾ ಗುನ್ನಾ ನಂ 144/2011 ಕಲಂ 87 ಕೆ.ಪಿ ಆಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹಲ್ಲೆ ಪ್ರಕರಣ :
ಕಮಲಾಪೂರ ಪೊಲೀಸ್ ಠಾಣೆ
: ಶ್ರೀ. ಪುರುಶೋತ್ತಮ ತಂದೆ ರಾಜೇಂದ್ರ ಘಾಟೆ ಸಾಃ ಸಿಂದಗಿ (ಬಿ) ತಾಃಜಿಃ ಗುಲಬರ್ಗಾ ರವರು ನಾನು ನಿನ್ನೆ ದಿನಾಂಕ: 12/10/2011 ರಂದು ಜೀವಣಗಿ ಗ್ರಾಮದಲ್ಲಿ ಭವಾನಿ ದೇವಿ ಪಲ್ಲಕಿವಿದ್ದ ಪ್ರಯುಕ್ತ ನಮ್ಮೂರಿನಿಂದ ನಾನು ನನ್ನ ಹೆಂಡತಿ ರೇಣುಕಾ ಇಬ್ಬರು ಕೂಡಿಕೊಂಡು ಜೀವಣಗಿ ಗ್ರಾಮಕ್ಕೆ ಬಂದು ಪಲ್ಲಕಿ ಉತ್ಸವ ಮುಗಿಸಿಕೊಂಡು ಮರಳಿ ನಮ್ಮೂರಿಗೆ ಹೋಗಲು ಜೀವಣಗಿ ಗ್ರಾಮದ ಬಸ್ಸ ಸ್ಟ್ಯಾಂಡ ಹತ್ತಿರ ನಿಂತಾಗ ನಮ್ಮ ದೂರಿನ ಸಂಬಂಧಿಕರಾದ ನಾಗೇಶ ತಂದೆ ರಾಮಯ್ಯಾ ಈತನು ತನ್ನ ಮಗಳ ಮದುವೆ ನೆಂಟಸ್ತನ ಮಾತನಾಡುವವದು ಇದೆ ಹೋಗೋಣಾ ನಡೆ ಅಂತಾ ಅಂದಾಗ ನಾನು ಮತ್ತು ನನ್ನ ಹೆಂಡತಿ ಇಬ್ಬರು ನಾಗೇಶ ಈತನ ಮನೆಗೆ ಹೋಗಿ ನೆಂಟಸ್ತನ ವಿಷಯ ಮಾತನಾಡಿ ಮರಳಿ ನಮ್ಮ ಸಂಬಂಧಿಕರಾದ ಸುರೇಶ ಈತನ ಮನೆಗೆ ನಾಗೇಶ ಈತನ ಮನೆಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಹೋಗುತ್ತಿರುವಾಗ ರಾತ್ರಿ 7-00 ಗಂಟೆ ಸುಮಾರಿಗೆ ನಾಗೇಶ ಈತನು ನನಗೆ ನಿಲ್ಲಿಸಿ, ನನ್ನ ಮೊಬೈಲ ಕಳೆದಿದೆ ಅಂತಾ ಕೇಳಿದಾಗ ನಾನು ನಿಮ್ಮ ಮೊಬೈಲ ತೆಗೆದುಕೊಂಡಿರುವುದಿಲ್ಲಾ. ಅಂದಾಗ ನಾಗೇಶ ಈತನು ನನಗೆ ವಿನಾಃಕಾರಣ ಅವಾಚ್ಯವಾಗಿ ಬೈದು ನಾಗೇಶ ಈತನ ಪರವಾಗಿ ಉಮೇಶ ತಂದೆ ಶಂಕರ ಮತ್ತು ಮನೋಜ ತಂದೆ ಗುಂಡಪ್ಪಾ ಇಬ್ಬರು ಕೂಡಿಕೊಂಡು ಬಂದು ಕಾಲಿನಿಂದ ಹೊಟ್ಟೆಗೆ ಒದ್ದು ಬಡಿಗೆಯನ್ನು ಬಾಯಿಗೆ ಚುಚ್ಚಿ ರಕ್ತಗಾಯ ಮಾಡಿದನು ನಾಗೇಶ ಈತನು ಕೈ ಮುಷ್ಙಿ ಮಾಡಿ, ಮುಖಕ್ಕೆ, ತೆಲೆಗೆ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ. ವಿನಾಃಕಾರಣ ನನಗೆ ಹೊಡೆ ಬಡೆ ಮಾಡಿದ್ದಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ. 127/2011 ಕಲಂ. 323, 324, 504 ಸಂ. 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ

ಅಪಘಾತ ಪ್ರಕರಣ :

ಗುಲಬರ್ಗಾ ಗ್ರಾಮೀಣ ಠಾಣೆ: ಕುಮಾರಿ ರಾಜೇಶ್ವರಿ @ ರಾಜಶ್ರೀ ತಂದೆ ಅಂಬಾರಾಯ ಖಜಾನದಾರ ಸಾ: ಕಪನೂರ ರವರು ನಾನು ದಿನಾಂಕ 13/10/2011 ರಂದು ಸಾಯಂಕಾಲ ಸುಮಾರಿಗೆ ಹೊಲದ ಕೆಲಸ ಮುಗಿಸಿಕೊಂಡು ಮನೆಯ ಕಡೆಗೆ ನನ್ನ ತಾಯಿ ಹಾಗೂ ಚಿಕ್ಕಮ್ಮ ನೊಂದಿಗೆ ಕಪನೂರ ಬ್ರೀಡ್ಜ್‌ ಹತ್ತಿರ ರಸ್ತೆ ಎಡಬದಿಯ ಕಚ್ಚಾ ರಸ್ತೆಯ ಮೇಲೆ ನಡೆದುಕೊಂಡು ಬರುತ್ತಿರುವಾಗ, ಹಿಂದಿನಿಂದ ಒಂದು ಜೀಪ ನಂ ಕೆಎ 28 ಎಮ್‌ 2864 ನೇದ್ದರ ಚಾಲಕನು ಅತೀವೇಗ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನನಗೂ, ನಮ್ಮ ದೊಡ್ಡಮ್ಮ ಹಾಗೂ ನಮ್ಮ ತಾಯಿಗೆ ಡಿಕ್ಕಿ ಹೊಡೆದಿದ್ದರಿಂದ ರಸ್ತೆಯ ಮೇಲೆ ಬಿದಿದ್ದರಿಂದರ ಮೂವರಿಗೆ ರಕ್ತಗಾಯ ಗುಪ್ತಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ. 300/2011 ಕಲಂ 279 337 ಐಪಿಸಿ ಸಂ/ 187 ಐಎಂವಿ ಎಕ್ಟ್‌‌ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ :
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಬೀರಪ್ಪ ತಂದೆ ಸೂರ್ಯಕಾಂತ ಪೂಜಾರಿ ವಿದ್ಯಾರ್ಥಿ ಸಾ: ಕಪನೂರ ರವರು ನಾನು ನನ್ನ ಗೆಳೆಯ ಇಬ್ಬರು ಕೂಡಿ ಎ. ಎಸ್‌‌ ಪಾಟೀಲ ಆಸ್ಪತ್ರೆ ಎದುರಿನ ಹೊಟೇಲ ಹತ್ತಿರ ಚಹಾ ಕೂಡಿಯಲು ಹೊಗಿದ್ದು ರಮೇಶ ಹೊಟೇಲ ಇವನಿಗೆ 5 -6 ಜನರು ಕೂಡ ಹೊಡೆ ಬಡೆ ಮಾಡುತ್ತಿದ್ದಾಗ ಅವನನ್ನು ಬಿಡಿಸಲು ಹೋದಾಗ ಅವರಲ್ಲಿಯ 2 ಜನ ಬಂದವರೆ ನನಗೆ ಮತ್ತು ನನ್ನ ಗೆಳೆಯ ಸುಭಾಷ ಇತನಿಗೆ ಚಾಕುವಿನಿಂದ ಮುಂಗೈ ಕೆಳಗೆ ಹೊಡೆದು ಗಾಯ ಪಡಿಸಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ.
298/2011 ಕಲಂ 143 147 148 504 323 324 506 ಸಂ/ 149 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: