POLICE BHAVAN KALABURAGI

POLICE BHAVAN KALABURAGI

28 September 2011

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ಏಳು ಜನರ ಬಂಧನ :
ಗ್ರಾಮೀಣ ಠಾಣೆ :ದಿನಾಂಕ.27-09-2011 ರಂದು ಮಧ್ಯಾಹ್ನ ಉಪಳಾಂವ ಗ್ರಾಮದ ಪರಿವಾರ ಟೇಲರ ಇವರ ಹೊಲ ದ ಬೇವಿನ ಗಿಡದ ಕೆಳಗೆ ಕೆಲವು ಜನರು ದುಂಡಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಇಸ್ಪೇಟ ಎಲೆಗಳ ಸಹಾಯ ದಿಂದ ಅಂದರ ಬಾಹರ ಎಂಬ ದೈವಲೀಲೆ ಇಸ್ಪೇಟ ಜೂಜಾಟವಾಡುತ್ತಿದ್ದಾಗ ಪಂಚರ ಸಮಕ್ಷಮ ಹಾಗೂ ಸಿಬ್ಬಂದಿಯವರ ಸಹಾಯದಿಂದ ಮೇಲಾದಿಕಾರಿಗಳ ಮಾರ್ಗದರ್ಶನದಲ್ಲಿ ದಾಳಿ ಮಾಡಿ ಸದರಿ 1.ಬಸವರಾಜ ತಂದೆ ಬಂಡೆಪ್ಪಾ ಚಿಕೋಣಿ ಸಾ;ಬ್ಯಾಂಕ ಕಾಲೂನಿ ಗಂಜ ಗುಲಬರ್ಗಾ 2.ಪರಮೇಶ್ವರ ತಂದೆ ವೇಷಣ್ಣಾ ಚಲಗೇರಿ ಸಾ;ಮಾಕಾ ಲೇಔಟ ಜೇವರ್ಗಿ ರೋಡಗುಲಬರ್ಗಾ 3.ಶ್ರೀಶೈಲ್ ತಂದೆ ಮಲ್ಲಿಕಾರ್ಜುನ ನಾಯಿಕೊಡಿ ಸಾ;ಮನಂ.116 ಸಿಐಬಿ.ಕಾಲೋನಿ ಗುಲ್ಬರ್ಗಾ 4.ಭೀಮಶ್ಯಾ ತಂದೆ ಬಂಡೆಪ್ಪಾ ಸಿಂಧೆ ಸಾ; ಅಶೋಕ ನಗರ ಕಾಲೂನಿ ಗುಲಬರ್ಗಾ 5.ರಮೇಶ ತಂದೆ ಶಿವಶರಣಪ್ಪಾ ನಿಂಬಾಳ ಸಾ; ಉಪಳಾಂವ ತಾ: ಗುಲ್ಬರ್ಗಾ 6.ಅಣವೀರಪ್ಪಾ ತಂದೆ ಮಲ್ಕಣ್ಣಾ ನಂದಿಕೂರ ಸಾ;ಉಪಳಾಂವ ತಾ: ಗುಲ್ಬರ್ಗಾ 7.ಶಂಕರೆಪ್ಪಾ ತಂದೆ ಸಂಗಣ್ಣಾ ಟೆಂಗಳಿ ಸಾ; ಉಪಳಾಂವ ತಾ: ಗುಲಬರ್ಗಾ ಹಿಡಿದು ಜೂಜಾಟಕ್ಕೆ ಬಳಸಿದ 52 ಇಸ್ಪೇಟ ಎಲೆ ಹಾಗೂ ನಗದು ಹಣ 6035/- ರೂಗಳು ಹಾಗೂ 4 ಮೋಬೈಲ ಪೋನಗಳನ್ನು ವಶಪಡಿಸಿಕೊಂಡು ಸದರಿಯವರ ವಿರುದ್ದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣ :
ಗ್ರಾಮೀಣ ಠಾಣೆ :
ಶ್ರೀ ಮಧುಕರ ತಂದೆ ಅಂಬಾಜಿ ಬಂದಿಚೌಡೆ ಸಾ: ಜಂಬಗಾ (ಕೆ) ತಾ: ಆಳಂದ ಜಿ: ಗುಲಬರ್ಗಾ ರವರು ದಿನಾಂಕ 27-09-11 ರಂದು ದಣ್ಣೂರ ಗ್ರಾಮಕ್ಕೆ ಹೋಗಿ ದೇವರ ದರ್ಶನ ಮಾಡಿಕೊಂಡು ದಣ್ಣೂರ ಗ್ರಾಮದಲ್ಲಿ ಮ್ಯಾಕ್ಸಿ ಕ್ಯಾಬ ಹತ್ತಿ ಗುಲಬರ್ಗಾಕ್ಕೆ ಸಾಯಂಕಾಲ ಆಳಂದ ಚೆಕ್ಕ ಪೋಸ್ಟ್‌ ಹತ್ತಿರ ಬಂದು ಮ್ಯಾಕ್ಸಿ ಕ್ಯಾಬಿನಿಂದ ಇಳಿಯುವಾಗ 3 ಜನ ಅಪರಿಚಿತರು 25 ರಿಂದ 30 ವರ್ಷ ವಯಸ್ಸಿನವರು ನನ್ನ ಪ್ಯಾಂಟಿನ ಹಿಂದಿನ ಜೇಬಿನಲ್ಲಿದ್ದ 10000/- ರೂಪಾಯಿ ಕಳ್ಳತನ ಮಾಡಿಕೊಂಡು ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ :
ದಿನಾಂಕ: 27-9-2011 ರಂದು   ನಗರದ ಜಗತ .ಸರ್ಕಲ್  ದಿಂದ ಎಸ್.ವಿ.ಪಿ. ಸರ್ಕಲ್ ರೋಡಿನಲ್ಲಿ ಬರುವ ಟೌನ ಹಾಲ ಕ್ರಾಸ್  ರೋಡಿನ ಮೇಲೆ  ಒಂದು ಅಟೊರೀಕ್ಷಾ ನಂ:ಕೆಎ 32 ಬಿ 409 ನೆದ್ದರ ಚಾಲಕ ಜಿ.ಜಿ.ಹೆಚ್.ಸರ್ಕಲ್ ಕಡೆಯಿಂದ ಅತಿವೇಗವಾಗಿ & ಅಲಕ್ಷತನದಿಂದ  ಚಲಾಯಿಸಿಕೊಂಡು ಬಂದು ಎಸ್.ವಿ.ಪಿ.ಸರ್ಕಲ್ ಕಡೆ ತಿರುಗಿಸಿಕೊಳ್ಳುತ್ತಿದ್ದಾಗ ಒಮ್ಮೇಲೆ ಕಟ್ಟ ಹೊಡೆದು ತನ್ನಿಂದ ತಾನೆ ಅಟೋರೀಕ್ಷಾ ಪಲ್ಟಿಮಾಡಿ  ಅದರಲ್ಲಿ ಕುಳಿತು  ಹೋಗುತ್ತಿದ್ದ ಶ್ರೀ ಶಿವಲಿಂಗಪ್ಪ  ತಂದೆ ಈರಣ್ಣ ಭಂಡಾರಿ ಸಾ: ವಿದ್ಯಾ ನಗರ ಸಿಂದಗಿ     ಇವರಿಗೆ ಗಾಯಗೊಳಿಸಿ ತನ್ನ ಅಟೋರೀಕ್ಷಾ ಅಲ್ಲಿಯೇ ಬಿಟ್ಟು ಓಡಿ.ಹೊಗಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: