POLICE BHAVAN KALABURAGI

POLICE BHAVAN KALABURAGI

27 September 2011

Gulbarga District Reported Crimes

ಜೂಜಾಟದಲ್ಲಿ ನಿರತ ಮೂರು ಜನರ ಬಂಧನ :

ರಾಘವೇಂದ್ರ ನಗರ ಠಾಣೆ :ದಿನಾಂಕ 26-09-2011 ರಾತ್ರಿ 11 ಗಂಟೆಗೆ ಶಹಾಜಿಲಾನಿ ದರ್ಗಾದ ಹತ್ತಿರ ಸಾರ್ವಜನಿಕ ಸ್ಥಳಸದಲ್ಲಿ ಆನೆ ಕುದುರೆ ಸಿಂಹ ಚಿತ್ರವುಳ್ಳ ಬ್ಯಾನರ ತೋರಿಸಿ ಜೂಜಾಟ ನಡೆಸುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಮಾನ್ಯ ಎ.ಎಸ್.ಪಿ ಸಾಹೇಬರು ಎ ಉಪವಿಭಾಗ ಗುಲಬರ್ಗಾರವರು ತಮ್ಮ ಉಪವಿಭಾಗದ ಅಧಿಕಾರಿಗಳಾದ ಶರಣಬಸವೇಶ್ವರ ಪಿಐ ಬ್ರಹ್ಮಪೂರ ಠಾಣೆ ಬಸವರಾಜ ತೇಲಿ ಪಿ.ಎಸ್.ಐ ರಾಘವೆಂದ್ರ ನಗರ ಹಾಗೂ ರಾಘವೇಂದ್ರ ಠಾಣೆಯ ಸಿಬ್ಬಂದಿ ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ 1.ಸದ್ದಾಮತ ತಂದೆ ಪಾಶಾಮಿಯಾ ಪಟೇಲ ಸಾ|| ಹಿರಾಪೂರ ಗುಲಬರ್ಗಾ 2. ಖಲೀಲ ತಂದೆ ಖಾಜಾಮಿಯಾ ಖುದಾವನ ಸಾ|| ಖದೀರ ಚೌಕ ಗುಲಬರ್ಗಾ 3. ಖಾಜಾ ಮೈನೋದ್ದೀನ ತಂದೆ ಖುದಾಬಕ್ಸ ಬಂಬಾಯಿ ಮಿಟಾಯಿ ಸಾ|| ಎಮ್.ಎಸ್.ಕೆ ಮಿಲ ಗುಲಬರ್ಗಾ 3 ಜನರನ್ನು ವಶಕ್ಕೆ ತೆಗೆದುಕೊಂಡು ಜೂಜಾಟಕ್ಕೆ ಬಳಸಿದ ನಗದು ಹಣ 7600/-ರೂಪಾಯಿಗಳು, ಆನೆ ಕುದುರೆ ಸಿಂಹ ಚಿತ್ರವುಳ್ಳ ಜೂಜಾಟಕ್ಕೆ ಸಂಬಂಧಪಟ್ಟ ಬ್ಯಾನರ, 7 ಇಸ್ಪೇಟ ಎಲೆಗಳು ಜಪ್ತು ಮಾಡಿಕೊಂಡಿದ್ದು ಈ ಬಗ್ಗೆ ರಾಘವೆಂದ್ರ ನಗರ ಠಾಣೆಯ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಫರತಾಬಾದ ಠಾಣೆ :
ದಿನಾಂಕ: 26-09-2011 ರಂದು ಸಂಪತಬಾಯಿ ಗಂಡ ಶಿವಶರಣಪ್ಪಾ ತಿಪ್ಪನವರ ಶಾ: ಹಾಗರಗಾ ಇವರಿಗೆ ಆರಮ ಇಲ್ಲದ ಕಾರಣ ತೋರಿಸಿಕೊಂಡು ಬರಲು ನನ್ನ ತಮ್ಮನಾದ ಅಂಬರಾಯ ಕೂಡಿಕೊಂಡು ಹುಣಸಿಹಡಗಿಲಗ್ರಾಮದಿಂದ ಗುಲಬರ್ಗಾಕ್ಕೆ ಬಂದು ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿಕೊಂಡು ಗುಲಬರ್ಗಾದಿಂದ ಪ್ಯಾಸೇಂಜರ ರೇಲ್ವೆನಲ್ಲಿ ಕುಳಿತುಕೊಂಡು ಸಾವಳಗಿ ಸ್ಠೇಷನದಲ್ಲಿ ಇಳಿದು ಹುಣಸಿ ಹಡಗಿಲ ಗ್ರಾಮಕ್ಕೆ ನಡೆದುಕೊಂಡು ಹುಣಸಿ ಹಡಗಿಲ ಗ್ರಾಮದ ಹತ್ತಿರ ಇರುವ ಫೊಲ್ ಮೇಲೆ ಹೋಗುತ್ತಿದ್ದಾಗ ಹಿಂದುಗಡೆ ಬರುತ್ತಿದ್ದ ಮೋಟಾರ ಸೈಕಲ ನಂ: ಕೆಎ-32 ವ್ಹಿ- 6591 ನೇದ್ದರ ಸವಾರನು ತನ್ನ ವಾಹವನ್ನು ಅತಿವೇಗದಿಂದ, ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿದ ಪರಿಣಾಮ ನನ್ನ ಎಡಗಡೆ ತೆಲೆಗೆ ಭಾರಿ ರಕ್ತಗಾಯವಾಗಿರುತ್ತದೆ, ಮತ್ತು ಎಡ ಕಪಾಳಕ್ಕೆ, ಬಲಗಾಲ ಮೊಳಕಾಲ ಹತ್ತಿರ ರಕ್ತಗಾಯಗಳಾಗಿರುತ್ತವೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣ :

ಕಮಲಾಪೂರ ಠಾಣೆ :ಶ್ರೀಮತಿ ಪುತಳಾಬಾಯಿ ಗಂಡ ಶ್ರೀಮಂತರಾವ ನಾರಾಯಣಪೂರೆ ಸಾ: ಬೆಕೋಟಾ ಪುನರ ವಸತಿ ಕೇಂದ್ರ ಕಮಲಾಪೂರ ರವರು ದಿನಾಂಕ 26-09-2011 ರಂದು ರಾತ್ರಿ ಊಟ ಮಾಡಿ ಮನಗೆ ಬೀಗ ಹಾಕಿಕೊಂಡ ಮನೆಯ ಅಂಗಳದಲ್ಲಿ ಮಲಗಿಕೊಂಡಾಗ ಯಾರೋ ಕಳ್ಳರು ಮನೆಯ ಕೀಲಿ ತರೆದು ಮನೆಯಲ್ಲಿದ್ದ ಬಂಗಾರ ಬೆಳ್ಳಿಯ ಆಭರ ಮತ್ತು ನಗದು ಹಣ ಹೀಗೆ ಒಟ್ಟು 9400/- ರೂಪಾಯಿ ಕಿಮ್ಮತ್ತಿನವುಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಅಲ್ಲದೆ ಪಕ್ಕದ ಮನೆಯವರಾದ ಶ್ರೀ, ದಾನಪ್ಪ ಜಮಾದಾರ ಇವರ ಮನೆಯಲ್ಲಿಯೂ ಕಳ್ಳರು ಬಾಗಿಲ ಕೀಲಿ ಮುರಿದು ಮನೆಯಲ್ಲಿದ್ದ ಬಂಘಾರದ ಬೆಳ್ಳಿಯ ಆಭರಣ ಮತ್ತು ನಗದು ಹಣ ಒಟ್ಟು 21800=00 ರೂಪಾಯಿ ಬೆಲೆಬಾಳುವ ಸಾಮಾನುಗಳನ್ನು ಕಳವು ಂಆಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :
ಶಾಹಾಬಾದ ನಗರ ಠಾಣೆ :
ಶ್ರೀ ಸುಭಾಸ ತಂದೆ ಈರಣ್ಣಾ ತಿಪ್ಪಿಮನಿ ಸಾ:ಶಂಕರವಾಡಿ ಶಾಹಾಬಾದ ರವರು ದಿನಾಂಕ 26-09-2011 ರಂದು ಸಾಯಂಕಾಲ ರಾಜು ತಂದೆ ಮಲ್ಲಪ್ಪಾ ಇನ್ನೂ 5 ಜನರು ಸಾ:ಎಲ್ಲರೂ ಶಂಕರವಾಡಿ ಕುಡಿಕೊಂಡು ಮಗನಾದ ನಾಗರಾಜ ಇವನನ್ನು ಶಂಕರ ಇವನ ಮನೆಗೆ ಕರೆದುಕೊಂಡು ಹೋಗಿದ್ದು ಸದರಿಯವರ ಸಂಗಡ ನಾನು ಹೋಗಿದ್ದು ಶಂಕರ ಇತನು ನಿನ್ನ ಮಗ ನಾಗರಾಜ ಇವನು ನನ್ನ ಮಗಳನ್ನು ಭಂಕೂರದಿಂದ ಮೋಟಾರ ಸೈಕಲ ಮೇಲೆ ಏಕೆ ಕರೆದುಕೊಂಡು ಬಂದಿದ್ದಾನೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಕಟ್ಟಿಗೆಯಿಂದ ತಲೆಗೆ ಎದೆಗೆ ಬೆನ್ನಿಗೆ ಹೊಡೆದು ಗುಪ್ತ ಗಾಯ ಮತ್ತು ರಕ್ತಗಾಯ ಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: