POLICE BHAVAN KALABURAGI

POLICE BHAVAN KALABURAGI

27 September 2011

Gulbarga District Reported Crimes

ಕಾಳ ಸಂತೆಯಲ್ಲಿ ಅಕ್ರಮ ಸೀಮೆ ಎಣ್ಣೆ ಮಾರಾಟ ಮಾಡುತ್ತಿದ್ದವರ ಬಂಧನ :
ಆಳಂದ ಠಾಣೆ :
ದಿನಾಂಕ 26-09-2011 ರಂದು ತಡಕಲ್ ಗ್ರಾಮದ ಹತ್ತಿರ ಜೀಪ ನಂ ಎಮ್.ಹೆಚ್. 14  ಡಿ 2403 ನೇದ್ದರಲ್ಲಿ 50 ಲೀಟರ ಸೀಮೆ ಎಣ್ಣೆ ಹಾಕಿಕೊಂಡು ಕಾಳ: ಸಂತೆಯಲ್ಲಿ ಮಾರಾಟ ಮಾಡಲು ತಡಕಲ್ ಕಡೆಗೆ ಹೊಗುತ್ತಿರುವ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೊಗಿ ದಾಳಿ ಮಾಡಿ ಜೀಪ ಪರಸಿಲಿಸಿ ನೋಡಲಾಗಿ ಅದರಲ್ಲಿ 50 ಲೀಟರ ಸೀಮೆ ಎಣ್ನೆ ಇದ್ದುದು ಕಂಡು ಬಂದಿದರಿಂದ ಸಿದ್ದಪ್ಪ ತಂದೆ ಪರಮೇಶ್ವರ ಡೊಲೆ ಸಂ 3 ಜನರು ಸಾ: ಎಲ್ಲರೂ ತಡಕಲ್ ರವರನ್ನು ದಸ್ತಗೀರ ಮಾಡಿಕೊಂಡು ಮಾಲು ಸಮೇತ ಠಾಣೆಗೆ ಬಂದು ಸದರಿಯವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ :
ದಿನಾಂಕ
24-09-2011 ರಂದು ರಾತ್ರಿ ಶ್ರೀ ರಮೇಶ ತಂದೆ ಜರನಪ್ಪಾ ಗಾಜರೆ ಸಾ: ರಾಮ ನಗರ ರೋಡ ಗುಲಬರ್ಗ ರವರ ಟಾಟಾ ಎಸ ಗಾಡಿ ನಂ ಕೆಎ-32 ಬಿ*4661 ನೇದ್ದನ್ನು ಸಚೀನ ತಂದೆ ಶ್ರೀಮಂತ ಹೋಡಲ್ಕರ ಇವರು ರಾಮ ಮಂದಿರ ಕಡೆಯಿಂದ ನಡೆಸಿಕೊಂಡು ಗಂಜ ಕಡೆಗೆ ಹೋರಟಾಗ ನಾಗನಹಳ್ಳಿ ರಿಂಗ ರೋಡ ಸರ್ಕಲ್ ಹತ್ತಿರ ಬಂದಾಗ ಶಾಹಾಬಾದ ರಿಂಗ ರೋಡ ಕಡೆಯಿಂದ ಬಂದ ಮಾರುತಿ ಸ್ವೀಪಟ್ಟ ಕಾರ ನಂ ಕೆಎ-32 ಎಮ್-9149 ನೇದ್ದರ ಚಾಲಕ ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಅಪಘಾತ ಪಡಿಸಿದ್ದರಿಂದ ನಮ್ಮ ವಾಹನ ಚಾಲಕ ಸಚೀನಗೆ ಕಾಲಿಗೆ ಮತ್ತು ಹನೆಗೆ ಗಾಯಗಳಾಗಿದ್ದು ನನ್ನ ವಾಹನದ ಮುಂಭಾಗ ಸಂಪೂರ್ಣ ಹಾಳಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: