POLICE BHAVAN KALABURAGI

POLICE BHAVAN KALABURAGI

28 September 2011

Gulbarga District Reported Crime


ಅಪಘಾತ ಪ್ರಕರಣ :

ಹೆಚ್ಚುವರಿ ಸಂಚಾರಿ ಠಾಣೆ :ದಿನಾಂಕ:
28-09-2011 ರಂದು ಬೆಳಗ್ಗೆ ಮಾರ್ಕೇಟ ಅಫಜಲಪೂರ ಮೇನ ರೋಡನಲ್ಲಿ ನಡೆದುಕೊಂಡು ರೋಡ ದಾಟುತ್ತಿದ್ದ ಮಲ್ಲು @ ಮಲ್ಲಿಕಾರ್ಜುನ ತಂದೆ ಬೀರಣ್ಣ ಪುಜಾರಿ ಈತನಿಗೆ ಮೋ/ಸೈಕಲ್ ನಂ:ಕೆಎ 32 ಎಸ್ 2678 ನೆದ್ದರ ಚಾಲಕ ಅಫಜಲಪೂರ ರೋಡಿನ ಕಡೆಯಿಂದ ಅತಿವೇಗವಾಗಿ ಅಲಕ್ಷತನದಿಂದ ರಾಂಗ ಸೈಡಿನಿಂದ ಚಲಾಯಿಸಿಕೊಂಡು ಹೋಗಿ ನಡೆದುಕೊಂಡು ರೋಡ ದಾಟುತ್ತಿದ್ದ ಮಲ್ಲಿಕಾರ್ಜುನ ಈತನಿಗೆ ಅಪಘಾತಪಡಿಸಿ ಭಾರಿ ಗಾಯಗೋಳಿಸಿ ತನ್ನ ಮೋ/ಸೈಕಲ್ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: