POLICE BHAVAN KALABURAGI

POLICE BHAVAN KALABURAGI

23 January 2013

GULBARGA DISTRICT REPORTED CRIME


ಶಾಲಾ ಮಕ್ಕಳ ಬಿಸಿ ಊಟಕ್ಕೆ ತಂದಿಟ್ಟಿದ್ದ ಆಹಾರ ಧಾನ್ಯಗಳು  ಕಳವು:
ನಿಂಬರ್ಗಾ ಪೊಲೀಸ ಠಾಣೆ:ದಿನಾಂಕ:21-01-2013 ರಂದು 16-30 ಗಂಟೆಗೆ ಸ.ಹಿ.ಪ್ರಾ.ಶಾಲೆ ಧಂಗಾಪೂರದ ಶಾಲೆಯ ಎಲ್ಲಾ ಬಾಗಿಲುಗಳಿಗೆ ಕೀಲಿ ಹಾಕಿಕೊಂಡು ಹೋಗಿದ್ದು,  ಅಡುಗೆಯ ಕೋಣೆಯ ಕೀಲಿ, ಅಡುಗೆ ಸಹಾಯಕಿ ಕಲಾವತಿ ಹತ್ತಿರ ಇರುತ್ತದೆ. ದಿನಾಂಕ:22-01-2013 ರಂದು ಬೆಳಿಗ್ಗೆ 9-00 ಗಂಟೆಗೆ ಶಾಲೆಗೆ ಬಂದು ನೋಡಲು ಅಡುಗೆ ಕೋಣೆಯ ಕೀಲಿ ಮುರಿದಿದ್ದು ಒಳಗೆ ಹೋಗಿ ನೋಡಲಾಗಿ ಶಾಲಾ ಮಕ್ಕಳ ಬಿಸಿ ಊಟಕ್ಕೆ ತಂದಿಟ್ಟಿದ್ದ ಆಹಾರ ಧಾನ್ಯಗಳು ಅ||ಕಿ||3,000/-ರೂ.ಗಳ ಬೆಲೆಯುಳ್ಳದ್ದು,ರಾತ್ರಿ ವೇಳೆಯಲ್ಲಿ  ಯಾರೋ ಕಳ್ಳರು  ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಗುಂಡೆರಾವ ಎಸ್‌.ಹಳಿಮನಿ  ಪ್ರಭಾರಿ ಮುಖ್ಯ ಗುರುಗಳು ಸ.ಹಿ.ಪ್ರಾ.ಶಾಲೆ ಧಂಗಾಪೂರ ಸಾ||ನಿಂಬರ್ಗಾ ತಾ|| ಆಳಂದ ರವರು ದೂರು ಸಲ್ಲಿಸಿದ ಸಾರಾಂಶದ  ಮೇಲಿಂದ  ನಿಂಬರ್ಗಾ ಠಾಣೆ ಗುನ್ನೆ ನಂ:07/2013 ಕಲಂ, 457, 380 ಐಪಿಸಿ ಪ್ರಕಾರ ಪ್ರಕರಣ  ದಾಖಲು ಮಾಡಿಕೊಂಡಿರುತ್ತಾರೆ. 

22 January 2013

GULBARGA DISTRICT REPORTED CRIME


ಯು.ಡಿ.ಅರ್. ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ:ದಿನಾಂಕ 21-01-2013 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ಹೋಲದಲ್ಲಿ ಕೆಲಸ ಮಾಡುವ ಲೋಹಿತ ಈತನು ಮನೆಗೆ ಬಂದು  ನಮ್ಮ ಮತ್ತು ನಮ್ಮ ಹೊಲದ ಪಕ್ಕದಲ್ಲಿ ರುವ ಬಸಪ್ಪ ಖೇಮಜಿ ಇವರ ಮಧ್ಯೆ ಇರುವ ನಾಲಾದ ತೆಗ್ಗಿನಲ್ಲಿ ಒಂದು ಗಂಡು ಶವ ಬಿದ್ದಿದೆ ಅಂತಾ ತಿಳಿಸಿದ್ದರಿಂದ ನಾನು ಮತ್ತು ಅಕ್ಕನ ಗಂಡ ಖಾಜಾ ಮೋಬಿನವುಲ್ಲಾ ಷರೀಫ್ ಹಾಗೂ ಲೋಹಿತ ಮೂರು ಜನರು ಹೊಲಕ್ಕೆ ಹೋಗಿ ನೋಡಲಾಗಿ ಅಂದಾಜು 8-10  ದಿವಸಗಳ ಹಿಂದೆ ಅಪರಿಚಿತ ಗಂಡು ಶವ ಬಿದ್ದಿದ್ದು, ವಯಾ ಅಂದಾಜ 55 ರಿಂದ 60 ವರ್ಷ ವಯಸ್ಸಿನದ್ದು, ಶವ ಪೂರ್ತಿ ಕಪ್ಪಾಗಿ ಎಣ್ಣೆ ಬಿಟ್ಟು ಕೊಳೆತು ಹುಳು ಬಿದ್ದು ವಾಸನೆ ಬರುತ್ತಿದ್ದು, ಎರಡು ಕಣ್ಣುಗಳು ಹುಳಗಳು ತಿಂದಿದ್ದು,  ಪೂರ್ತಿ ದೇಹ ಊಬ್ಬಿದ್ದು . ತಲೆಯಲ್ಲಿ ಬಿಳಿ ಕೂದಲು ಇದ್ದು,  ಮೃತನ ಮೈಮೇಲೆ ಒಂದು ಕೆಂಪು, ಬಿಳಿ ಕರಿ ಉದ್ದನೆಯ ಗೆರೆವುಳ್ಳ ಪೂರ್ಣ ತೋಳಿನ ರ್ಟು ಇದೆ, ಕಪ್ಪು ಬಣ್ಣದ ಜೀನ್ಸ ಪ್ಯಾಂಟು ಅದಕ್ಕೆ ಕಪ್ಪು ಬೆಲ್ಟ್ ಮತ್ತು ಬೂದ ಬಣ್ಣ ದಸ್ತಿ ಹಾಗೂ ಬ್ರೌನ ಕಲರ ವಾಕಿಂಗ ಬೂಟ ಮೃತ ದೇಹದ ಪಕ್ಕದಲ್ಲಿ ಇರುತ್ತವೆ. ಸದರಿ ಅಪರಿಚಿತ ಮೃತ ದೇಹ ಪೂರ್ತಿ ಕೊಳೆತಿದ್ದರಿಂದ ಮೈಮೇಲೆ ಗಾಯ ವಗೈರೇ ಗುರುತುಗಳು ಕಂಡು ಬರುತ್ತಿಲ್ಲಾ. ಮುಂದಿನ ಕಾನೂನು ಕ್ರಮ ಜರುಗಿಸಬೇಕಾಗಿ ಅಂತಾ ಶ್ರೀ ಆಸೀಫ ಅಹ್ಮದಖಾನ ತಂದೆ ಗುಲಾಮ ಅಹ್ಮದ ಪಠಾಣ ಸಾ|| ಶೇಖ ರೋಜಾ ಗುಲಬರ್ಗಾ ವರು ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಅರ್.ನಂ.02/2013 ಕಲಂ 174 (ಸಿ)  ಸಿಅರ್ ಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ. 

21 January 2013

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಸೇಡಂ ಪೊಲೀಸ್ ಠಾಣೆ:ಶ್ರೀ,ಶಿವಶರಣಪ್ಪ ತಂದೆ ಶಿವಲಿಂಗಪ್ಪ ಚಿಲೇರಿ ಉ:ಆರ್.ಸಿ.ಎಫ್.ದಲ್ಲಿ ಸಿವಿಲ್ ಕೆಲಸ್ ಸಾ:ಹಂಗನಳ್ಳಿ ತಾ|| ಸೇಡಂ, ಹಾ||ವ||ವಿದ್ಯಾನಗರ ಸೇಡಂರವರು ನಾನು ಮತ್ತು ನಮ್ಮ ಮಾವನಾದ ಗುರುಲಿಂಗಪ್ಪ ನಿಪ್ಪಾಣಿ ಸಾ:ಹಂಗನಳ್ಳಿ ಇಬ್ಬರೂ ಕೂಡಿಕೊಂಡು  ದಿನಾಂಕ: 19-01-2013 ರಂದು ಸಾಯಂಕಾಲ ಮೋಟಾರು ಸೈಕಲ್ ಮೇಲೆ ಕೊಡಂಗಲ್ ನಿಂದ ಸೇಡಂಕ್ಕೆ ಬರುತ್ತಿರುವಾಗ ನನ್ನ ಮುಂದುಗಡೆ ನನ್ನ ಅಕ್ಕನ ಮೊಮ್ಮಗಳ ಗಂಡನಾದ ಪ್ರವೀಣಕುಮಾರ ಹುಸೇನಪೂರ ವಯ-24 ವರ್ಷ ಇತನು ತನ್ನ ಸ್ನೇಹಿತನಾದ ಜೆ.ಚೆನ್ನಬಸಪ್ಪ ತಂದೆ ಚೆನ್ನಪ್ಪ ಜಾಕಾ ಸಾ:ದೌಲತಾಬಾದ (ಆಂದ್ರಪ್ರದೇಶ) ಇತನು ಚಲಾಯಿಸುತ್ತಿದ್ದ ಗ್ಲಾಮರ್ ಮೋಟಾರ ಸೈಕಲ್ ನಂ-ಎಪಿ-22ಎಜೆ-0512 ನೇದ್ದರ ಹಿಂದೆ ಕುಳಿತಿದ್ದನು. ತನ್ನ ಊರಿನಿಂದ ಸೇಡಂಕ್ಕೆ ತನ್ನ ಹೆಂಡತಿಯನ್ನು ಕರೆದುಕೊಂಡು ಹೋಗುವ ಸಲುವಾಗಿ ಬರುತ್ತಿದ್ದಾಗ ಕೊಡಂಗಲ್-ಸೇಡಂ ಮುಖ್ಯ ರಸ್ತೆಯ ಬೋರಿಂಗ್ ಹೂಡಾ ಗ್ರಾಮದ ಹತ್ತಿರ ದಿನಾಂಕ:19-01-2013 ರಂದು ರಾತ್ರಿ 08-30 ಗಂಟೆ ಸುಮಾರಿಗೆ ರಂಜೋಳ ಕ್ರಾಸ್ ಹತ್ತಿರ ತಮ್ಮ  ಮೋಟಾರು ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಒಮ್ಮೆಲೆ ಬ್ರೇಕ್ ಹಾಕಿದ್ದರಿಂದ ಮೋಟಾರ ಸೈಕಲ್ ಸ್ಕಿಡ್ ಆಗಿ ಕೆಳಗೆ ಬಿದ್ದರು. ಮೋಟಾರು ಸೈಕಲ್ ಚಾಲಕನಾದ ಜೆ. ಚೆನ್ನಬಸಪ್ಪ ಇತನಿಗೆ ಯಾವುದೇ ಗಾಯ ಆಗಿರುವದಿಲ್ಲ. ಪ್ರವಿಣಕುಮಾರ ಇತನಿಗೆ ಭಾರಿಗಾಯಗಳಾದ್ದು, ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಲಾಗಿತ್ತು. ಹೆಚ್ಚಿನ ಉಪಚಾರ ಕುರಿತು ಹೈದ್ರಾಬಾದನ ಗಾಂಧಿ ಆಸ್ಪತ್ರೆಗೆ ದಿ:20-01-2013 ರಂದು ಸೇರಿಕೆ ಮಾಡಲಾಗಿತ್ತು, ಉಪಚಾರ ಫಲಕಾರಿಯಾಗದೇ ದಿ:21-01-2013 ರಂದು ಬೆಳಗ್ಗೆ 4-00 ಗಂಟೆಗೆ ಪ್ರವೀಣಕುಮಾರ ಇತನು ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಮೋಟಾರು ಸೈಕಲ್ ಚಾಲಕನಾದ ಜೆ. ಚೆನ್ನಬಸಪ್ಪ ಇತನ ವಿರುದ್ಧ ಕ್ರಮ ಜರುಗಿಸಬೇಕು ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ.ಗುನ್ನೆ ನಂ:16/2013 ಕಲಂ, 279, 304 [ಎ] ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ದಿನಾಂಕ: 21-01-2013 ರಂದು ಬೆಳಿಗ್ಗೆ 10-40 ಗಂಟೆ ಸುಮಾರಿಗೆ ತಿರಾಂದಾಜ ಟಾಕೀಜ ಕ್ರಾಸ್ ಹತ್ತಿರ ಇರುವ ಹೂವಿನ ಅಂಗಡಿ ಸಮೀಪ ರೋಡಿನ ಪಕ್ಕದಲ್ಲಿ ನಮ್ಮ ತಂದೆಯವರು ಕುಳಿತಿರುವಾಗ ಇನೋವಾ ಕಾರ ಚಾಲಕನು ಗಾಜಿಪೂರ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿರುತ್ತಾನೆ. ಡಿಕ್ಕಿ ಪಡಿಸಿದ ರಭಸಕ್ಕೆ ನಮ್ಮ ತಂದೆಗೆ ಭಾರಿಗಾಯಗಳಾಗಿದ್ದು, ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಲಾಗಿದೆ, ಉಪಚಾರ ಫಲಕಾರಿಯಾಗದೇ ಬೆಳಗ್ಗೆ 11=15 ಗಂಟೆಗೆ ಮೃತ ಪಟ್ಟಿರುತ್ತಾರೆ.  ನನ್ನ ತಂದೆ ತಿಪ್ಪಣ್ಣಾ ಇವರಿಗೆ ಡಿಕ್ಕಿ ಪಡಿಸಿದ ವಾಹನ ನಂ:ಕೆಎ 32 ಎಮ್ 4556 ನೇದ್ದರ ಇನೊವಾ ಕಾರ ಚಾಲಕ ಮೌನೇಶ್ವರ ಇತನ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ರವಿ ತಂದೆ ತಿಪ್ಪಣ್ಣಾ ಉಳಾಗಡ್ಡಿ ವಯಾ:21 ಸಾ||ಆರ್.ಟಿ.ಓ ಆಫೀಸ್ ಹಿಂದುಗಡೆ ಬಾಬು ಜಗಜೀವನರಾಮ ಕಾಲೋನಿ ಜೊಪಡ ಪಟ್ಟಿ ಸೇಡಂ ರೋಡ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:03/2013 ಕಲಂ: 279, 304 (ಎ) ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.