POLICE BHAVAN KALABURAGI

POLICE BHAVAN KALABURAGI

23 January 2013

GULBARGA DISTRICT REPORTED CRIME


ಶಾಲಾ ಮಕ್ಕಳ ಬಿಸಿ ಊಟಕ್ಕೆ ತಂದಿಟ್ಟಿದ್ದ ಆಹಾರ ಧಾನ್ಯಗಳು  ಕಳವು:
ನಿಂಬರ್ಗಾ ಪೊಲೀಸ ಠಾಣೆ:ದಿನಾಂಕ:21-01-2013 ರಂದು 16-30 ಗಂಟೆಗೆ ಸ.ಹಿ.ಪ್ರಾ.ಶಾಲೆ ಧಂಗಾಪೂರದ ಶಾಲೆಯ ಎಲ್ಲಾ ಬಾಗಿಲುಗಳಿಗೆ ಕೀಲಿ ಹಾಕಿಕೊಂಡು ಹೋಗಿದ್ದು,  ಅಡುಗೆಯ ಕೋಣೆಯ ಕೀಲಿ, ಅಡುಗೆ ಸಹಾಯಕಿ ಕಲಾವತಿ ಹತ್ತಿರ ಇರುತ್ತದೆ. ದಿನಾಂಕ:22-01-2013 ರಂದು ಬೆಳಿಗ್ಗೆ 9-00 ಗಂಟೆಗೆ ಶಾಲೆಗೆ ಬಂದು ನೋಡಲು ಅಡುಗೆ ಕೋಣೆಯ ಕೀಲಿ ಮುರಿದಿದ್ದು ಒಳಗೆ ಹೋಗಿ ನೋಡಲಾಗಿ ಶಾಲಾ ಮಕ್ಕಳ ಬಿಸಿ ಊಟಕ್ಕೆ ತಂದಿಟ್ಟಿದ್ದ ಆಹಾರ ಧಾನ್ಯಗಳು ಅ||ಕಿ||3,000/-ರೂ.ಗಳ ಬೆಲೆಯುಳ್ಳದ್ದು,ರಾತ್ರಿ ವೇಳೆಯಲ್ಲಿ  ಯಾರೋ ಕಳ್ಳರು  ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಗುಂಡೆರಾವ ಎಸ್‌.ಹಳಿಮನಿ  ಪ್ರಭಾರಿ ಮುಖ್ಯ ಗುರುಗಳು ಸ.ಹಿ.ಪ್ರಾ.ಶಾಲೆ ಧಂಗಾಪೂರ ಸಾ||ನಿಂಬರ್ಗಾ ತಾ|| ಆಳಂದ ರವರು ದೂರು ಸಲ್ಲಿಸಿದ ಸಾರಾಂಶದ  ಮೇಲಿಂದ  ನಿಂಬರ್ಗಾ ಠಾಣೆ ಗುನ್ನೆ ನಂ:07/2013 ಕಲಂ, 457, 380 ಐಪಿಸಿ ಪ್ರಕಾರ ಪ್ರಕರಣ  ದಾಖಲು ಮಾಡಿಕೊಂಡಿರುತ್ತಾರೆ. 

No comments: