ಯು.ಡಿ.ಅರ್. ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ:ದಿನಾಂಕ 21-01-2013
ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ಹೋಲದಲ್ಲಿ ಕೆಲಸ
ಮಾಡುವ ಲೋಹಿತ ಈತನು ಮನೆಗೆ ಬಂದು
ನಮ್ಮ ಮತ್ತು ನಮ್ಮ ಹೊಲದ ಪಕ್ಕದಲ್ಲಿ ರುವ ಬಸಪ್ಪ ಖೇಮಜಿ ಇವರ ಮಧ್ಯೆ ಇರುವ ನಾಲಾದ
ತೆಗ್ಗಿನಲ್ಲಿ ಒಂದು ಗಂಡು ಶವ ಬಿದ್ದಿದೆ ಅಂತಾ ತಿಳಿಸಿದ್ದರಿಂದ
ನಾನು ಮತ್ತು ಅಕ್ಕನ ಗಂಡ ಖಾಜಾ ಮೋಬಿನವುಲ್ಲಾ ಷರೀಫ್ ಹಾಗೂ ಲೋಹಿತ ಮೂರು
ಜನರು ಹೊಲಕ್ಕೆ ಹೋಗಿ ನೋಡಲಾಗಿ ಅಂದಾಜು 8-10 ದಿವಸಗಳ ಹಿಂದೆ ಅಪರಿಚಿತ ಗಂಡು ಶವ ಬಿದ್ದಿದ್ದು, ವಯಾ ಅಂದಾಜ 55 ರಿಂದ 60 ವರ್ಷ ವಯಸ್ಸಿನದ್ದು, ಶವ ಪೂರ್ತಿ ಕಪ್ಪಾಗಿ ಎಣ್ಣೆ
ಬಿಟ್ಟು ಕೊಳೆತು ಹುಳು ಬಿದ್ದು ವಾಸನೆ ಬರುತ್ತಿದ್ದು, ಎರಡು ಕಣ್ಣುಗಳು ಹುಳಗಳು
ತಿಂದಿದ್ದು, ಪೂರ್ತಿ ದೇಹ ಊಬ್ಬಿದ್ದು .
ತಲೆಯಲ್ಲಿ ಬಿಳಿ ಕೂದಲು ಇದ್ದು, ಮೃತನ ಮೈಮೇಲೆ
ಒಂದು ಕೆಂಪು, ಬಿಳಿ ಕರಿ ಉದ್ದನೆಯ ಗೆರೆವುಳ್ಳ ಪೂರ್ಣ ತೋಳಿನ ಶರ್ಟು
ಇದೆ, ಕಪ್ಪು ಬಣ್ಣದ ಜೀನ್ಸ ಪ್ಯಾಂಟು
ಅದಕ್ಕೆ ಕಪ್ಪು ಬೆಲ್ಟ್ ಮತ್ತು ಬೂದ ಬಣ್ಣ ದಸ್ತಿ ಹಾಗೂ ಬ್ರೌನ ಕಲರ ವಾಕಿಂಗ ಬೂಟ
ಮೃತ ದೇಹದ ಪಕ್ಕದಲ್ಲಿ ಇರುತ್ತವೆ. ಸದರಿ ಅಪರಿಚಿತ ಮೃತ ದೇಹ ಪೂರ್ತಿ ಕೊಳೆತಿದ್ದರಿಂದ ಮೈಮೇಲೆ
ಗಾಯ ವಗೈರೇ ಗುರುತುಗಳು ಕಂಡು ಬರುತ್ತಿಲ್ಲಾ. ಮುಂದಿನ
ಕಾನೂನು ಕ್ರಮ ಜರುಗಿಸಬೇಕಾಗಿ
ಅಂತಾ ಶ್ರೀ ಆಸೀಫ ಅಹ್ಮದಖಾನ ತಂದೆ ಗುಲಾಮ
ಅಹ್ಮದ ಪಠಾಣ ಸಾ|| ಶೇಖ
ರೋಜಾ ಗುಲಬರ್ಗಾ ರವರು ಹೇಳಿಕೆ
ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಅರ್.ನಂ.02/2013
ಕಲಂ 174 (ಸಿ) ಸಿಅರ್ ಪಿಸಿ
ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.
No comments:
Post a Comment