ಅಪಘಾತ ಪ್ರಕರಣ:
ಸೇಡಂ ಪೊಲೀಸ್ ಠಾಣೆ:ಶ್ರೀ,ಶಿವಶರಣಪ್ಪ ತಂದೆ
ಶಿವಲಿಂಗಪ್ಪ ಚಿಲೇರಿ ಉ:ಆರ್.ಸಿ.ಎಫ್.ದಲ್ಲಿ ಸಿವಿಲ್ ಕೆಲಸ್ ಸಾ:ಹಂಗನಳ್ಳಿ ತಾ|| ಸೇಡಂ, ಹಾ||ವ||ವಿದ್ಯಾನಗರ ಸೇಡಂರವರು ನಾನು ಮತ್ತು ನಮ್ಮ ಮಾವನಾದ ಗುರುಲಿಂಗಪ್ಪ ನಿಪ್ಪಾಣಿ
ಸಾ:ಹಂಗನಳ್ಳಿ ಇಬ್ಬರೂ ಕೂಡಿಕೊಂಡು ದಿನಾಂಕ:
19-01-2013 ರಂದು ಸಾಯಂಕಾಲ ಮೋಟಾರು ಸೈಕಲ್ ಮೇಲೆ ಕೊಡಂಗಲ್ ನಿಂದ ಸೇಡಂಕ್ಕೆ ಬರುತ್ತಿರುವಾಗ
ನನ್ನ ಮುಂದುಗಡೆ ನನ್ನ ಅಕ್ಕನ ಮೊಮ್ಮಗಳ ಗಂಡನಾದ ಪ್ರವೀಣಕುಮಾರ ಹುಸೇನಪೂರ ವಯ-24 ವರ್ಷ ಇತನು
ತನ್ನ ಸ್ನೇಹಿತನಾದ ಜೆ.ಚೆನ್ನಬಸಪ್ಪ ತಂದೆ ಚೆನ್ನಪ್ಪ ಜಾಕಾ ಸಾ:ದೌಲತಾಬಾದ (ಆಂದ್ರಪ್ರದೇಶ) ಇತನು
ಚಲಾಯಿಸುತ್ತಿದ್ದ ಗ್ಲಾಮರ್ ಮೋಟಾರ ಸೈಕಲ್ ನಂ-ಎಪಿ-22ಎಜೆ-0512 ನೇದ್ದರ ಹಿಂದೆ ಕುಳಿತಿದ್ದನು. ತನ್ನ ಊರಿನಿಂದ ಸೇಡಂಕ್ಕೆ ತನ್ನ ಹೆಂಡತಿಯನ್ನು
ಕರೆದುಕೊಂಡು ಹೋಗುವ ಸಲುವಾಗಿ ಬರುತ್ತಿದ್ದಾಗ ಕೊಡಂಗಲ್-ಸೇಡಂ ಮುಖ್ಯ ರಸ್ತೆಯ ಬೋರಿಂಗ್ ಹೂಡಾ
ಗ್ರಾಮದ ಹತ್ತಿರ ದಿನಾಂಕ:19-01-2013 ರಂದು ರಾತ್ರಿ 08-30 ಗಂಟೆ ಸುಮಾರಿಗೆ ರಂಜೋಳ ಕ್ರಾಸ್
ಹತ್ತಿರ ತಮ್ಮ ಮೋಟಾರು ಸೈಕಲನ್ನು ಅತೀವೇಗ ಹಾಗೂ
ನಿಷ್ಕಾಳಜಿತನದಿಂದ ಚಲಾಯಿಸಿ ಒಮ್ಮೆಲೆ ಬ್ರೇಕ್ ಹಾಕಿದ್ದರಿಂದ ಮೋಟಾರ ಸೈಕಲ್ ಸ್ಕಿಡ್ ಆಗಿ ಕೆಳಗೆ
ಬಿದ್ದರು. ಮೋಟಾರು ಸೈಕಲ್ ಚಾಲಕನಾದ ಜೆ. ಚೆನ್ನಬಸಪ್ಪ ಇತನಿಗೆ ಯಾವುದೇ ಗಾಯ ಆಗಿರುವದಿಲ್ಲ.
ಪ್ರವಿಣಕುಮಾರ ಇತನಿಗೆ ಭಾರಿಗಾಯಗಳಾದ್ದು, ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆ
ಮಾಡಲಾಗಿತ್ತು. ಹೆಚ್ಚಿನ ಉಪಚಾರ ಕುರಿತು ಹೈದ್ರಾಬಾದನ ಗಾಂಧಿ ಆಸ್ಪತ್ರೆಗೆ ದಿ:20-01-2013 ರಂದು ಸೇರಿಕೆ ಮಾಡಲಾಗಿತ್ತು, ಉಪಚಾರ ಫಲಕಾರಿಯಾಗದೇ ದಿ:21-01-2013 ರಂದು ಬೆಳಗ್ಗೆ 4-00 ಗಂಟೆಗೆ ಪ್ರವೀಣಕುಮಾರ ಇತನು ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಮೋಟಾರು ಸೈಕಲ್
ಚಾಲಕನಾದ ಜೆ. ಚೆನ್ನಬಸಪ್ಪ ಇತನ ವಿರುದ್ಧ ಕ್ರಮ ಜರುಗಿಸಬೇಕು ಅಂತ ದೂರು ಸಲ್ಲಿಸಿದ ಸಾರಾಂಶದ
ಮೇಲಿಂದ ಠಾಣೆ.ಗುನ್ನೆ ನಂ:16/2013 ಕಲಂ, 279, 304 [ಎ] ಐಪಿಸಿ ನೇದ್ದರ
ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್
ಠಾಣೆ:ದಿನಾಂಕ: 21-01-2013 ರಂದು
ಬೆಳಿಗ್ಗೆ 10-40 ಗಂಟೆ ಸುಮಾರಿಗೆ ತಿರಾಂದಾಜ ಟಾಕೀಜ ಕ್ರಾಸ್ ಹತ್ತಿರ ಇರುವ ಹೂವಿನ ಅಂಗಡಿ ಸಮೀಪ
ರೋಡಿನ ಪಕ್ಕದಲ್ಲಿ ನಮ್ಮ ತಂದೆಯವರು ಕುಳಿತಿರುವಾಗ ಇನೋವಾ ಕಾರ ಚಾಲಕನು ಗಾಜಿಪೂರ ಕಡೆಯಿಂದ
ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿರುತ್ತಾನೆ. ಡಿಕ್ಕಿ ಪಡಿಸಿದ
ರಭಸಕ್ಕೆ ನಮ್ಮ ತಂದೆಗೆ ಭಾರಿಗಾಯಗಳಾಗಿದ್ದು, ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಸೇರಿಕೆ
ಮಾಡಲಾಗಿದೆ, ಉಪಚಾರ ಫಲಕಾರಿಯಾಗದೇ ಬೆಳಗ್ಗೆ 11=15 ಗಂಟೆಗೆ ಮೃತ ಪಟ್ಟಿರುತ್ತಾರೆ. ನನ್ನ ತಂದೆ ತಿಪ್ಪಣ್ಣಾ ಇವರಿಗೆ ಡಿಕ್ಕಿ ಪಡಿಸಿದ ವಾಹನ
ನಂ:ಕೆಎ 32 ಎಮ್ 4556 ನೇದ್ದರ ಇನೊವಾ ಕಾರ ಚಾಲಕ ಮೌನೇಶ್ವರ ಇತನ ಮೇಲೆ ಕಾನೂನು ಕ್ರಮ
ಜರೂಗಿಸಬೇಕು ಅಂತಾ ರವಿ ತಂದೆ ತಿಪ್ಪಣ್ಣಾ ಉಳಾಗಡ್ಡಿ ವಯಾ:21 ಸಾ||ಆರ್.ಟಿ.ಓ ಆಫೀಸ್ ಹಿಂದುಗಡೆ
ಬಾಬು ಜಗಜೀವನರಾಮ ಕಾಲೋನಿ ಜೊಪಡ ಪಟ್ಟಿ ಸೇಡಂ ರೋಡ ರವರು ದೂರು ಸಲ್ಲಿಸಿದ ಸಾರಂಶದ
ಮೇಲಿಂದ ಠಾಣೆ ಗುನ್ನೆ ನಂ:03/2013 ಕಲಂ: 279, 304 (ಎ) ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಕೊಂಡಿರುತ್ತಾರೆ.
No comments:
Post a Comment