POLICE BHAVAN KALABURAGI

POLICE BHAVAN KALABURAGI

21 January 2013

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀ ಭೀಮಶಾ ತಂದೆ ಶಿವಲಿಂಗಪ್ಪ ಹಡಪಾದ ವ|| 65 ವರ್ಷಜಾ|| ಹಡಪಾದ||ಒಕ್ಕಲುತನಸಾ||ದುತ್ತರಗಾಂವ ರವರು ನಾವು ದಿನಾಂಕ:19-01-2013 ರಂದು ರಾತ್ರಿ  ನಮ್ಮ ಹಳೆಯ ಮನೆಯಲ್ಲಿದ್ದ ಅಲಮಾರಿಗೆ ಮತ್ತು ಮನೆಗೆ ಕೀಲಿ ಹಾಕಿ ಹೊಸ ಮನೆಯಲ್ಲಿ ಮಲಗಿಕೊಂಡಿದ್ದುದಿನಾಂಕ:20-01—2013 ರಂದು ಬೆಳಿಗ್ಗೆ 06-00 ಗಂಟೆಗೆ ಹಳೆಯ ಮನೆಯ ಬಾಗಿಲು ತೆರೆಯಲು ಬಂದಾಗ ಮನೆಗೆ ಹಾಕಿದ ಕೀಲಿ ಇರಲಿಲ್ಲ ಅಲ್ಲದೆ ಬಾಗಿಲು ತೆರೆದಿದ್ದು ಒಳಗೆ ಹೋಗಿ ನೋಡಲು ಅಲಮಾರಿಯ ಕೀಲಿ ಮುರಿದು ಬಂಗಾರದ ಆಭರಣಗಳು 3,00,000/- ರೂಪಾಯಿಗಳದ್ದು ಮತ್ತು ನಗದು ಹಣ 25,000/- ಹೀಗೆ ಒಟ್ಟು  3,25,000/- ರೂ. ಗಳದ್ದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:06/2013 ಕಲಂ, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಭಂಕೂರ ಗ್ರಾಮದ ಗಣೇಶ ಗುಡಿಯ ಹತ್ತಿರವಿರುವ ಬಾಬಾ ಪಟೇಲರವರ ಪಾಲೀಶ ಮಶೀನ ಎದರುಗಡೆ ಸಾರ್ವಜನಿಕ ಸ್ಥಳದಲ್ಲಿ ದಿನಾಂಕ:20-01-2013 ರಂದು ಸಾಯಂಕಾಲ 6-00 ಗಂಟೆ ಸುಮಾರಿಗೆ ಕೆಲವು ಜನರು ಕುಳಿತು ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತಾ ಭಾತ್ಮಿ ಬಂದ ಮೇರೆಗೆ ಮಾನ್ಯ ಡಿವೈಎಸ್‌ಪಿ ಸಾಹೇಬ ಶಹಾಬಾದರವರ ಮಾರ್ಗದರ್ಶನದಲ್ಲಿ ಸುನೀಲಕುಮಾರ ಎಸ್‌.ನಾಯಕ ಪಿಎಸ್‌ಐ (ಅ&ವಿ) ಹಾಗೂಸಿಬ್ಬಂದಿಯವರಾದಯೇಜಕಲ್‌,ಗುಂಡಪ್ಪಾ,ಪರಶುರಾಮ,ಬಸವರಾಜ,ಸುಭಾಸ,ಬಸವಣಪ್ಪಾ,ರವರೊಂದಿಗೆ ದಾಳಿ ಮಾಡಿ ಜೂಜಾಟದಲ್ಲಿ ನಿರತರಾದ ಬಾಬಾ ಪಟೇಲ ತಂದೆ ಲಾಡ್ಲೇ,ವೆಂಕಟೇಶ ತಂದೆ ಅಂಬಾಜಿರಾವ ಪವಾರ, ರಾಮಣ್ಣಾ ತಂದೆ ಶಿವರಾಯ ಸರಡಗಿ, ಪ್ರಕಾಶ ತಂದೆ ಚನ್ನವೀರಪ್ಪಾ ಪಾಟೀಲ,ಗೋಪಿ ತಂದೆ ನಾಗಪ್ಪಾ ರಾವೂರ, ಜೀತೆಂದ್ರ ತಂದೆ ನಿಂಗಪ್ಪಾ ಕಂಟಿ ಸಾ|| ಎಲ್ಲರೂ ಹೌಸಿಂಗ ಸೊಸೈಟಿ ಶಾಂತನಗರ ಭಂಕೂರ ರವರನ್ನು ವಶಕ್ಕೆ ತೆಗೆದುಕೊಂಡು ನಗದು ಹಣ  12,110/- ರೂಪಾಯಿಗಳು ನಗದು ಹಣ  ಮತ್ತು ಇಸ್ಪೀಟ ಎಲೆಗಳು  ಜಪ್ತಿ ಪಡಿಸಿಕೊಂಡಿದ್ದರಿಂದ ಶ್ರೀ ರಘು.ಎನ್‌ ಪಿಎಸ್‌ಐ (ಕಾ&ಸು) ಶಹಾಬಾದ ನಗರ ಪೊಲೀಸ ರವರು ಠಾಣೆ ಗುನ್ನೆ ನಂ: 08/2013 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: