POLICE BHAVAN KALABURAGI

POLICE BHAVAN KALABURAGI

20 January 2013

GULBARGA DISTRICT REPORTED CRIME


ಅಪಘಾತ ಪ್ರಕರಣ:
ಗುಲಬರ್ಗಾಗ್ರಾಮೀಣ ಪೊಲೀಸ ಠಾಣೆ:ದಿನಾಂಕ 20-01-2013 ರಂದು ಮಧ್ಯರಾತ್ರಿ 12-00 ಗಂಟೆ ಸುಮಾರಿಗೆ ಮೃತ  ಶರಣು @ ಶರಣಪ್ಪ @ ಶರಣಬಸಪ್ಪ ತಂದೆ ಮಾಹಾದೇವಪ್ಪ ತೇಲಾಕುಣಿ  ವ:30 ವರ್ಷ  ರವರು ಹಿರೋ ಹೊಂಡಾ ಫ್ಯಾಶನ ಕೆಎ-32 ಎಲ್-2639 ನೇದ್ದರ ಮೇಲೆ ಹುಮನಾಬಾದ ರಿಂಗ ರೋಡ ಕಡೆಯಿಂದ ಮನೆಗೆ ಬರುತ್ತಿರುವಾಗ ಏರಲೈನ್ಸ ದಾಬಾದ ಹುಮನಾಬಾದ ರೋಡಿನ ಮೇಲೆ  ಹಿಂದಿನಿಂದ ಲಾರಿ ಎಮ್.ಪಿ-22 ಹೆಚ-0978 ನೇದ್ದರ ಚಾಲಕ ತನ್ನ ಲಾರಿಯನ್ನು ಅತಿವೇಗ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ  ಬಂದು ಮೋಟಾರ ಸೈಕಲಿಗೆ ಹಿಂದಿನಿಂದ ಡಿಕ್ಕಿ ಪಡಿಸಿರುತ್ತಾನೆ. ಶರಣು ಇತನು  ಮೋಟಾರ ಸೈಕಲದೊಂದಿಗೆ ರೋಡಿನ ಮೇಲೆ ಬಿದ್ದಾಗ, ಲಾರಿ  ಮೋಟಾರ ಸೈಕಲ ಮತ್ತು ಮೃತ ಮೈಮೇಲಿದ್ದ ಹಾಯ್ದು ಹೋಗಿದ್ದರಿಂದ  ಮೃತನ ತೊಡೆಯ ನಡುವಿನಿಂದ ಸೀಳಿ ಹೊಟ್ಟೆಯಿಂದ ಎದೆಯವರೆಗೆ ಹರಿದು ಭಾರಿ ರಕ್ತಗಾಯವಾಗಿ ಎಲ್ಲಾ ಕರುಳುಗಳು ಹೊರ ಬಂದು ರೋಡಿನ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದು ಭಾರಿ ರಕ್ತಗಾಯವಾಗಿ  ಸ್ಥಳದಲ್ಲಿ ಮೃತಪಟ್ಟಿರುತ್ತಾನೆ.  ಲಾರಿ ಚಾಲಕ ಸ್ವಲ್ಪ ಮುಂದೆ ಹೋಗಿ ಲಾರಿ ನಿಲ್ಲಿಸಿ ಓಡಿ ಹೋಗಿರುತ್ತಾನೆ ಅಂತಾ ಶ್ರೀಮತಿ ನೀಲಮ್ಮಾ ಗಂಡ ಶರಣು @ ಶರಣಪ್ಪ @ ಶರಣಬಸಪ್ಪ ತೇಲಾಕುಣಿ  :28 ವರ್ಷ ಸಾ||ದುಧನಿ ಪಟ್ಟಣ ತಾ||:ಅಕ್ಕಲಕೋಟ  ಹಾ:: ಕಪನೂರರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:46/2013 ಕಲಂ. 279,304(ಎ) ಐಪಿಸಿ ಸಂಗಡ 187 ಐಎಂವಿ ಆಕ್ಟ  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.


No comments: