POLICE BHAVAN KALABURAGI

POLICE BHAVAN KALABURAGI

13 February 2013

GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ಶ್ರೀಮತಿ.ಶರಣಮ್ಮ ಗಂಡ ದುಂಡಪ್ಪ ಕೊಚಿ ಸಾ:ಝಳಕಿ (ಕೆ) ರವರು ನಾನು ದಿನಾಂಕ:11/02/2013 ರಂದು ಮಧ್ಯಾಹ್ನ 2-00 ಗಂಟೆಗೆ ಮನೆಯಲ್ಲಿರುವಾಗ  ಹವಳಪ್ಪ ತಂದೆ ಭೋಗಪ್ಪ ಕೊಚಿ ಸಂಗಡ 8 ಜನರು ಸಾ:ಎಲ್ಲರೂ ಝಳಕಿ(ಕೆ)  ರವರು ಕೂಡಿಕೊಂಡು ಬಂದು ಹಳೆಯ ವೈಷ್ಯಮದಿಂದ ಜಗಳ ತಗೆದು ಅವಾಚ್ಯ ಶಬ್ಬಗಳಿಂದ ಬೈಯುತ್ತಿದ್ದಾಗ ಯಾಕೇ ಬೈಯುತ್ತಿದ್ದಿರಿ ಅಂತಾ ಕೇಳಲು ದತ್ತಪ್ಪ ಇತನು ಅವಾಚ್ಯವಾಗಿ ಬೈದು ಸುಳ್ಳು ಕೆಸ್ ಮಾಡುತ್ತಿ ಹೊಡೆ ಬಡೆ ಮಾಡಿರುತ್ತಾರೆ. ನನ್ನ ಮಗಳಾದ ರುಕ್ಮೀಣಿ ಬಾಯಿಗೆ ಈಜಮ್ಮ, ಸಿದ್ದಮ್ಮ.ಗುರುಬಾಯಿ ಹಲ್ಲೆ ಮಾಡಿರುತ್ತಾರೆ. ದತ್ತಪ್ಪ ಕೊಚಿ ಮತ್ತು ಅವನ ಸಂಗಡ ಇನ್ನೂ 8 ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಶರಣಮ್ಮ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ:18/2013 ಕಲಂ: 143,147,323,324,341,354,504,506 ಸಂಗಡ 149 ಐ.ಪಿ.ಸಿ ಪ್ರಕಾರ ಪ್ರರಕಣ  ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ದಿನಾಂಕ 11-02-13 ರಂದು ಮಧ್ಯಾಹ್ನ 4:30 ಗಂಟೆ ಸುಮಾರಿಗೆ ನಾನು ತಾವರಗೇರಾ ಗ್ರಾಮದಲ್ಲಿ ನನ್ನ ಅಜ್ಜಿ ಸಿದ್ದಮ್ಮಾ ಇವಳ ಮೈಯಲ್ಲಿ ಆರಾಮ ಇಲ್ಲದ ಕಾರಣ ಮಾತನಾಡಿಸುವ ಕುರಿತು ಮೋಟಾರ ಸೈಕಲ ಕೆಎ 32 ಅರ್ 1437  ಮೇಲೆ  ಒಬ್ಬನೇ ಕುಳಿತುಕೊಂಡು  ಗುಲಬರ್ಗಾದಿಂದ ಹೊರಟಾಗ  ತಾವರಗೇರಾ ಕ್ರಾಸ ಸಮೀಪ ಹುಮನಾಬಾದ ರೋಡ ಕಡೆಯಿಂದ ಕ್ರೋಜರ ನಂಬರ ಎಪಿ-22/ವಿ-5967 ಚಾಲಕ ಅತಿವೇಗ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ ಬಂದವನೇ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದಿದ್ದರಿಂದ  ನನ್ನ  ಬಲಗಾಲ ತೊಡಗೆ ಬಲಗೈ ಮೊಣಕಣ್ಣಿನ ಹತ್ತಿರ ಭಾರ ರಕ್ತಗಾಯವಾಗಿರುತ್ತದೆ ಅಂತಾ ಶ್ರೀ ವಿನಯ ತಂದೆ ನಾಗಯ್ಯ ಮಠಪತಿ ಸಾ: ತಾವರಗೇರಾ ಗ್ರಾಮ ಹಾ:ವ: ಮಹಾಲಕ್ಷ್ಮೀ ಲೇಔಟ್ ನೆಹರು ಗಂಜ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 95/2013 ಕಲಂ 279, 338 ಐಪಿಸಿ ಸಂ. 187 ಎಂ.ವಿ.ಅಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.


No comments: