POLICE BHAVAN KALABURAGI

POLICE BHAVAN KALABURAGI

13 February 2013

GULBARGA DISTRICT


:: ಗುಲಬರ್ಗಾ ಜಿಲ್ಲಾ ಪೊಲೀಸ್ ರ ಕಾರ್ಯಚರಣೆ::
 ಮೂರು (3) ಜನ ಸರಗಳ್ಳರ ಬಂಧನ. ಬಂಧಿತರಿಂದ 4.5 ಲಕ್ಷ ರೂಪಾಯಿ ಬೆಲೆ ಬಾಳುವ ಬಂಗಾರದ ಆಭರಣಗಳು ಮತ್ತು ಮೊಟಾರ ಸೈಕಲ್ ಜಪ್ತಿ.
       ಮಾನ್ಯ ಎನ್. ಸತೀಶಕುಮಾರ ಐ.ಪಿ.ಎಸ್ ಜಿಲ್ಲಾ ಪೊಲೀಸ ಅಧೀಕ್ಷಕರು ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಶ್ರೀ, ಎಸ್ ಅಸ್ಲಂ ಬಾಷಾ ಪ್ರಭಾರಿ ಸಿಪಿಐ ಎಂ.ಬಿ ನಗರ, ಜೆ.ಹೆಚ್ ಇನಾಂದಾರ ಪಿಐ ಸ್ಟೇಷನ ಬಜಾರ ಠಾಣೆ, ಶ್ರೀಮಂತ ಇಲ್ಲಾಳ ಪಿ.ಎಸ.ಐ(ಕಾಸು) ಎಂ.ಬಿ ನಗರ, ಗೋಪಾಲ ರಾಠೋಡ ಪಿ.ಎಸ.ಐ (ಕಾ.ಸು) & ಪ್ರದೀಪ ಬಿ.ಸೆ ಪಿ.ಎಸ್.ಐ (ಅ.ವಿ) ವಿಶ್ವ ವಿದ್ಯಾಲಯ ಪೊಲೀಸ ಠಾಣೆ, ಹಾಗೂ ಸಿಬ್ಬಂದಿಯವರಾದ ಶಿವಪುತ್ರ ಸ್ವಾಮಿ, ಶಿವಪ್ಪ ಕಮಾಂಡೊ, ಶಂಕರ, ಪ್ರಭಾಕರ, ಶ್ರೀನಿವಾಸರೆಡ್ಡಿ, ಗಂಗಾಧರ, ಅಶೋಕ, ಮಶಾಕ, ಅರ್ಜುನ. ಸಿದ್ರಾಮಯ್ಯ, ವೀರಶೆಟ್ಟಿ, ಬಲರಾಮ, ರವರು ಖಚಿತ ಭಾತ್ಮಿಯಂತೆ ದಿನಾಂಕ:13.02.2013 ರಂದು ಅಪರಾತ್ರಿ ಸಮಯದಲ್ಲಿ ಮೂರು ಜನ ಆರೋಪಿತರಾದ 1] ರಾಜು ತಂದೆ ಖಂಡಪ್ಪಾ ಬಾಬನ್ ವಃ24 ವರ್ಷ ಸಾಃ ಸುಂದರ ನಗರ 2) ನಾಗು @ ಲಾಲ್ಯಾ ತಂದೆ ತುಳಜಾರಾಮ ವಃ 22 ವರ್ಷ ಸಾಃ ಸುಂದರ ನಗರ 3) ಪ್ರಸಾದ @ ಕೆಂಪ್ಯಾ ತಂದೆ ಮಲ್ಲಿಕಾಜರ್ುನ ವಃ 22 ವರ್ಷ ಸಾಃ ಸುಂದರ ನಗರ ರವರನ್ನು ದಸ್ತಗಿರಿ ಮಾಡಿದ್ದು,  ಈ ಆರೋಪಿತರು ಅದರ್ಶ ನಗರ ಬಸ್ಸ ನಿಲ್ದಾಣದ ಹತ್ತಿರ ರೋಡಿನ ಮೇಲೆ ಬೆಳಗಿನ ಸಮಯದಲ್ಲಿ ಮಹಿಳೆಯ ಕೊರಳಲ್ಲಿದ್ದ್ದ 05 ತೊಲೆಯ ಬಂಗಾರದ ಮಂಗಳ ಸೂತ್ರ, ನಂತರ ಪ್ರಶಾಂತ ನಗರದಲ್ಲಿ ಮಹಿಳೆಯ ಕೊರಳಲ್ಲಿದ್ದ 03 ತೊಲೆಯ ಬಂಗಾರದ ಚಪಲ ಹಾರ, ವೆಂಕಟೇಶ ನಗರದಲ್ಲಿ ಮಹಿಳೆಯ ಕೋರಳಲ್ಲಿದ್ದ 04 ತೊಲೆಯ ಬಂಗಾರದ ಮಂಗಳಸೂತ್ರ, ಐವಾನ-ಇ-ಶಾಹಿ ಆಲ್ ಬದರ್ ಲೇಡಿಜ್ ಹಾಸ್ಟೆಲ್ ಹತ್ತಿರ ಮಹಿಳೆಯ ಕೊರಳಿಂದ 21/2 ತೊಲೆಯ ಬಂಗಾರದ ಚೈನ್ ಗಳನ್ನು ದೋಚುತ್ತಿದ್ದು, ಮೇಲ್ಕಂಡ ಮೂರು ಜನರು ಸ್ಪ್ಲೆಂಡರ + ಮೊಟಾರ ಸೈಕಲ ಸಿಲ್ವರ ಕಲರ ನೇದ್ದನ್ನು ಬಳಸಿಕೊಂಡು ಸರಗಳ್ಳತನ ಮಾಡಿರುತ್ತಾರೆ.ಈ ನಾಲ್ಕು ಬಂಗಾರದ ಸರಗಳನ್ನು ಆರೋಪಿತರ ಕಡೆಯಿಂದ ಜಪ್ತಿ ಮಾಡಿಕೊಂಡಿದ್ದು, ಒಟ್ಟು 140 ಗ್ರಾಂ ಬಂಗಾರದ ಆಭರಣಗಳು ಅ.ಕಿಃ 4,20,000/-ರೂ ಹಾಗೂ ಈ ಸರಗಳ್ಳತನಕ್ಕೆ ಬಳಸಿದ ಮೋಟಾರ ಸೈಕಲ್ ಸ್ಪ್ಲೆಂಡರ + ಅಕಿ.ಃ 30,000/- ಒಟ್ಟು 4,50,000/- ರೂ ಬೆಲೆ ಬಾಳುವ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
      ಈ ತನಿಖಾ ತಂಡವು ಶ್ರೀ ಕಾಶಿನಾಥ ತಳಕೇರಿ ಅಪರ ಅಧೀಕ್ಷಕರು ಗುಲಬರ್ಗಾ, ಶ್ರೀ ತಿಮ್ಮಪ್ಪ ಹೆಚ್, ಉಪಾಧೀಕ್ಷಕರು ಗ್ರಾಮಾಂತರ ಉಪವಿಭಾಗ ಗುಲಬರ್ಗಾರವರ ನೇತೃತ್ವದಲ್ಲಿ ಪತ್ತೆ ಕಾರ್ಯ  ಮಾಡಿರುತ್ತಾರೆ.

ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬ್ಯಾಗ್ ಕಳ್ಳತನ ಪ್ರಕರಣದ ಆರೋಪಿ ಬಂಧನ, ಬಂಧಿತನಿಂದ ಬಂಗಾರದ ಆಭರಗಣಗಳು ಜಪ್ತಿ:
ವಿಶಾಲ ವಿಶ್ವ  ಕನ್ನಡ ದಿನಪತ್ರಿಕೆಯ ಸಂಪಾದಕಿ ಶ್ರೀಮತಿ. ಅಕ್ಕಮಹಾದೇವಿ ಗಂಡ ವಿಶ್ವನಾಥ ಸ್ವಾಮಿ  ಇವರು ದಿನಾಂಕ:14-06-2012 ರಂದು ರಾತ್ರಿ ವೇಳೆಯಲ್ಲಿ  ದಾವಣಗೇರೆಯಿಂದ  ರಾಜಹಂಸ ಬಸ್ಸಿನಲ್ಲಿ  ಕುಳಿತು ಗುಲಬರ್ಗಾ ಕ್ಕೆ ಪ್ರಯಾಣ ಮಾಡುತ್ತಿರುವಾಗ  ಬಸ್‌ ಕ್ಯಾರಿಯರದಲ್ಲಿ ಇಟ್ಟಿದ್ದ   ಬ್ಯಾಗ  ಕವರ್‌ ಹರಿದು ಬ್ಯಾಗದಲ್ಲಿಟ್ಟಿದ್ದ   ಒಂದು ಬಂಗಾರ ಚೈನ,  ಬಂಗಾರದ ಬಳೆಗಳು, ಬಂಗಾರದ ಕಿವಿ ಹೂವುಗಳು, ಒಂದು ನೊಕಿಯಾ ಮೊಬೈಲ ಹೀಗೆ ಒಟ್ಟು  2,15,000/-  ರೂಪಾಯಿ ಮೌಲ್ಯದ ಬಂಗಾರದ ಆಭರಣಗಳು ಮತ್ತು  ಮೊಬೈಲ ಫೋನ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ಅಂತಾ ದೂರಿನ ಮೇಲೆ ಅಶೋಕ ನಗರ ಪೊಲೀಸ ಠಾಣೆ ಗುನ್ನೆ ನಂ. 52/2013 ಕಲಂ. 379 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿತ್ತು.  
         ಈ ಪ್ರಕರಣದಲ್ಲಿ ಕಳುವಾಗಿದ್ದ ಮೊಬೈಲ  ತಂತ್ರಾಂಶಗಳಿಂದ ಶ್ರೀ. ಭೂಷಣ ಬೊರಸೆ  ಎ.ಎಸ್‌.ಪಿ  ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ,   ಶ್ರೀ.ಟಿ.ಹೆಚ್‌ ಕರಿಕಲ್‌  ಪಿ.ಐ ಹಾಗು ಸುರೇಶಕುಮಾರ, ಉಮ್ಮಣ್ಣಾ,  ಚಂದ್ರಕಾಂತ,ಉಮೇಶ ಪಿಸಿರವರು  ಬಸ್ಸಿನಲ್ಲಿ ಬ್ಯಾಗ ಕಳ್ಳತನ ಮಾಡುವ  ಆರೋಪಿತನಾದ  ರಾಜೇಂದ್ರ ತಂದೆ ತಾಯಪ್ಪಾ ದಂಡಗುಲೆ  ಸಾ:ಆಳಂದ  ಜಿ:ಗುಲಬರ್ಗಾ ಇತನಿಗೆ ಪತ್ತೆ ಹಚ್ಚಿ   ಒಂದು ಜೊತೆ  ಬಂಗಾರದ ಬಳೆಗಳು, ಎರಡು ಜೊತೆ ಬಂಗಾರದ ಕಿವಿ ಹೂವುಗಳು, ಒಂದು ನೊಕಿಯಾ ಮೊಬೈಲ, ಒಂದು ಹಿರೊ ಹೊಂಡಾ ಸ್ಪ್ಲೇಂಡರ ದಿಚಕ್ರ ವಾಹನ ನಂ. ಕೆಎ -32 ಕೆ-8954  ಹೀಗೆ ಒಟ್ಟು 1,40,000/- ರೂಪಾಯಿ ಕಿಮ್ಮತ್ತಿನ ಬಂಗಾರ ಮತ್ತು  ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಆರೋಪಿತನಿಗೆ  ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.


No comments: