POLICE BHAVAN KALABURAGI

POLICE BHAVAN KALABURAGI

12 February 2013

GULBARGA DISTRICT REPORTED CRIME


ಬಂಗಾರದ ಆಭರಣ ದೋಚಿಕೊಂಡು ಹೋದ ಬಗ್ಗೆ::
ರಾಘವೇಂದ್ರ ನಗರ ಪೊಲೀಸ್ ಠಾಣೆ:ಶ್ರೀಮತಿ ಪ್ರೇಮಲತಾ ಗಂಡ ಅನಂತರಾವ ದೇಸಾಯಿ ಸಾ|| ಸಮತಾ ಕಾಲೋನಿ ಗುಲಬರ್ಗಾರವರು ನಾನು, ನನ್ನ ಗಂಡ ಮತ್ತು ನನ್ನ ತಂಗಿ ರಾಧಿಕಾ ದಿನಾಂಕ:12-02-2013 ರಂದು ಮಧ್ಯಾಹ್ನ 12-45 ಗಂಟೆಗೆ ಸುಮಾರಿಗೆ ನಡೆದುಕೊಂಡು ಸಮತಾ ಕಾಲೋನಿಯ ಕ್ರಾಸ್ ಹತ್ತಿರ ಹೊರಟಾಗ, ಎದುರಿನಿಂದ ಒಬ್ಬ ಅಪರಿಚಿತ ಮೊಟಾರ್ ಸೈಕಲ್ ಸವಾರನು ಬಂದವನೇ ನನ್ನ ಕೊರಳಲ್ಲಿದ್ದ 20 ಗ್ರಾಂ ಬಂಗಾರದ ಲಾಕೀಟನ್ನು ದೋಚಿಕೊಂಡು ಹೋದನು. ಸದರಿ ಬಂಗಾರದ ಆಭರಣದ ಮೌಲ್ಯ 60,000/-ರೂಪಾಯಿಗಳಳಾಗಿದ್ದು, ಬಂಗಾರದ ಲಾಕೀಟ್ ದೋಚಿಕೊಂಡು ಹೋದವನ ಪತ್ತೆ ಹಚ್ಚಿ ಅವನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಅಂತ ಲಿಖಿತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:15/2013 ಕಲಂ 392 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: