POLICE BHAVAN KALABURAGI

POLICE BHAVAN KALABURAGI

01 November 2011

GULBARGA DIST REPORTED CRIMES

ಹಲ್ಲೆ ಪ್ರಕರಣ :
ಶಹಾಬಾದ ನಗರ ಪೊಲೀಸ ಠಾಣೆ :
ಶ್ರೀ ಸಂತೋಷ ತಂದೆ ನಾಗಪ್ಪಾ ಗೌಳಿ ಸಾ|| ಗಾಂದಿ ಚೌಕ ಶಹಾಬಾದ ರವರು ಸುವರ್ಣ ವೈನ ಶಾಪನಲ್ಲಿ ಕುಡಿಯುತ್ತ ಕುಳಿತಾಗ ಮಲ್ಲಿಕಾರ್ಜುನ ಯಡ್ರಾಮಿ ಇತನು ನನಗೆ ಬಂದು ಕ್ವಾಟರ ಕುಡಿಸು ಅಂತಾ ಕೇಳಿದನು ಆಗ ನಾನು ನನ್ನ ಹತ್ತಿರ ಹಣವಿಲ್ಲವೆಂದು ಹೇಳಿದ್ದಕ್ಕೆ ನನಗೆ ಕುಡಿಸಲು ಹಣ ಇಲ್ಲಾ ಅಂತಾ ಹೇಳುತ್ತಿಯಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ನನಗೆ ಅಂಗಿ ಹಿಡಿದು ಎಳೆದಾಡಿ ಹಿಡಿಗಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ 162/2011 ಕಲಂ: 504 324 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ :
ಕಮಲಾಪೂರ ಠಾಣೆ :
ಅಬ್ದುಲ ಮಜೀದ ತಂದೆ ಅಬ್ದುಲ ರಹೀಮ ಸಾಃ ಮದಿನಾ ಕಾಲೋನಿ ಜೀಲಾನಾಬಾದ ಗುಲಬರ್ಗಾ ಇವರು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ ಖಾಸಗಿ ದೂರ ಸಂ. 465/11 ನೇದ್ದನ್ನು ಸಲ್ಲಿಸಿದ ಖಾಸಗಿ ಅರ್ಜಿ ಸಾರಾಂಶವೆನೇಂದರೆ, ದಿನಾಂಕ: 13/07/2011 ರಂದು ಸಾಯಂಕಾಲ 6-00 ಗಂಟೆ ಸುಮಾರಿಗೆ ಪಿರ್ಯಾದಿ ಮತ್ತು ಮೃತ ದಸ್ತಗೀರ ತಂದೆ ಮಹಿಬೂಬಸಾಬ ಇಬ್ಬರು ಕೂಡಿಕೊಂಡು ಲಾರಿ ನಂ. ಕೆಎ:32-9798 ನೇದ್ದನ್ನು ಹುಮನಾಬಾದ ಕಡೆಯಿಂದ ಗುಲಬರ್ಗಾಕ್ಕೆ ಬರುತ್ತಿರುವಾಗ ಎದುರುಗಡೆಯಿಂದ ವಾಹನ ನಂ. ಕೆಎ:39-450 ನೇದ್ದರ ಚಾಲಕನಾದ ರವಿ ತಂದೆ ಬಸಪ್ಪಾ ತೆಳಕೇರಿ ಸಾಃಹೂವಿನಹಳ್ಳಿ ತಾಃಅಫಜಲಪೂರ ಜಿಃಗುಲಬರ್ಗಾ ಈತನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಈ ಅಪಘಾತದಲ್ಲಿ ನಮ್ಮ ವಾಹನದ ಮಾಲಿಕರು ಮೃತಪಟ್ಟಿರುತ್ತಾರೆ ನನಗೆ ಭಾರಿ ಗಾಯವಾಗಿರುತ್ತದೆ. ಅಪಘಾತ ಪಡಿಸಿದನ ವಿರುದ್ದ ಪ್ರಕರಣ ದಾಖಲಾಗದೇ ಇರುವದರಿಂದ ಮಾನ್ಯ 1ನೇ ಅಪರ ಜೆ.ಎಂ.ಎಫ್.ಸಿ ನ್ಯಾಯಾಲಯ ಗುಲಬರ್ಗಾ ರವರ ಆದೇಶ ಕಲಂ. 156(3) ಸಿಆರ್.ಪಿಸಿ ನೇದ್ದರ ಪ್ರಕಾರ ಠಾಣೆ ಗುನ್ನೆ ನಂ.136/2011 ಕಲಂ.279,337,338,304(ಎ) ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ತನಿಖೆ ಕೈಕೊಳ್ಳಲಾಗಿದೆ

No comments: