POLICE BHAVAN KALABURAGI

POLICE BHAVAN KALABURAGI

01 November 2011

GULBARGA DIST REPORTED CRIMES


ಗುಲಬರ್ಗಾ ನಗರದ ಮಹಾತ್ಮ ಬಸವೇಶ್ವರ ನಗರ ವೃತ್ತದ ಪೊಲೀಸರ ಕಾರ್ಯಚರಣೆಯಿಂದ 3 ಜನ ಸುಲಿಗೆಕೊರರ ಬಂದನ , 4.01 ಲಕ್ಷ ರೂಪಾಯಿ ನಗದು ಹಣ, ಕಾರು, ಮೊಟಾರ ಸೈಕಲ ಜಪ್ತಿ.

ಖಚಿತ ಮಾಹಿತಿ ಅನ್ವಯ ದಿನಾಂಕ 31/10/2011 ರಂದು ರಾತ್ರಿ ಕುಸನೂರ ರಸ್ತೆ ಎಸ್.ಆರ್.ವಿ ಬಾರ & ರೆಸ್ಟೋರೆಂಟ ಹತ್ತಿರ ದಾಳಿ ಮಾಡಿದ ವಿಶೇಷ ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಜನರು 3 ಜನ ಕುಖ್ಯಾತ ಸುಲಿಗೆಕೋರರನ್ನು ಬಂಧಿಸಿ ಅವರಿಂದ 4.01 ಲಕ್ಷ ನಗದು ಹಣ, ಒಂದು ಚಾಕು, ಮಾರುತಿ ಸ್ವೀಪ್ಟ ಕಾರ, 2 ಮೊಟಾರ ಸೈಕಲ, ಮೊಬಾಯಿಲ್ ಪೊನ್ , ಸಿಮ್ ಕಾರ್ಡ ವಗೈರೆಗಳನ್ನು ವಶ ಪಡಿಸಿಕೊಂಡಿದ್ದು ಪರಾರಿ ಇರುವ ಇನ್ನೊರ್ವ ಆರೋಪಿ ಪತ್ತೆಗಾಗಿ ತನಿಖೆ ಮುಂದುವರೆಯಿಸಿರುತ್ತಾರೆ. ದಿನಾಂಕ 15/9/2011 ರಂದು ಮದ್ಯಾಹ್ನ ಕಾಳಗಿ ಗುಲಬರ್ಗಾ ರಸ್ತೆಯ ಮಾರ್ಗ ಮದ್ಯದಲ್ಲಿ ಹಾಡು ಹಗಲೇ ಕಾಳಗಿ ಗ್ರಾಮದ ದತ್ತಾ ವೈನ ಶಾಪನ ಮಾಲಿಕರಾದ ಶ್ರೀ ದತ್ತು ಗುತ್ತೆದಾರ ನೇದ್ದರ ಮ್ಯಾನೇಜರರಾದ ಶ್ರೀ ಅನೀಲ ಜಂಭಗಿ ಮತ್ತು ಖತಲಯ್ಯಾ ಗುತ್ತೆದಾರ ನೇದ್ದವರು ಮೊಟಾರ ಸೈಕಲನಿಂದ ನಗದು ಹಣ 6,38,000/- ರೂಪಾಯಿಗಳನ್ನು ಗುಲಬರ್ಗಾ ಬ್ಯಾಂಕಿಗೆ ಪಾವತಿಸಲು ತರುತ್ತಿದ್ದಾಗ ಸಂಚು ಹೂಡಿದ ಆರೊಪಿತರು ಮಾರ್ಗ ಮದ್ಯದಲ್ಲಿ ಫಿರ್ಯಾದಿದಾರರ ಮೊಟಾರ ಸೈಕಲ ತಡೆದು ಅಡ್ಡ ಗಟ್ಟಿ ಚಾಕು ಮತ್ತು ಬಡಿಗೆಯಿಂದ ಹಲ್ಲೆ ಮಾಡಿ ಹಣ ದೊಚಿಕೊಂಡು ಫರಾರಿಯಾಗಿದ್ದು ಈ ಬಗ್ಗೆ ಗುಲಬರ್ಗಾ ನಗರದ ವಿಶ್ವವಿದ್ಯಾಲಯ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯಲ್ಲಿರುತ್ತದೆ.ಮಾನ್ಯ ಶ್ರೀ ಪ್ರವೀಣ ಮದುಕರ ಪವಾರ ಐಪಿಎಸ್ ಎಸ್.ಪಿ.ಗುಲಬರ್ಗಾ, ಮಾನ್ಯ ಅಪರ ಎಸ್.ಪಿ ಶ್ರೀ ಕಾಶಿನಾಥ ತಳಕೇರಿ ಮತ್ತು ಮಾನ್ಯ ಶ್ರೀ ಹೆಚ್. ತಿಮ್ಮಪ್ಪ ಡಿ.ಎಸ್.ಪಿ ಗ್ರಾಮಾಂತರ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡದ ಶ್ರೀ ಚಂದ್ರಶೇಖರ ಬಿ.ಪಿ ಸಿಪಿಐ ಎಮ್.ಬಿ ನಗರ ವೃತ್ತ ಗುಲಬರ್ಗಾ ರವರ ನೇತೃತ್ವದಲ್ಲಿ ಶ್ರೀ ಪಂಡಿತ ಸಗರ ಪಿ.ಎಸ್.ಐ ವಿವಿ ಠಾಣೆ, ಶ್ರೀ ಸಂಜೀವಕುಮಾರ ಪಿ.ಎಸ್.ಐ ಎಮ್.ಬಿ ನಗರ ಠಾಣೆ ಹಾಗೂ ಸಿಬ್ಬಂದಿಯವರಾದ ಸಿದ್ರಾಮ, ಶಿವಪುತ್ರಸ್ವಾಮಿ, ಮನೋಹರ, ರವಿಂದ್ರ, ವೇದರತ್ನಂ ಯಲ್ಲಪ್ಪಾ, ಸುರೇಶ, ಪ್ರಭಾಕರ, ಅಶೋಕ, ಅರ್ಜುನ, ಇಮ್ತಿಯಾಜ, ಚಂದ್ರಕಾಂತ ಮುರುಡ ಬಲರಾಮ, ಮಶಾಕ, ರಮೇಶ ರವರು ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ತನಿಖೆ ನಡೆಯಿಸಿ ಆರೋಪಿತರನ್ನು ಪತ್ತೆ ಹಚ್ಚಿದ್ದು ಆರೋಪಿತರಾದ ಧನರಾಜ @ ಚಿನ್ಯಾ ತಂದೆ ಮೈಲಾರಿ ಶೇಳ್ಳಗಿ ವಃ 19 ವರ್ಷ ಉಃ ವಿದ್ಯಾರ್ಥಿ ಸಾ|| ಭೂಪಾಲ ತೆಗನೂರ ಹಾಲಿ ಜಿಡಿಎ ಕಾಲೋನಿ ಗುಲಬರ್ಗಾ, ಬಸು @ ಬಸವರಾಜ ತಂದೆ ಜಗದೀಶ ಹೊಸಮನಿ ವಃ 19 ವರ್ಷ ಉಃ ವಿದ್ಯಾರ್ಥಿ ಸಾ|| ಕಾಳಗಿ, ದತ್ತು ತಂದೆ ಹಣಮಂತ ಪೂಜಾರಿ ವಃ 22 ವರ್ಷ ಉಃ ವಿದ್ಯಾರ್ಥಿ ಸಾ|| ಹಾಗರಗಾ, ರಾಕೇಶ ತಂದೆ ಚಂದ್ರಕಾಂತ ಭಂಢಾರಿ ವಃ 22 ವರ್ಷ ಉಃ ವಿದ್ಯಾರ್ಥಿ ಸಾ|| ಪೂಜಾ ಕಾಲೋನಿ ಗುಲಬರ್ಗಾರವರು ಸಂಚು ಮಾಡಿ ಹೊಂಚು ಹಾಕಿ ಅಪರಾದವೆಸಿರುತ್ತಾರೆ. ತನಿಖೆಯ ಕಾಲಕ್ಕೆ ಆಪಾದಿತನಾದ ಕಾಳಗಿಯ ಬಸು @ ಬಸವರಾಜ ತಂದೆ ಜಗದೀಶ ಸಾ|| ಕಾಳಗಿ ಇತನು ಪಿರ್ಯಾದಿದಾರರು ಹಣ ತೆಗೆದುಕೊಂಡು ಹೋಗುವದನ್ನು ಮುಂಚಿತವಾಗಿ ತಿಳಿದುಕೊಂಡು ಗುಲಬರ್ಗಾದಲ್ಲಿದ್ದ ಧನರಾಜ, ರಾಕೇಶ ಮತ್ತು ದತ್ತು ಇವರಿಗೆ ಹಣ ತೆಗೆದುಕೊಂಡು ಹೊರಟ ವ್ಯಕ್ತಿಗಳ ಚಹರೆ ಪಟ್ಟಿ ಹಾಗೂ ಮೊಟಾರ ಸೈಕಲ್ ನಂಬರ ಮೊಬಾಯಿಲ್ ಪೊನ್ ಮೂಲಕ ತಿಳಿಸಿದ ಮೇರೆಗೆ 3 ಜನ ಆರೋಪಿತರು ಖಾಜಾ ಕೊಟನೂರ ಬಳಿ ಹೋಗಿ ಮೊಟಾರ ಸೈಕಲಕ್ಕೆ ಅಡ್ಡ ಗಟ್ಟಿ ಅವರಲ್ಲಿದ್ದ 6,38,000/- ರೂಪಾಯಿಗಳನ್ನು ನಗದು ಹಣ ದೋಚಿ ಮೊಟಾರ ಸೈಕಲ ಹಾಗೂ ಕಾರಿನ ಮೂಲಕ ಪರಾರಿಯಾದ ಬಗ್ಗೆ ತನಿಖೆ ಕಾಲಕ್ಕೆ ತಿಳಿದು ಬಂದಿರುತ್ತದೆ. ವೈಜ್ಞಾನಿಕ ರೀತಿಯಲ್ಲಿ ತನಿಖೆ ಕೈಕೊಂಡು ಪ್ರಕರಣವನ್ನು ಭೇಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಇಲಾಖೆ ವತಿಯಿಂದ ಬಹುಮಾನ ಘೋಷಣೆ ಮಾಡಲಾಗಿದೆ,

No comments: