POLICE BHAVAN KALABURAGI

POLICE BHAVAN KALABURAGI

02 November 2011

GULBARGA DIST REPORTED CRIMES

ಹಲ್ಲೆ ಪ್ರಕರಣ:
ಅಶೋಕ ನಗರ ಠಾಣೆ :
ರವೀಂದ್ರ ತಂದೆ ಭೀಮಶ್ಯಾ ಉಪಾರೆ ಸಾ|| ಸಿದ್ದಾರ್ಥ ನಗರ ಗುಲಬರ್ಗಾ ರವರು ನಾನು ಅಟೊ ನಂ. ಕೆಎ 32-8265 ನೇದ್ದನ್ನು ಕೇಂದ್ರ ಬಸ ನಿಲ್ದಾಣದ ಅಟೋ ಸ್ಟ್ಯಾಂಡದಲ್ಲಿ ಪಾಳಿ (ನಂಬರ) ಹಚ್ಚಿರುವಾಗ ಅಶೋಕ ತಂದೆ ವಿಠ್ಠಲರಾವ ಸಿಂಗೆ ಮತ್ತು ಮಹೇಶ ತಂದೆ ಬಾಬುರಾವ ಟೆಂಗೆ ಇವರು ಬಂದು ಅಶೋಕ ನಗರಕ್ಕೆ ಬಿಟ್ಟು ಬರುವಂತೆ' ಹೇಳಿದನು. ಆಗ ನಾನು ನನ್ನ (ಪಾಳಿ) ನಂಬರ ಇರುವುದಿಲ್ಲಾ, ಪಾಳಿಗೆ ಇದ್ದ ಅಟೋದಲ್ಲಿ ಹೋಗಿರಿ ಅಂತಾ ಹೇಳಿದೇನು. ಅದಕ್ಕೆ ಆತನು ಅವಾಚ್ಯವಾಗಿ ಬೈದು ಅಂಗಿ ಹಿಡಿದು ಎಳೆದಾಡಿ ಕೈಯಿಂದ ಕಪಾಳಕ್ಕೆ ಮತ್ತು ಬೆನ್ನಿಗೆ ಹೊಡೆದನು. ಆಗ ಅಲ್ಲೇ ಅಟೊ ಪಾಳಿ ಹಚ್ಚಿದ್ದ ನನ್ನ ಮಗ ಅಜಯ ಇತನು ಬಂದು ನನ್ನ ತಂದೆಗೆ ಯ್ಯಾಕೆ ಹೊಡೆಯುತ್ತಿದ್ದಿ ಎಂದು ಕೇಳಿದಾಗ ಅವನಿಗೆ ಮಹೇಶನು ಹೊಡೆದಿರುತ್ತಾನೆ. ಅಂತಾ ದೂರು ಸಲ್ಲಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:119/2011 ಕಲಂ: 341, 323, 504, 506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಮಂಗಲ ಸೂತ್ರ ಕಸಿದುಕೊಂಡು ಹೋದ ಪ್ರಕರಣ :
ರಾಘವೇಂದ್ರ ನಗರ ಪೊಲೀಸ್ ಠಾಣೆ
ಶ್ರೀಮತಿ ರೂಪಾ ಗಂಡ ವಿಜಯಾನಂದ ನಿಲೇಗಾರ್ ಇವರು ಘನಶ್ಯಾಮ್ ಅಪಾರ್ಟಮೆಂಟ್ ನಲ್ಲಿರುವ ತನ್ನ ಅಕ್ಕಳಿಗೆ ಮನೆಯ ಕೀಲಿ ಕೊಡು ಅಂತ ಕೂಗಿ ಕೇಳಿದ್ದು, ಮೇಲಿನ ಅಂತಸ್ತಿನಿಂದ ಕೆಳಕ್ಕೆ ಎಸೆದ ಕೀಲಿಯನ್ನು ಬಗ್ಗಿ ತೆಗೆದುಕೊಳ್ಳುವಾಗ, ಒಮ್ಮೆಲೆ ಒಬ್ಬ ಮನುಷ್ಯನು ನನ್ನ ಕೊರಳಿದ್ದ ಬಂಗಾರದ ಮಂಗಲ ಸೂತ್ರ ಕಿತ್ತಿಕೊಳ್ಳಲು ಕೈಹಾಕಿದಾಗ, ರೂಪಾ ಇವರು ತನ್ನ ಬಂಗಾರದ ಮಂಗಲ ಸೂತ್ರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು, ಸ್ವಲ್ಪ ಮಂಗಲ ಸೂತ್ರ ಹಡಿದುಕೊಂಡು ಹೋಗಿರುತ್ತಾನೆ ಅದರ ಅಂದಾಜು ಕಿಮ್ಮತ್ತು 30,000/-ರೂ ಬೆಲೆಯುಳ್ಳದ್ದಾಗಿರುತ್ತದೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ

ಕೊಲೆ ಪ್ರಯತ್ನ :
ಬ್ರಹ್ಮಪೂರ ಠಾಣೆ :
ಶ್ರೀ.ಭೀಮಾಶಂಕರ ತಂದೆ ಗುರುಲಿಂಗಪ್ಪ ಥೊಂಟಿ, ಉ|| ಡಿ.ಸಿ ಆಫೀಸ (ವಿ.ಐ.ಪಿ) ವಾಹನ ಚಾಲಕ ಸಾ|| ಸರ್ವೋದಯನಗರ ಗುಲಬರ್ಗಾ ರವರು ನಾನು ಹಾಗೂ ನನ್ನ ತಾಯಿಯಾದ ಲಕ್ಷ್ಮಿಬಾಯಿ ಹಾಗೂ ಮಗನಾದ ಶರಣಕುಮಾರ ಎಲ್ಲರೂ ಕೂಡಿ ನಮ್ಮ ಮನೆಯ ಮುಂದೆ ಮಾತಾಡುತ್ತಾ ಕುಳಿತಿರುವಾಗ ನಮ್ಮ ಅಣ್ಣನಾದ ಸಿದ್ದಣ್ಣ ಥೊಂಟಿ ಈತನು ತನ್ನ ಮಕ್ಕಳಾದ ವಿರೇಶ ಹಾಗೂ ಬಸವರಾಜನೊಂದಿಗೆ ನನ್ನ ಮನೆಯ ಹತ್ತಿರ ಬಂದು ನಮ್ಮ ತಾಯಿಗೆ ಹೊರಗಡೆ ಕರೆದು ಏ ಮುದುಕಿ ನೀನು ನಾಳೆ ಈ ಮನೆಯಲ್ಲಿ ನಡೆಯಲಿರುವ ತೊಟ್ಟಿಲು ಕಾರ್ಯಕ್ರಮದಲ್ಲಿ ಭಾಗಿಯಾಗಬೇಡ ಇಲ್ಲಿಂದ ಹೋಗು ಅಂತಾ ಅನ್ನುತ್ತಿದ್ದನು. ಆಗ ನಮ್ಮ ತಾಯಿ ನಾಳೆ ನಾನು ನಮ್ಮ ಮೊಮ್ಮಕ್ಕಳ ತೊಟ್ಟಿಲು ಕಾರ್ಯಕ್ರಮದಲ್ಲಿ ಭಾಗಿಯಾದರೆ ನಿನಗೇನು ಆಗುತ್ತದೆ ನೀನು ಬೇಕಾದರೆ ಬಾ ಇಲ್ಲದಿದ್ದರೆ ಬಿಡು ಅಂತಾ ಅಂದಿದಕ್ಕೆ ವಿರೇಶ ಈತನು ನಮ್ಮ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ತನ್ನ ಕೈಯಲ್ಲಿದ್ದ ಕಬ್ಬಿಣದ ಮಚ್ಚಿನಿಂದ ನಮ್ಮ ತಾಯಿಯ ತಲೆಯ ಎಡಭಾಗಕ್ಕೆ ಹೊಡೆದು ರಕ್ತಗಾಯ ಪಡಿಸಿದನು. ಬಸವರಾಜ ಈತನು ಸಹ ವಿರೇಶನ ಕೈಯಲ್ಲಿ ಇದ್ದ ಮಚ್ಚು ತೆಗೆದುಕೊಂಡು ನಮ್ಮ ತಾಯಿಯ ಕುತ್ತಿಗೆಗೆ ಹೊಡೆಯಲು ಬಂದಾಗ ನಮ್ಮ ತಾಯಿ ತನ್ನ ಬಲಗೈ ಅಡ್ಡ ತಂದಿದ್ದರಿಂದ ಕುತ್ತಿಗೆಗೆ ಬಿಳುವ ಏಟು ಬಲಗೈ ಹಸ್ತಕ್ಕೆ ಬಿದ್ದಿರುತ್ತದೆ. ನಾನು ಮತ್ತು ನಮ್ಮ ಮಗ ಶರಣಕುಮಾರ ಇಬ್ಬರೂ ಜಗಳ ಬಿಡಿಸಲು ಹೋದಾಗ ನಮಗೂ ಕೂಡ ವಿರೇಶ ಮತ್ತು ನಮ್ಮ ಅಣ್ಣ ಸಿದ್ದಣ್ಣ ಇಬ್ಬರೂ ಕೂಡಿ ಕಬ್ಬಿಣದ ಮಚ್ಚಿಂದ ಅಲ್ಲದೆ ಬಡಿಗೆಯಿಂದ ಹೊಡೆ ಬಡೆ ಮಾಡಿದ್ದು ಇರುತ್ತದೆ. ನಂತರ ಸದರಿಯವರೆಲ್ಲರೂ ಹೋಗುವಾಗ ಇವತ್ತು ಜೀವಂತ ಉಳಿದಿರಿ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮಗೆ ಜೀವಂತ ಸಹಿತ ಬಿಡುವದಿಲ್ಲ ಅಂತಾ ಕೊಲೆ ಬೆದರಿಕೆ ಹಾಕಿ ಹೋಗಿದ್ದು ಕಾರಣ ನಮಗೆ ಹೊಡೆ ಬಡೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 206/11 ಕಲಂ: 324, 307, 504, 506 ಸಂಗಡ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: