POLICE BHAVAN KALABURAGI

POLICE BHAVAN KALABURAGI

30 September 2011

Gulbarga District Reported Crimes

ಅಪಹರಣ ಪ್ರಕರಣ ;
ಚಿಂಚೋಳಿ ಠಾಣೆ :
ಶ್ರೀ ತಿಮ್ಮಯ್ಯಾ ತಂದೆ ತಿಪ್ಪಯ್ಯಾ ವಡ್ಡರ ಸಾಃ ಚಂದಾಪೂರ ಇವರ ಮಗಳಾದ ಕು. ಸುಜಾತ ವ: 15ವರ್ಷ, ಇವಳಿಗೆ ದಿನಾಂಕ: 26-09-2011 ರಂದು ಮಧ್ಯಾಹ್ನ 1.ಸುಶೀಲಾಬಾಯಿ ಗಂಡ ಕಾಶು ಜಾ: ಲಂಬಾಣಿ 2.ಅನುಶಾ ಬಾಯಿ ತಂದೆ ಕಾಶು 3.ರೇಣುಕಾ ತಂದೆ ಮೋನು ಜಾ: ಲಂಬಾಣಿ 4. ಅಂಬು ತಂದೆ ಕಾಶು ಸಾ: ಎಲ್ಲರು ಗಂಗೂ ನಾಯಕ ತಾಂಡಾ ಚಂದಾಪೂರ ಕೂಡಿಕೊಂಡು ಮಗಳಿಗೆ ಅವಾಚ್ಚ ಶಬ್ದಗಳಿಂದ ಬೈದು ಜೀವದ ಬೇದರಿಕೆ ಹಾಕಿ ಅಪಹರಿಸಿಕೊಂಡು ಹೊಗಿರುತ್ತಾರೆ. ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಅಡುಗೆ ಮಾಡುವಾಗ ಆಕಸ್ಮಿಕ ಬೆಂಕಿ ತಗುಲಿ ಗೃಹಿಣಿ ಸಾವು :
ಗ್ರಾಮೀಣ ಠಾಣೆ :
ಶ್ರೀಮತಿ ಶರಣಮ್ಮ ಗಂಡ ಶಿವಕುಮಾರ ದುತ್ತರಗಾಂವ ಸಾ: ಶರಣ ಶಿರಸಗಿ ಗುಲಬರ್ಗಾ ಇವಳು ಮಾನಸಿಕ ಅಸ್ಥವಸ್ಥಳಿದ್ದು ದಿನಾಂಕ 17-9-11 ರಂದು ಮುಂಜಾನೆ ತನ್ನ ಮನೆಯಲ್ಲಿ ಅಡುಗೆ ಮಾಡುವ ಕಾಲಕ್ಕೆ ಆಕಸ್ಮಿಕ ಸ್ಟೋದ ಬೆಂಕಿ ಅವಳು ತೊಟ್ಟ ಬಟ್ಟೆಗೆ ಹತ್ತಿ ಮುಖಕ್ಕೆ ಕೈಗೆ ಎದೆಗೆ ಬೆನ್ನಿಗೆ ಅಲ್ಲಲ್ಲಿ ಸುಟ್ಟ ಗಾಯಗಳು ಆಗಿದ್ದು ಅದರ ಉಪಚಾರ ಕುರಿತು ಅವಳನ್ನು ಬಸವೇಶ್ವರ ಆಸ್ಪತ್ರಗೆ ಸೇರಿಕೆ ಮಾಡಿದ್ದು ಉಪಚಾರ ಹೊಂದುತ್ತಾ, ಗುಣ ಮುಖ ಹೊಂದದೆ ಇಂದು ದಿನಾಂಕ 29-9-11 ರಂದು ಮದ್ಯಾಹ್ನ 12 ಗಂಟೆಯ ಸುಮಾರಿಗೆ ಆಸ್ಪತ್ರೆಯಲ್ಲಿ ಮೃತ್ತ ಪಟ್ಟಿದ್ದು ಇರುತ್ತದೆ ಅಂತಾ ಶ್ರೀಮತಿ ನಾಗಮ್ಮ ಗಂಡ ಶಿವಕುಮಾರ ಮೂಲಗೆ ಸಾ: ಅಂಕಲಗಾ ತಾ: ಅಫಜಲಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: