POLICE BHAVAN KALABURAGI

POLICE BHAVAN KALABURAGI

30 September 2011

GULBARGA DIST REPORTED CRIMES

ಅಪಹರಣ ಪ್ರಕರಣ :

ಮಹಿಳಾ ಠಾಣೆ :ಶ್ರೀ ವೀರಣ್ಣ ತಂದೆ ಚನ್ನಬಸಪ್ಪಾ ಪಾಟೀಲ ಸಾ:ಆಳಂದ ಕಾಲೂನಿ ಗುಲಬರ್ಗಾ ರವರ ಮೋಮ್ಮಗಳಾದ ಕುಮಾರಿ ಸುಶೀಳಾ ತಂದೆ ಶರಣಪ್ಪ ಸಾ: ಅಂಕೇರಾ ತಾ: ಚಿತ್ತಾಪೂರ ಇವಳು 5 ವರ್ಷಗಳಿಂದ ನಮ್ಮ ಹತ್ತಿರ ಇರುತ್ತಾಳೆ ನಮ್ಮ ಮನೆಯಲ್ಲಿ ಬಾಡಿಗೆಯಿಂದ ಇರುವ ಶಿವಾನಂದ ಹಡವೆ ಇವನು ನನ್ನ ಮಮ್ಮಗಳೋಂದಿ ಸಲುಗೆಯಿಂದ ಇದ್ದು ಅವಳನ್ನು ಹಿಂಬಾಲಿಸುವುದನ್ನು ಮಾಡುತ್ತಿದ್ದು ಇದಕ್ಕೆ ಬಸವರಾಜ ಪ್ರೋತ್ಸಾಹಿಸುತ್ತಿದ್ದು ಇದು ನಮಗೆ ಗೊತ್ತಾಗಿ ಸದರಿಯವರನ್ನು ಮನೆ ಬಿಡಿಸಿದ್ದು ನಮ್ಮ ಮನೆಯ ಹತ್ತಿರ ಬಾಡಿಗೆ ಮನೆ ಮಾಡಿಕೊಂಡು ಇದ್ದು ದಿನಾಂಕ 28-09-2011 ರಂದು 11 ಗಂಟೆಯ ಸುಮಾರಿಗೆ ಸುಶೀಲಾ ಇವಳು ಮನೆಯಿಂದ ಹೋದವಳು ಮರಳಿ ಬಂದಿರುವುದಿಲ್ಲಾ ಎಲ್ಲ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ನನ್ನ ಮಮ್ಮಗಳನ್ನು ಶಿವಾನಂದ ಇತನು ಬಸವರಾಜನ ಕುಮ್ಮಕ್ಕಿನಿಂದ ಅಪಹರಿಸಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಪ್ರಕರಣ :

ನರೋಣಾ ಠಾಣೆ :ಶ್ರೀ ತಾಜೋದ್ದಿನ ತಂ ಮಹಿಬೂಬಸಾಬ ಮುಲ್ಲಾ ಸಾ:ಧಮ್ಮೂರ ಇವರ ಮಗನಾದ ನಸಿರೊದ್ದೀನ ಇದ್ದು, ನಸೀರೊದ್ದೀನ ಇತನು ಒಂದು ತರದ ಸಿಟ್ಟಿನ ಸ್ವಭಾವದವನು ಇದ್ದು ದಿನಾಂಕ 28-09-2011 ರಂದು ಬೆಳಿಗ್ಗೆ ಮನೆಯಲ್ಲಿ ನನ್ನ ಮಗ ಮತ್ತು ಸೋಸೆ ಇಬ್ಬರು ಬಾಯಿ ಮಾತಿನ ಜಗಳ ಮಾಡಿಕೊಂಡಿದ್ದು ವಿಷಯ ಗೊತ್ತಾಗಿ ನಾನು ಇಬ್ಬರಿಗೆ ಕೂಡಿಸಿಕೊಂಡು ಬುದ್ದಿ ಹೇಳಿದ್ದೆ, ದಿನಾಂಕ 29-09-2011 ರಂದು ಬೆಳಿಗ್ಗೆ 09 ಗಂಟೆಗೆ ನಾನು ಮತ್ತು ಮಗನಾದ ಮಶಾಖ ಹಾಗೂ ಮಾಲಾನಬಿ ಸೋಸೆಯಂದಿರು ಇಬ್ಬರು ಕೂಡಿಕೊಂಡು ಹೋಲದಲ್ಲಿ ಕಲಸಕ್ಕೆ ಹೋಗಿದೆವು. ಮನೆಯಲ್ಲಿ ನನ್ನ ಹೆಂಡತಿ ಜೋತೆಯಲ್ಲಿ ಮಗನಾದ ಖಮರೋದ್ದಿನ ಬಿಟ್ಟು ಹೋಗಿರುತ್ತೇನೆ. ನನ್ನ ಮಗ ನಸಿರೋದ್ದಿನ ಮನೆಗೆ ಬಂದು ಒಂದು ವರಿ ಗಂಟೆಗೆ ನಮಾಜ ಮಾಡಿಕೊಂಡು ತನ್ನ ಮಗನಿಗೆ ಕರೆದುಕೊಂಡು ಹೋರಗೆ ಹೋಗಿರುತ್ತಾನೆ. 02-45 ಗಂಟೆಗೆ ತನ್ನ ಫೊನದಿಂದ ನನ್ನ ಹಿರಿಯ ಮಗನ ಫೊನಿಗೆ ಇದು ಲಾಷ್ಟ ನಮಸ್ತೆ ಎಂದು ಹೇಳಿ ಪೋನ ಕಟ್ ಮಾಡಿದನು. ನಾನು ಮತ್ತು ಸೋಸೆಯಂದಿರು, ಮಕ್ಕಳು ಬಂದು ನೋಡಲು ತನ್ನ ಹೆಂಡತಿ ತಿಳಿಸಿದೆನೇಂದರೆ ಮಗ ಮಮ್ಮಗನಿಗೆ ಕರೆದುಕೊಂಡು ಹೋಗಿರುತ್ತಾನೆಂದು ಹೇಳಿದ್ದು ನಾವೆಲ್ಲರು ಊರಲ್ಲಿ ನೋಡಲು ಕಾಣಲಿಲ್ಲ ಹಾಗೆ ನಮ್ಮ ಹೋಲ ಸರ್ವೇ ನಂ 52 ರಲ್ಲಿ ಹೋಗಿ ನೋಡಲು ಬೆವಿನ ಗಿಡದಲ್ಲಿ ಮನುಷನ ಕಾಲು ಕಾಣುತ್ತಿದ್ದವು ಗೀಡದ ಹತ್ತಿರ ನೋಡಲಾಗಿ ನನ್ನ ಮಗ ನಸಿರೋದ್ದಿನ ಮಮ್ಮಗ ಖಮರೊದಿನ ಇಬ್ಬರು ಹಗ್ಗದಿಂದ ಕುತ್ತಿಗೆಗೆ ಉರಿಲು ಹಾಕಿಕೊಂಡಿದ್ದು ನೋಡಿದೇವು ನನ್ನ ಮಗನು ಮಮ್ಮಗನಿಗೆ ಕೋಲೆ ಮಾಡುವ ಇರಾದೆಯಿಂದ ಕುತ್ತಿಗೆಗೆ ಹಗ್ಗದಿಂದ ಉರಿಲು ಹಾಕಿ ಸಾಯಿಸಿ ತಾನು ಕೂಡಾ ಅದೆ ಹಗ್ಗದಿಂದ ಊರಿಲು ಹಾಕಿಕೊಂಡು ಆತ್ಮ ಹತ್ಯಾ ಮಾಡಿಕೊಂಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: