POLICE BHAVAN KALABURAGI

POLICE BHAVAN KALABURAGI

29 September 2011

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ಐದು ಜನರ ಬಂಧನ :
ಕಮಲಾಪೂರ ಠಾಣೆ :
ದಿನಾಂಕ 28-09-2011 ರಂದು ಮಧ್ಯಾಹ್ನ ಜೀವಣಗಿ ಗ್ರಾಮದ ಹನುಮಾನ ದೇವರ ಗುಡಿಯ ಎದುರುಗಡೆ ಇರುವ ಸಾರ್ವಜನಕ ಕಟ್ಟೆಯ ಮೇಲೆ ಕೆಲವು ಇಸ್ಪೀಟ ಜೂಜಾಟದಲ್ಲಿ ನಿರತರಾಗಿರುವ ಬಗ್ಗೆ ಬಾತ್ಮಿ ಮೇರೆಗೆ ಸಿಪಿಐ ಗ್ರಾಮೀಣ ವೃತ್ತ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಪಂಚರು ಠಾಣೆಯ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಜೂಜಾಟವನ್ನು ಆಡುತ್ತಿದ್ದ 1.ಗುಂಡಪ್ಪಾ ಸಾಲಹಳ್ಳಿ 2.ರಾಜಣ್ಣಾ ಬಿರೆದಾರ 3.ಇಮಾಮೋದ್ದಿನ್ 4.ರಾಜಣ್ಣಾ ಚಳಕಾಪೂರ 5.ಚಂದ್ರಕಾಂತ ಸಮಗಾರರತವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ 2050-00 ರೂ. ಗಳ ಮತ್ತು 52 ಇಸ್ಪೇಟ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡಿದ್ದು ಈ ಬಗ್ಗೆ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾತಿ ನಿಂದನೆ ಪ್ರಕರಣ :
ಗ್ರಾಮೀಣ ಠಾಣೆ :
ಶ್ರೀ ತಿಪ್ಪಣ್ಣಾ ತಂದೆ ಶರಣಪ್ಪಾ ಜಾನೆ ಸಾ;ಸಿಂದಗಿ (ಬಿ) ತಾ;ಜಿ;ಗುಲಬರ್ಗಾ ಇವರು ದಿನಾಂಕ. 28-9-2011 ರಂದು ಬೆಳಿಗ್ಗೆ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಮಧ್ಯಾಹ್ನ ಹೊಲದ ಕೆಳಗಿನ ಬದುವಿನ ಹತ್ತಿರ ನಮ್ಮ ಪಕ್ಕದ ಹೊಲ ಪಾಲಿಗೆ ಮಾಡಿದ ಗುಡು ತಂದೆ ಅಜ್ಜು @ ಅಜೀಜ ಇತನು ತಮ್ಮ ದನಗಳನ್ನು ನಮ್ಮ ಹೋಲದಲ್ಲಿ ಬಿಟ್ಟಿದನು ಆಗ ನಾನು ಕರೆದು ಗುಡು ಇತನಿಗೆ ಹೊಲದಲ್ಲಿ ದನಗಳನ್ನು ಏಕೆ ಬಿಟ್ಟಿರುವಿ ಬೆಳೆ ಹಾಳಾಗುತ್ತವೆ ಅಂತಾ ಅಂದುದಕ್ಕೆ ಸದರ ಗುಡು ಇತನು ಸ್ವಲ್ಪ ಬೆಳೆ ತಿಂದರೆ ಏನಾಗುತ್ತದೆ ಎಂಬ ವಿಷಯದಲ್ಲಿ ಬಾಯಿ ತಕರಾರು ಆಗಿ ಜಗಳ ತೆಗೆದು ಹೊಲದಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಏನೋ ಹೊಲೆ ಸೂಳೆ ಮಗನೆ ನನ್ನ ತಮ್ಮನ ಸಂಗಡ ಜಗಳ ಮಾಡುತಿಯಾ ಎಂದು ಜಾತಿ ಎತ್ತಿ ಬೈದು 1.ಗುಡು ತಂದೆ ಅಜ್ಜು @ ಅಜೀಜ ಕಡಗಂಚಿ , 2.ಮಹಿಬೂಬ ತಂದೆ ಅಜ್ಜು @ ಅಜೀಜ ಕಡಗಂಚಿ ,3.ರಫೀಕ ತಂದೆ ಮಸ್ತಾನ ಸಾ: ಎಲ್ಲರೂ ಡಬರಾಬಾದ ಸಂಗಡ ಇನ್ನೊಬ್ಬ ನಿಲ್ಲಿಸಿ ಕಲ್ಲಿನಿಂದ ಮತ್ತು ಕೈಯಿಂದ ಬೆನ್ನ ಮೇಲೆ ಹೊಡೆದು ಕಾಲಿನಿಂದ ಒದ್ದು ರಕ್ತಗಾಯ ಮತ್ತು ಗುಪ್ತಗಾಯಗೊಳಿಸಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರಣಾಂತಿ ಹಲ್ಲೆ ಪ್ರಕರಣ :
ವಾಡಿ ಠಾಣೆ :
ಶ್ರೀ ಮಹ್ಮದ ಗೌಸ ತಂದೆ ಹಾಜಿ ಕರೀಮ ಸಾ: ಬಿರ್ಲಾ ಏರಿಯಾ ವಾಡಿ ಇವರು ಹಣ್ಣಿನ ವ್ಯಾಪಾರ ಮಾಡಿಕೊಂಡು ಉಪಜೀವಿಸುತ್ತಿದ್ದು ಈ ಮೊದಲು 1.ಶಬ್ಬಿರ ತಂದೆ ನಾಸೀರ ಖಾನ 2.ಶಮಶೀರ ತಂದೆ ನಾಸೀರ ಖಾನ 3.ಬಾಬಾ ಪಟೇಲ ಸಾ: ಎಲ್ಲರು ವಾಡಿ ಇವರೊಂದಿಗೆ ಜಗಳವಾಗಿದ್ದು ಆ ಬಗ್ಗೆ ಕೋರ್ಟನಲ್ಲಿ ಕೇಸ ನಡೆದಿದ್ದು ಅದೇ ವಿಷಯದಲ್ಲಿ ವೈಮನಸ್ಸು ಇಟ್ಟುಕೊಂಡು ನಿನ್ನೆ ದಿನಾಂಕ 28-09-2011 ರಂದು ಸಾಯಂಕಾಲ ವಿ:ನಾ ಕಾರಣ ಜಗಳ ತೆಗೆದು ಮಾರಣಾಂತಿಕ ಹಲ್ಲೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: