POLICE BHAVAN KALABURAGI

POLICE BHAVAN KALABURAGI

20 August 2011

GULBARGA DIST REPORTED CRIMES

ಕುಡಕ ಗಂಡನ ಕಾಟ ತಾಳಲಾರದಕ್ಕೆ ಸಿಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಹೋದಾಗ ಮಗು ತಾಯಿಯನ್ನು ತಬ್ಬಿ ಕೊಂಡಿದ್ದರಿಂದ ಮಗು ಸಾವು :

ಆಳಂದ ಪೊಲೀಸ ಠಾಣೆ: ದಿನಾಂಕ 19/08/2011 ರಂದು ಸಾಯಂಕಾಲ ಸುಮಾರಿಗೆ ರುದ್ರವಾಡಿ ಗ್ರಾಮದಲ್ಲಿ ರೇಖಾ @ ಸುನಿತಾ ಗಂಡ ಶಂಕರ ಬಿರಾದಾರ ಸಾ|| ರುದ್ರವಾಡಿ ಇವಳು ಗಂಡನಾದ ಶಂಕರ ಇತನಿಗೆ ಕುಡಿಯುದು ಬಿಡು ಅಂತ ಎಷ್ಟು ಸಾರಿ ಹೇಳಿದರು ಕೇಳದೆ ಇದ್ದ ಕಾರಣ ರೇಖಾ ಇವಳು ನಾನೆ ಆತ್ಮಹತ್ಯೆ ಮಾಡಿಕೊಂಡರೆ ಯಾವದೇ ತೊಂದರೆ ಇರುವದಿಲ್ಲ ಅಂತಾ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಾಗ ರೇಖಾಳ 2 ವರ್ಷದ ಮಗ ಕಾಳಪ್ಪ ಇತನು  ಬಂದು ತಬ್ಬಿಕೊಂಡಿದ್ದರಿಂದ ಮಗು ಬೆಂಕಿಯಲ್ಲಿ ಬೆಂದಿರುತ್ತದೆ ಮಗುವಿಗೆ ಉಪಚಾರ ಕುರಿತು ಗುಲ್ಬರ್ಗಾ ಸರ್ಕಾರಿ ಆಸ್ಪತ್ರೆಗೆ ತರುತ್ತಿರುವಾಗ ಮಾರ್ಗ ಮಧ್ಯದಲ್ಲಿಯೇ ಮಗು ಮೃತಪಟ್ಟಿರುತ್ತದೆ. ಹಾಗು ರೇಖಾ ಗಂಡ ಶಂಕರ ಇವಳು ಉಪಚಾರದಲ್ಲಿರುತ್ತಾಳೆ ಅಂತಾ ಎ.ಎಸ.ಐ ರವರು ವರದಿ ಸಲ್ಲಿಸಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯು.ಡಿ.ಅರ್. ಪ್ರಕರಣ:
ಬ್ರಹ್ಮಪೂರ ಠಾಣೆ
: ಶ್ರೀ.ದೀಪಕ ತಂದೆ ಬಾಬು ಉಪಾದ್ಯ, ಸಾ|| ಬಾಪೂನಗರ ರವರು ನನ್ನ ಮಗಳಾದ ಕೋಮಲು ಇವಳು ದಿನಾಂಕ: 19/08/2011 ರಂದು ಮಧ್ಯಾಹ್ನ ಬಾಪೂನಗರ ಬಡಾವಣೆಯ ತಮ್ಮ ಮನೆಯಲ್ಲಿ ಅಡುಗೆ ಮಾಡುವ ಸಲುವಾಗಿ ಸ್ಟೋ ಹಚ್ಚುವಾಗ ಸ್ಟೋ ಎಣ್ಣೆ ಆಕಸ್ಮಿಕವಾಗಿ ಮೈಮೇಲೆ ಸಿಡಿದಿದ್ದು ಅವಳು ಉಟ್ಟ ಬಟ್ಟೆಗೆ ಬೆಂಕಿ ಹತ್ತಿ ಮುಖ ಹೊಟ್ಟೆ ಬೆನ್ನು, ಎರಡು ಕೈಗಳು ಸುಟ್ಟಿದ್ದು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಲಾಗಿತ್ತು ಉಪಚಾರ ಫಲಕಾರಿಯಾಗದೇ ಮೃತ ಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಯು.ಡಿ.ಅರ್. ಪ್ರಕರಣ ದಾಖಲಾಗಿದೆ.

No comments: