POLICE BHAVAN KALABURAGI

POLICE BHAVAN KALABURAGI

21 August 2011

GULBARGA DIST REPORTED CRIME

ಅಪಘಾತ ಪ್ರಕರಣ ಒಂದು ಸಾವು:

ಕಮಲಾಪೂರ ಪೊಲೀಸ ಠಾಣೆ : ಸುಭಾಶ ತಂದೆ ವಿಠಲ ರಾಠೋಡ ಸಾಃ ಮರಮಂಚಿ ತಾಂಡಾ ತಾಃಜಿಃ ಗುಲಬರ್ಗಾ ಹಾಃವಃ ಟಾಟಾ ಪಾವರ ಸಿಲ್ ರೋಡ ಕಲ್ಯಾಣ ಈಸ್ಟ್ (ಎಂ.ಹೆಚ್) ನಾನು ನಮ್ಮ ತಾಂಡಾದವರಾದ ಬಾಬು ತಂದೆ ದೇವಲಾ 2. ಗಣಪತಿ ತಂದೆ ಗಮ್ಮು ಜಾಧವ 3. ರಾಮಸಿಂಗ್ ತಂದೆ ದೇವಲಾ ಚವ್ಹಾಣ 4. ಸುನೀತಾ ಗಂಡ ದೇವಲಾ ಜಾಧವ ಎಲ್ಲರೂ ಕೂಡಿಕೊಂಡು ದಿನಾಂಕ:21/08/2011 ರಂದು ಕಮಲಾಪೂರ ದಲ್ಲಿ ಸಂತೆ ಇದ್ದ ಪ್ರಯುಕ್ತ ಜೀಪ ನಂ. ಕೆಎ:32, ಎಮ್:1811 ನೇದ್ದರ ಚಾಲಕನು ನಮಗೆ ನೋಡಿ ಕಮಲಾಪೂರಕ್ಕೆ ಹೋಗುತ್ತಿದೆ ಅಂತಾ ಹೇಳಿದನು ನಾವೇಲ್ಲರೂ ಅದೇ ಜೀಪಿನಲ್ಲಿ ಕುಳಿತುಕೊಂಡು ಕಮಲಾಪೂರ ಕಡೆಗೆ ಬರುತ್ತಿರುವಾಗ ಭೀಮನಾಳ ಕ್ರಾಸನಲ್ಲಿ ನಾವು ಕುಳಿತಿರುವ ಜೀಪಿನ ಹಿಂದುಗಡೆ ಇನ್ನೊಂದು ಜೀಪ ನಂ. ಕೆಎ:32,ಎಮ್:2766 ನೇದ್ದರ ಚಾಲಕನು ತನ್ನ ಜೀಪಿನಲ್ಲಿ ಪ್ರಯಾಣಿಕರನ್ನು ಕೂಡಿಸಿಕೊಂಡು ತನ್ನ ಜೀಪನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಾ ನಾವು ಕುಳಿತಿರುವ ಜೀಪಿಗೆ ಓವರ ಟೇಕ ಮಾಡುತ್ತಿರುವಾಗ ನಾವು ಕುಳಿತಿರುವ ಜೀಪ ಚಾಲಕನು ತನ್ನ ಜೀಪನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸುತ್ತಾ ಓವರ ಟೇಕ ಮಾಡುತ್ತಿರುವ ಜೀಪಿನ ಮಗ್ಗುಲಿಗೆ ಜೀಫ ತಗುಲಿ ನಮ್ಮ ಜೀಪ ಚಾಲಕನು ತನ್ನ ನಿಯಂತ್ರಣ ಕಳೆದುಕೊಂಡು ರೋಡಿನ ಎಡಬದಿಯಲ್ಲಿರುವ ತಗ್ಗಿನಲ್ಲಿ ಪಲ್ಟಿ ಮಾಡಿ ಅಪಘಾತ ಪಡಿಸಿದ್ದರಿಂದ ಬಾಬು ಇತನಿಗೆ ಎದೆಗೆ ಒಳಪೆಟ್ಟಾಗಿ ಭಾರಿ ಗುಪ್ತಗಾಯ, ಬಲಗಾಲಿನ ಮುರಿದು ಭಾರಿ ರಕ್ತಗಾಯವಾಗಿರುತ್ತದೆ. ಮತ್ತು ಜೀಪಿನಲ್ಲಿ ಕುಳಿತವರಿಗೆ ರಕ್ತಗಾಯವಾಗಿರುತ್ತದೆ ಜೀಪ ಚಾಲಕರು ಅಪಘಾತ ಪಡಿಸಿ ಓಡಿ ಹೋಗಿರುತ್ತಾರೆ. ಬಾಬು ಇತನಿಗೆ ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಆಸ್ಪತ್ರೆಗೆ ತರುತ್ತಿರುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 

No comments: