POLICE BHAVAN KALABURAGI

POLICE BHAVAN KALABURAGI

20 August 2011

GULBARGA DIST REPORTED CRIMES

ದರೋಡೆ ಪ್ರಕರಣ :
ಸ್ಟೇಷನ ಬಜಾರ ಪೊಲೀಸ ಠಾಣೆ
:
ಶ್ರೀಮತಿ ಯಶೋದ ಗಂಡ ರವಿಕುಮಾರ ಸಾ|| ಮನೆ ನಂ 1-867/43 ವೆಂಕಟೇಶನಗರ ಗುಲಬರ್ಗಾರವರು ನಾನು ದಿನಾಂಕ 19.08.2011 ರಂದು ರಾತ್ರಿ 2000 ಪಕ್ಕದ ಮನೆಯ ವಿಜಯಕುಮಾರ ಮುಲ್ಗೆ ರವರ ಮನೆಗೆ ಕುಂಕುಂಮ ಕಾರ್ಯಕ್ರಮಕ್ಕೆ ಹೋಗಿ ಮರಳಿ ಮನೆಗೆ ಬರುತ್ತಿರುವಾಗ ಒಬ್ಬ ಅಪರಿಚಿತ 25-30 ವಯಸ್ಸಿನ ಹುಡಗ ದ್ವೀ ಚಕ್ರ ವಾಹನದ ಮೇಲೆ ಬಂದು ಕೊರಳಲ್ಲಿಯ 20 ಗ್ರಾಂ ಬೆಳ್ಳಿಯ ಕರಡಿಗೆ ಅಕಿ 2,000/-ರೂ, 44 ಗ್ರಾಂ ಮಂಗಳಸೂತ್ರ ಅ.ಕಿ. 1,30,000/- ರೂ ಹೀಗೆ ಒಟ್ಟು 1,32,000/- ರೂ ಕಿಮ್ಮತ್ತಿನ ಆಭರಣಗಳನ್ನು ದರೋಡೆ ಮಾಡಿಕೊಂಡು ಹೋಗಿರುತ್ತನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದರೋಡೆ ಪ್ರಕರಣ :
ಸ್ಟೇಷನ ಬಜಾರ ಪೊಲೀಸ ಠಾಣೆ
:
ಶ್ರೀಮತಿ ವ್ರಶಾಲಿ ಗಂಡ ರಾಕೇಶ ಹಾಗರಗುಂಡಗಿ ಉ|| ಡೆಂಟಿಸ್ಟ ಸಾ|| ಮನೆ ಜವಾಹರ ಶಾಲೆ ಹತ್ತಿರ ಜೇವರ್ಗಿ ರಸ್ತೆ ಗುಲಬರ್ಗಾರವರು ನಾನು ದಿನಾಂಕ 19.08.2011 ರಂದು ಸಾಯಂಕಾಲ 1930 ಸುಮಾರಿಗೆ ಚಿತ್ತಾಪೂರ ದಿಂದ ಹುಸೇನ ಸಾಗರ ರೈಲ್ವೆ ಮುಖಾಂತರ ಗುಲಬರ್ಗಾ ರೈಲ್ವೇ ಸ್ಟೇಷನಕ್ಕೆ ಬಂದು ರೈಲ್ವೇ ಹಳಿ ದಾಟುತ್ತಿರುವಾಗ ಹಿಂದಿನಿಂದ ಒಬ್ಬ ಅಪರಿಚಿತ ವ್ಯೆಕ್ತಿ ಕೊರಳಿಗೆ ಕೈ ಹಾಕಿ ಕೊರಳಲ್ಲಿಯ 20 ಗ್ರಾಂ ಬಂಗಾರದ ಮಂಗಳಸೂತ್ರ ಅ.ಕಿ. 50,000/- ರೂ ಮತ್ತು 20 ಗ್ರಾಂ ಬಂಗಾರದ ಚೈನ್ ಅ.ಕಿ. 50,000/- ರೂ ಬೆಲೆ ಬಾಳುವದನ್ನು ದರೋಡೆ ಮಾಡಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ:
ಶ್ರೀ. ಗುರುವಿಂದ್ರ ತಂದೆ ದತ್ತಾತ್ರೇಯಾ ಜೋಶಿ ಸಾ;ಹರಸೂರ ಗ್ರಾಮ ತಾ;ಜಿ; ಗುಲಬರ್ಗಾ ರವರು ನಾನು ನಮ್ಮ ಊರಿನ ಗ್ರಾಮದವರೊಂದಿಗೆ ಹರಸೂರಿದಿಂದ ಜೀವ ನಂಕೆ.ಎ.32 ಎಂ. 1261 ನೆದ್ದರಲ್ಲಿ ಗುಲಬರ್ಗಾಕ್ಕೆ ಬರುತ್ತಿರುವಾಗ ಬೇಲೂರ ಕ್ರಾಸ ಹತ್ತಿರ ಎದುರಿನಿಂದ ಒಂದು ಪೂಜಾ ಬಸ್ಸ ನಂ.ಕೆ.ಎ.39 4263 ನೆದ್ದರ ಚಾಲಕ ತನ್ನ ಬಸ್ಸನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನಾವು ಕುಳಿತ ಹೊರಟ ಜೀಪಿಗೆ ಡಿಕ್ಕಿ ಹೋಡೆದನು ಇದರಿಂದ ಕೆಲವರಿಗೆ ರಕ್ತಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: