POLICE BHAVAN KALABURAGI

POLICE BHAVAN KALABURAGI

03 September 2014

Gulbarga District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಬೌರಮ್ಮಾ ಗಂಡ ಭೂತಾಳಿ ಹಟ್ಟಿ ಸಾ|| ಬಿಲ್ವಾಡ ತಾ|| ಅಫಜಲಪೂರ ಇವರ ಮದುವೆ ಭೂತಾಳಿ ತಂದೆ ಪೀರಪ್ಪಾ ಹಟ್ಟಿ ಇವರ ಜೋತೆ 10/05/2012 ರಂದು ವರನ ಮನೆಯ ಮುಂದೆ ಅಫಜಲಪೂರ ತಾಲೀಕಿನ ಬಿಲ್ವಾಡ (ಕೆ) ಗ್ರಾಮದಲ್ಲಿ ಹಿಂದು ಧರ್ಮದ ಸಂಪ್ರದಾಯದ ವಿಧಿ-ವಿಧಾನಗಳ ಪ್ರಕಾರ ಜರುಗಿದ್ದು ನಂತರ ಫಿರ್ಯಾದಿದಾರಳಿಗೆ  8,00,000/- ವರದಕ್ಷಣೆ ಹಾಗೂ 20 ಗ್ರಾಂ ಬಂಗಾರ ತರುವಂತೆ ಪ್ರತಿದಿನ ತೊಂದರೆ ಕೊಡುತಿದ್ದು, ಎಲ್ಲಾ ಆರೋಪಿತರು ಅನಾವಶ್ಯಕವಾಗಿ ಮಾನಸಿಕ ಹಿಂಸೆ ಹಾಗೂ ಜೀವ ಬೇದರಿಕೆ ಹಾಕುವದು ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಅಫಜಪೂರ ಠಾಣೆ : ದಿನಾಂಕ 02-09-2014 ರಂದು ಸಾಯಂಕಾಲ 5:00 ಗಂಟೆಗೆ ಶ್ರೀಮತಿ ಕವಿತಾ ಗಂಡ ಚಿದಾನಂದ ಜನ್ನಾ ಸಾ ಮಣೂರ ಇವರ ಗಂಡ ಚಿದಾನಂದ ಇವರು ಮನೆಗೆ ಪತ್ರಾಸ ಹಾಕುತ್ತಿದ್ದನು, ಆಗ ನಮ್ಮ ಮನೆಯ ಮುಂದೆ ಇದ್ದ  ಕೆ.ಇ.ಬಿ ಕರೆಂಟ ವಾಯರ ಬಹಳ ಕೆಳಗೆ ಇದ್ದು, ನನ್ನ ಗಂಡನಿಗೆ ವಾಯರ ಕೇಳಗೆ ಇದೆ ನೋಡಿ ಕೆಲಸ ಮಾಡಿ ಅಂತಾ ಹೇಳಿದೆನು, ಆಗ ನನ್ನ ಗಂಡ ನೋಡೆ ಕೆಲಸ ಮಾಡುತ್ತೆನೆ ಅಂತಾ ಹೇಳಿ ನಮ್ಮ ಮನೆಗೆ ಪತ್ರಾಸ ಹಾಕುವ ಕೆಲಸ ಮಾಡುತ್ತಿದ್ದನು, ಅಂದಾಜು 6:00 ಗಂಟೆ ಸಮಯಕ್ಕೆ ನನ್ನ ಗಂಡ ಚಿದಾನಂದ ಈತನು ಮನೆಗೆ ಪತ್ರಾಸ ಹಾಕುತ್ತಾ, ಪತ್ರಾಸ ಮೇಲಕ್ಕೆ ಎತ್ತಿದಾಗ, ಸದರಿ ಪತ್ರಾಸ ಕರೆಂಟ ವಾಯರಕ್ಕೆ ತಾಗಿ ನನ್ನ ಗಂಡನಿಗೆ ಒಮ್ಮಿಂದೊಮ್ಮಲೆ ಕರೆಂಟ ಶಾಟ ಹೋಡೆದು ಜಾಡಿಸಿ ಕೇಳಗೆ ಬಿದ್ದನು, ಆಗ ನಾನು ಮತ್ತು ಅಲ್ಲೆ ಇದ್ದ ನಮ್ಮ ಭಾವ ಚಂದ್ರಕಾಂತ ಮತ್ತು ನನ್ನ ಗಂಡನ ಅಣ್ಣ ತಮ್ಮಕಿಯ ಅಶೋಕ ಜನ್ನಾ, ಖಾಜಪ್ಪ ಜನ್ನಾ ಇವರು ಬಂದಿದ್ದು ಎಲ್ಲರೂ ಕೂಡಿ ನನ್ನ ಗಂಡನಿಗೆ ನೀರು ಹಾಕಿ ನೋಡಲು ನನ್ನ ಗಂಡ ಸ್ಥಳದಲ್ಲೆ ಮೃತ ಪಟ್ಟಿದರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಅಪಘಾತ ಪ್ರಕರಣಗಳು :
ಮಾದನಹಿಪ್ಪರಗಾ ಠಾಣೆ : ಶ್ರೀ.ಸಿದ್ದಾರಾಮ ತಂದೆ ಶಂಕರ ಮೇಲಿನಕೇರಿ ಸಾ:ಝಳಕಿ [ಕೆ] ಇವರು ಮತ್ತು ನಮ್ಮೂರಿನ ಶಿವಯ್ಯ ತಂದೆ ಶಾಂತಯ್ಯ ದೇವಂತಗಿ ಇಬ್ಬರೂ ಕೂಡಿ ಅವರ ವಾಹನ ಸಂಖ್ಯೆ ಕೆ.ಎ:32 ಇ.ಎಫ್:1269 ಹಿರೋ ಕಂಪನಿಯ ಎಚ್.ಎಫ್.ಡಿಲಕ್ಸ್ ಮೋಟರ ಸೈಕಲ ಮೇಲೆ ಕುಳಿತು ನನ್ನ ಖಾಸಗಿ ಕೆಲಸ ಇದ್ದ ಪ್ರಯುಕ್ತ ತಾಳೆವಾಡ ಗ್ರಾಮಕ್ಕೆ ಇಂದು ದಿ:02/09/2014 ರಂದು ಹೋಗಿ ವಾಪಸ ಬರುವಾಗ ಮಾದನ ಹಿಪ್ಪರಗಾ ಗ್ರಾಮದ ಅರಗಲ ಮಡ್ಡಿ ಹತ್ತಿರದ ಸ್ವಲ್ಪ ದೂರದಲ್ಲಿ ಅಂದಾಜು ಸಮಯ ರಾತ್ರಿ 09:00 ಗಂಟೆ ಸುಮಾರಿಗೆ ರಸ್ತೆ ಮೇಲೆ ನಾವು ಬರುತ್ತಿರುವಾಗ ನಮ್ಮ ಎದುರುಗಡೆಯಿಂದ ಮೋಟರ ಸೈಕಲ ನಂಬರ್ ಕೆ.ಎ:34 ಇ.ಬಿ:1687 ಮೋಟರ್ ಸೈಕಲ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟರ ಸೈಕಲಿಗೆ ಡಿಕ್ಕಿ ಪಡಿಸಿದ್ದು ನಮ್ಮ ಮೋಟರ್ ಸೈಕಲವನ್ನು ಶಿವಯ್ಯ ದೇವಂತಗಿಯವರು ನಡೆಸುತ್ತಿದ್ದು ನಾನು ಹಿಂದುಗಡೆ ಕುಳಿತಿದ್ದು ಸದರಿಯವನು ಡಿಕ್ಕಿಪಡಿಸಿದರಿಂದ ನಮ್ಮ ಮೋಟರ ಸೈಕಲ ರಸ್ತೆ ಮೇಲೆ ಬಿದ್ದಿದು ಆಗ ನನಗೆ ತಲೆಯ ಹಿಂದುಗಡೆ ಭಾರಿ ಒಳಪೆಟ್ಟಾಗಿದ್ದು ಮತ್ತು ಬಲಗಲ್ಲಿನ ಮೇಲೆ ರಕ್ತಗಾಯವಾಗಿದ್ದು ಹಾಗೂ ಬಲಗಾಲಿಗೆ ಅಲಲ್ಲಿ ತರಚಿದ ಗುಪ್ತ ಹಾಗೂ ರಕ್ತಗಾಯವಾಗಿರುತ್ತದೆ. ನಮ್ಮಗೆ ಡಿಕ್ಕಿಪಡಿಸಿದ ವಾಹನ ಚಾಲಕನ ಹೆಸರು ವಿಚಾರಿಸಲಾಗಿ ಶಿವಾನಂದ ತಂದೆ ಶರಣಪ್ಪಾ ಪೂಜಾರಿ ಸಾ:ಬೆಣ್ಣಿಶಿರೂರ ಅಂತಾ ತಿಳಿಸಿರುತ್ತಾನೆ. ಕಾರಣ ಸದರಿ ಮೋಟರ್ ಸೈಕಲ ನಂ: ಕೆ.ಎ:34 ಇ.ಬಿ:1687 ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ಶ್ರೀ ಹಣಮಂತ್ರಾವ ತಂದೆ ಲಗಮಣ್ಣ ಹೊಳಕುಂದಿ ಸಾ: ಕುಡಕಿ ಇವರು ದಿನಾಂಕ 02-09-2014 ರಂದು ತನ್ನ ಮೋಟಾರ ಸೈಕಲ್ ನಂ ಕೆಎ-32-ಈ.ಎಫ್-7784 ನೇದ್ದರ  ಮೇಲೆ ಕುಳಿತುಕೊಂಡು ಗುಲಬರ್ಗಾಕ್ಕೆ ಹೊರಟಾಗ ಸ್ಟೇಶನ್ ಗಾಣಗಾಪೂರದ ಕಂಕರ ಮಶೀನ್ ದಾಟಿ ಕಲ್ಲು ಕಣಿ ಹತ್ತಿರ 09:30 ಎ.ಎಮ್ ಕ್ಕೆ ಎದುರಿನಿಂದ ಒಂಟು ಟ್ರಾಕ್ಟರ ಟ್ರೈಲಿ ಸಮೇತ ಅದರ ಚಾಲಕನು ಟ್ರ್ಯಾಕ್ಟರ ಅನ್ನು ಅತೀ ವೇಗ ಹಾಗೂ ನಿಸ್ಕಾಳಜಿತನದಿಂದ ಮಾನವ ಜೀವಕ್ಕೆ ಹಾನಿ ಆಗುವ ರೀತಿಯಲ್ಲಿ ನಡೆಸಿಕೊಂಡು ಬಂದವನೇ ಡಿಕ್ಕಿ ಹೊಡೆದು ಅಪಘಾತ ಪಡೆಸಿದ್ದು ಅಪಘಾತದಲ್ಲಿ ತಲೆಗೆ, ಮುಖಕ್ಕೆ, ಎರಡು ಕೈ ಮತ್ತು ಕಾಲುಗಳಿಗೆ ರಕ್ತಗಾಯ ಮತ್ತು ಗುಪ್ತಗಾಯವಾಗಿ ರಕ್ತ ಸ್ರಾವವಾಗಿ ಬೇಹೋಷ ಆಗಿ ಸ್ಥಳದಲ್ಲಿ ಬಿದ್ದಿದ್ದು ನನಗೆ ಯಾರೋ ಇಬ್ಬರು ಉಪಚಾರ ಕುರಿತು  ಸ್ಟೇಶನ್ ಗಾಣಗಾಪೂರದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ನನಗೆ ನನ್ನ ಮಕ್ಕಳಾದ ರಮೇಶ, ಉಮೇಶ ನನ್ನ ಹೆಂಡತಿಯಾದ ಶಾಂತಾಬಾಯಿ ಇವರು 108 ವಾಹನದಲ್ಲಿ ಹಾಕಿಕೊಂಡು ಕಾಮರಡ್ಡಿ ಆಸ್ಪತ್ರೆ ಗುಲಬರ್ಗಾಕ್ಕೆ ತಂದು ಸೇರಿಸಿರುತ್ತಾರೆ ಅಪಘಾತ ಪಡೆಸಿದ ಟ್ರಾಕ್ಟರ ನಂ ಮತ್ತು ಚಾಲಕ ಹೆಸರು ವಿಳಾಸ ಗೊತ್ತಾಗಿರುವುದಿಲ್ಲಾ ಶ್ರೀ ಚಂದ್ರಕಾಂತ ವಡ್ಡರ ಸಾ: ಸ್ಟೇಶನ್ ಗಾಣಗಾಪೂರ ಇವರ ಟ್ರ್ಯಾಕ್ಟರ ಅಂತಾ ತಿಳಿದು ಬಂದಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಸಂಚಾರಿ ಠಾಣೆ : ದಿನಾಂಕ 02-09-2014 ರಂದು 02-45 ಪಿ.ಎಮ್ ಕ್ಕೆ ನೇಹರು ಗಂಜ ಬಸ್ ನಿಲ್ದಾಣ ಕಡೆ ಹೋಗುವ ರೋಡಿನಲ್ಲಿ ಬರುವ ಸವೇರಾ ಹೋಟೆಲ ಹತ್ತಿರ ಎದರುಗಡೆ ರೋಡಿನ ಮೇಲೆ ಶಿವಕುಮಾರ ತಂದೆ ಜಗನಾಥ ಮಾಲಿ ಪಾಟೀಲ, ಸಾಃ ಬಂಬು ಬಜಾರ ಗುಲಬರ್ಗಾ ಇವರು  ತನ್ನ ಮೋಟಾರ ಸೈಕಲ ನಂ. ಕೆ.ಎ 01 ಇ.ಎಮ್ 3726 ನೇದ್ದನ್ನು ಕಿರಣಾ ಬಜಾರ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಶ್ರೀ ಜಗನಾಥ ತಂದೆ ನಾಗೇಂದ್ರಪ್ಪಾ ಮಾಲಿ ಪಾಟೀಲ, ಸಾಃ ಶರಫೋಸ ಕಿಣ್ಣಿ, ತಾಃ ಗುಲಬರ್ಗಾ, ಹಾ.ವ ಬಂಬು ಬಜಾರ ಗುಲಬರ್ಗಾ ಇವರ ಮಗನಾದ ಶಿವಕುಮಾರ ವಃ 14 ವರ್ಷ, ಈತನು ನಗರೇಶ್ವರ ಶಾಲೆ ಕಡೆಯಿಂದ ನಡೆಸಿಕೊಂಡು ಬರುತ್ತಿದ್ದ ಸೈಕಲಕ್ಕೆ ಎದರುಗಡೆಯಿಂದ ಡಿಕ್ಕಿ ಪಡಿಸಿ ತನ್ನ ಮೋಟಾರ ಸೈಕಲ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಅಪಘಾತದಿಂದ ಫಿರ್ಯಾದಿ ಮಗನಿಗೆ ತಲೆಗೆ ಭಾರಿ ಪೆಟ್ಟು ಬಿದ್ದು ಮೂಗಿನಿಂದ ರಕ್ತ ಸ್ರಾವ ಆಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

02 September 2014

Gulbarga District Reported Crimes

ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮರಣ ಹೊಂದಿದ ಪ್ರಕರಣ :
ಕುರಕುಂಟಾ ಠಾಣೆ : ದಿನಾಂಕ 31-08-2014 ರಂದು ಬೆಳಿಗ್ಗೆ 9-30 ಎ ಎಂ ಕ್ಕೆ ನಿಂಗಪ್ಪಾ ರವರು ತನ್ನ ಎತ್ತುಗಳು ಮತ್ತು ನರಸಿಂಹಲೂ ರವರ ಎತ್ತುಗಳು ಮೇಯಿಸಲಿಕ್ಕೆ ತೆಗೆದುಕೊಂಡು ಹೋಗಿದ್ದು ಇಲ್ಲಿಯವರೆಗೆ ಮರಳಿ ಬರದೆ ಎತ್ತುಗಳು ಮಾತ್ರ ಬಂದಿದ್ದು ಸೌಂಶಯ ಬಂದು ಸೋಗಿಲ ಹಳ್ಳದಲ್ಲಿ ಹುಡುಕುತ್ತಿರುವಾಗ  ಎಡಳ್ಳಿ ಗ್ರಾಮದ ಮಹಾದೇವಪ್ಪಾ ಪೂಜಾರಿ ರವರ ಹೋಲದ ಪಕ್ಕದಲ್ಲಿ ಇಂದು ದಿನಾಂಕ 02-09-2014 ರಂದು 10-30 ಎ ಎಂ ಕ್ಕೆ ಮೃತ ನಿಂಗಪ್ಪಾನ ಶವ ಸಿಕ್ಕಿರುತ್ತದೆ ಸದರಿಯವನು ಸೋಗಿಲು ಹಳ್ಳವನ್ನು ದಾಟಿ ಎತ್ತುಗಳನ್ನು ಮೇಯಿಸಿಕೊಂಡು ಮರಳಿ ಅದೇ ಧಾರಿಯಿಂದ ಬರುವಾಗ ಸೋಗಿಲ ಹಳ್ಳದಲ್ಲಿ ನೀರಿನ ಪ್ರಮಾಣ ಹಚ್ಚಾಗಿದ್ದರಿಂದ  ಸದರಿ ನಿಂಗಪ್ಪಾನು ಪ್ರಕೃತಿಕವಾಗಿ ನೀರಿನಲ್ಲಿ ಕೋಚ್ಚಿಕೊಂಡು ಹೋಗಿ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಬೀರಪ್ಪಾ ತಂದೆ ಅಮಣ್ಣಾ ಅಮಣೋರ ಸಾ:ಕುರಕುಂಟಾ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕುರಕುಂಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ರೇವಣಸಿದ್ದಪ ತಂದೆ ಮಲ್ಲೇಶಪ್ಪಾ ಅಗಸ್ತಿಧಗ  ಸಾ: ನಂದಿಕೂರ ಹಾ:ವ: ಬಸವಣ್ಣ ದೇವರಗುಡಿ ಹತ್ತಿರ ಜಗತ ಗುಲಬರ್ಗಾ ರವರು ದಿನಾಂಕ 01-09-2014 ರಂದು ರಾತ್ರಿ 10-30 ಗಂಟೆಗೆ ಫಿರ್ಯಾದಿಯು ಮೋ/ಸೈಕಲ ನಂಬರ ಕೆಎ-32 ಇಬಿ-4422 ನೇದ್ದರ ಮೇಲೆ ಹಿಂದುಗಡೆ ಅವರ ಹೆಂಡತಿಯಾದ ಸುಮೇದಾ ಇವಳನ್ನು ಕೂಡಿಸಿಕೊಂಡು ಹಳೇ ಜೆವರ್ಗಿ ರೋಡ ರೇಲ್ವೆ ಅಂಡರ ಬ್ರೀಡ್ಜ ಮೂಲಕ ನಂದಕೂರ ಗ್ರಾಮಕ್ಕೆ ಹೋಗುವಾಗ ದಾರಿ ಮದ್ಯ ದೇವಾ ನಗರ ಕ್ರಾಸ್ ಸಮೀಪ ಇರುವ ಕ್ರೌನ ಆಕ್ರೀಡ ಕಾಂಪ್ಲೇಕ್ಸ ರೋಡಿನ ಮೇಲೆ ಎದುರುಗಡೆಯಿಂದ ಗೂಡ್ಸ ಟಂಟಂ ನಂಬರ ಕೆಎ-32 ಎ-8857 ರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋ/ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಫಿರ್ಯಾದಿಗೆ ಬಲಗೈ ಮುಂಗೈ ಹತ್ತಿರ ರಕ್ತಗಾಯವಾಗಿತ್ತು. ಸುಮೇದಾ ಇವಳಗಿ ಬಲಗೈ ಮುಂಗೈ ಹತ್ತಿರ ಭಾರಿರಕ್ತಗಾಯ, ಬಲ ಹಣೆಯ ಮೇಲೆ ತರಚಿದಗಾಯ, ಹಾಗು ಬಲ ಸೊಂಟಕ್ಕೆ ಒಳಪೆಟ್ಟು ಮಾಡಿ ಟಂಟಂ ಚಾಲಕ ಟಂಟಂ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.