POLICE BHAVAN KALABURAGI

POLICE BHAVAN KALABURAGI

02 September 2014

Gulbarga District Reported Crimes

ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮರಣ ಹೊಂದಿದ ಪ್ರಕರಣ :
ಕುರಕುಂಟಾ ಠಾಣೆ : ದಿನಾಂಕ 31-08-2014 ರಂದು ಬೆಳಿಗ್ಗೆ 9-30 ಎ ಎಂ ಕ್ಕೆ ನಿಂಗಪ್ಪಾ ರವರು ತನ್ನ ಎತ್ತುಗಳು ಮತ್ತು ನರಸಿಂಹಲೂ ರವರ ಎತ್ತುಗಳು ಮೇಯಿಸಲಿಕ್ಕೆ ತೆಗೆದುಕೊಂಡು ಹೋಗಿದ್ದು ಇಲ್ಲಿಯವರೆಗೆ ಮರಳಿ ಬರದೆ ಎತ್ತುಗಳು ಮಾತ್ರ ಬಂದಿದ್ದು ಸೌಂಶಯ ಬಂದು ಸೋಗಿಲ ಹಳ್ಳದಲ್ಲಿ ಹುಡುಕುತ್ತಿರುವಾಗ  ಎಡಳ್ಳಿ ಗ್ರಾಮದ ಮಹಾದೇವಪ್ಪಾ ಪೂಜಾರಿ ರವರ ಹೋಲದ ಪಕ್ಕದಲ್ಲಿ ಇಂದು ದಿನಾಂಕ 02-09-2014 ರಂದು 10-30 ಎ ಎಂ ಕ್ಕೆ ಮೃತ ನಿಂಗಪ್ಪಾನ ಶವ ಸಿಕ್ಕಿರುತ್ತದೆ ಸದರಿಯವನು ಸೋಗಿಲು ಹಳ್ಳವನ್ನು ದಾಟಿ ಎತ್ತುಗಳನ್ನು ಮೇಯಿಸಿಕೊಂಡು ಮರಳಿ ಅದೇ ಧಾರಿಯಿಂದ ಬರುವಾಗ ಸೋಗಿಲ ಹಳ್ಳದಲ್ಲಿ ನೀರಿನ ಪ್ರಮಾಣ ಹಚ್ಚಾಗಿದ್ದರಿಂದ  ಸದರಿ ನಿಂಗಪ್ಪಾನು ಪ್ರಕೃತಿಕವಾಗಿ ನೀರಿನಲ್ಲಿ ಕೋಚ್ಚಿಕೊಂಡು ಹೋಗಿ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಬೀರಪ್ಪಾ ತಂದೆ ಅಮಣ್ಣಾ ಅಮಣೋರ ಸಾ:ಕುರಕುಂಟಾ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕುರಕುಂಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ರೇವಣಸಿದ್ದಪ ತಂದೆ ಮಲ್ಲೇಶಪ್ಪಾ ಅಗಸ್ತಿಧಗ  ಸಾ: ನಂದಿಕೂರ ಹಾ:ವ: ಬಸವಣ್ಣ ದೇವರಗುಡಿ ಹತ್ತಿರ ಜಗತ ಗುಲಬರ್ಗಾ ರವರು ದಿನಾಂಕ 01-09-2014 ರಂದು ರಾತ್ರಿ 10-30 ಗಂಟೆಗೆ ಫಿರ್ಯಾದಿಯು ಮೋ/ಸೈಕಲ ನಂಬರ ಕೆಎ-32 ಇಬಿ-4422 ನೇದ್ದರ ಮೇಲೆ ಹಿಂದುಗಡೆ ಅವರ ಹೆಂಡತಿಯಾದ ಸುಮೇದಾ ಇವಳನ್ನು ಕೂಡಿಸಿಕೊಂಡು ಹಳೇ ಜೆವರ್ಗಿ ರೋಡ ರೇಲ್ವೆ ಅಂಡರ ಬ್ರೀಡ್ಜ ಮೂಲಕ ನಂದಕೂರ ಗ್ರಾಮಕ್ಕೆ ಹೋಗುವಾಗ ದಾರಿ ಮದ್ಯ ದೇವಾ ನಗರ ಕ್ರಾಸ್ ಸಮೀಪ ಇರುವ ಕ್ರೌನ ಆಕ್ರೀಡ ಕಾಂಪ್ಲೇಕ್ಸ ರೋಡಿನ ಮೇಲೆ ಎದುರುಗಡೆಯಿಂದ ಗೂಡ್ಸ ಟಂಟಂ ನಂಬರ ಕೆಎ-32 ಎ-8857 ರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋ/ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಫಿರ್ಯಾದಿಗೆ ಬಲಗೈ ಮುಂಗೈ ಹತ್ತಿರ ರಕ್ತಗಾಯವಾಗಿತ್ತು. ಸುಮೇದಾ ಇವಳಗಿ ಬಲಗೈ ಮುಂಗೈ ಹತ್ತಿರ ಭಾರಿರಕ್ತಗಾಯ, ಬಲ ಹಣೆಯ ಮೇಲೆ ತರಚಿದಗಾಯ, ಹಾಗು ಬಲ ಸೊಂಟಕ್ಕೆ ಒಳಪೆಟ್ಟು ಮಾಡಿ ಟಂಟಂ ಚಾಲಕ ಟಂಟಂ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: