POLICE BHAVAN KALABURAGI

POLICE BHAVAN KALABURAGI

03 September 2014

Gulbarga District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಬೌರಮ್ಮಾ ಗಂಡ ಭೂತಾಳಿ ಹಟ್ಟಿ ಸಾ|| ಬಿಲ್ವಾಡ ತಾ|| ಅಫಜಲಪೂರ ಇವರ ಮದುವೆ ಭೂತಾಳಿ ತಂದೆ ಪೀರಪ್ಪಾ ಹಟ್ಟಿ ಇವರ ಜೋತೆ 10/05/2012 ರಂದು ವರನ ಮನೆಯ ಮುಂದೆ ಅಫಜಲಪೂರ ತಾಲೀಕಿನ ಬಿಲ್ವಾಡ (ಕೆ) ಗ್ರಾಮದಲ್ಲಿ ಹಿಂದು ಧರ್ಮದ ಸಂಪ್ರದಾಯದ ವಿಧಿ-ವಿಧಾನಗಳ ಪ್ರಕಾರ ಜರುಗಿದ್ದು ನಂತರ ಫಿರ್ಯಾದಿದಾರಳಿಗೆ  8,00,000/- ವರದಕ್ಷಣೆ ಹಾಗೂ 20 ಗ್ರಾಂ ಬಂಗಾರ ತರುವಂತೆ ಪ್ರತಿದಿನ ತೊಂದರೆ ಕೊಡುತಿದ್ದು, ಎಲ್ಲಾ ಆರೋಪಿತರು ಅನಾವಶ್ಯಕವಾಗಿ ಮಾನಸಿಕ ಹಿಂಸೆ ಹಾಗೂ ಜೀವ ಬೇದರಿಕೆ ಹಾಕುವದು ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಅಫಜಪೂರ ಠಾಣೆ : ದಿನಾಂಕ 02-09-2014 ರಂದು ಸಾಯಂಕಾಲ 5:00 ಗಂಟೆಗೆ ಶ್ರೀಮತಿ ಕವಿತಾ ಗಂಡ ಚಿದಾನಂದ ಜನ್ನಾ ಸಾ ಮಣೂರ ಇವರ ಗಂಡ ಚಿದಾನಂದ ಇವರು ಮನೆಗೆ ಪತ್ರಾಸ ಹಾಕುತ್ತಿದ್ದನು, ಆಗ ನಮ್ಮ ಮನೆಯ ಮುಂದೆ ಇದ್ದ  ಕೆ..ಬಿ ಕರೆಂಟ ವಾಯರ ಬಹಳ ಕೆಳಗೆ ಇದ್ದು, ನನ್ನ ಗಂಡನಿಗೆ ವಾಯರ ಕೇಳಗೆ ಇದೆ ನೋಡಿ ಕೆಲಸ ಮಾಡಿ ಅಂತಾ ಹೇಳಿದೆನು, ಆಗ ನನ್ನ ಗಂಡ ನೋಡೆ ಕೆಲಸ ಮಾಡುತ್ತೆನೆ ಅಂತಾ ಹೇಳಿ ನಮ್ಮ ಮನೆಗೆ ಪತ್ರಾಸ ಹಾಕುವ ಕೆಲಸ ಮಾಡುತ್ತಿದ್ದನು, ಅಂದಾಜು 6:00 ಗಂಟೆ ಸಮಯಕ್ಕೆ ನನ್ನ ಗಂಡ ಚಿದಾನಂದ ಈತನು ಮನೆಗೆ ಪತ್ರಾಸ ಹಾಕುತ್ತಾ, ಪತ್ರಾಸ ಮೇಲಕ್ಕೆ ಎತ್ತಿದಾಗ, ಸದರಿ ಪತ್ರಾಸ ಕರೆಂಟ ವಾಯರಕ್ಕೆ ತಾಗಿ ನನ್ನ ಗಂಡನಿಗೆ ಒಮ್ಮಿಂದೊಮ್ಮಲೆ ಕರೆಂಟ ಶಾಟ ಹೋಡೆದು ಜಾಡಿಸಿ ಕೇಳಗೆ ಬಿದ್ದನು, ಆಗ ನಾನು ಮತ್ತು ಅಲ್ಲೆ ಇದ್ದ ನಮ್ಮ ಭಾವ ಚಂದ್ರಕಾಂತ ಮತ್ತು ನನ್ನ ಗಂಡನ ಅಣ್ಣ ತಮ್ಮಕಿಯ ಅಶೋಕ ಜನ್ನಾ, ಖಾಜಪ್ಪ ಜನ್ನಾ ಇವರು ಬಂದಿದ್ದು ಎಲ್ಲರೂ ಕೂಡಿ ನನ್ನ ಗಂಡನಿಗೆ ನೀರು ಹಾಕಿ ನೋಡಲು ನನ್ನ ಗಂಡ ಸ್ಥಳದಲ್ಲೆ ಮೃತ ಪಟ್ಟಿದರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: