POLICE BHAVAN KALABURAGI

POLICE BHAVAN KALABURAGI

22 May 2013

GULBARGA DISTRICT REPORTED CRIMES


ಅನಧಿಕೃತವಾಗಿ ಸುಣ್ಣದ ಕಲ್ಲಿನ ಗಣಿಗಾರಿಕೆ ಮಾಡಿದ ಬಗ್ಗೆ:
ಮಳಖೇಡ ಪೊಲೀಸ್ ಠಾಣೆ:ಸೌತ್ ಇಂಡಿಯಾ ಸಿಮೆಂಟ್ ಕಂಪನಿ ಮಳಖೇಡ ಇವರು ಮಳಖೇಡ ಗ್ರಾಮದ ಸರ್ವೆ ನಂಬರ 370 ರಲ್ಲಿ ದಿನಾಂಕ:04/05/2013 ರಿಂದ ಇಲ್ಲಿಯವರೆಗೆ 1) ಬಿ.ಸಿತಾರಾಮಯ್ಯ ತಂದೆ ಕೋಟೆಶ್ವ್ರ ರಾವ್ ಡಿ.ಇ.ಎಂ, 2) ಬಿ. ಧನಿಮರೆಡ್ಡಿ ತಂದೆ ತಿಮ್ಮಾ ರೆಡ್ಡಿ ಮೈನ್ಸ ಮ್ಯಾನೇಜರ್ ಸಾ|| ಇಬ್ಬರು ಸೌತ್ ಇಂಡಿಯಾ ಮಳಖೇಡ ತಾ|| ಮಳಖೇಡ ರವರು ಸರ್ಕಾರದಿಂದ ಯಾವುದೇ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಸುಣ್ಣದ ಕಲ್ಲಿನ ಗಣಿಗಾರಿಕೆ ಮಾಡಿ ಸುಮಾರು 11,360 ಮೆಗಾ ಟನ್ ಸುಣ್ಣದ ಕಲ್ಲು ಸಿಮೆಂಟ್ ತಯ್ಯಾರಿಕೆ ಮಾಡುವ ಉದ್ದೇಶದಿಂದ ತೆಗೆದು ಅಂದಾಜು ಕಿಮ್ಮತ್ತು 41,23,680/- ರೂಪಾಯಿಗಳ ಮೌಲ್ಯಗಳಷ್ಟು ಕಳ್ಳತನ ಮಾಡಿರುತ್ತಾರೆ ಅಂತಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರಾದ ಶ್ರೀ.ಈ.ಶೇಖರಪ್ಪ ರವರು ದೂರು ಸಲ್ಲಿಸಿದ ಮೇರೆಗೆ ಮಳಖೆಡ ಠಾಣೆ ಗುನ್ನೆ ನಂ:54/2013 4(1-ಎ) ಗಣಿ ಮತ್ತು ಭೂ ವಿಜ್ಞಾನ (M.M (D&R) Act) ಕಾಯಿದೆ 1957 ಸಂಗಡ 379  ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಾಗಿದೆ. 
ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೋಲಿಸ ಠಾಣೆ:ದಿನಾಂಕ:19.07.2009 ರಂದು ಸಂಪ್ರದಾಯದಂತೆ ಅಬ್ದುಲ ಸಾಜೀದ ತಂದೆ ಅಬ್ದುಲ ಹಮೀದ ಇತನೊಂದಿಗೆ ನನಗೆ ಮದುವೆ ಮಾಡಿಕೊಟ್ಟಿದ್ದು, ಮದುವೆಯಲ್ಲಿ 1.51.000 ವರದಕ್ಷಿಣೆ, ಹೀರೊಹೊಂಡಾ ಮೋಟಾರ ಸೈಕಲ್ 6.5 ತೊಲೆ ಬಂಗಾರ ಹಾಗೂ ಇನ್ನಿತರ ಸಾಮಾನುಗಳು ನೀಡಿರುತ್ತಾರೆ. ಮದುವೆಯಾದ 2 ವರ್ಷಗಳ ನಂತರ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ಕೊಡುತ್ತಾ ಹೊಡೆ ಬಡೆ ಮಾಡಲು ಪ್ರಾರಂಬಿಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಾ ಬಂದಿರುತ್ತಾರೆ. 2011 ನೇ ಸಾಲಿನಲ್ಲಿ ನಮಗೆ ಹೆಣ್ಣು ಮಗು ಜನಿಸಿದ್ದು ಮಗುವಿಗು  ನೋಡಲು ಅಥವಾ ತೊಟ್ಟಿಲು ಕಾರ್ಯಕ್ರಮಕ್ಕೂ ಸಹ ನನ್ನ ಗಂಡ ಅಥವಾ ಗಂಡನ ಮನೆಯವರು ಬಂದಿರುವುದಿಲ್ಲಾ. 2 ತಿಂಗಳು ನಂತರ ನನ್ನ  ತಂದೆ ನನಗೆ ಹಾಗೂ ನನ್ನ ಮಗುವಿಗೆ ಕರೆದುಕೊಂಡು ಹೋಗಿ ಗಂಡನ ಮನೆಯಲ್ಲಿ ಬಿಟ್ಟು ಬಂದರು. ಈಗ ಸುಮಾರು 8 ದಿವಸಗಳ ಹಿಂದೆ ನನ್ನ ಗಂಡ ಅಬ್ದುಲ್ ಸಾಜೀದ ಅತ್ತೆ ಖುರಷೀದ ಬೇಗಂ ,ಮೈದುನ ಸೈಯದ ಅಬ್ದುಲ್ ಹಮೀದ, ಗೌಸ ಶಫೀ, ಸಾಬೀರ ಮತ್ತು ನಾದಿನಿಯರಾದ ಆಷ್ರಾ, ಅಸ್ಮಾ ಇವರೆಲ್ಲರೂ ಕೂಡಿ ನಿನ್ನ ತವರು ಮನೆಯಿಂದ 2 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಇಲ್ಲಾವಾದರೆ ಬೇರೆ ಮದುವೆ ಮಾಡುತ್ತೇವೆ ಅಂತಾ ಮನೆಯಿಂದ ಹೊರಗೆ ಹಾಕಿರುತ್ತಾರೆ ಅಂತಾ ಶ್ರೀಮತಿ  ಆಯಿಷಾ ಸಿದ್ದಿಕಿ ಗಂಡ ಅಬ್ದುಲ ಸಾಜೀದ ಲಂಬು ವಯಾ||22 ವರ್ಷ ಸಾ;ರಂಗೀನ ಮಜೀದ ಪುಟಾಣಿ ಗಲ್ಲಿ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ನಮ್ಮ ಠಾಣೆ ಗುನ್ನೆ ನಂ:30/2013 ಕಲಂ 498(ಎ),323.504.506 ಸಂಗಡ 34 ಐ.ಪಿ.ಸಿ ಮತ್ತು 3&4 ಡಿ.ಪಿ.ಆಕ್ಟ್  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIME


ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ:ಶ್ರೀ, ದೌವಲಸಾಬ ತಂದೆ ವೆಂಕಟಪ್ಪಾ ಗುರಗಂಟಿ ಸಾ:ಗೊಲ್ಲರ ಕಾಲೊನಿ ಸುಂದರ ನಗರ ಗುಲಬರ್ಗಾ ರವರು ನಮ್ಮ ಸಂಬಂಧಿಕರಾದ ಗೊವಿಂದ ಶಿವರಾಲ ಯಾದವ ಇವರ ಮಗನ ಜವಳ ಕಾರ್ಯಕ್ರಮವು ಹೊನ್ನಕಿರಣಗಿಯಲ್ಲಿರುವದರಿಂದ ನಾನು ಮತ್ತು ಕಾಂತಮ್ಮ ಯಾದವ, ಗೊವಿಂದ ವರಗಂಟಿ, ಸ್ವಾಮಿ ಕರಂಟಿ, ಪಾರ್ವತಿ ಕರಂಟಿ, ಅಲಿಸಾಬ ವರಗಂಟಿ, ಇಸ್ಮಾಯಿಲ್ ವರಗಂಟಿ ಹಾಗೂ ಸಂಬಂಧಿಕರು ಮಕ್ಕಳು ಹೀಗೆ 30-35 ಜನರು ಹೊನ್ನಕಿರಣಗಿ ಗ್ರಾಮಕ್ಕೆ ಲಾರಿ ನಂ ಕೆಎ 32 ಎ 5269 ನೇದ್ದರಲ್ಲಿ ಹೋಗಿರುತ್ತೆವೆ. ಜವಳ ಕಾರ್ಯಕ್ರಮ ಮುಗಿಸಿಕೊಂಡು ಸಾಯಂಕಾಲ ಮರಳಿ ಗುಲಬರ್ಗಾಕ್ಕೆ ಬರುವಾಗ ಲಾರಿ ಕ್ಯಾಬಿನಿನಲ್ಲಿ ನಾನು ಮತ್ತು ಯಲ್ಲಪ್ಪಾ. ಗೋವಿಂದ. ಸ್ವಾಮಿ ಮತ್ತು  ಅಲೀಸಾಬ. ಕುಳಿತಿದ್ದೆವು. ಕೇಂದ್ರ ಕಾರಾಗೃಹದ ನಂತರ ಗುಲಬರ್ಗಾ ಕಡೆಯಿಂದ ಕೆಎ-32 ಬಿ-9384 ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ಎದುರಿನಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದವನೆ ಒಮ್ಮಲೇ ನಿರ್ಲಕ್ಷತನದಿಂದ ಯಾವುದೇ ಇಂಡಿಕೇಟರ ಹಾಕದೇ ಬಲಗಡೆಗೆ ತಿರುಗಿಸಿದ್ದರಿಂದ ನಾವು ಕುಳಿತ ಲಾರಿಗೆ ಟಿಪ್ಪರದ ಹಿಂದಿನ ಭಾಗಕ್ಕೆ ಬಡೆದು ಅಪಘಾತವಾಯಿತು. ನನಗೆ ಮತ್ತು ಯಲ್ಲಪ್ಪ ಹಾಗೂ ಗೊವಿಂದ ನಮ್ಮೆಲ್ಲರಿಗೆ ಕಾಲುಗಳ ಹತ್ತಿರ  ಭಾರಿ ರಕ್ತಗಾಯ ಮತ್ತು  ಗುಪ್ತಗಾಯ ಆಗಿರುತ್ತವೆ. ಸ್ವಾಮಿ ಕರಂಟಿ ಇತನಿಗೆ ಎರಡು ಕಾಲುಗಳ ಕಪಗಂಡ ಹತ್ತಿರ ಮುರಿದು ಭಾರಿ,ಬಲಗೈಗೆ ಮುಂಗೈ ಹತ್ತಿರ ರಕ್ತಗಾಯವಾಗಿ ಹೊಟ್ಟೆಯ ಭಾಗಕ್ಕೆ  ಭಾರಿ ಗುಪ್ತಗಾಯವಾಗಿರುತ್ತದೆ. ಆಲೀಸಾಬ ಇತನಿಗೆ ಮೂಗಿಗೆ  ರಕ್ತಗಾಯ ಆಗಿರುತ್ತದೆ. ಲಾರಿಯಲ್ಲಿ ಹಿಂದೆ ಕುಳಿತ ಕೆಲವರಿಗೆ ಸಣ್ಣಪುಟ್ಟ ಸಾದಾ ಗಾಯಗಳಾಗಿರುತ್ತವೆ. ಟಿಪ್ಟರ ಚಾಲಕ ಅಪಘಾತವಾದ ನಂತರ ಟಿಪ್ಪರ ಬಿಟ್ಟು ಓಡಿ ಹೋದನು. ನಾವೆಲ್ಲರೂ 108 ವಾಹನ ಮತ್ತು ಖಾಸಗಿ ವಾಹನದಲ್ಲಿ ಜಿಲ್ಲಾ ಸರಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ಬಂದು ಸೇರಿಕೆಯಾಗಿ ಉಪಚಾರ ಪಡೆಯುತ್ತಿದ್ದೇವೆ. ಭಾರಿಗಾಯ ಹೊಂದಿದ್ದ ಸ್ವಾಮಿ ಇತನು ಉಪಚಾರ ಹೊಂದುತ್ತಾ ಸಾಯಂಕಾಲ 7-30 ಗಂಟೆಗೆ ಉಪಚಾರ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತಾ ಗಾಯಾಳು ದೌವಲಸಾಬ ಇತನ ಹೇಳಿಕೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 73/2013 ಕಲಂ, 279,337,338 304(ಎ) ಐಪಿಸಿ ಮತ್ತು 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ಥಾರೆ. 

21 May 2013

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ಶ್ರೀ.ಖಾಜಪ್ಪ ತಂದೆ ಶರಣಪ್ಪ ನಡುವಿನಕೇರಿ  ವಯ:55 ವರ್ಷ ಸಾ:ನಿಂಬಾಳ ತಾ:ಆಳಂದ ನಾವು ಊಟ ಮಾಡಿಕೊಂಡು ದಿನಾಂಕ:19/05/2013 ರಂದು ರಾತ್ರಿ 9:30 ಗಂಟೆಯ ಸುಮಾರಿಗೆ ಮಲಗಿಕೊಂಡಿರುವಾಗ ಮಧ್ಯರಾತ್ರಿ 1 -00 ಗಂಟೆಯ ಸುಮಾರಿಗೆ ಮನೆಯಲ್ಲಿರುವ ಪೆಟ್ಟಿಗೆಗೆಳನ್ನು ಯಾರೋ ತೆಗೆದುಕೊಂಡು ಹೋಗಿದ್ದು, ಅದರಲಿಟ್ಟಿದ್ದ ನಗದು ಹಣ 14,000/- ರೂಪಾಯಿಗಳು ಕಳ್ಳತನವಾಗಿದ್ದು, ಮತ್ತು  ನಮ್ಮ ಗ್ರಾಮದ ಶಿವರಾಯ ಪಟೇದ ಇವರ ಮನೆಯಲ್ಲಿನ ಅರ್ಧ ತೊಲೆ ಬಂಗಾರ ಅ.ಕಿ.10,500/- ಬಂಗಾರ ಕಳ್ಳತನ ಮಾಡಿದ್ದು ಹೀಗೆ ಒಟ್ಟು 24,500/- ರೂಪಾಯಿಗಳ ಮೌಲ್ಯದ್ದು ಯಾರೋ ಕಳ್ಳರೂ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:43/2013 ಕಲಂ: 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಗೃಹಿಣೆ ಮೇಲೆ ಹಲ್ಲೆ ಪ್ರಕರಣ :
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ದಿನಾಂಕ:20/05/2013 ರಂದು ಮಧ್ಯಾಹ್ನ 3-00 ಗಂಟೆ ಸುಮಾರಿಗೆ ನಾನು ಮನೆಯಲ್ಲಿ ಒಬ್ಬಳೆ ಇರುವಾಗ ಶಾಂತಪ್ಪ ತಂದೆ ನಿಂಗಣ್ಣಾ ಜಿಡ್ಡಿಮನಿ ಇತನು ನನ್ನ ಮನೆಯೊಳಗೆ ಬಂದು ಅವಾಚ್ಯವಾಗಿ ಬೈದು ನನ್ನ ಅಂಗಾಂಗಳಿಗೆ ಮುಟ್ಟಿ ಮೈಮೇಲಿನ ಕುಪ್ಪಸ ಹರಿದಿರುತ್ತಾನೆ.ನಾನು ಬಿಡಿಸಿಕೊಂಡು ಚಿರಾಡುತ್ತಾ ಮನೆಯಿಂದ ಹೊರಗೆ ಬರುತ್ತಿರುವಾಗ ನನ್ನ ಹೊಟ್ಟೆಯ ಮೇಲೆ ಒದ್ದಿರುತ್ತಾನೆ. ಹಾಗೂ ಕೈಯಿಂದ ಕಪಾಳದ ಮೇಲೆ ಹೊಡೆದಿರುತ್ತಾನೆ. ನಾನು ಚೀರಾಡುತ್ತಿದ್ದಾಗ ಅವನ ಹೆಂಡತಿ ಶ್ರೀದೇವಿ ಬಂದು ನನ್ನ ಗಂಡನ ಮಾನ ಹಾಳ ಮಾಡುತಿ ಅಂತಾ ಬೈದಿರುತ್ತಾಳೆ. ಅವನ ತಮ್ಮನಾದ ಮಲ್ಲಪ್ಪ ಜಿಡ್ಡಿಮನಿ ಇತನು ಸಹ ಬಂದು ಬೇದರಿಕೆ ಹಾಕಿರುತ್ತಾನೆ. ಕಾರಣ ಅವರೆಲ್ಲರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ನೊಂದ 30 ವರ್ಷದ ಹೆಣ್ಣು ಮಗಳು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:44/2013 ಕಲಂ: 323,341,354,448,504,506(2),509 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.