POLICE BHAVAN KALABURAGI

POLICE BHAVAN KALABURAGI

21 January 2013

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀ ಭೀಮಶಾ ತಂದೆ ಶಿವಲಿಂಗಪ್ಪ ಹಡಪಾದ ವ|| 65 ವರ್ಷಜಾ|| ಹಡಪಾದ||ಒಕ್ಕಲುತನಸಾ||ದುತ್ತರಗಾಂವ ರವರು ನಾವು ದಿನಾಂಕ:19-01-2013 ರಂದು ರಾತ್ರಿ  ನಮ್ಮ ಹಳೆಯ ಮನೆಯಲ್ಲಿದ್ದ ಅಲಮಾರಿಗೆ ಮತ್ತು ಮನೆಗೆ ಕೀಲಿ ಹಾಕಿ ಹೊಸ ಮನೆಯಲ್ಲಿ ಮಲಗಿಕೊಂಡಿದ್ದುದಿನಾಂಕ:20-01—2013 ರಂದು ಬೆಳಿಗ್ಗೆ 06-00 ಗಂಟೆಗೆ ಹಳೆಯ ಮನೆಯ ಬಾಗಿಲು ತೆರೆಯಲು ಬಂದಾಗ ಮನೆಗೆ ಹಾಕಿದ ಕೀಲಿ ಇರಲಿಲ್ಲ ಅಲ್ಲದೆ ಬಾಗಿಲು ತೆರೆದಿದ್ದು ಒಳಗೆ ಹೋಗಿ ನೋಡಲು ಅಲಮಾರಿಯ ಕೀಲಿ ಮುರಿದು ಬಂಗಾರದ ಆಭರಣಗಳು 3,00,000/- ರೂಪಾಯಿಗಳದ್ದು ಮತ್ತು ನಗದು ಹಣ 25,000/- ಹೀಗೆ ಒಟ್ಟು  3,25,000/- ರೂ. ಗಳದ್ದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:06/2013 ಕಲಂ, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಭಂಕೂರ ಗ್ರಾಮದ ಗಣೇಶ ಗುಡಿಯ ಹತ್ತಿರವಿರುವ ಬಾಬಾ ಪಟೇಲರವರ ಪಾಲೀಶ ಮಶೀನ ಎದರುಗಡೆ ಸಾರ್ವಜನಿಕ ಸ್ಥಳದಲ್ಲಿ ದಿನಾಂಕ:20-01-2013 ರಂದು ಸಾಯಂಕಾಲ 6-00 ಗಂಟೆ ಸುಮಾರಿಗೆ ಕೆಲವು ಜನರು ಕುಳಿತು ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತಾ ಭಾತ್ಮಿ ಬಂದ ಮೇರೆಗೆ ಮಾನ್ಯ ಡಿವೈಎಸ್‌ಪಿ ಸಾಹೇಬ ಶಹಾಬಾದರವರ ಮಾರ್ಗದರ್ಶನದಲ್ಲಿ ಸುನೀಲಕುಮಾರ ಎಸ್‌.ನಾಯಕ ಪಿಎಸ್‌ಐ (ಅ&ವಿ) ಹಾಗೂಸಿಬ್ಬಂದಿಯವರಾದಯೇಜಕಲ್‌,ಗುಂಡಪ್ಪಾ,ಪರಶುರಾಮ,ಬಸವರಾಜ,ಸುಭಾಸ,ಬಸವಣಪ್ಪಾ,ರವರೊಂದಿಗೆ ದಾಳಿ ಮಾಡಿ ಜೂಜಾಟದಲ್ಲಿ ನಿರತರಾದ ಬಾಬಾ ಪಟೇಲ ತಂದೆ ಲಾಡ್ಲೇ,ವೆಂಕಟೇಶ ತಂದೆ ಅಂಬಾಜಿರಾವ ಪವಾರ, ರಾಮಣ್ಣಾ ತಂದೆ ಶಿವರಾಯ ಸರಡಗಿ, ಪ್ರಕಾಶ ತಂದೆ ಚನ್ನವೀರಪ್ಪಾ ಪಾಟೀಲ,ಗೋಪಿ ತಂದೆ ನಾಗಪ್ಪಾ ರಾವೂರ, ಜೀತೆಂದ್ರ ತಂದೆ ನಿಂಗಪ್ಪಾ ಕಂಟಿ ಸಾ|| ಎಲ್ಲರೂ ಹೌಸಿಂಗ ಸೊಸೈಟಿ ಶಾಂತನಗರ ಭಂಕೂರ ರವರನ್ನು ವಶಕ್ಕೆ ತೆಗೆದುಕೊಂಡು ನಗದು ಹಣ  12,110/- ರೂಪಾಯಿಗಳು ನಗದು ಹಣ  ಮತ್ತು ಇಸ್ಪೀಟ ಎಲೆಗಳು  ಜಪ್ತಿ ಪಡಿಸಿಕೊಂಡಿದ್ದರಿಂದ ಶ್ರೀ ರಘು.ಎನ್‌ ಪಿಎಸ್‌ಐ (ಕಾ&ಸು) ಶಹಾಬಾದ ನಗರ ಪೊಲೀಸ ರವರು ಠಾಣೆ ಗುನ್ನೆ ನಂ: 08/2013 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

20 January 2013

GULBARGA DISTRICT REPORTED CRIME


ಅಪಘಾತ ಪ್ರಕರಣ:
ಗುಲಬರ್ಗಾಗ್ರಾಮೀಣ ಪೊಲೀಸ ಠಾಣೆ:ದಿನಾಂಕ 20-01-2013 ರಂದು ಮಧ್ಯರಾತ್ರಿ 12-00 ಗಂಟೆ ಸುಮಾರಿಗೆ ಮೃತ  ಶರಣು @ ಶರಣಪ್ಪ @ ಶರಣಬಸಪ್ಪ ತಂದೆ ಮಾಹಾದೇವಪ್ಪ ತೇಲಾಕುಣಿ  ವ:30 ವರ್ಷ  ರವರು ಹಿರೋ ಹೊಂಡಾ ಫ್ಯಾಶನ ಕೆಎ-32 ಎಲ್-2639 ನೇದ್ದರ ಮೇಲೆ ಹುಮನಾಬಾದ ರಿಂಗ ರೋಡ ಕಡೆಯಿಂದ ಮನೆಗೆ ಬರುತ್ತಿರುವಾಗ ಏರಲೈನ್ಸ ದಾಬಾದ ಹುಮನಾಬಾದ ರೋಡಿನ ಮೇಲೆ  ಹಿಂದಿನಿಂದ ಲಾರಿ ಎಮ್.ಪಿ-22 ಹೆಚ-0978 ನೇದ್ದರ ಚಾಲಕ ತನ್ನ ಲಾರಿಯನ್ನು ಅತಿವೇಗ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ  ಬಂದು ಮೋಟಾರ ಸೈಕಲಿಗೆ ಹಿಂದಿನಿಂದ ಡಿಕ್ಕಿ ಪಡಿಸಿರುತ್ತಾನೆ. ಶರಣು ಇತನು  ಮೋಟಾರ ಸೈಕಲದೊಂದಿಗೆ ರೋಡಿನ ಮೇಲೆ ಬಿದ್ದಾಗ, ಲಾರಿ  ಮೋಟಾರ ಸೈಕಲ ಮತ್ತು ಮೃತ ಮೈಮೇಲಿದ್ದ ಹಾಯ್ದು ಹೋಗಿದ್ದರಿಂದ  ಮೃತನ ತೊಡೆಯ ನಡುವಿನಿಂದ ಸೀಳಿ ಹೊಟ್ಟೆಯಿಂದ ಎದೆಯವರೆಗೆ ಹರಿದು ಭಾರಿ ರಕ್ತಗಾಯವಾಗಿ ಎಲ್ಲಾ ಕರುಳುಗಳು ಹೊರ ಬಂದು ರೋಡಿನ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದು ಭಾರಿ ರಕ್ತಗಾಯವಾಗಿ  ಸ್ಥಳದಲ್ಲಿ ಮೃತಪಟ್ಟಿರುತ್ತಾನೆ.  ಲಾರಿ ಚಾಲಕ ಸ್ವಲ್ಪ ಮುಂದೆ ಹೋಗಿ ಲಾರಿ ನಿಲ್ಲಿಸಿ ಓಡಿ ಹೋಗಿರುತ್ತಾನೆ ಅಂತಾ ಶ್ರೀಮತಿ ನೀಲಮ್ಮಾ ಗಂಡ ಶರಣು @ ಶರಣಪ್ಪ @ ಶರಣಬಸಪ್ಪ ತೇಲಾಕುಣಿ  :28 ವರ್ಷ ಸಾ||ದುಧನಿ ಪಟ್ಟಣ ತಾ||:ಅಕ್ಕಲಕೋಟ  ಹಾ:: ಕಪನೂರರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:46/2013 ಕಲಂ. 279,304(ಎ) ಐಪಿಸಿ ಸಂಗಡ 187 ಐಎಂವಿ ಆಕ್ಟ  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.


19 January 2013

GULBARGA DISTRICT REPORTED CRIMES


2 ½ ವರ್ಷದ ಮಗುವಿನ ಮೇಲೆ ಅತ್ಯಾಚಾರ :
ದೇವಲ ಗಾಣಗಾಪೂರ ಠಾಣೆ: ಅಪಜಲಪೂರ ತಾಲೂಕಿನ ದೇವಲ ಗಾಣಗಾಪುರದಲ್ಲಿ ದಿನಾಂಕ:18-01-2013 ರಂದು ಮಧ್ಯಾಹ್ನ 2-00 ಗಂಟೆ ಸುಮಾರಿಗೆ ಅಂಗನವಾಡಿ ಶಾಲೆಗೆ ಹೋಗಿ ಬಂದ 2 ½  ವರ್ಷದ  ಹೆಣ್ಣು ಮಗವಿಗೆ (ಹೆಸರು ಸೂಚಿಸಿರುವದಿಲ್ಲ)  ನಮ್ಮ ಪಕ್ಕದ ಮನೆಯ ಮಂಜುನಾಥ ತಂದೆ ಲಕ್ಷ್ಮಣ ಕೋಳೆಕರ ಇವನು ಮಗುವಿಗೆ ಮನೆಗೆ ಕರೆದುಕೊಂಡು ಹೋಗಿ ಬಾಗಿಲು ಹಾಕಿಕೊಂಡಿರುತ್ತಾನೆ ಅಂತಾ ಮಕ್ಕಳು ತಿಳಿಸಿದ ಮೇರೆಗೆ  ನಾನು ಗಾಬರಿಯಾಗಿ ಮಂಜುನಾಥ ತಂದೆ ಲಕ್ಷ್ಮಣ ಕೋಳೆಕರ ಇವರ ಮನೆಯ ಮುಂದೆ ಹೋದಾಗ ಒಳಗಡೆಯಿಂದ ನನ್ನ ಮಗಳ ಅಳುವ ಶಬ್ದ ಬರುತ್ತಿತ್ತು. ತಾನು ಮಂಜುನಾಥನಿಗೆ ಬಾಗಿಲು ತೆಗೆಯಲು ಚಿರಾಡಿದಾಗ ಅವನು ಸ್ವಲ್ಪ ಹೊತ್ತಿನ ಮೇಲೆ ಬಾಗಿಲು ತೆರೆದನು ಅವನು ಚಡ್ಡಿಯ (ಅಂಡವೇಯರ) ಮೇಲೆ ಇದ್ದನು. ಮಂಜುನಾಥನು ನನಗೆ ನೋಡಿ ಪ್ಯಾಂಟ್ ಹಾಕಿಕೊಳ್ಳುತ್ತಾ ಓಡಿ ಹೋದನು.ಮ್ಮ ಪಕ್ಕದ ಮನೆಯ ಮಂಜುನಾಥ ತಂದೆ ಲಕ್ಷ್ಮಣ ಕೋಳೆಕರ ಇವನು ಏನೋ ಆಸೆ ತೋರಿಸಿ ನನ್ನ 2 ½ ವರ್ಷದ ಮಗಳಿಗೆ ತನ್ನ ಮನೆಯಲ್ಲಿ ಕರೆದುಕೊಂಡು ಹೋಗಿ ಬಲತ್ಕಾರ ಮಾಡಿದ್ದು. ಅವನ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ದೂರು ಮಗುವಿನ ತಾಯಿ ದೂರು  ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 7/2013 ಕಲಂ. 376 ಐಪಿಸಿ ಮತ್ತು ಕಲಂ.3 (I ),  (XII) ಎಸ್.ಸಿ/ಎಸ್ಟಿ ಪಿ. ಆಕ್ಟ್  ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಹರಣ ಮಾಡಿ ಅತ್ಯಾಚಾರವೆಸಗಿ ಕೊಲೆ ಮಾಡಿದ ಬಗ್ಗೆ:
ಶಹಾಬಾದ ನಗರ ಪೊಲೀಸ್ ಠಾಣೆ:ಸಾ:ನದಿ ಸಿನ್ನೂರ ತಾ:ಜಿ:ಗುಲಬರ್ಗಾ ಹಾ||ವ|| ಕೆ.ಪಿ.ಹೆಚ್‌.ಬಿ ಕಾಲೋನಿ ಹೈದ್ರಾಬಾದ ರವರು ನನ್ನ 26 ವರ್ಷದ ಮಗಳು (ಹೆಸರು ಸೂಚಿಸಿರುವದಿಲ್ಲ)  ದಿನಾಂಕ:26/12/2012 ರಂದು ಮನೆಯಿಂದ ಕೆಲಸಕ್ಕೆ ಹೋದವಳು ಮನೆಗೆ ಹಿಂದಿರುಗಿ ಬರದ ಕಾರಣ ನಾವೇಲ್ಲರೂ ಹುಡುಕಾಡಿದರು ಸಿಕ್ಕಿರುವದಿಲ್ಲಾ. ದಿನಾಂಕ:17/01/2013 ರಂದು ವೀರಣ್ಣಾ ತಂದೆ ಲಕ್ಷಮಯ್ಯ ಮುತ್ತಗಿ ಇವನ ತಮ್ಮನಾದ ತಿರುಪತಿ ತಂದೆ ಲಕ್ಷಮಯ್ಯ ಇತನು ಬಂದು ನನ್ನ ಮಗಳು ಮರಣ ಹೊಂದಿರುತ್ತಾಳೆ,ಸದರಿ ಶವವು ಮುತ್ತಗಾ ಗ್ರಾಮಕ್ಕೆ ತುರ್ತುವಾಹನದ ಮೂಲಕ ಮನೆಗೆ ತಲುಪಿಸಿ ಮರಳಿ ಮುತ್ತಗಾ ಗ್ರಾಮದಿಂದ ತೆರಳುವಾಗ ನಮ್ಮ ಕುಟುಂಬದವರು ಸದರಿ ವಾಹನವನ್ನು ರಾವೂರ ಹತ್ತಿರ ನಿಲ್ಲಿಸಿದೇವು, ನನ್ನ 26 ವರ್ಷದ ಮಗಳಿಗೆ ಅಪಹರಣ ಮಾಡಿ ಬಲತ್ಕಾರವೆಸಗಿ ಕೊಲೆ ಮಾಡಿರುವ ವೀರಣ್ಣಾ ತಂದೆ ಲಕ್ಷಮಯ್ಯ ಮುತ್ತಗಿ ಹಾಗೂ ಅವನಿಗೆ ಸಹಾಯ ಮಾಡಿರುವ ಅವರ ಅಣ್ಣಂದಿರಾದ ದ್ಯಾವಪ್ಪಾ ಮತ್ತು ತಿರುಪತಿರವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಅಂತಾ ಮೃತ ಯುವತಿಯ ತಾಯಿಯವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:07/2013 ಕಲಂ:365,376,302,109 ಸಂ:34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಟಕಾ ಜೂಜಾಟ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ:18-01-2013 ರಂದು ಮಧ್ಯಾಹ್ನ 14-00 ಗಂಟೆಗೆ ಇಂಡಸ್ಟ್ರೀಯಲ್ ಏರಿಯಾದ ಮಾಸಾಪತಿ ದರ್ಗಾಕ್ಕೆ ಹೋಗುವ ದಾರಿಯ ರೋಡ ಬದಿಗೆ ಇರುವ ಗಿಡದ ಕೆಳಗಡೆ ಮಟಕಾ ಜೂಜಾಟದಲ್ಲಿ ನಿರತರಾಗಿದ್ದ  ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ.(ಅ.ವಿ.) ಮತ್ತು ಠಾಣೆಯ ಸಿಬ್ಬಂದಿ ಯವರು ಮೇಲಾಧಿಕಾರಿಯವರ ಮಾರ್ಗದರ್ಶನದಲ್ಲಿ ದಾಳಿ ಮಾಡಲು ಶೇಕ ಮುನೀರ ತಂದೆ ಶೇಕ ಮದಾರ ಮತ್ತು ಮುನೀರ ತಂದೆ ಅಬ್ದಲ ಗನಿ ಇವರನ್ನು ವಶಕ್ಕೆ ತೆಗೆದುಕೊಂಡಿದ್ದು, ಮಟಕಾ ಚೀಟಿ ಹಣ ತೆಗೆದುಕೊಂಡು ಹೋಗಲು ಬಂದ ರಾಜಶೇಖರ ಉಮಾಶೆಟ್ಟಿ ತನ್ನ ಮೋಟಾರ ಸೈಕಲ ಮತ್ತು ಮೋಬಾಯಿಲ ಸ್ಥಳದಲ್ಲಿ ಬಿಸಾಕಿ ಓಡಿ ಹೋಗಿರುತ್ತಾನೆ. ಮಟಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 16,025/- , ಎರಡು ಮೊಬಾಯಿಲ್, ಬಜಾಜ ಪಲ್ಸರ ಮತ್ತು ಟಿವಿಎಸ್ ದ್ವಿ-ಚಕ್ರವಾಹನ ಹೀಗೆ ಒಟ್ಟು 76,725/- ಗಳದ್ದು ಜಪ್ತಿ ಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 41/2013 ಕಲಂ, 78 (3) ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.