POLICE BHAVAN KALABURAGI

POLICE BHAVAN KALABURAGI

25 February 2016

KALABURAGI DISTRICT REPORTED CRIMES

ಜೇವರ್ಗಿ ಪೊಲೀಸ ಠಾಣೆ :-
ಕಳವು ಪ್ರಕರಣ:- ದಿನಾಂಕ 13.02.2016 ರಂದು 11-30 ಗಂಟೆಗೆ ಫಿರ್ಯಾದಿ ಶಶಿಧರ ತಂದೆ ಮಲ್ಲೇಶಪ್ಪ ಬೀಳವಾರ ಸಾ: ಶಾಂತ ನಗರ ಜೇವರ್ಗಿ ತಾ: ಜೇವರಗಿ ಠಾಣೆಗೆ ಹಾಜರಾಗಿ ದಿನಾಂಕ 12.02.2015 ರಂದು 23:45 ಗಂಟೆಯಿಂದ ದಿ 13.02.2016 ರಂದು 01:೦೦ ಗಂಟೆಯ ಮಧ್ಯದ ಅವಧೀಯಲ್ಲಿ ಯಾರೋ ಅಪರಿಚಿತಕಳ್ಳರು ತಮ್ಮ ಮನೆಯ ಬಾಗೀಲ ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಮನೆಯ ಅಲಮಾರಿಯಲ್ಲಿಟ್ಟಿದ್ದ ನಗದು ಹಣ ಮತ್ತು ಆಭರಣಗಳು ಒಟ್ಟು 2,13,000/- ರೂ ಕಿಮ್ಮತ್ತಿನ ನಗದು ಹಣ ಹಾಗು ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳುವಾದ ವಸ್ತುಗಳನ್ನು  ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜೇವರ್ಗಿ ಪೊಲೀಸ ಠಾಣೆ :-
ಕೊಲೆ ಪ್ರಕರಣ: ದಿನಾಂಕ 23.02.2016 ರಂದು 09:30 ಗಂಟೆಗೆ ಫಿರ್ಯಾದಿ ನಿಂಬೆಣ್ಣ ತಂದೆ ಶಿವಶರಣಪ್ಪ ತಳ್ಳೊಳ್ಳಿ  ಗೌನಳ್ಳಿ ಠಾಣೆಗೆ ಹಾಜರಾಗಿ ದಿನಾಂಕ 22.02.2016 ರಂದು ಸಾಯಂಕಾಲ 04:10 ಗಂಟೆಗೆ ಜನಿವಾರ ಸಿಮಾಂತರದ ಹೊಲದಲ್ಲಿದ್ದ ಮನೆಯ ಮುಂದಿನ ಅಂಗಳದಲ್ಲಿ 1) ಸಿದ್ದಪ್ಪ ತಂದೆ ಹಿರೆಗೆಪ್ಪ ಹೊಸಮನಿ 2) ಹಿರೆಗೆಪ್ಪ ತಂದೆ ಬೆಳ್ಳೆಪ್ಪ ಹೊಸಮನಿ3) ನೀಲಮ್ಮ ಗಂಡ ಸಿದ್ದಪ್ಪ ಹೊಸಮನಿ 4) ನಿಂಗಮ್ಮ ಗಂಡ ಹಿರಿಗೆಪ್ಪ ಹೊಸಮನಿ ಸಾ|| ಜನಿವಾರ  ಎಲ್ಲರು ಕೂಡಿಕೊಂಡು ನನ್ನ ಅಣ್ಣನಾದ ಯಲ್ಲಾಲಿಂಗ ತಂದೆ ಶಿವಶರಣಪ್ಪ ತಳ್ಳೋಳ್ಳಿ ಸಾ|| ಗೌನಳ್ಳಿ ಈತನಿಗೆ ಹಳೆಯ ದ್ವೇಷದಿಂದ ಅವನಿಗೆ ಕೊಲೆ ಮಾಡುವ ಉದ್ದೇಶದಿಂದ ಬಡಿಗೆಯಿಂದ ಕೊಡಲಿಯಿಂದ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ್ದು. ಮಾರಣಾಂತಿಕ ಹಲ್ಲೆಗೋಳಗಾದ ಯಲ್ಲಾಲಿಂಗ ಈತನಿಗೆ ಹೆಚ್ಚಿನ ಉಪಚಾರ ಕುರಿತು ಬೇರೆಗೆ ಕಡೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯ ಮೃತಪಟ್ಟಿರುತ್ತಾನೆ.ಎಂದು ಸಲ್ಲಿಸಿದ ಹೇಳಿಕೆ ಮೇರೆಗೆ ಜೇವರ್ಗಿ ಠಾಣೆಯಲ್ಲಿ ಆರೋಪಿತರ ವಿರುದ್ದ ಕೊಲೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಆಳಂದ ಪೊಲೀಸ್ ಠಾಣೆ:
ಹಲ್ಲೆ ಪ್ರಕರಣ: ದಿನಾಂಕ:  24/02/2016 ರಂದು ಅನಿಲ ತಂದೆ ಅರ್ಜುನ್ ಹದಗಲ ಮು:ಝಳಕಿ(ಕೆ) ತಾ:ಅಳಂದ ಇವರು ಹೇಳಿಕೆ ಫಿರ್ಯಾದಿ ಸಲ್ಲಿಸಿದ್ದೇನೆಂದರೆ ಇತ್ತೀಚಿಗೆ ತಾ.ಪಂ, &  ಜಿ.ಪಂ ಚುನಾವಣೆಯಲ್ಲಿ ಜೆಡಿಯು ಪಕ್ಷದ ನಮ್ಮ ಮಾವನಾದ ಸಿದ್ದರಾಮನವರ ಪರವಾಗಿ ಪ್ರಚಾರ ಮಾಡಿದ್ದು. ನಮ್ಮ ಎದುರಾಳಿದಾರರಾದ ಕಂಠು ರಾಠೋಡ ಮತ್ತು ಅವನ ಸಂಗಡಿಗರು ನಮ್ಮ ಮೇಲೆ ದ್ವೇಷ ಹೊಂದಿರುತ್ತಾರೆ.ನಾಂಕ: 23/02/2016 ರಂದು ಬೆಳಗ್ಗೆ 10-00 ಗಂಟೆಯ ಸುಮಾರಿಗೆ ಚುನಾವಣೆಯ ಪಲಿತಾಂಶ ತಿಳಿಯಲಿರುವದರಿಂದ ನಾನು ಮತ್ತು ಶಿವಯೋಗಿ ತಳಕೇರಿ, ಸಿದ್ದರಾಮ ಹದಗಲ್, ಗಣಪತಿ ತಳಕೇರಿ, ಕಲ್ಯಾಣಿ ಅಣ್ಣಿಹೊಲ, ಬಸವರಾಜ ಕೋಚಿ, ಪಂಡಿತ ರೇವೂರ, ಈರಪ್ಪ ಕೋಚಿ ಎಲ್ಲರು ಕೂಡಿ ಸ.ಪ.ಪೂ ಕಾಲೇಜ ಆವರಣದ ಎದುರಿಗೆ ನಾವು ಇದ್ದಾಗ ಕಂಠು ರಾಠೋಡ ಸಾ: ಜೀರೊಳ್ಳಿ ತಾಂಡಾ ಮತ್ತು ಅಂಬಾದಾಸ ರಾಠೋಡ ಮು: ಯಳಸಂಗಿ ತಾಂಡಾ, ಮಿಥುನ್ ರಾಠೋಡ, ಪ್ರವೀಣ ರಾಠೋಡ, ಸಂತೋಷ ರಾಠೋಡ, ಮೊಹನ ರಾಠೋಡ ಸಾ: ನಾಯಕ ನಗರ ತಾಂಡಾ ಹಾಗೂ ಇತರರು ಕೂಡ ಬಂದಿದ್ದರು. ನಾನು ಗೇಟಿನ ಹತ್ತಿರ ನಿಂತಿದ್ದಾಗ ಅಂಬಾದಾಸ ಮತ್ತು ಇತರರು ಕೂಡಿ ಬಂದವರೆ ಅವಾಚ್ಯ ಶಬ್ದಗಳಿಂದ ಬಯ್ದು ನನಗೆ ಅಂಬಾದಾಸ, ಮಿಥುನ, ಪ್ರವೀಣ, ಸಂತೊಷ , ಮೋಹನ ರಾಠೋಡ ಎಲ್ಲರೊ ಸೇರಿ ಹೊಡೆದು. ನಿನಗೆ ಇವತ್ತು ಬಿಡುವದಿಲ್ಲ ಅಂತಾ ಹೊಡೆಯುತ್ತಿರುವಾಗ ತಪ್ಪಿಸಿಕೊಂಡು ಓಡಿ ಹೋಗಿದ್ದು. ನಂತರ ಸಾಯಂಕಾಲ 04-00 ಗಂಟೆ ಸುಮಾರಿಗೆ ನಮ್ಮ ಪಕ್ಷ ಜಯಗಳಿಸಿದ್ದರಿಂದ ಎ.ಪಿ.ಎಮ್.ಸಿ. ಹತ್ತಿರದ ಭವಾನಿ ಗುಡಿ ಹತ್ತಿರ ನಾನು ಮತ್ತು ನಮ್ಮ ಮಾವನಾದ ಸಿದ್ದರಾಮ ಹದಗಲ್, ಕಲ್ಯಾಣಿ ಅಣ್ಣಿಹೊಲ, ಗಣಪತಿ ತಳಕೇರಿ, ಎಲ್ಲರೂ ಕೂಡಿ ನಾವು ವಿಜಯೋತ್ಸವ ಆಚರಿಸುತ್ತಿದ್ದಾಗ 1)ಕಂಠು ರಾಠೋಡ, 2)ಅಂಬಾದಾಸ ರಾಠೋಡ, 3)ಮಿಥುನ್ ರಾಠೋಡ, 4)ಪ್ರವೀಣ ರಾಠೋಡ, 5)ಸಂತೋಷ ರಾಠೋಡ, 6)ಮೊಹನ್ ರಾಠೋಡ ಹಾಗು ಇತರರು ಕೂಡಿ ಬಂದವರೆ ಬೋಸಡಿ ಮಕ್ಕಳೆ ಚುನಾವಣೆಯಲ್ಲಿ ಗೆದ್ದಿರಿ ಎಂದು ಸೊಕ್ಕು ಬಂದಿದೆ ನಿಮಗೆ  ಎಂದು ಬೈಯುತ್ತಾ ಜಗಳ ತೆಗೆದು ಮಿಥುನ ರಾಠೋಡನು ಒಂದು ಚೂಪಾದ ಕಲ್ಲಿನಿಂದ ನನ್ನ ಮಾವ ಸಿದ್ದರಾಮನಿಗೆ ಕೊಲೆ ಮಾಡುವ ಉದ್ದೇಶದಿಂದ ತಲೆಯ ಮೇಲೆ ಹೊಡೆದನು. ಆಗ ರಕ್ತ ಸೋರಿ ನಮ್ಮ ಮಾವ ಕೆಳಗಡೆ ಬಿದ್ದರು, ಇತರರು ಕೂಡ ನಮಗೆ ಕೈಯಿಂದ ಹೊಡೆದಿರುತ್ತಾರೆ ನಂತರ ಎಲ್ಲರೂ  ಈ ಮಗ ಸತ್ತ ನಡಿರಿ ಅಂತಾ ಅಲ್ಲಿಂದ ಹೋದರು. ನಮ್ಮ ಮಾವನಿಗೆ ಯಾವುದೊ ಒಂದು ವಾಹನದಲ್ಲಿ ಹಾಕಿಕೊಂಡು ನಾನು ಮತ್ತು ಇತರರು ಕೂಡಿ ಬಸವೇಶ್ವರ ಆಸ್ಪತ್ರೆಗೆ ಬಂದು ಸೇರಿಕೆ ಮಾಡಿರುತ್ತೇವೆ. ಚುನಾವಣೆ ವಿಷಯದಲ್ಲಿ ನಮ್ಮ ಮೇಲೆ ದ್ವೇಷ ಹೊಂದಿ ನಮ್ಮ ಮಾವ ಸಿದ್ದರಾಮ ಈತನಿಗೆ ಕೊಲೆ ಮಾಡುವ ಉದ್ದೇಶದಿಂದ ಕೈಯಿಂದ, ಕಲ್ಲಿನಿಂದ ಹೊಡೆದು ಭಾರಿ ರಕ್ತ ಗಾಯಗೊಳಿಸಿ ಜೀವ ಬೆದರಿಕೆ ಹಾಕಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

No comments: