POLICE BHAVAN KALABURAGI

POLICE BHAVAN KALABURAGI

30 December 2015

Kalaburagi District Reported Crimes

ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಪ್ರಭಾಕರ ತಂದೆ ಶಂಭು ಸಿಂಧೆ ಸಾ : ಸುಲ್ತಾನಪೂರ ತಾ : ಅಕ್ಕಲಕೊಟ ಜಿ : ಸೊಲ್ಲಾಪೂರ  ರವರ ಮಗಳಾದ ಸೋನಾಲಿ ಇವಳಿಗೆ ಚಿಂಚೋಳಿ ಗ್ರಾಮದ ಶ್ರೀಶೈಲ ತಂದೆ ದೌಲಪ್ಪ ಹೋಟಕರ ಈತನೋಂದಿಗೆ ಮದುವೆ ಮಾಡಿ ಕೊಟ್ಟಿರುತ್ತೆವೆ ನನ್ನ ಮಗಳಿಗೆ ಮದುವೆಯಾದ 1ವರ್ಷದ ನಂತರ ನನ್ನ ಮಗಳಿಗೆ ಒಂದು ಗಂಡು ಮಗು ವಾಗಿರುತ್ತದೆ ನನ್ನ ಮಗಳಿಗೆ ಇಬ್ಬರು ಅತ್ತೆಯರಿದ್ದು 1)ಭಾಗಮ್ಮ 2) ಜ್ಯೋತಿ ಅಂತ ಇರುತ್ತಾರೆ ನನ್ನ ಮಗಳ ಗಂಡನ ಹೆಸರು ಶ್ರೀಶೈಲ ತಂದೆ ದೌಲಪ್ಪ ಹೋಟಕರ,ಶ್ರೀಶೈಲನ ತಂದೆಯ ಹೆಸರು ದೌಲಪ್ಪ ಹೋಟಕರ ಶ್ರೀಶೈಲನ ತಮ್ಮನ ಹೆಸರು ವಿಠ್ಠಲ ತಂದೆ ದೌಲಪ್ಪ ಹೋಟಕರ  ನನ್ನ ಮಗಳ ನಾದನಿಯರ ಹೆಸರು  ಪುತಳಾಬಾಯಿ ಗಂಡ ರಾಜು ಸದಾಪೂಲೆ ಸಾ|| ಸೋಲಾಪೂರ ಇನ್ನೋಬ್ಬ ನಾಧನಿಯ ಹೆಸರು ಪಾರು ಈ ಮೇಲಿನ ಏಲ್ಲರು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನಿಡುತ್ತಿದ್ದರು ನಿನ್ನ ತವರು ಮನೆಯಿಂದ ಹಣ ಬಂಗಾರ ತೆಗೆದುಕೊಂಡು ಬಾ ಅಂತಾ ಹೇಳುತ್ತಿದ್ದರು ನಂತರ ದಿನಾಂಕ 29-12-2015ರಂದು ಸಾಯಂಕಾಲ 18:00ಗಂಟೆಗೆ ನನ್ನ ಮಗಳ ಮಾವ ನನ್ನ ಮೋಬಾಯಿಲಗೆ ಪೋನಮಾಡಿ ನಿಮ್ಮ ಮಗಳು ಬಾವಿಯಲ್ಲಿ ಬಿದ್ದು ಸತ್ತಿರುತ್ತಾಳೆ ಹೀಗೆ ಪೋನಮಾಡಿ ಹೇಳಿದ ನಂತರ ನಾವೇಲ್ಲರು ಚಿಂತೆಯಲ್ಲಿ ಕುಳಿತೇವು 15 ನಿಮೀಷಗಳ ನಂತರ ಚಿಂಚೋಳ್ಳಿ ಗ್ರಾಮದ ಪೊಲೀಸ ಪಾಟಿಲರ ಪೋನ್ ನಂಬರಿಗೆ ಪೋನಮಾಡಿ ನಿಮ್ಮ ಮಗಳು ಬಾವಿಯಲ್ಲಿ ಬಿದ್ದು ಮೃತ ಪಟ್ಟಿರುತ್ತಾಳೆ ನೀವು ಬನ್ನಿ ನೀವೂ ಬರೋವರೇಗೂ ಬಾವಿಯಲ್ಲಿಯ ಹೆಣ ತೆಗೆಯಲು ಆಗುವುದಿಲ್ಲ ಅಂತ ತಿಳಿಸಿದರು ಈ ರೀತಿ ಪೋನ ಬಂದ ನಂತರ ನಾವೇಲ್ಲರೂ ವಾಹನವನ್ನು ಮಾಡಿಕೊಂಡು ಚಿಂಚೋಳ್ಳಿ ಗ್ರಾಮಕ್ಕೆ ರಾತ್ರಿ 11:00ಗಂಟೆ ಸುಮಾರಿಗೆ ನನ್ನ ಮಗಳು ವಾಸವಿದ್ದ ಹೋಲಕ್ಕೆ ಬಂದೇವು  ಹೊಲಕ್ಕೆ ಬಂದು ನೋಡಲಾಗಿ ನನ್ನ ಮಗಳ ಶವವು ಹೋಲದಲ್ಲಿ ವಾಸವಾಗಿದ್ದ ಅವರ ಮನೆಯ ಮುಂದೆ ಮಲಗಿಸಿದ್ದು ಇತ್ತು ಅವಳ ಮಾವ ಮತ್ತು ಗಂಡ ಪರಾರಿ ಇದ್ದರು ಗ್ರಾಮದ ಜನರು ನಾವು ಗ್ರಾಮಸ್ಥರನ್ನು ಕೇಳಿದೇವು ನಿಮ್ಮ ಗ್ರಾಮದ ಪೊಲೀಸ್ ಪಾಟಿಲರ ಪೋನ್ ಬಂಧಿತ್ತು ನಿಮ್ಮ ಮಗಳು ಬಾವಿಯಲ್ಲಿ ಬಿದ್ದು ಮೃತ ಹೊಂದಿದಾಳೆ ನೀವು ಬರೋವರೆಗು ಬಾವಿಯಲ್ಲಿ ಬಿದ್ದ ನಿಮ್ಮ  ಮಗಳ ಶವವನ್ನು ತೆಗೆಯುವುದಿಲ್ಲ ನೀವು ಬಂದ ನಂತರ ತೆಗೆಯೋಣಾ ಅಂತ ಹೇಳಿ ಪೋನ್ ಬಂದಿತ್ತು ಆದರೆ ನನ್ನ ಮಗಳ ಮೃತದೇಹವು ಬಾವಿಯಲ್ಲಿರದೆ ಅವರ ಮನೆಯ ಮುಂದೆ ವರಾಂಡದಲ್ಲಿತ್ತು ನಂತರ ನನ್ನ ಮಗಳ ಶವವನ್ನು ನಾವೇಲ್ಲರೂ ವಿಚಾರಿಸಿಕೊಂಡು ಅಫಜಲಪೂರ ಸರಕಾರಿ ಆಸ್ತತ್ರೆಯ ಶವಗಾರ ಕೋಣೆಯಲ್ಲಿ ಹಾಕಿ ಇಗ ತಡವಾಗಿ ಠಾಣೆಗೆ ಬಂಧಿರುತ್ತೆವೆ.ಕಾರಣ ನನ್ನ ಮಗಳು ಬಾವಿಯಲ್ಲಿ ಬಿದ್ದಿಲ್ಲ ನನ್ನ ಮಗಳಿಗೆ ಮೇಲೆ ತಿಳಿಸಿದ ಅವಳ ಗಂಡ ಮತ್ತು ಗಂಡನ ಮನೆಯವರು ಕೂಡಿಕೊಂಡು ನನ್ನ ಮಗಳು ವರದಕ್ಷೀಣೆ ಹಣ ಮತ್ತು ಬಂಗಾರ ತರಲಾರದ್ದಕ್ಕೆ ಎಲ್ಲರೂ ಕೂಡಿ ವರದಕ್ಷಣೆ ಕಿರುಕುಳ ನೀಡಿ ಹೋಡೆದು ಕೋಲೆಮಾಡಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರಿ ಸ್ವತ್ತನ್ನು ಹಾಳು ಮಾಡಿದ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀಮತಿ ಮಂಜೂಳಾ ಎಸ್. ಬಾಣಿ ಉ: ಸುಂಟನೂರ ಗ್ರಾಮ ಪಂಚಾಯತ ಪಿ.ಡಿ.ಓ ಸಾ: ಶಿರಶಾಡ ತಾ: ಇಂಡಿ ಇವರು ದಿನಾಂಕ 29-12-2015 ರಂದು ರಾತ್ರಿ 11:00 ಗಂಟೆಯಿಂದ ದಿನಾಂಕ 30-12-2015 ಬೆಳಿಗ್ಗೆ 06:00 ಗಂಟೆಯ ಮಧ್ಯದ ಅವಧಿಯಲ್ಲಿ  ಯಾರೋ ದುಷ್ಕರ್ಮಿಗಳು ಗ್ರಾಮ ಪಂಚಾತಯ ಸುಂಟನೂರ ಬಿಲ್ ಕಲೇಕ್ಟರ ಕೋಣೆಯ ಕಿಟಕಿಯಿಂದ ಸಿಮೇ ಎಣ್ಣೆ ಕಾಗದ ಮತ್ತು ಪ್ಲಾಸ್ಟಿಕ್ ಚುರುಗಳನ್ನು ಎಸರು ಬೆಂಕಿ ಹಚ್ಚಿದ್ದರಿಂದ  ಕೊಣೆಯಲ್ಲಿರುವ  ಎರಡು ಪ್ಲಾಸ್ಟಿಕ ಕುರ್ಚಿ, ಎರಡು ವೀಲ್ ಚೇರ ಒಟ್ಟು ಅಂದಾಜು ಕಿಮ್ಮತ್ತು 3000/- ರೂಪಾಯಿ ಮೌಲ್ಯದ ಸರಕಾರಿ ಸ್ವತ್ತನ್ನು ನಾಶ ಪಡಿಸಿರುತ್ತಾರೆ  ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಜೇವರ್ಗಿ ಠಾಣೆ : ಅಂದಾಜು 40 ರಿಂದ 45 ವರ್ಷ ವಯಸ್ಸಿನ ಅಪರಿಚಿ ಗಂಡು ಮನುಷ್ಯನು ಈಗ ಒಂದು ತಿಂಗಳ ಹಿಂದೆ ಎಲ್ಲಿಂದಲೋ ಕಟ್ಟಿ ಸಂಗಾವಿ ಭಿಮಾ ಬ್ರೀಡ್ಜ ಹತ್ತಿರ ಬಂದು ತಿರುಗಾಡುತ್ತಿದ್ದನು ಅವನು ಈಗ 3-4 ದಿನಗಳ ಹಿಂದೆ ಭೀಮಾ ನದಿಯ ನೀರಿನಲ್ಲಿ ಕೈ ಕಾಲು ಮುಖ ತೊಳೆಯಲು ಅಥವಾ ಸ್ನಾನ ಮಾಡಲು ಹೋಗಿ ಬ್ರೀಡ್ಜ ಪಕ್ಕದ ನದಿಯ ನೀರಿನಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ನದಿಯ ನೀರಿನಲ್ಲಿ ಬಿದ್ದು ಮುಳುಗಿ ಸತ್ತಿದ್ದು ಅವನ ಹೆಣ ಇಂದು ದಿನಾಂಕ 29.12.2015 ರಂದು ಮಧ್ಯಾಹ್ನ 02:00 ಗಂಟೆಯ ಸುಮಾರಿಗೆ ನೋಡಿದ್ದು ಇರುತ್ತದೆ ಅಂತಾ ಶ್ರೀ ಮಾಳಪ್ಪ ತಂದೆ ಚಂದ್ರಾಮಪ್ಪ ಸಾತಿಹಾಳ ಸಾ : ಹಸನಾಪುರ ಹಾ|||| ಭೀಮಾ ಬ್ರೀಡ್ಜ ಕಟ್ಟಿ ಸಂಗಾವಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ: 28.12.2015 ರಂದು ಸಾಯಾಂಕಾಲ 6.00 ಗಂಟೆಗೆ ಆಂದೋಲಾ- ಬಿರಾಳ ರೋಡ ಆಂದೋಲಾ ದಾಟಿ ಸ್ವಲ್ಪ ಮುಂದೆ ರೋಡಿನಲ್ಲಿ ನಮ್ಮೂರ ಬೀರಪ್ಪ ತಂದೆ ಅಯ್ಯಪ್ಪ ಪೂಜಾರಿ ಇತನು ನಡೆಯಿಸುವ ಟಂಟಂ ವಾಹನ ನಂ ಕೆಎ-32,ಸಿ-2783 ನೇದ್ದರಲ್ಲಿ ನನ್ನ ಗಂಡ ದೇವಪ್ಪ @ ದ್ಯಾವಪ್ಪ ಮತ್ತು ನಮ್ಮೂರ ಹಣಮಂತ ತಂದೆ ತಿಪ್ಪಣ್ಣ ನೈಕೊಡಿ ಇವರಿಗೆ ಟಂಟಂ ವಾಹನದಲ್ಲಿ ಕೂಡಿಸಿಕೊಂಡು ಬರುತ್ತಿದ್ದಾಗ ಟಂಟಂ ವಾಹನ ಚಾಲಕನು ಟಂಟಂ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಒಮ್ಮಲೇ ಕಟ್ಟ ಹೊಡೆದು ರೋಡಿನಲ್ಲಿ ಟಂಟಂ ಪಲ್ಟಿ ಮಾಡಿ ಅಪಘಾತ ನಂತರ ಟಂಟಂ ಚಾಲಕನು ಓಡಿ ಹೋಗಿರುತ್ತಾನೆ  ಅಪಘಾತದಲ್ಲಿ  ನನ್ನ ಗಂಡನಿಗೆ ಮತ್ತು ಹಣಮಂತ ನಾಯಿಕೊಡಿ ಇವರಿಗೆ ಭಾರಿ ಗಾಯಗಳಾಗಿದ್ದು ಅವರಿಗೆ ಉಪಚಾರ ಕುರಿತು ಕಲಬುರಗಿ ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು, ಅಲ್ಲಿ ವೈದ್ಯರು ಅವರಿಗೆ ಹೆಚ್ಚಿನ ಉಪಚಾರ ಕುರಿತು ಸೊಲಾಪೂರಕ್ಕೆ ಹೋಗಲು ಹೇಳಿದ್ದರಿಂದ ದಿನಾಂಕ: 29.12.2015 ರಂದು ರಾತ್ರಿ ನನ್ನ ಗಂಡನಿಗೆ ಮತ್ತು ಹಣಮಂತ ನೈಕೊಡಿ ಇವರಿಗೆ ಹೆಚ್ಚಿನ ಉಪಚಾರ ಕುರಿತು ಸೊಲಾಪೂರಕ್ಕೆ ಹೋಗುತ್ತಿದ್ದಾಗ, ಸೋಲಾಪೂರ ಸಮೀಪ ರೋಡಿನಲ್ಲಿ ರಾತ್ರಿ 11.45 ಗಂಟೆಗೆ ನನ್ನ ಗಂಡ ದೇವಪ್ಪನು ಮೃತಪಟ್ಟಿರುತ್ತಾನೆ. ನಂತರ ಹಣಮಂತ ನೈಕೊಡಿ ಇತನಿಗೆ ಸೊಲಾಪೂರದ ಯಶೋದಾ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಮರಳಿ ನನ್ನ ಗಂಡನ ಶವವನ್ನು ಅದೇ ಅಂಬುಲೆನ್ಸ್ ವಾಹನದಲ್ಲಿ ಹಾಕಿಕೊಂಡು ನಾನು ಮತ್ತು ನನ್ನ ಅಳಿಯ ಶಿವಪ್ಪ ಇಬ್ಬರು ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ತಂದು ಹಾಕಿರುತ್ತೇವೆ. ಅಂತಾ ಶ್ರೀಮತಿ ದೇವಕೆಮ್ಮ ಗಂಡ ದೇವಪ್ಪ @ ದ್ಯಾವಪ್ಪ ರೇವನೂರ ಸಾ: ಮಲ್ಲಾ (ಬಿ)  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: