POLICE BHAVAN KALABURAGI

POLICE BHAVAN KALABURAGI

07 August 2015

Kalaburagi District Reported Crimes

ಅಂತರಾಜ್ಯ ಮೊಬೈಲ್ ಕಳ್ಳರ ಬಂಧನ :
ಯಡ್ರಾಮಿ ಠಾಣೆ : ಶ್ರೀ ಮಡಿವಾಳಪ್ಪಾ ತಂದೆ ಈರಣ್ಣಾ ಗುರುಶೇಟ್ಟಿ ಸಾ : ಯಡ್ರಾಮಿ ರವರು ದಿನಾಂಕ: 03-08-2015 ರಂದು ನಾನು ಬೆಳ್ಳಗ್ಗೆ 9:00 ಗಂಟೆ ಸುಮಾರಿಗೆ ನಾನು ಪ್ರತಿ ವಾರದಂತೆ ಮನೆಯಿಂದ ಕಾಯಿಪಲ್ಲೆ ಕರಿದಿ ಮಾಡಲು ಸಂತೆಗೆ ಬಂದೆನು. ನನ್ನ ಹತ್ತಿರ ಇದ್ದ ಸಮ್ ಸಾಂಗ ಗೆಲಕ್ಸಿ ಕೋರ್ 2 ಕಪ್ಪು ಬಣ್ಣದ ಮೊಬೈಲ ಶರ್ಟಿನ ಜೇಬಿನಲ್ಲಿ ಇಟ್ಟುಕೊಂಡು ಸಿಂಡಿಕೇಟ ಬ್ಯಾಂಕ ಎದುರುಗಡೆ ಕಾಯಿಪಲ್ಲೆ  ಮಾಡಿಕೊಂಡು ಹಣ ಕೊಡಲು ಶರ್ಟಿನ ಮೇಲಿನ ಜೇಬಿನಲ್ಲಿ ಕೈ ಹಾಕಿದಾಗ ನನ್ನ ಮೊಬೈಲ ಜೇಬಿನಲ್ಲಿ ಇರಲಿಲ್ಲ. ಆಗ ನಾನು ಗಾಬರಿಯಾಗಿ ಯಾರೋ ಕಳ್ಳರು ನನ್ನ ಜೇಬಿನಿಂದ ಮೊಬೈಲ ಕಳುವು ಮಾಡಿಕೊಂಡಿರುತ್ತಾರೆ ಅಂತಾ ಅಕ್ಕ ಪಕ್ಕ ಜನರಿಗೆ ಹೇಳುತ್ತಿದ್ದಾಗ ಅಲ್ಲೆ ಸ್ವಲ್ಪ ದೂರದಲ್ಲಿ 5 ಜನರು ನಿಂತು ತೆಲಗು ಭಾಷೆ ಮಾತನಾಡುತ್ತಿದ್ದರು, ನನಗೆ ನೋಡಿ ಆ 5 ಜನರು ಅವಸರದಿಂದ ತಮ್ಮ ಸೈಕಲ್ ಮೊಟಾರ ತೆಗೆದುಕೊಂಡು ಎರಡು ಸೈಕಲ್ ಮೊಟಾರ ಮೆಲೆ ಇಬ್ಬಿಬ್ಬರಂತೆ ಒಂದು ಮೊಟಾರ ಸೈಕಲ್ ಮೇ ಒಬ್ಬನು ಹೀಗೆ 3 ಮೊಟಾರ ಸೈಕಲ್ ಮೇಲೆ  ಒಂದು ಕುಳಿತುಕೊಂಡು ವೇಗವಾಗಿ ಬಸ್ಸ ಸ್ಟ್ಯಾಂಡ ಕಡೆಗೆ ಹೋದರು. ಆಗ ನಾನು ಸೈಕಲ್ ಮೊಟಾರಗಳ ನಂಬರ ನೋಡಿರುವದಿಲ್ಲ. ನಾನು ಮತ್ತು ಗೆಳೆಯನಾದ ಮಹೇಶ ತಂದೆ ಸುಭಾಷ ಅಂಕಲಕೋಟಿ ಇವನೊಂದಿಗೆ ನಾನು ಮೊಟಾರ ಸೈಇಕಲ್ ತೆಗೆದುಕೊಂಡು ಬೆನ್ನ ಹತ್ತಿದೆವು. ಆದರೆ ಅವರು ಯಾವ ರಸ್ತೆಯಿಂದ ಹೋದರು ಅಂತಾ ನಮಗೆ ಗೊತ್ತಾಗಲಿಲ್ಲ. ಕಾರಣ ನನ್ನ ಮೊಬೈಲ್ ಸಮ್ ಸಂಗ ಕೋರ 2 ಕಪ್ಪು ಬಣ್ಣದ್ದು ಇದರ ಕಿಮ್ಮತ್ತು 8200=00 ಇದ್ದು, ನನ್ನ ಮೊಬೈಲ ಕಳುವು ಮಾಡಿದವರಿಗೆ ಪತ್ತೆ ಹಚ್ಚಬೇಕು ಮತ್ತು ಅವರಿಗೆ ನಾನು ನೋಡಿದರೆ ಗುರುತಿಸುತ್ತೇನೆ. ನನ್ನ ಮೊಬೈಲ ಕಳುವಾದಾಗ ಬೆಳ್ಳಗ್ಗೆ 10 ಗಂಟೆಯಾಗಿರಬೇಕು ನನ್ನ ಮೊಬೈಲ ನಂಬರ 9632716288 ಮತ್ತು ಐ.ಎಂ.ಇ.ಐ ನಂಬರ 1] 357926/06/574524/7 2]357927/06/574524/5 ಇದ್ದು ನನ್ನ ಮೊಬೈಲ್ ಕಳ್ಳತನ ಮಾಡಿಕೊಂಡು ಹೋದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಕರಣದ ತನಿಖೆ ಹಾಗು ಆರೋಪಿತರ ಪತ್ತೆಗಾಗಿ ಹೋಗಿ ದಿನಾಂಕ 06-08-2015 ರಂದು ಬೇಳಗಿನ ಜಾವ 4 ಗಂಟೆಯ ಸುಮಾರಿಗೆ ಜೇವರ್ಗಿಯ ಬಸ್ ಸ್ಟ್ಯಾಂಡ್ ಹತ್ತಿರ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುವ 5 ಜನರನ್ನು ಹಿಡಿಯಲು ಹೋದಾಗ ಇಬ್ಬರು ಓಡಿ ಹೋಗಿದ್ದು ಮೂವರನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ 1) ಚಿನ್ನ ತಂದೆ ವೆಂಕಟೆಶ ಪಾಸು ಪ್ಲೆಟ್ ಸಾ|| ರಾಮನಗರ ನಿಜಾಮಾಬಾದ (ತೆಲಾಂಗಣ ) 2) ಗೋಪಿ @ ಪಾಸು ಪ್ಲೆಟ್ ತಂದೆ ವೆಂಕಟೇಶ ಸಾ|| ಶ್ರೀರಾಮ ನಗರ ತಾಂಡೂರು (ತೆಲಾಂಗಣ )  3) ಸಾಯಿರಾಮ ತಂದೆ ವೆಂಕಟೆಶ ಪಾಸು ಪ್ಲೆಟ್ ಸಾ|| ರಾಮನಗರ ನಿಜಾಮಾಬಾದ (ತೆಲಾಂಗಣ ) ಇವರನ್ನು ಹಿಡಿಕೊಂಡು ವಿಚಾರಣೆ ಮಾಡಿದಾಗ ಯಡ್ರಾಮಿ ಠಾಣೆಯ ಗುನ್ನೆ ನಂ 113/15, 114/15, 115/15, 25/15128/14 ಅಲ್ಲದೆ ಜೆವರ್ಗಿ ಠಾಣೆಯ ಗುನ್ನೆ ನಂ 74/15, ನೆದ್ದರಲ್ಲಿ ಒಟ್ಟು 2 ಮೋಬೈಲ್ ಹಾಗು 45 ಸಾವಿರ ರೂಗಳು ಜಪ್ತ ಪಡಿಸಿಕೊಂಡಿದ್ದಲ್ಲದೆ ಇನ್ನು 60 ಮೊಬೈಲಗಳು ಹಾಗು 3 ಮೋಟರ್ ಸೈಕಲ್ಗಳು ಹಿಗೆ ಒಟ್ಟು 10,45,000/- ರೂಪಯಿಗಳು ಬೆಲೆ ಬಾಳುವ ವಸ್ತುಗಳನ್ನು ಜಪ್ತ ಪಡಿಸಿಕೊಂಡು ಸದರಿಯವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮೊಹ್ಮದ್ ಮುಬೀನ ತಂದೆ ಅಬ್ದುಲ್ ಕರೀಮ್ ಸಿಗ್ನಿಫರೋಶ್ ಸಾ: ಸಿಟಿ ಸ್ಕೂಲ್ ಹಿಂಬಾಗ ಜಮ್ ಜಮ್ ಕಾಲನಿ ಕಲಬುರಗಿ ಇವರು ದಿನಾಂಕ; 06/08/2015 ರಂದು ಎ.ಎಮ್.ಬೆಂಕಾಟ ಫಂಕ್ಷನಹಾಲನಲ್ಲಿ ನಮ್ಮ ಸಂಬಂಧಿಕರ ಮದುವೆ ಕಾರ್ಯಕ್ರಮ ಇರುವ ಪ್ರಯುಕ್ತ ನಾವು ಕುಟುಂಬ ಸಮೇತರಾಗಿ ದಿನಾಂಕ: 06/08/2015 ರಂದು ರಾತ್ರಿ 9-30 ಪಿಎಮ್ ಗಂಟೆ ಸುಮಾರಿಗೆ ನಮ್ಮ ಮನೆಯ ಬಾಗಿಲ ಕೀಲಿ ಹಾಕಿಕೊಂಡು ಮದುವೆ ಕಾರ್ಯ ಕ್ರಮಕ್ಕೆ ಹಾಜರಾಗಿ ಕಾರ್ಯಕ್ರಮ ಮುಗಿಸಿಕೊಂಡು ದಿನಾಂಕ: 07/08/2015 ರಂದು ರಾತ್ರಿ 2-30 ಎಎಮ್ ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ತಂದೆ ವಾಪಸ್ ಮನೆಗೆ ಬಂದು ನೋಡಲು ಮನೆಯ ಬಾಗಿಲ ಕೊಂಡಿ ಮುರಿದಿದ್ದು ಬಾಗಿಲು ಸ್ವಲ್ಪ ತೆರೆದಿದ್ದು ಆಗ ನಾನು ಗಾಬರಿಯಿಂದ ಮನೆಯ ಒಳಗಡೆ ಹೋಗಿ ನೋಡಲು ಮನೆಯ ಬೆಡರೂಮನಲ್ಲಿನ ಅಲಮಾರದ ಬಾಗಿಲು ತೆರೆದಿದ್ದು ಅಲಮಾರದಲ್ಲಿದ್ದ ಬಟ್ಟೆ ಬರೆಯೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ನಾನು ಗಾಬರಿಯಿಂದ ಒಳಗೆ ನೋಡಲು ಅಲಮಾರಾದಲ್ಲಿಟ್ಟಿದ್ದ  ಬಂಗಾರದ ಆಭರಣಗಳು, ಬೆಳ್ಳಿಯ ಆಭರಣಗಳು ಮತ್ತು ನಗದು ಹಣ ಒಟ್ಟು 1,68,100/- ಕಿಮ್ಮತ್ತಿನವುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ಹೆಣ್ಣುಮಗಳು ಅ ಸ್ವಾಭಾವಿಕ ಸಾವು ಪ್ರಕರಣ :
ಚೌಕ ಠಾಣೆ : ಶ್ರೀ ಗೋವಿಂದರೆಡ್ಡಿ ತಂದೆ ಹಣಮಂತರೆಡ್ಡಿ  ಸಾ: ದಣ್ಣೂರ ತಾ:ಆಳಂದ  ಹಾಲಿ ವಸತಿ, ಗಣೇಶ ಮಂದಿರದ ಹತ್ತಿರ ಮುಕ್ತಂಪೂರ ಕಲಬುರಗಿ ಇವರು ದಿನಾಂಕ 06.08.2015  ರಂದು ಬೆಳ್ಳಿಗ್ಗೆ 10 ಗಂಟೆಗೆ ನಮ್ಮ ವೆಲ್ಡಿಂಗ ಅಂಗಡಿಗೆ ಬಂದು ಕೆಲಸ ಮಾಡುತ್ತಿರುವಾಗ ಒಬ್ಬ ವಯಸ್ಸಾದ ಹೆಣ್ಣು ಮಗಳು ಅಂದಾಜು 35-45 ವಯಸ್ಸು ಅವಳು ದಿನಾಲು ನವಜೀವನ ಕಲ್ಯಾಣ ಮಂಟಪದ ಹತ್ತಿರ ರಸ್ತೆಯಲ್ಲಿ ಹೋಗಿ ಬರುವ ಸಾರ್ವಜನಿಕರಿಂದ  ಭಿಕ್ಷೆ ಬೇಡಿ ಉಟ ಮಾಡುವುದು ಅಲ್ಲದೆ ನಮ್ಮ ಅಂಗಡಿಯ ಎದುರುಗಡೆಯಿಂದ  ಹೋಗಿ ಬರುವ ಜನರಿಗೆ ಭಿಕ್ಷೆ ಬೇಡುತ್ತಾ ಇರುತ್ತಿದ್ದಳು. ಬಿಸಿಲಿನ ತಾಪಕ್ಕೆ ತಾಳಲಾರದೇ ಅಲ್ಲಿಯೇ ರಸ್ತೆಯ ಪಕ್ಕದ ಬೇವಿನ ಗಿಡದ ನೆರಳಿಗೆ ಮಲಗುತ್ತಿದ್ದಳು. ಇಂದು ದಿನಾಂಕ: 07.08.2015 ರಂದು ಬೆಳೆಗ್ಗೆ 10.00 ಗಂಟೆಗೆ ನಾನು ಎಂದಿನಂತೆ ನನ್ನ ವೆಲ್ಡಿಂಗ್ ಅಂಗಡಿಗೆ ಬಂದು ಅಂಗಡಿ ತೆಗೆದು ನಂತರ ಮೂರ್ತ ವಿಸರ್ಜನೆಗಾಗಿ ನವಜೀವನ ಕಲ್ಯಾಣ ಮಂಟಪದ ಪಕ್ಕದಲ್ಲಿ ಹೋದಾಗ ಅಲ್ಲಿಯೇ ಮುಳ್ಳು ಕಂಟೆಯ ಮರೆಯಲ್ಲಿ ಮೇಲೆ ತಿಳಿಸಿದ ಅಪರಿಚಿತ ಭಿಕ್ಷುಕಿ ಹೆಣ್ಣು ಮಗಳು ಅಂಗಾತಾಗಿ ಬಿದ್ದಿದ್ದು,  ಹತ್ತಿರ ಹೋಗಿ ನೋಡಲಾಗಿ ಅವಳ ಮುಖದ ಮೇಲೆ ದೇಹದ ಮೇಲೆ ನೋಣಗಳು, ಹುಳುಗಳು ಮೆತ್ತಿಕೊಂಡಿದ್ದವು. ಆಗ ನಾನು ನಮ್ಮ ಸ್ನೇಹಿತರಾದ ಏಜಾಜ ತಂದೆ ಇಮಾಮ ಪಟೇಲ ಮತ್ತು ರಮೇಶ ತಂದೆ ಅಂಬೋಜಿರಾವ ನಾಗೂರಕರ ಇವರಿಗೆ ಕರೆಯಿಸಿ ನಂತರ ಎಲ್ಲರೂ ಕೂಡಿಕೊಂಡು   ನಾವು ಸದರಿಯವಳಿಗೆ ಹೊರಳಾಡಿಸಿ ನೋಡಲು ಸದರಿಯವಳು ಮೃತ ಪಟ್ಟಿದ್ದು ಕಂಡು ಬರುತ್ತದೆ. ಸದರಿಯವಳು ತನಗೆ ಇದ್ದ ಯಾವುದೂ ಒಂದು ಕಾಯಿಲೆಯಿಂದ  ನರಳುತ್ತಾ  ಮತ್ತು ಬಿಸಿಲಿನ ತಾಪತಾಳದೇ ಮೃತ ಪಟ್ಟಿರಬಹುದು. ಸದರಿಯವಳ ಹತ್ತಿರ ಯಾವುದೆ ಕುರಹುಗಳು ಪತ್ತೆಯಾಗಿರುವದಿಲ್ಲ. ಸದರಿಯವಳ ವಯಸ್ಸು 35-45 ವರ್ಷಗಳಿರಬಹುದು. ಸದರಿಯವಳ ಮೈ ಮೇಲೆ ಒಂದು ಕೆಂಪು ಬಣ್ಣದ ನೈಟಿ ಇದ್ದು ಅದರಲ್ಲಿ ಹಸಿರು ಬಣ್ಣದ ಹೂವಿನ ಚಿತ್ರಗಳಿರುತ್ತವೆ. ಉದ್ದನೇಯ ಮುಖ, ನೇರ ಮೂಗು, ತೆಲೆಯಲ್ಲಿ  ಕಪ್ಪನೆಯ ಕೂದಲು, ಸಾದಾಕಪ್ಪು ಬಣ್ಣ, ಗದ್ದದ ಮೇಲೆ ಸ್ವಲ್ಪ ದಾಡಿ ಬಂದಂತೆ ಕಂಡುಬರುತ್ತಿದ್ದು, ಅಂದಾಜು 5 ಫೂಟ 5 ಇಂಚ ಎತ್ತರ ಇರಬಹುದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: