POLICE BHAVAN KALABURAGI

POLICE BHAVAN KALABURAGI

07 August 2015

Kalaburagi District Reported Crimes

ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀಮತಿ. ಕಾಂಚನಾ  ಗಂಡ ವರದರಾಜ ಪರವರ್ತಿಕರ  ಸಾ: ಪ್ಲಾಟ ನಂ.10 ಮಾಕಾ ಲೇಔಟ ಕಲಬುರಗಿ ರವರು ದಿನಾಂಕ 06/08/2015 ರಂದು ಮದ್ಯಾಹ್ನ ಮನೆಗೆ ಬೀಗ ಹಾಕಿಕೊಂಡು ಹತ್ತಿರದಲ್ಲಿದ್ದ ನನ್ನ ತಂಗಿ ಅರ್ಚನಾಳ ಮನೆಗೆ ಹೊಗಿದ್ದು ಸಂಜೆ 5-30 ಗಂಟೆ ಸುಮಾರಿಗೆ ನಮ್ಮ ಪಕ್ಕದ ಮನೆಯವರಾದ ಪ್ರಾಣೇಶರವರು ಫೋನ ಮಾಡಿ ಮನೆ ಕಳ್ಳತನವಾಗಿರುವ ವಿಷಯ ತಿಳಿಸಿದಾಗ  ಬಂದು ನೊಡಲು ಮನೆಯ ಮುಖ್ಯ ಬಾಗಿಲು  ಕೊಂಡಿ ಮುರಿದಿದ್ದು  ಸೀಟ್‌ಔಟದಲ್ಲಿಟ್ಟಿದ್ದ 2 ಲ್ಯಾಪಟಾಪ ಮತ್ತು ಬೇಡರೂಮಿನಲ್ಲಿದ್ದ ಎರಡು ಅಲಮಾರಗಳು ತೆರೆದಿದ್ದು ಬಟ್ಟೆ ಸಾಮಾನುಗಳು ಚಲ್ಲಾಪಿಲ್ಲಿಯಾಗಿದ್ದು ಯಾರೋ ಕಳ್ಳರು ಮದ್ಯಾಹ್ನ 2:00 ರಿಂದ 5 ಗಂಟೆ ಅವಧ್ಇಯಲ್ಲಿ ಮನೆ ಬೀಗ ಮುರಿದು ಅತಿಕ್ರಮ ಪ್ರವೇಶ ಮಾಡಿ 2 ಲ್ಯಾಪಟಾಪಗಳು, ದೇವರ ಮೂರ್ತಿಗಳು, ನಗದು ಹಣ ಹಾಗು ಬಂಗಾರದ ಮತ್ತು ಬೆಳ್ಳಿ ಆಭರಣಗಳು ಒಟ್ಟು 2,17,000/- ರೂ ಕಿಮ್ಮತ್ಇನವುಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಚೌಕ ಠಾಣೆ : ದಿನಾಂಕ 06.08.2015 ರಂದು ಠಾಣಾ ವ್ಯಾಪ್ತಿಯ ಶಿವಾಜಿ ನಗರ ಫೀರ ಕಟ್ಟೆಯ (ಮಸೀಧಿ) ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಹಾರ ಎಂಬ ಧೈವಲೀಲೆ (ನಶೀಬಿನ) ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ  ಪಿ.ಐ. ಚೌಕ ಠಾಣೆ ಹಾಗು ಪಿ.ಎಸ್.ಐ (ಕಾ.ಸು) ಹಸೇನ ಬಾಷಾ, ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಶಿವಾಜಿ ನಗರ ಫೀರ ಕಟ್ಟೆಯ (ಮಸೀಧಿ) ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಶಿವಾಜಿ ನಗರ ಫೀರ ಕಟ್ಟೆಯ (ಮಸೀಧಿ) ಹತ್ತಿರ ಖುಲ್ಲಾ ಬಯಲು ಜಾಗೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ 7 ಜನರು ಗುಂಪಾಗಿ ಕುಳಿತ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ಇಸ್ಟೇಟ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಇಸ್ಟೇಟ ಜೂಜಾಟ ನಿರತರ ಮೇಲೆ ದಾಳಿ ಮಾಡಿ ಅವರನ್ನು ಹಿಡಿದುಕೊಂಡು ವಿಚಾರಿಸಲು 1) ಮಾಣಿಕಪ್ಪ ತಂದೆ ಫೀರಪ್ಪ ಪೂಜಾರಿ ಸಾ: ಹನುಮಾನ ಗುಡಿಯ ಹತ್ತಿರ ಶಿವಾಜಿ ನಗರ ಕಲಬುರಗಿ 2) ನಾಗೇಂದ್ರಪ್ಪ ತಂದೆ ಶಿವಾಜಿರಾವ ಕಾಜಳೆ ಸಾ: ಹನುಮಾನ ಗುಡಿಯ ಹತ್ತಿರ ಶಿವಾಜಿ ನಗರ ಕಲಬುರಗಿ 3) ರಘು ತಂದೆ ಮೋಹನರಾವ ಸಾಬಳೆ ಸಾ: ಹನುಮಾನ ಗುಡಿಯ ಹತ್ತಿರ ಶಿವಾಜಿ ನಗರ ಕಲಬುರಗಿ 4) ಈರಣ್ಣ ತಂದೆ ಶಿವಶರಣಪ್ಪ ಗೊಳೆದ  ಸಾ: ಕಾಶಿರಾಯ ತಲಾಟಿ ರವರ ಮನೆಯಲ್ಲಿ ಬಾಡಿಗೆ ಬಸವಣ ದೇವರ ಗುಡಿಯ ಹತ್ತಿರ ಶಿವಾಜಿ ನಗರ ಕಲಬುರಗಿ 5) ಸುನೀಲ ತಂದೆ ನಿಂಬಾಜಿರಾವ ಜಾಡೆ ಸಾ: ಯಲ್ಲಾಲಿಂಗ ಗುಡಿಯ ಹಿಂದುಗಡೆ ಶಿವಾಜಿ ನಗರ ಕಲಬುರಗಿ 6) ದೇವಿಂದ್ರಪ್ಪ ತಂದೆ ಭೀಮಶಾ ದುತ್ತರಗಾಂವ ಸಾ: ಮಸುತಿ ಹತ್ತಿರ ಶಿವಾಜಿ ನಗರ ಕಲಬುರಗಿ 7) ಪ್ರಭಾಕರ ತಂದೆ ಧರ್ಮರಾಯ ಜಮಾದಾರ ವ: 54 ಉ: ಬಟ್ಟೆ ಅಂಗಡಿಯಲ್ಲಿ ಕೆಲಸ ಜಾತಿ: ಕಬ್ಬಲೀಗ ಸಾ: ಹನುಮಾನ ಗುಡಿಯ ಹತ್ತಿರ ಶಿವಾಜಿ ನಗರ ಕಲಬುರಗಿ ಅಂತ ತಿಳಿಸಿದ್ದು  ಸದರಿಯವರನ್ನು ವಶಕ್ಕೆ ತೆಗೆದುಕೊಂಡು ಅಂಗ ಶೋಧನೆ ಮಾಡಲು ನಗದು ಹಣ 10,190 ರೂ. ಮತ್ತು 52 ಇಸ್ಪೇಟ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಅರುಣಕುಮಾರ ತಂದೆ ಭಿಮರಾವ ಕೊರಳ್ಳಿ ಸಾ : ಸ್ಟೆಷನ್ ಗಾಣಗಾಪೂರ ತಾ : ಅಫಜಲಪೂರ ಜಿಲ್ಲಾ : ಕಲಬುರಗಿ ಹಾ.ವ,|  ಐವಾನ ಇ ಶಾಹಿ ಎರಿಯಾ ಕಲಬುರಗಿ ರವರು ದಿನಾಂಕ. 05.08.2015 ರಂದು ರಾತ್ರಿ 10.00 ಗಂಟೆಗೆ ತನ್ನ ಮೊಟಾರ್ ಸೈಕಲ ಹಿರೊಹೊಂಡ ಸ್ಪ್ಲೇಂಡರ್ ಪ್ಲಸ್  ನಂ. ಕೆಎ-32-ಎಕ್ಷ್-1804 ಚಾರ್ಸಿ ನಂ. MBLHA10EZAHG14067, ಇಂಜಿನ್ ನಂ.HA10EFAHG23095 .ಅಕಿ. 25000/-ರೂ ನೆದ್ದು ಐವನ್ ಇ ಶಾಹಿ ಏರಿಯಾದ ಕಸ್ತೂರಬಾಯಿ ನಿವಾಸದ ಎದುರುಗಡೆ ನಿಲುಗಡೆ ಮಾಡಿ ರೂಮ್ ನಲ್ಲಿ ಮಲಗಿಕೊಂಡು ನಂತರ ದಿನಾಂಕ: 06/08/2015 ರಂದು ಬೆಳಿಗ್ಗೆ 7:00 ಎಎಮ್ ಸುಮಾರಿಗೆ ನೋಡಲಾಗಿ ನನ್ನ ಸೈಕಲ್ ಮೋಟರ ಇರಲಿಲ್ಲ ಎಲ್ಲಾ ಕಡೆ ಹುಡಿಕಿದರು ಸಹ ಸಿಕ್ಕಿರುವದಿಲ್ಲ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: