POLICE BHAVAN KALABURAGI

POLICE BHAVAN KALABURAGI

02 March 2015

Kalaburagi District Reported Crimes

ಕೊಲೆ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ : ದಿನಾಂಕ|| 02/03/2015 ರಂದು ಶ್ರೀ  ಅಬ್ದುಲ ಮುಖೀಮ್ ತಂದೆ ಅಬ್ದುಲ ಅಲೀಮ್ ಉ|| ಕಂಪ್ಯೂಟರ್ ಕೆಲಸ ಸಾ|| ರೋಜಾ (ಬಿ) ಇವರು ದಿನಾಂಕ|| 28/02/2015 ರಂದು ಮುಂಜಾನೆ 11-00 ಗಂಟೆಯ ಸುಮಾರಿಗೆ ನನ್ನ ತಮ್ಮನಾದ ಅಬ್ದುಲ ರಹೀಮ್ ಇತನು ಹೊರಗೆ ತನ್ನ ಗೆಳೆಯರ ಹತ್ತಿರ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋದವನು ರಾತ್ರಿಯಾದರೂ ಮರಳಿ ಮನೆಗೆ ಬರಲಿಲ್ಲ  ಬೆಳಿಗ್ಗೆ ಬರಬಹುದು ಅಂತಾ ಕಾಯುತ್ತಾ ಕುಳಿತಿರುವಾಗ ಇಂದು ದಿನಾಂಕ|| 02/03/2015 ರಂದು ಬೆಳಿಗ್ಗೆ 9-30 ಗಂಟೆಯ ಸುಮಾರಿಗೆ ನನ್ನ ತಮ್ಮ ರಹೀಮನ ಗೆಳೆಯ ಮಹ್ಮದ ಮುನ್ನಾವರ್ ಅಲಿ ತಂದೆ ಮಗ್ದೂಮ್ ಅಲಿ ಈತನು ನಮ್ಮ ಮನೆಗೆ ಬಂದು ದಿನಾಂಕ|| 28/02/2015 ರಂದು ರಾತ್ರಿ ಅಂದಾಜು 8-30 ಗಂಟೆಯಿಂದ 9-30 ಗಂಟೆಯ ಮಧ್ಯದ ಅವಧಿಯಲ್ಲಿ ನಾನು ಮತ್ತು ನಿಮ್ಮ ತಮ್ಮನಾದ ಅಬ್ದುಲ ರಹೀಮ್ ಹಾಗೂ ಅಲೀಮ್ ಪಟೇಲ್ ತಂದೆ ಪಾಶಾ ಪಟೇಲ್ ಖಾಜಾ ಕಾಲೋನಿ ಹಾಗೂ ಆತನ ಸಂಗಡ ದ್ದ ಗೆಳೆಯರೊಂದಿಗೆ ನಾವೇಲ್ಲರೂ ಕೂಡಿ ಪಾರ್ಟಿ & ಸಿಗರೇಟ್ ಸೆದೋಣ ಅಂತಾ ಸಹಾರ ಲೇಔಟನ ಬಯಲು ಜಾಗೆಯಲ್ಲಿ ಹೋಗಿ ನಾವೆಲ್ಲರೂ ಮಾತನಾಡುತ್ತಾ ಕುಳಿತು ಕೊಂಡಾಗ ಒಬ್ಬರಿಗೋಬ್ಬರು ಮಾತು ಬೆಳೆಯುತ್ತಾ ಅದರಲ್ಲಿ ಅಲೀಮ ಪಟೇಲ್ ತಂದೆ ಪಾಶಾ ಪಟೇಲ್ ಇತನು ಅಬ್ದುಲ ರಹೀಮ್ ನಿಗೆ ಏ ರಾಂಡಕೇ ಹಮಾರಾ ದೋಸ್ತಕಾ ಬಹೇನಕೋ ಕೈಕೂ ಪಿಛೇ ಲಗೆ, ಲವಕರ್ ಅಂತಾ ಅವಾಚ್ಯ ಶಬ್ಧಗಳಿಂದ ಬೈಯುತ್ತಾ ಆಜ್ ತುಮಾರೆಕೋ ಖತಮ್ ಕರತೆ ಅಂತಾ ಅಲೀಮ್ ಪಟೇಲ್ ಹಾಗೂ ಅವನ ಸಂಗಡ ಬಂದ ಗೆಳೆಯರೇಲ್ಲರೂ ಕೂಡಿಕೊಂಡು ಅಬ್ದುಲ ರಹೀಮನಿಗೆ ಚಾಕು & ಬೀರ್ ಬಾಟಲಿಗಳಿಂದ ಕುತ್ತಿಗೆಯ ಕೆಳಗೆ, ಎದೆಗೆ, ಹೊಟ್ಟೆಯ ಮೇಲೆ ಹಾಗೂ ಬೆನ್ನ ಕೆಳಗೆ ಹೊಡೆದು ಭಾರಿ ರಕ್ತಗಾಯಗೊಳಿಸಿ ಕೊಲೆ ಮಾಡಿರುತ್ತಾರೆ. ಮತ್ತು ನೀನು ಈ ವಿಷಯ ಯಾರಿಗಾದರೂ ಹೇಳಿದ್ದಲ್ಲಿ ನಿನಗೂ ಬಿಡುವುದಿಲ್ಲ ಅಂತಾ ಅಂದುದ್ದಕ್ಕೆ , ನಾನು ಹೆದರಿ ಇಂದು ಬಂದು ನಿಮಗೆ ತಿಳಿಸುತ್ತಿದ್ದೇನೆ ಅಂತಾ ಸಲ್ಲಿಸಿದ ದೂರು ಸಾರಂಸದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಹಲ್ಲೆ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ: ದಿನಾಂಕ 01/03/2015 ರಂದು 11:00 ಪಿ.ಎಮ್ ಕ್ಕೆ ಶ್ರೀ ಮಹೇಶ ತಂದೆ ದತ್ತು ಗುತ್ತೆದಾರ ಉಃ ನವರಂಗ ವೈನ ಶಾಪದಲ್ಲಿ ಮ್ಯಾನೇಜರ ಇವರು ವೈನ ಶಾಪ ಬಂದ ಮಾಡಿಕೊಂಡು ರೈಲ್ವೆ ಸ್ಟೇಷನಗೆ ಚಹಾ ಕುಡಿಯಲು ಹೋಗಿ ಮರಳಿ ಬರುವಾಗ ಅವರ ವೈನ್ ಶಾಪ ಎದುರುಗಡೆ 5-6 ಜನ ಅಪರಿಚಿತರು ನಿಂತದ್ದನ್ನು ಕಂಡು ಅವರಿಗೆ ಇಲ್ಲಿ ಯಾಕೆ ನಿಂತಿರುವಿರಿ ಅಂತಾ ಕೇಳಲು ಅವರು ನಮಗೆ ಸರಾಯಿ ಕೊಡು ಅಂತಾ ಕೇಳಿದರು. ಆಗ ನಾನು ನಮ್ಮ ಮಾಲಿಕರು ವೈನ್ ಶಾಪ್ ಕೀಲಿ ಹಾಕಿಕೊಂಡು ಹೋಗಿದ್ದು ಈಗ ಸರಾಯಿ ಸಿಗುವುದಿಲ್ಲ. ಎಂದು ಹೇಳಿ ನನ್ನ ಅಳಿಯ ದತ್ತಾ ತಂದೆ ಸುಭಾಶ್ಚಂದ್ರ ಅವರೊಂದಿಗೆ ಮೋಟಾರ ಸೈಕಲ ನಂ. ಕೆಎ 32 ಇ.ಜಿ 7333 ನೇದ್ದರ ಮೇಲೆ ಹೋಗುತ್ತಿರುವಾಗ ಆ ಅಪರಿಚಿತ 5-6 ಜನ ನಮ್ಮನ್ನು ಹಿಂಬಾಲಿಸುತ್ತಾ ಲಾಹೋಟಿ ಕ್ರಾಸ್ ಹತ್ತಿರ ಬಂದು ತಡೆದು ಅವರಲ್ಲಿ ಒಬ್ಬನು ಸರಾಯಿ ಕೊಡು ಅಂದರೆ ಇಲ್ಲ ಅಂತಿ ಮಗನೆ ಅಂದವನೆ ಚಾಕುವಿನಿಂದ ನನ್ನ ಎಡಗಾಲ ತೊಡೆಗೆ ತಲೆಯ ಹಿಂದೆ ಹೊಡೆದನು. ಉಳಿದವರು ಕೈಯಿಂದ ಬೆನ್ನಿಗೆ ಹೊಟ್ಟೆಗೆ ಹೊಡೆದರು. ನನ್ನ ಅಳಿಯ ದತ್ತು ಇವನು ಬಿಡಿಸಿಕೊಂಡು ಚೀರಾಡುತ್ತಿರುವಾಗ ಅವರು ಅಲ್ಲಿಂದ ಹೋಗಿದ್ದು. ನನಗೆ ನನ್ನ ಅಳಿಯ ದತ್ತು ಉಪಚಾರ ಕುರಿತು ವಾತ್ಸಲ್ಯ ಆಸ್ಪತ್ರೆಗೆ ಸೇರ್ಪಡೆ ಮಾಡಿದ್ದು. ನನಗೆ ಚಾಕುವಿನಿಂದ ಹೊಡೆದ 5-6 ಜನ ಅಪರಿಚಿತರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಅಶೋಕ ನಗರ ಪೊಲೀಸ್ ಠಾಣೆ: ದಿನಾಂಕ: 02/3/2015 ರಂದು ಶ್ರೀ ಸಿ.ಎಂ. ಶಿವಕುಮಾರ ಸಹಾಯಕ ಔಷಧ ನಿಯಂತ್ರಕರು 1 ವೃತ್ತ ಗುಲಬರ್ಗಾ ರವರು ದಿನಾಂಕ 02/03/2015 ರಂದು ಸೋಮವಾರ ಬೆಳಿಗ್ಗೆ 9-30 ಕ್ಕೆ ನಮ್ಮ ಕಚೇರಿಯ ಗ್ರೂಪ್. ಡಿ. ನೌಕರರು ಕಚೇರಿಯ ಬೀಗ ತೆರೆಯಲು ಬಂದಾಗ ಎಂ.ಎಸ್.ಕೆ. ಮಿಲ್ ಕಂಫೌಂಡ ಸಿ.ಎ ನಿವೇಶ ಸಂ. 4/1 ಸರ್ವೆ ನಂ. 17  ಕಚೇರಿಯ ಮುಖ್ಯ ದ್ವಾರದ ಕೊಂಡಿ ಮುರಿದಿದ್ದು ಕಂಡು ತಕ್ಷಣ ಉಪ ಔಷಧ ನಿಯಂತ್ರಕರು ಪ್ರಾದೇಶಿಕ ಕಚೇರಿ ಹಾಗೂ ಸಹಾಯಕ ಔಷಧ ನಿಯಂತ್ರಕರುಗಳಿಗೆ ತಿಳಿಸಲಾಗಿ ತಕ್ಷಣ ಕಚೇರಿಯ ಸಿಬ್ಬಂದಿ ಹಾಗು ಸಹಾಯಕ ಔಷಧ ನಿಯಂತ್ರಕರು ಆಗಮಿಸಿ, ಪರಿಶೀಲಿಸಲಾಗಿ ಕಚೇರಿಗೆ ಸಂಬಂಧ ಪಟ್ಟ ಹೆಚ್.ಪಿ ಕಂಪನಿಯ 17 ಇಂಚ ಮಾನಿಟರ ಒಂದು ಹಾಗು ಇನ್ನೊಂದು 21 ಇಂಚಿನ ಮಾನಿಟರಗಳು ಅ.ಕಿ. 8000/- ರೂ  ಕಳವು ಮಾಡಿಕೊಂಡು ಹೋದ ಬಗ್ಗೆ ದೂರು ಸಲ್ಲಿಸಿದ್ದು ದೂರು ಸಾರಾಂಶದ ಮೇಲಿಂದ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ. 

No comments: