POLICE BHAVAN KALABURAGI

POLICE BHAVAN KALABURAGI

02 March 2015

KALABURAGI DIST REPORTED CRIME

ಕಳವು ಪ್ರಕರಣ :
ಅಶೋಕ ನಗರ ಠಾಣೆ : ದಿನಾಂಕ 28-02-2015 ರಂದು ಮುಂಜಾನೆ ವೇಳೆಗೆ ನನ್ನ ಅಣ್ಣನಾದ ಶರಣಪ್ಪಾ ಬೋಗಶೆಟ್ಟಿ ರವರು ನನಗೆ ಪೋನ ಮಾಡಿ ನಾವು ಗಂಡ ಹೆಂಡತಿ ಬ್ರಹ್ಮಕುಮಾರಿ ಓಂ ಶಾಂತಿ ಕಡೆಯಿಂದ ದೇವರ ದರ್ಶನಕ್ಕಾಗಿ ಮೌಂಟ ಅಬುಗೆ ಬಂದಿರುತ್ತೇವೆ. ಮನೆ ಕಾಯಲು ತಂಗಿಯ ಮಗನಾದ ಪ್ರಭುಲಿಂಗ ರವರಿಗೆ ಹೇಳಿ ಬಂದಿದ್ದು.  ಪ್ರಭುಲಿಂಗನು ಪೋನ ಮಾಡಿ ಮನೆ ಕಳ್ಳತನ ಆಗಿರುತ್ತದೆ ಅಂತಾ ಹೇಳಿರುತ್ತಾನೆ.  ಮನೆಗೆ ಹೋಗಿ ನೋಡುವಂತೆ ಹೇಳಿದ ಮೇರೆಗೆ ನಾನು ಸಾಯಿ ಮಂದಿರ ಹಿಂದೆ ಇರುವ ನಮ್ಮ ಅಣ್ಣನ ಪ್ಲಾಟ ನಂ 121 ಮನೆಗೆ ಬಂದು ನಮ್ಮ ತಂಗಿಯ ಮಗ ಪ್ರಭುಲಿಂಗ ರವರಿಗೆ ಕೇಳಿದಾಗ ನಮ್ಮ ಅಣ್ಣ ಶರಣಪ್ಪಾ ರವರು ದಿನಾಂಕ 25-02-2015 ರಂದು ದೇವರ ದರ್ಶನಕ್ಕಾಗಿ ಹೋಗಿದ್ದು ಎರಡು ದಿನ ರಾತ್ರಿ ಮನೆಯಲ್ಲಿ ಮಲಗಿದ್ದು, ನಿನ್ನೆ ದಿನಾಂಕ 27-02-2015 ರಂದು ರಾತ್ರಿ ವೇಳೆ ನನಗೆ ಜ್ವರ ಬರುತ್ತಿದ್ದರಿಂದ ಮಲಗಿರಲಿಲ್ಲಾ. ಮುಂಜಾನೆ ಬಂದು ನೋಡಲು ಮನೆಯ ಬಾಗಿಲ ಬೀಗ ಮುರಿದಿದ್ದನ್ನು ನೋಡಿ ಪೋನ ಮಾಡಿ ತಿಳಿಸಿರುತ್ತೇನೆ ಎಂದು ಹೇಳಿದನು.  ಆಗ ನಾವಿಬ್ಬರು ನೋಡಲು ಮನೆಯ ಹಿಂದಿನ ಬಾಗಿಲು ಬೀಗ ಮುರಿದಿದ್ದು ಮತ್ತು ಎರಡು ಬೇಡ್ ರೂಮಿನ ಬೀಗ ಮುರಿದಿದ್ದು ಅಲ್ಲದೇ ಕಪಾಟ ಮುರಿದು ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದಿದ್ದನ್ನು ನೋಡಿ ನಮ್ಮ ಅಣ್ಣ ಶರಣಪ್ಪಾ ಬೋಗಶೆಟ್ಟಿ ರವರಿಗೆ ಪೋನ ಮಾಡಿ ಮನೆ ಕಳ್ಳತನವಾಗಿರುವುದನ್ನು ತಿಳಿಸಿದ್ದೆವು  ಆಗ ಅವರು ಬೇಡ ಗಾದಿಯ ಕೆಳಗಡೆ 10,000/- ಇಟ್ಟಿದ್ದು,  ಮತ್ತು ಎರಡು ಬೇಡ ರೂಮಿನ ಅಲಮಾರಿಯಲ್ಲಿ 12-16 ತೊಲೆಯ ಬಂಗಾರದ ಆಭರಣಗಳಿರುತ್ತವೆ. ನೊಡುವಂತೆ ಹೇಳಿದಾಗ ನಾವು ನೋಡಲು  ಇರಲಿಲ್ಲಾ.  ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಹಿಂದಿನ ಮನೆಯ ಬಾಗಿಲ ಬೀಗ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ಬಂಗಾರದ ಅಂದಾಜು ಕಿಮ್ಮತ್ತು  2,50,000 ರಿಂದ 3,00,000 ರೂ ವರೆಗೆ ಇರಬಹುದು. ಅಂತಾ ಶ್ರೀ ಯೋಗಣ್ಣಗೌಡ ತಂದೆ. ಯಶವಂತಗೌಡ ಭೋಗಶೆಟ್ಟಿ ಸಾ : ಪ್ರಶಾಂತನಗರ ಎ ರಾಜಾಪೂರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೊಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಜೇವರ್ಗಿ ಠಾಣೆ : ಶ್ರೀಮತಿ ಮಹಾದೇವಿ ಗಂಡ ಯಂಕಪ್ಪ ಗೋಗಿ ಸಾ|| ಖಾದ್ಯಾಪುರ ರವರ ಮಗಳಾದ ಈರಮ್ಮ ವಯಾ 14 ವರ್ಷ ಇವಳು ದಿನಾಂಕ 28.02.2015 ರಂದು ರಾತ್ರಿ 11:00 ಗಂಟೆಗೆ ಏಕಿ ಮಾಡಲು ಮನೆಯ ಹೋರಗೆ ಬಂದಾಗ ನಮ್ಮೂರ ತಾಂಡಾದ 1) ಅನೀಲ ತಂದೆ ಸೋಮಲು ನಾಯಕ ಕಾರಬಾರಿ 2) ಜಗನ್ನಾಥ ತಂದೆ ಶಂಕರ ಕಾರಬಾರಿ ಇವರುಗಳು ನನ್ನ ಮಗಳಿಗೆ ಜಬರದಸ್ತಿಯಿಂದ ಅಪಹರಣ ಮಾಡಿಕೊಂಡು ತಮ್ಮ ಟಂಟಂ ವಾಹನದಲ್ಲಿ ಕೂಡಿಸಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 01-03-2015 ರಂದು ಮಾಡಿಯಾಳ ಗ್ರಾಮದ ಪಂಪ ಹೌಸ ಹತ್ತಿರ ಬೇವಿನ ಮರದ ಕೇಳಗೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ನಿಂಬರ್ಗಾ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ 1) ನಾಗಣ್ಣ ತಂದೆ ಶಿವಯೋಗೆಪ್ಪ ಪೂಜಾರಿ 2) ಮುಖೇಶ ತಂದೆ ಬಿಲ್ಲು ಪವಾರ 3) ಪ್ರಭು ತಂದೆ ಈರಪ್ಪ ಕವಲಗಿ 4) ಗೋವಿಂದ ತಂದೆ ಪಾಂಡು ರಾಠೋಡ 5) ತುಳಜಪ್ಪ ತಂದೆ ಬಸವಂತಪ್ಪ ಕೊಂಬಿನ 6) ರಮೇಶ ತಂದೆ ಶಂಕ್ರು ರಾಠೋಡ ಸಾ: ಮಾಡಿಯಾಳ ರವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ ರೂ 3020/- ಮತ್ತು 52 ಇಸ್ಪೀಟ ಎಲೆಗಳನ್ನು ವಶಪಡಿಸಿಕೊಂಡು ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ರಾಘವೇಂದ್ರ ನಗರ ಪೊಲೀಸ್ ಠಾಣೆ:
ದಿನಾಂಕ:01-03-2015 ರಂದು ಸಾಯಂಕಾಲ 4-00 ಗಂಟೆಗೆ ಠಾಣಾ ವ್ಯಾಪ್ತಿಯ ಕೈಲಾಸ ನಗರ ಈಶ್ವರ ಗುಡಿಯ ಹತ್ತಿರ ಸಾರ್ವಜನಿಕ ಸ್ಧಳದಲ್ಲಿ ಇಸ್ಪೇಟ್ ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಪಿ.ಎಸ್.ಐ ಠಾಘವೇಂದ್ರ ನಗರ ಠಾಣೆ ರವರು ಠಾಣೆಯ ಸಿಬ್ಬಂದಿಯೊಂದಿಗೆ ದಾಳಿಮಾಡಿ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದ 1)ರೇವಣಸಿದ್ದ @ ಸಿದ್ದು ತಂದೆ ಶರಣಪ್ಪ ಪಾಟೀಲ ಸಾ:ಶಹಾಬಜಾರ ಲಾಲ 2) ಸಿದ್ರಾಮ @ ಸಿದ್ದು ತಂದೆ ಬಸವರಾಜ ಮಸರೆ ಸಾ:ಮೋದಿ ಕಾಂಪ್ಲೇಕ್ಸ 3) ಅನಿಲ ಕುಮಾರ ತಂದೆ ಅಶೋಕ ಜಮಾದಾರ ಸಾ:ಶಿವಾಜಿ ನಗರ 4) ಶ್ರೀನಿವಾಸ ತಂದೆ ಸಿದ್ದಲಿಂಗ ಹಿರೇಮಠ ಸಾ:ಶಹಾಬಜಾರ 5) ರವಿಕುಮಾರ ತಂದೆ ಸಿದ್ರಾಮ ಪಾಟೀಲ್ ಸಾ:ಆಳಂದ ಕಾಲೋನಿ ಇವರನ್ನು ದಸ್ತಗೀರ ಮಾಡಿ ಜೂಜಾಟದ ಪಣಕ್ಕೆ ಇಟ್ಟ ನಗದು 400/-ರೂ & 52 ಇಸ್ಪೇಟ್ ಎಲೆಗಳು ಮತ್ತು  ಇಸ್ಪೇಟ್ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 4170/-ರೂ ದೊರೆತಿದ್ದು ಜಪ್ತಿ ಮಾಡಿಕೊಂಡು ಆರೋಪಿ & ಮುದ್ದೆಮಾಲಿನೊಂದಿಗೆ ಸಾಯಂಕಾಲ ಠಾಣೆಗೆ ಬಂದು ರಾಘವೇಂದ್ರ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ: ದಿನಾಂಕ 01-03-2015 ರಂದು ಶ್ರೀ  ಭಗವಂತ ತಂದೆ ಶಂಕರ ಜಮಾದಾರ ಸಾ|| ದೇವಣಗಾಂವ ಇವರು ಠಾಣೆಗೆ ಹಾಜರಾಗಿ ತಾನು ಈಗ ಸುಮಾರು ವರ್ಷಗಳಿಂದ ಅಫಜಲಪೂರ ಬಸ್ ನಿಲ್ದಾಣದಲ್ಲಿದ್ದುಕೊಂಡು ಕೂಲಿ ಕೆಲಸ ಮಾಡುತ್ತಾ ಬಸ್ ನಿಲ್ದಾಣದಲ್ಲಿಯೆ ಮಲಗುತ್ತೆನೆ. ಇಂದು ರಾತ್ರಿ 9:45 ಗಂಟೆ ಸುಮಾರಿಗೆ ಬಸ್ ನಿಲ್ದಾಣದಲ್ಲಿ ಮಲಗಿದ್ದಾಗ ಒಬ್ಬ ವ್ಯಕ್ತಿ ನನ್ನ ಹತ್ತಿರ ಬಂದು ಅವಾಚ್ಯ ಶಬ್ದಗಳಿಂಧ ಕಳ್ಳತನ ಮಾಡೊದಕ್ಕ ಬಂದಿದಿ ಎಂದು ಬೈದನು, ಆಗ ನಾನು ಸದರಿ ವ್ಯಕ್ತಿಗೆ ನಾನು ಸುಮಾರು 10-15 ವರ್ಷಗಳಿಂದ ಇಲ್ಲೆ ಇರುತ್ತೆನೆ ಇದನ್ನೆಲ್ಲಾ ಕೇಳಲು ನೀನು ಯಾರು ಅಂತಾ ಕೇಳಿದ್ದಕ್ಕೆ ಆತನು ನಾನು ಬಸ್ ಸ್ಟ್ಯಾಂಡ ವಾಚಮೇನ್ ಇದ್ದು ನನಗೆ ಯಾರು ಅಂತಾ ಕೇಳುತ್ತಿಯಾ ಮಗನೆ ಎಂದು ಅಲ್ಲಿಯೆ ಬಿದ್ದ ಒಂದು ಕಬ್ಬಿಣದ ರಾಡಿನಿಂದ ನನ್ನ ತಲೆಯ ಮೇಲೆ ಹಾಗೂ ನನ್ನ ಮೈ ಕೈಗೆ ಹೊಡೆಯ ತೊಡಗಿದನು ಆಗ ಅಲ್ಲೆ ಇದ್ದ ಕೆಲವು ಜನರು ಬಂದು ನನಗೆ ಹೊಡೆಯುದನ್ನು ಬಿಡಿಸಿರುತ್ತಾರೆ, ನನಗೆ ಹೊಡೆದ ವ್ಯಕ್ತಿ ಶರಣಪ್ಪ ತಂದೆ ಸಾಯಬಣ್ಣ ಗಾಯಕವಾಡ ಸಾ|| ಇಬ್ರಾಹಿಂಪೂರ ತಾ|| ಅಕ್ಕಲಕೋಟ ಹಾ|| || ಅಫಜಲಪೂರ ಎಂದು ಜನರಿಂದ ಗೊತ್ತಾಗಿರುತ್ತದೆ. ಸದರಿಯವನು ನನಗೆ ಹೊಡೆದರಿಂದ ನನ್ನ ತಲೆಗೆ, ಏಡಕಣ್ಣಿನ ಮೇಲೆ ರಕ್ತಗಾಯ ಹಾಗೂ ನನ್ನ ಏಡ ಮುಂಡಿಗೆ ಗುಪ್ತಗಾಯವಾಗಿರುತ್ತದೆ, ನನಗೆ ಅವಾಚ್ಯ ಶಬ್ದಗಳಿಂದ ಬೈದು ರಾಡಿನಿಂದ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿದ ಸದರಿ ಶರಣಪ್ಪ ತಂದೆ ಸಾಯಬಣ್ಣ ಗಾಯಕವಾಡ ಈತನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳಗಳಲಾಗಿದೆ.

No comments: