POLICE BHAVAN KALABURAGI

POLICE BHAVAN KALABURAGI

01 July 2014

Gulbarga District Reported Crimes

ಹಲ್ಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ  ನಗರ ಠಾಣೆ : ಶ್ರೀಮತಿ.ಶಕುಂತಲಾ ಗಂಡ ಶಿವಪುತ್ರ ಮರಡಿ ರವರು ದಿನಾಂಕಃ 30-06-2014 ರಂದು ರಾತ್ರಿ 11:30 ಪಿ.ಎಂ. ಕ್ಕೆ ನಾನು ಮನೆಯಲ್ಲಿದ್ದಾಗ, ನಮ್ಮ ಮನೆಯ ಗೇಟಿನ ಸಪ್ಪಳವನ್ನು ಕೇಳಿ ಹೊರಗೆ ಬಂದು ನೋಡಲಾಗಿ,  1) ಶ್ರೀಶೈಲ ಲಿಂಗದಳ್ಳಿ 2) ದುಂಡಪ್ಪ ತಂದೆ ಸಿದ್ರಾಮಪ್ಪ ಮರಡಿ 3) ಶಿವಾನಂದ ತಂದೆ ಸಿದ್ರಾಮಪ್ಪ ಮರಡಿ 4) ಸಾತಲಿಂಗಪ್ಪ  ತಂದೆ ಸಿದ್ರಾಮಪ್ಪ ಮರಡಿ ಇವರು ನಮ್ಮ ಮನೆಯ ಗೇಟನ್ನು ಮುರಿದಿದ ಬಗ್ಗೆ ವಿಚಾರಿಸಿದಾಗ ಎಲ್ಲಾ ನಾಲ್ಕು ಜನರು ಕೂಡಿ ನನಗೆ ಏ ಭೋಸಡಿ, ರಂಡಿ, ನಿನ್ನ ಮನೆಯಲ್ಲಿ ನಮಗೂ ಪಾಲ ಬೇಕು, ಇಲ್ಲದಿದ್ದರೆ. ನಿನ್ನ ಮತ್ತು ನಿನ್ನ ಗಂಡನ ಜೀವಸಹೀತ ಉಳಿಸುವುದಿಲ್ಲಾ ಅಂತಾ ಹೇಳಿ ನನ್ನ ಕೊರಳಿನಲ್ಲಿದ್ದ 50 ಗ್ರಾಂಮಿನ ಬಂಗಾರದ ಮಂಗಳ ಸೂತ್ರ ಅ.ಕಿ.1,40,000/-ರೂ ಬೆಲೆಬಾಳುದನ್ನು ತೆಗೆದುಕೊಂಡು ಹೊಗಿದ್ದಲ್ಲದೆ, ಕೈ ಮತ್ತು ಕಾಲುಗಳಿಂದ ಹೊಡೆ ಬಡೆ ಮಾಡಿದ್ದು, ಒಳಪೆಟ್ಟಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆಗೆ ಕಿರುಕಳ ಪ್ರಕರಣ ;
ಅಫಜಲಪೂರ ಠಾಣೆ : ಶ್ರೀಮತಿ ವಿಜಯಲಕ್ಷ್ಮೀ ಗಂಡ ಸೋಮಶೇಖರ ದಣ್ಣೂರ ಸಾ|| ಗುಡ್ಡೆವಾಡಿ ಇವರನ್ನು ತಾಯಿಯ ತಮ್ಮನಾದ ಸೋಮಶೇಖರ ದಣ್ಣೂರ ಈತನೊಂದಿಗೆ 10 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿರುತ್ತಾರೆ,  ಈಗ ಕೆಲವು ವರ್ಷಗಳಿಂದ ನನ್ನ ಗಂಡ ನನಗೆ ಮಕ್ಕಳು ಆಗಿಲ್ಲ ಅಂತಾ ನನ್ನ ಜೋತೆಗೆ ವಿನಾಕಾರಣ ಜಗಳ ತಗೆಯುತ್ತಾ ಹೊಡೆಯುವುದು ಬೈಯುವುದು ಮಾಡುತ್ತಾ ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಿದ್ದರಿಂದ ನನ್ನ ತಂದೆ ತಾಯಿ ಹಾಗೂ ನನ್ನ ಅಣ್ಣ ತಮ್ಮರು ನಮ್ಮ ಮನಗೆ ಬಂದು ನನ್ನ ಗಂಡನಿಗೆ ಬುದ್ದಿವಾದ ಹೇಳಿರುತ್ತಾರೆ, ಆದರು ನನ್ನ ಗಂಡ ನನಗೆ ಕಿರುಕುಳ ಕೊಡುತ್ತಿದ್ದರಿಂದ ಈಗ ನಾನು ಕೆಲವು ದಿನಗಳಿಂದ ನಮ್ಮ ಗ್ರಾಮದಲ್ಲಿ ಬೇರೆ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿ ಇದ್ದಿರುತ್ತೆನೆ, ಈಗ ನನ್ನ ತಾಯಿ ತಂಗೆಮ್ಮ ಇವಳು ಸಹ ನನ್ನ ಜೋತೆಗೆ ಬಂದು ಇದ್ದಿರುತ್ತಾಳೆ. ದಿನಾಂಕ 09-06-2014 ರಂದು ರಾತ್ರಿ 8:00 ಗಂಟೆ ಸಮಯಕ್ಕೆ ನನ್ನ ತಾಯಿ ತಂಗೆಮ್ಮ ಇವಳು ನನ್ನ ಗಂಡನ ಮನೆಗೆ ಕರೆದುಕೊಂಡು ಹೋಗಿ, ನನ್ನ ಗಂಡನಿಗೆ ನನ್ನ ತಾಯಿ ತಮ್ಮ ಸೋಮಶೇಖರ ಕುಡಿಯುವುದು ಬಿಟ್ಟು ನನ್ನ ಮಗಳ ಜೋತೆಗೆ ಸಂಸಾರ ಸರಿಯಾಗಿ ಮಾಡು  ಅಂತಾ ಹೇಳಿರುತ್ತಾಳೆ, ಅದಕ್ಕೆ ನನ್ನ ಗಂಡ ಸೋಮಶೇಖರ ಈತನು ಕುಡಿದು ಈ ರಂಡಿಗಿ ಮಕ್ಕಳು ಆಗಲ್ಲಾ ನಾ ಯಾಕ ಇವಳ ಜೋತೆ ಸಂಸಾರ ಮಾಡಬೇಕು ಅಂತಾ ಅಂದನು, ಆಗ ನಾನು ನೀವು ಕುಡಿಯೊದು ಬಿಡ್ರಿ, ಸಂಸಾರ ಎಲ್ಲಾ ಸರಿಯಾಗಿ ಆಗುತ್ತೆ ಅಂತಾ ಅಂದೆನು. ಆಗ ನನ್ನ ಗಂಡ ನನಗೆ ಅಲಾ ರಂಡಿ ನನಗೆ ಎದರು ಮಾತಾಡ್ತಿ ಅಂತಾ ಅಂದು ಕೈಯಿಂದ ನನ್ನ ಮೈ ಕೈಗೆ ಹೊಡೆ ಬಡೆ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶಿವಪುತ್ರಪ್ಪ  ಇವರು ಮಾತನಾಡುವ ಸ್ಥಿತಿಯಲ್ಲಿ ಇರದ ಕಾರಣ ಅವರ ಜೊತೆಯಲ್ಲಿರುವ ಹಣಮಂತ ತಂದೆ ಮಲ್ಲಪ್ಪ ರವರು ದಿನಾಂಕ:  30-06-2014 ರಂದು  ರಾತ್ರಿ  20-30 ಗಂಟೆಗೆ  ನಾನು ಮತ್ತು ಶಿವಪುತ್ರಪ್ಪ ತಂದೆ ವೀರುಪಾಕ್ಷಪ್ಪ ಹಾಗು ಸುಗಣ್ಣಾ ತಂದೆ ನಿಂಗಣ್ಣಾ ಮೂರು ಜನರು ನಮ್ಮೂರಿನಿಂದ ಗುಲಬರ್ಗಾಕ್ಕೆ ನೂಲಾ ಆಸ್ಪತ್ರೆಗೆ ಬಂದು ನನಗೆ ತೋರಿಸಿದ ನಂತರ ಸುಪರ ಮಾರ್ಕೆಟನಲ್ಲಿರುವ ಆದರ್ಶ ಮೆಡಿಕಲ ಸ್ಟೋರಕ್ಕೆ ನಡೆದುಕೊಂಡು ರಸ್ತೆ ದಾಟುತ್ತಿರುವಾಗ ಜಗತ ಸರ್ಕಲ ಕಡೆಯಿಂದ ಮೋ/ಸೈಕಲ್ ನಂ: ಕೆಎ 32 ಇಎಫ 2669 ನೇದರ ಸವಾರ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು  ಬಂದು ಶಿವಪುತ್ರ ಇವರಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ತಲೆಗೆ ಭಾರಿ ಒಳಪೆಟ್ಟು ಮತ್ತು ಮೈಯಲ್ಲಾ ಒಳಪೆಟ್ಟು ಗೊಳಿಸಿದ್ದು ಮತ್ತು  ಮೋಟಾರ ಸೈಕಲ ಸವಾರ ಆಸ್ಪತ್ರೆಯವರಿಗೆ ಬಂದು ಹೇಳದೆ ಕೇಳದೆ ಓಡಿ ಹೋಗಿರುತ್ತಾನೆ ಅಂತಾ ಶ್ರೀ ಹಣಮಂತ ತಂದೆ ಮಲ್ಲಪ್ಪ ಕರಿಗುಡ್ಡ ಸಾ: ಹಯ್ಯಾಳ (ಕೆ) ತಾ: ಶಹಾಪೂರ ಜಿ: ಯಾದಗೀರ ರವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

No comments: