POLICE BHAVAN KALABURAGI

POLICE BHAVAN KALABURAGI

01 July 2014

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ರೇವೂರ ಠಾಣೆ : ದಿನಾಂಕ 30-06-2014 ಅಂಕಲಗಾ ಗ್ರಾಮದಲ್ಲಿ ಮಲ್ಲಿಕಾರ್ಜುನ ದೇವಾಲಯದ ಮುಂದಿನ ಸಾರ್ವಜನಿಕ ರಸ್ತೇಯ ಮೇಲೆ ಹೊಗಿ ಬರುವ ಜನರನ್ನು ಕೂಗಿ ಕರೆದು ಇದು ಕಲ್ಯಾಣ ಮಟಕಾ 1 ರೂ 80 ರೂ ಅಂತ ಕರೆದು ಮಟಕಾ ನಂ ಬರೆದು ಕೊಳ್ಳುತಿದ್ದ  ಮಲಕಪ್ಪಾ ತಂದೆ ಶರಣಪ್ಪಾ ಪೂಜಾರಿ ಸಾ:ಅಂಕಲಗಿ ಈತನ್ನು ಪಂಚರ  ಸಮಕ್ಷಮ ವಶಕ್ಕೆ ಪಡೇದು ಅವನಿಂದ 825 ರೂ ಹಾಗು 1 ಮಟಕಾ ನಂ ಬರೇದ ಚಿಟಿ ಮತ್ತು ಒಂದು ಬಾಲ್ ಪೆನ್ನನ್ನು ವಶಪಡಿಸಿಕೊಂಡು ಠಾಣೆಗೆ ತಂದು ಸದರಿಯವನ ವಿರುದ್ಧ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ರೇವೂರ ಠಾಣೆ : ದಿನಾಂಕ: 30/06/52014 ರಂದು ಬೆಳಿಗ್ಗೆ 09-00 ಗಂಟೆಗೆ ಇನಾಮಿ ಜಮೀನು ಪಟ್ಟಿ ಹೊಲಕ್ಕೆ ಹೋಗುವ ದಾರಿಯಲ್ಲಿ ಬಸವರಾಜ ಕಟ್ಟಿಮನಿ, ಭೀಮಶಾ ತಂದೆ ಯಲ್ಲಪ್ಪ ಸಾಗರ, ಚೌಡಪ್ಪ ತಂದೆ ಶಂಕ್ರೇಪ್ಪ ಅಜ್ಜುಣಗಿ ಇವರುಗಳು ಹೊಲಕ್ಕೆ ಹೋಗುತ್ತಿದ್ದಾಗ, ನಾನು ಬಸವರಾಜ ಕಟ್ಟಿಮನಿ ಈತನಿಗೆ ನಮಗೆ ಕೊಟ್ಟ ಹೋಲ ಬೇರೆಯವರಿಗೆ ಮಾರಾಟ ಮಾಡಿ ರಜಿಸ್ಟರ್ ಮಾಡಿದಿಯಂತೆ ಅಂತ ಕೇಳಿದ್ದಕ್ಕೆ  ಆರೊಪಿತರಾದ ಬಸವರಾಜ ಚೌಡಪ್ಪಾ ಹಾಗು ಭಿಮಶ್ಯಾ ಇವರು ಗಳು ಕೊಡಲಿ ಕಾವಿನಿಂದ ಹೊಡೆದು ರಕ್ತ ಗಾಯ ಗೊಳಿಸಿ ಅವಚ್ಯಾವಗಿ ಬೈದಿರುತ್ತಾರೆ ಅಂತಾ ಶ್ರೀಮತಿ ಹೊನ್ನಮ್ಮ ಗಂಡ ಕಾಳಪ್ಪಾ ಸಾ : ಇಂಗಳಗಿ ಇವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಆಳಂದ ಠಾಣೆ : ದಿನಾಂಕ 22-05-2014 ರಂದು ಮದ್ಯಾಹ್ನ 2 ಗಂಟೆ ಸುಮಾರಿಗೆ ನೀರಿನ ಕ್ಯಾನ ಸರಬರಾಜು ಮಾಡುವ ಧನಗರ ಗಲ್ಲಿಯ ಮದು ತಂದೆ ಶರಣಪ್ಪ ಪುಜಾರಿ ಈತನ ಮಹೇಂದ್ರ ಮ್ಯಾಜಿಕ್‌ ಗೊಡ್ಸ ವಾಹನ ನಂ ಕೆಎ 32 ಬಿ 7156 ನೇದ್ದರಲ್ಲಿ ಕುಳಿತು ಹೆಬಳಿ ರೋಡಿನ ಕಡೆಗೆ ಪೊಲೀಸ ಠಾಣೆಯ ಮುಂದಿನ ರೋಡಿನಿಂದ ಹೋಗುವಾಗ ಹೆಬಳಿ ರೋಡಿಗೆ ಇರುವ ಮಜಿದ ಹತ್ತಿರ ಹೋಗುತ್ತಿದ್ದಂತೆ ಸದರಿ ಚಾಲಕನು ತನ್ನ ವಾಹನ ಅತಿವೇಗದಿಂದ ಹಿಂದೆ ಬಾಡಿಯಲ್ಲಿ ಕುಳಿತ ನಾನು ಬ್ರೇಕಿನ ಹೊಡೆತಕ್ಕೆ ರೋಡಿನ ಮೇಲೆ ತಲೆಕೆಳಗಾಗಿ ಬಿದ್ದೆನು. ಸದರಿ ವಾಹನದ ಟೇಲಬೋಲಟ ಮುಚ್ಚಿರದೆ ಹಾಗೆ ಇದ್ದುದರಿಂದ ನನ್ನ ಕುತ್ತಿಗೆಗೆ ತಲೆಗೆ ಗುಪ್ತಗಾಯವಾಗಿ ಬಲಕೀವಿಯಿಂದ ರಕ್ತ ಬರುತ್ತಿದ್ದು ಅವಾಗ ಅಲ್ಲಿಯೇ ಹೊಗುತ್ತಿದ್ದ ನನಗೆ ಪರಿಚಯದ ಫಿರ್ದೋಶ ಅನ್ಸಾರಿ ಹಾಗು ಅಯ್ಯುಬ ಅನ್ಸಾರಿ ಸಾ: ನ್ಯೂ ಅನ್ಸಾರಿ ಮೊಹಲ್ಲಾ ಆಳಂದ ಇವರು ಎಬ್ಬಿಸಿ ನನ್ನ ಕೈ ಕಾಲು ಸರಿಯಾಗಿ ಮೇಲೆ ಏಳದೆ ಸುಂದ ಸುಸ್ತ ಆಗಿದ್ದು ನನಗೆ ಉಪಚಾರ ಕುರಿತು ಯಾವದೋ ಒಂದು ವಾಹನದಲ್ಲಿ ಹಾಕಿಕೊಂಡು ಸರಕಾರಿ ದವಾಖಾನೆ ಆಳಂದಕ್ಕೆ ತಂದು ಸೇರಿಕೆ ಮಾಡಿದ್ದು ದಿನಾಂಕ 22-05-2014 ರಂದು 14:00 ಗಂಟೆಗೆ ರಸ್ತೆ ಅಪಘಾತದಲ್ಲಿ ಗಾಯಹೊಂದಿದ ಸಮೀರ ತಂದೆ ಸೈಪನ ಹಂಗರಗಿ ಸಾ; ನೂರಾನಿ ಮೊಹಲ್ಲಾ ಆಳಂದ ಇತನಿಗೆ ಹೆಚ್ಚಿನ ಉಪಚಾರ ಕುರಿತು ಅದೆ ದಿವಸ ಸೋಲಾಪೂರದ ಗಂಗಾಮೈಯಿ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿದ್ದು ಸದರಿಯವನು ಉಪಚಾರ ಹೊಂದುತ್ತಾ ದಿನಾಂಕ 30-05-2014 ರಂದು 5:30 ಗಂಟೆಗೆ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಅಶೋಕ ತಂದೆ ಹುಲೇಪ್ಪಾ ಕಲ್ಲೂರ ಸಾ|| ಅಳ್ಳಗಿ(ಕೆ) ರವರು ದಿನಾಂಕ 14-062014 ರಂದು 2 ಪಿಎಮ್ ಕ್ಕೆ  ಗೆಳೆಯರಾದ ಭೋಗಣ್ಣ ಪೂಜಾರಿ, ಮತ್ತು ಮಹ್ಮದ್ ಹನಿಫ್ ಮೂರು ಜನ ಕೂಡಿಕೊಂಡು ಅಫಜಲಪೂರದ ಸೊನ್ನ ಕ್ರಾಸ ಹತ್ತಿರ ಇರುವ  ಎಮ್ ಜಿ ಎಮ್ ದಾಬಾ ಹತ್ತಿರ ತಮ್ಮ ಹೊಂಡಾ ಶೈನ್ ಮೋ ಸೈ ನಂ ಏ-51 ಕ್ಯೂ-7557 ನೇದ್ದನ್ನು ನಿಲ್ಲಿಸಿ ದಾಬಾದಲ್ಲಿ ಊಟಕ್ಕೆ ಹೋಗಿ ಮರಳಿ ಬಂದು ನೋಡುವಷ್ಟರಲ್ಲಿ ಫಿರ್ಯಾದಿ ಮೋ ಸೈಕಲ್ಲನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಸದರಿ ಮೋ ಸೈ  ಅ ಕಿ 30,000/- ರೂ ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮೋಸ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಚಂದವ್ವ ತಂದೆ ಮಾದರಪ್ಪ ಹರಿಜನ ಸಾ: ಸಿದ್ದನೂರ ತಾ : ಅಫಜಲಪೂರ ರವರ ತಂದೆಗೆ ಎರಡುಜನ ಹೆಂಡಂದಿರಿದ್ದು, ನಮ್ಮ ತಾಯಿಗೆ ನಾವು 5 ಜನ ಹೆಣ್ಣು ಮಕ್ಕಳಿದ್ದು ಎಲ್ಲರ ಮದುವೆಯಾಗಿದ್ದು, ನಾನು ಮದುವೆ ಆಗಿರುವುದಿಲ್ಲ. ನಮ್ಮ ತಂದೆಯ ಎರಡನೆ ಹೆಂಡತಿಗೆ 4 ಜನ ಮಕ್ಕಳಿದ್ದು, 1] ಶಾಂತಾಬಾಯಿ, 2] ಮಾಪಣ್ಣ, 3] ಮಹಾದೇವಿ, 4] ಸಖುಬಾಯಿ ಅಂತಾ ಇರುತ್ತಾರೆ. ಸಿನ್ನೂರ ಸೀಮೇಯಲ್ಲಿ ನಮ್ಮ ಪಿತ್ರಾರ್ಜಿತ ಆಸ್ತಿ 10 ಎಕರೆ 18 ಗುಂಟೆ ಜಮೀನು ಇದ್ದು, ಅದರ ಸರ್ವೇ ನಂ 95/1 ಇರುತ್ತದೆ. ಅದರಲ್ಲಿ 5 ಎಕರೆ 9 ಗುಂಟೆ ಜಮೀನು ನನ್ನ ಹೆಸರಿಗೆ ಮತ್ತು ಉಳಿದ 5 ಎಕರೆ 9 ಗುಂಟೆ ಜಮೀನು ನನ್ನ ಎರಡನೆ ತಾಯಿ ಮಗನಾದ ಮಾಪಣ್ಣನ ಹೆಸರಿಗೆ ಜಂಟಿಯಾಗಿ ಇರುತ್ತದೆ. ಸುಮಾರು 20 ವರ್ಷಗಳಿಂದ ಸದರಿ ನನ್ನ ಪಾಲಿಗೆ ಇದ್ದ ಹೊಲವನ್ನು ಮಾಪಣ್ಣನಿಗೆ ಪಾಲಿಗೆ ಮಾಡಲು ಕೊಟ್ಟಿರುತ್ತೇನೆ. ಸುಮಾರು 3 ವರ್ಷದ ಹಿಂದೆ ಮಾಪಣ್ಣನು ತನ್ನ ಹೆಂಡತಿ ಕೊಲೆ ಕೇಸಿನಲ್ಲಿ ಜೇಲಿಗೆ ಹೋಗಿದ್ದು, ಇಲ್ಲಿಯವರೆಗೆ ಜೇಲಿನಲ್ಲೇ ಇದ್ದಿರುತ್ತಾನೆ. ಕಳೆದ ತಿಂಗಳಲ್ಲಿ ನಾನು ಮತ್ತು ನಮ್ಮ ಅಕ್ಕನ ಮಗನಾದ ದತ್ತಪ್ಪ ತಂದೆ ಹಸನಪ್ಪ ಕಾಂಬಳೆ ರವರು ಕೂಡಿಕೊಂಡು ಅಫಜಲಪೂರ ತಹಸೀಲ್ ಆಪೀಸಿಗೆ ಹೋಗಿ ನಮ್ಮ ಹೊಲದ ಪಹಣಿ ತೆಗೆದುಕೊಂಡು ನೋಡಲಾಗಿ ಅದರಲ್ಲಿ ನನ್ನ ಹೆಸರು ಇರಲಿಲ್ಲ. ಅದರಲ್ಲಿ ಅಬೇದಾಬೆಗಂ ಗಂಡ ಇಮಾಮಸಾಬ ದೇವರಮನಿ ರವರ ಹೆಸರು ಇರುತ್ತದೆ. ನಂತರ ನಾವು ಉಪ ನೊಂದಣಾಧಿಕಾರಿ ರವರ ಕಚೇರಿಗೆ ಹೋಗಿ ನಮ್ಮ ಹೊಲಕ್ಕೆ ಸಂಬಂಧಿಸಿದ ದಾಖಲಾತಿಗಳು ಪಡೆದುಕೊಂಡು ನೋಡಲಾಗಿ ನಮ್ಮ ಹೊಲ ಸರ್ವೇ ನಂ 95/1 ನೇದ್ದರಲ್ಲಿ 5 ಎಕರೆ 9 ಗುಂಟೆ ಜಮೀನನ್ನು ದಿನಾಂಕ 07-05-2012 ರಂದು ನಾನೆ ಚಂದವ್ವ ಅಂತಾ ನಮ್ಮ ಎರಡನೆ ತಾಯಿ ಮಗಳಾದ ಶಾಂತಾಬಾಯಿ ಗಂಡ ಹುಚ್ಚಪ್ಪ ನಾಟೀಕಾರ ಸಾ|| ಹಳ್ಯಾಳ ರವರು ನನ್ನಂತೆ ನಟಿಸಿ ಸರುಬಾಯಿ ಗಂಡ ಚಂದ್ರಕಾಂತ ಸಾಲುಟಗಿ ಸಾ|| ಅಳ್ಳಗಿ (ಬಿ) ರವರಿಗೆ ಮಾರಾಟ ಮಾಡಿರುತ್ತಾರೆ. ನಂತರ ಅದೇ ಹೊಲವನ್ನು ಸದರಿ ಸರುಬಾಯಿ ಗಂಡ ಚಂದ್ರಕಾಂತ ಸಾಲುಟಗಿ ರವರು ಅಬೇದಾಬೆಗಂ ಗಂಡ ಇಮಾಮಸಾಬ ದೇವರಮನಿ ಸಾ|| ಬಂಕಲಗಿ ರವರಿಗೆ ದಿನಾಂಕ 29-04-2014 ರಂದು ಮಾರಾಟ ಮಾಡಿರುತ್ತಾರೆ. ಈ ವಿಷಯವನ್ನು ಸದರಿ ಶಾಂತಾಬಾಯಿ ನಾಟೀಕಾರ ಇವಳಿಗೆ ವಿಚಾರಿಸಿದಾಗ ನಾವು ನಿನ್ನ ಹೊಲವನ್ನು ಮೋಸದಿಂದ ಮಾರಿರುತ್ತೇವೆ ಏನ ಮಾಡಕೋತಿ ಮಾಡಕೋ ಅಂತಾ ಅಂದಳು. ಸದರಿ ಶಾಂತಾಬಾಯಿ ಗಂಡ ಹುಚ್ಚಪ್ಪ ನಾಟೀಕಾರ ಇವಳು ದಿನಾಂಕ 07-05-2012 ರಂದು ತನ್ನ ಗಂಡ ಹುಚ್ಚಪ್ಪ ಹಾಗು ತನ್ನ ಮಗ ಜಗದೀಶ ಮತ್ತು ಮೇಲ್ಕಂಡ ಲಕ್ಷ್ಮಣ ಭಂಕದ ಹಾಗು ಶಿವಾನಂದ ಸಕ್ಕರಗಿ ರವರ ಸಹಾಯದಿಂದ ನಾನೆ ಚಂದವ್ವ ಅಂತಾ ನನ್ನಂತೆ ನಟಿಸಿ ಪ್ರತಿರೂಪ ಧಾರಣೆ ಧರಿಸಿ ಪೋಟೊ ತಗೆಯಿಸಿಕೊಂಡು ಸುಳ್ಳು ದಾಖಲಾತಿಗಳು ಸೃಷ್ಠಿಸಿ ಮೋಸದಿಂದ ನನ್ನ ಹೆಸರಿಗೆ ಇದ್ದ ಹೊಲ ಸರ್ವೆ ನಂ 95/1 ನೇದ್ದು ಅದರಲ್ಲಿ ವಿಸ್ತೀರ್ಣ 5 ಎಕರೆ 9 ಗುಂಟೆ ಜಮೀನನ್ನು ಸರುಬಾಯಿ ಸಾಲುಟಗಿ ಸಾ|| ಅಳ್ಳಗಿ (ಬಿ) ರವರಿಗೆ ಮಾರಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: