POLICE BHAVAN KALABURAGI

POLICE BHAVAN KALABURAGI

24 June 2014

Gulbarga District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ರವಿಕುಮಾರ ತಂದೆ ಶಿವರಾಜ ಪಾಟೀಲ್ ಸಾ:ಉಪಳಾಂವ ತಾ|| ಜಿ|| ಗುಲಬರ್ಗಾ ರವರ ತಂದೆಯವರು  ದಿನಾಂಕ: 23-06-2014 ರಂದು ಬೆಳಿಗ್ಗೆ 5-30 ಗಂಟೆಯ ಸುಮಾರಿಗೆ ತನ್ನ ತಂದೆ ಶಿವರಾಜ ಪಾಟೀಲ್ ಇವರು ಕೆಲಸಕ್ಕೆಂದು ತಮ್ಮ ಹೊಂಡಾ ಪ್ಲೇಜರ್ ಸ್ಕೂಟಿ ಮೊಪೆಡ್ ನಂ: ಕೆಎ-32-ಆರ್ 7535 ನೇದ್ದರ ಮೇಲೆ ಮನೆಯಿಂದ ಒಬ್ಬರು ಹೋದರು. ನಂತರ 6-10 ,ಎಮಕ್ಕೆ ಸಂಜೀವಕುಮಾರ ಅಟ್ಟೂರೆಂಬುವವನು ನನ್ನ ತಂದೆಯ ಮೊಬೈಲದಿಂದ ಮಾಹಿತಿ ತಿಳಿಸಿದ್ದೇನೆಂದರೆ, ಹುಮ್ನಾಬಾದ ರಿಂಗ ರೋಡ ಹತ್ತೀರ ನಿಮ್ಮ ತಂದೆಯವರಿಗೆ ಅಪಘಾತವಾಗಿರುತ್ತದೆ. ಬೇಗ ಬಾ ಅಂತಾ ಹೇಳಿದನು. ಆಗ ಗಾಬರಿಗೊಂಡು ನಾನು ಹುಮ್ನಾಬಾದ ರಿಂಗ ರೋಡ ಹತ್ತೀರ ಬಂದು ನೋಡಲು ನನ್ನ ತಂದೆಗೆ ತಲೆಯ ಹಿಂದುಗಡೆ ಎಡಭಾಗದಲ್ಲಿ ಭಾರಿ ರಕ್ತಗಾಯವಾಗಿರುತ್ತೆ, ಆಗ ನನ್ನ ತಂದೆಗೆ ವಿಚಾರಿಸಲು ಊರಿಂದ ಹೋಟಲ್ಗೆ ಹೋಗುವಾಗ ಹುಮ್ನಾಬಾದ ರಿಂಗ ರೋಡದಿಂದ ಗಂಜನ ಕಡೆ ಹೋಗುವಾಗ ಅದೇ ವೇಳೆಗೆ ಸೇಡಂ ರಿಂಗ ರೋಡ ಕಡೆಯಿಂದ ಒಂದು ಲಾರಿ ಚಾಲಕ ತನ್ನ ಲಾರಿಯನ್ನು ಅತಿ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದು ಇರುತ್ತದೆ. ಅಂತಾ ಹೇಳಿದರು. ನೋಡಲಾಗಿ ಅವರಿಗೆ ತಲೆಯ ಹಿಂದುಗಡೆ ಎಡಭಾಗದಲ್ಲಿ ಭಾರಿ ರಕ್ತಗಾಯ, ಎದೆಗೆ ,ಟೊಂಕಕ್ಕೆ ಗುಪ್ತ ಪಟ್ಟಾಗಿದ್ದು, ಹಣೆಗೆ , ಮೂಗಿಗೆ ಗಲ್ಲಕ್ಕೆ ತರಚಿದ ಗಾಯಗಳಾಗಿದ್ದವು. ನೋಡಲಾಗಿ ಅಪಘಾತ ಪಡಿಸಿದ ಲಾರಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಅದರ ನಂ: ನೋಡಲಾಗಿ ಎಪಿ-21 ಟಿವೈ 3159 ನೇದ್ದು ಇರುತ್ತದೆ ನನ್ನ ತಂದೆಯವರಿಗೆ ಉಪಚಾರ ಕುರಿತು 108 ಅಂಬುಲೇನ್ಸದಲ್ಲಿ ಬಸವೇಶ್ಚರ ಆಸ್ಪತ್ರೆ ಗುಲಬರ್ಗಾದಲ್ಲಿ ಸೇರಿಕೆ ಮಾಡಿದ್ದು, ಉಪಚಾರದಲ್ಲಿ ಗುಣಮುಖನಾಗದೆ 7-30 ,ಎಮಕ್ಕೆ ಮೃತ ಪಟ್ಟಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಾಹಾಗಾಂವ ಠಾಣೆ : ಶ್ರೀ ಕುಬೇರ ತಂದೆ ದೇವಿಂದ್ರಪ್ಪ ಗಡೆದ್ ಸಾ|| ಬೋಧನ ವಾಡಿ ತಾ|| ಆಳಂದ ರವರು ದಿನಾಂಕ: 23.06.2014 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ತಮ್ಮೂರಿನಿಂದ ಕ್ರೋಜರ್ ಜೀಪ ನಂ: ಕೆಎ-32-ಬಿ-2916 ನೇದ್ದರಲ್ಲಿ ತಾನೂ & ತನ್ನ ಹೆಂಡತಿ ಶಿವಲೀಲಾ ಮಗ ಶರಣು ಹಾಗೂ ಶಿವಾನಂದ , ಪ್ರೇಮಾ ಮತ್ತು ಹೆಂಡತಿಯ ತಂಗಿಯ ಮಗ ಮಲ್ಲಿಕಾಜುF@ ಅಪ್ಪು ತಂದೆ ಶರಣಬಸಪ್ಪ ಬಿರಾದಾರ ಸಾ|| ಹಿರೇನಾಗಾಂವ ಇವರೊಂದಿಗೆ ಬಂದು ಕುಪೇಂದ್ರ ರೂಳೆ ಇವರ ಮಗನ ತೋಟ್ಟಿಲು ಕಾರ್ಯಕ್ರಮ ಮುಗಿಸಿಕೊಂಡು ಮರಳಿ ತಮ್ಮೂರಿಗೆ ಹೋಗುವ ಸಂಬಂಧ ಸದರ್ ಕ್ರೂಜರದಲ್ಲಿ ಹೊರಟು ಸಾಯಂಕಾಲ ಕೂರಿಕೋಟಾ ಗ್ರಾಮದಿಂದ ಸಿರಾಗಾಪೂರ ದೇವಿ ಗೂಡಿಯ ಹತ್ತೀರ ಅಲ್ಲಿ ದೇವಿಯ ದಶFನ ಮಾಡುವ ಸಂಬಂಧ ಎಲ್ಲರೂ ಇಳಿದು ಕ್ರೂಜರನ್ನು ಬಬಲಾದ ರೋಡಿನ ಕಡೆ ನಿಲ್ಲಿಸಿ ದೇವರಿಗೆ ಹೋಗಿ ದರ್ಶನ ಮಾಡಿ ಮರಳಿ ಸದರ್ ಕ್ರೂಜರ್ದಲ್ಲಿ ಕುಳಿತುಕೊಂಡು ಹೋಗುವ ಸಂಬಂಧ ರೋಡಿನ ಬದಿಯಲ್ಲಿ ಮಲ್ಲಿಕಾರ್ಜುನ ಬಿರಾದಾರ ನಿಂತಾಗ ಅಂದಾಜು ಸಾಯಂಕಾಲ 4 ಗಂಟೆ ಸುಮಾರಿಗೆ ಗುಲಬರ್ಗಾ ಕಡೆಯಿಂದ ಒಂದು ಬಜಾಜ ಡಿಸ್ಕವರಿ ಮೋ.ಸೈ ನಂ: ಕೆಎ-32-ಇಇ-4163 ನೇದ್ದರ ಚಾಲಕನು ತನ್ನ ಮೋ.ಸೈ ಅನ್ನು ಅತಿ ವೇಗ ಮತ್ತು ನಿಸ್ಕಾಳಿಜಿತನದಿಂದ ಚಲಾಯಿಸಿಕೊಂಡು ಬಂದವನೆ ರೋಡಿನ ಬದಿಗೆ ನಿಂತ ಮಲ್ಲಿಕಾರ್ಜುನನಿಗೆ ಡಿಕ್ಕಿ ಹೊಡೆದಿದ್ದರಿಂದ ಅವನ ಬಲ ಮೇಲಕಿನ ಗಲ್ಲದ ವರೆಗೆ ಭಾರಿ ಕಂದು ಗಟ್ಟಿದ ರಕ್ತಗಾಯವಗಿದ್ದು ಬಲಗೈ ಮೊಳಕೈ ಮೇಲೆ ತರಚಿದ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ, ತನಿಗೆ ಉಪಚಾರ ಕುರಿತು ನಾವೂ ತೆಗೆದುಕೊಂಡು ಬಂದ ಕ್ರೂಜರ್ದಲ್ಲಿ ಹಾಕಿಕೊಂಡು ಬಂದು 5-30 ಪಿ,ಎಂಕ್ಕೆ ಜಿಲ್ಲಾ ಸಕಾವರಿ ಆಸ್ಪತ್ರೆ ಗುಲಬರ್ಗಾದಲ್ಲಿ ಸೇರಿಕೆ ಮಾಡಲು ಮಲ್ಲಿಕಾಜುFನ ಈತನು ಮೃತ ಪಟ್ಟ ಬಗ್ಗೆ ವೈದ್ಯರು ತಿಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀಮತಿ ಕಲಾವತಿ ಗಂಡ ಬಸವರಾಜ ಅಳ್ಳಗಿ ಸಾ : ಮಣ್ಣುರ ರವರ ಗಂಡನಾದ ಬಸವರಾಜ ರವರು ನಮ್ಮ ಗ್ರಾಮದಲ್ಲಿ ಒಂದು ಜಾಗ ಕರೀದಿ ಮಾಡಿರುತ್ತಾರೆ, ಸದರಿ ಜಾಗವನ್ನು ನಮ್ಮ ಹೆಸರಿಗೆ ಮಾಡಿಕೊಳ್ಳಬೇಕು ಎಂದು ನಮ್ಮ ಯಜಮಾನರು ಈಗ ಕೆಲವು ದಿನಗಳ ಹಿಂದೆ ನಮ್ಮ ಮಣೂರ ಗ್ರಾಮದ ಗ್ರಾಮ ಪಂಚಾಯತ  ಕಾರ್ಯಾಲಯಕ್ಕೆ ಹೋಗಿ ಪಿ.ಡಿ. ರವರಿಗೆ ನಾನು ಒಂದು ಜಾಗಾ ಕರೀದಿ ಮಾಡಿದ್ದು, ಸದರಿ ಜಾಗಾವನ್ನು ನನ್ನ ಹೆಸರಿಗೆ ಮಾಡಿ ಅಂತಾ ಅಂದೆನು, ಆಗ ಸದರಿ ಪಿ.ಡಿ. ರವರು ಗ್ರಾಮ ಪಂಚಾಯತ ಅದ್ಯಕ್ಷರಾದ ರಮೇಶ ಬಾಕೆ ರವರಿಗೆ ಕೇಳುತ್ತೆನೆ ಅಂತಾ ಅಂದರು, ಆಗ ನನ್ನ ಗಂಡ ಅವರಿಗೆ ಯಾಕ ಕೇಳುತ್ತಿರಿ ನಿಮ್ಮ ಕೆಲಸ ನೀವು ಮಾಡಿ ಅಂತ ಹೇಳಿರುತ್ತಾರೆ, ಹಿಗಿದ್ದು ನಿನ್ನೆ ದಿನಾಂಕ 22-06-2014 ರಂದು ಬೆಳಿಗ್ಗೆ 9:00 ಗಂಟೆ ಸಮಯಕ್ಕೆ ನಾನು ಮತ್ತು ನನ್ನ ಗಂಡ ಮನೆಯಲ್ಲಿದ್ದಾಗ ನನ್ನ ಗಂಡನ ಮೋಬೈಲಿಗೆ ರಮೇಶ ಬಾಕೆ ಇವರು ಪೋನ ಮಾಡಿ ಏನೊ ಸೂಳೆ ಮಗನೆ ಗ್ರಾಮ ಪಂಚಾಯತಿಯಲ್ಲಿ ನನಗ ಏನು ಬೈದ ಬಂದಿ ಅಂತಾ ಅವಾಚ್ಯವಾಗಿ ಬೈದು, ನಿಂದು ತಿಂಡಿ ಇದ್ದರೆ ಶಿವೂರ ಕ್ರಾಸಿಗೆ ಬಾ, ನಿನ್ನನ್ನು ಒಂದು ಕೈ ನೊಡಿಕೊಳ್ಳುತ್ತೆನೆ ಅಂತಾ  ಹೇಳಿರುತ್ತಾರೆ ಅಂತಾ ನನ್ನ ಗಂಡ ನನಗೆ ತಿಳಿಸಿರುತ್ತಾರೆ, ನಂತರ ನನ್ನ ಗಂಡ ಶಿವೂರ ಕ್ರಾಸಿಗೆ ಹೋಗಿ ಬರ್ತಿನಿ ಅಂತಾ ಹೇಳಿ, ನನ್ನ ಗಂಡ ಹಾಗೂ ಬಸವರಾಜ ಮಾಹಾದೇವಪ್ಪ ಕರೂಟಿ, ಮಾಹಾಂತೇಶ ತಂದೆ ಚಂದಪ್ಪ ವಾಯಿ ಮೂರು ಜನರು ಸೇರಿ ನಮ್ಮ ಬೋಲೆರೊ ವಾಹನದಲ್ಲಿ ಮನೆಯಿಂದ ಹೋಗಿರುತ್ತಾರೆ, ನಂತರ ನನ್ನ ಗಂಡ ಅಂದಾಜು 11:00 ಎಮ್ ಗಂಟೆ ಸಮಯಕ್ಕೆ ನನಗೆ ಫೋನ ಮಾಡಿ ತಿಳಿಸಿದ್ದೆನೆಂದರೆ, ನಾವು ಮೂರು ಜನರು ಶಿವೂರ ಕ್ರಾಸ ದಾಟಿ ಕರಜಗಿ ಕಡೆಗೆ ಬರುತ್ತಿದ್ದಾಗ, ಮನೋಹರ ರಾಮನಗರ ರವರ ಇಟ್ಟಂಗಿ ಬಟ್ಟಿ ಹತ್ತಿರ ಅಂದಾಜು 10:30 ಎಎಮ್ ಸುಮಾರಿಗೆ ರೋಡಿನ ಮೇಲೆ ರಮೇಶ ಬಾಕೆ ರವರು ಗೌಡಪ್ಪಗೌಡ ತಂದೆ ಸಿದ್ದಪ್ಪ ಚಿಕ್ಕಮಣೂರ ಹಾಗೂ ಶಾಹುರಸಿದ್ದ ಜಮಾದಾರ ಇವರೊಂದಿಗೆ ನಿಂತುಕೊಂಡಿದ್ದರು, ನಾವು ಸಹ ನಮ್ಮ ಬೊಲೆರೊ ನಿಲ್ಲಿಸಿ ಅವರ ಹತ್ತಿರ ಹೋಗಿ ರಮೇಶ ಬಾಕೆ ರವರಿಗೆ ಯಾಕ್ರಿ ಸಾಹುಕಾರ ಬರೊದಕ್ಕೆ  ಹೇಳಿರಲ್ಲಾ ಯಾಕ ಅಂತಾ ಕೇಳಿದೆನು, ನಾನು ಕೇಳುತ್ತಿದ್ದಂತೆ ಸಾಹುಕಾರ ಇವರ ಜೋತೆಗೆ ನಿಂತಿದ್ದ ಗೌಡಪ್ಪ ಚಿಕ್ಕಮಣೂರ ಮತ್ತು ಶಾಹುರಸಿದ್ದ ಜಮಾದಾರ ಇಬ್ಬರು ನನಗೆ ಏಕಾಏಕಿ ಕೈಯಿಂದ ಮತ್ತು ಅಲ್ಲಿಯೆ ಬಿದ್ದ ಒಂದು ಕಲ್ಲಿನಿಂದ ನನ್ನ ಮೈ ಕೈಗೆ ಹೊಡೆದಿರುತ್ತಾರೆ, ಶಾಹುರಸಿದ್ದ ಈತನು ನನಗೆ ಎಲ್ಲಿಯೂ ಹೋಗದಂತೆ ಗಟ್ಟಿಯಾಗಿ ಹಿಡಿದುಕೊಂಡನು, ನಂತರ ಗೌಡಪ್ಪ ಈತನು ನನ್ನ ಮೈ ಕೈಗೆ ಹೊಡೆದಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕಮಲಾಪೂರ ಠಾಣೆ : ಶ್ರೀ ರಾಜಶೇಖರ ತಂದೆ ಮಹಾದೇವಪ್ಪ ಶರಣ ಸಾ; ಜೇರಪೇಡ ಹುಮನಾಬಾದ ತಾ; ಹುಮನಾಬಾದ ಜಿ; ಬೀದರ ರವರ ತಂಗಿಯಾದ ಸುನೀತಾ ಇವಳಿಗೆ ಈಗ 14 ವರ್ಷದ ಹಿಂದೆ ಡೊಂಗರಗಾಂವ ಗ್ರಾಮದ ರವಿ ತಂದೆ ರಾಚಪ್ಪ ವಡ್ಡನಕೇರಿ ಇವರಿಗೆ ಕೊಟ್ಟು ಲಗ್ನ ಮಾಡಿದ್ದು, ಅವರಿಗೆ ಮೂರು ಜನ ಗಂಡ ಮಕ್ಕಳು ಇರುತ್ತಾರೆ. ನಮ್ಮ ಭಾವನ ತಮ್ಮ ಕುಪೇಂದ್ರ ಅಂತ ಇದ್ದು, ಆತನು ತನ್ನ ಖಾಸಾ ಅಕ್ಕ ಮಲ್ಲಮ್ಮಳ ಮಗಳಾದ ಸುಧಾ ಇವಳೊಂದಿಗೆ ಲಗ್ನ ಮಾಡಿಕೊಂಡಿರುತ್ತಾರೆ. ಈಗ 5 - 6 ವರ್ಷದ ಹಿಂದೆ ಅವರು ಬೇರೆ ಬೇರೆಯಾಗಿದ್ದು, ಬೇರೆಯಾಗುವ ಕಾಲಕ್ಕೆ ಕೆಜಿಬಿ ಬ್ಯಾಂಕಿನಲ್ಲಿರುವ ಕ್ರಾಪ್ ಲೋನ್ ಸಂಭಂದಪಟ್ಟವರು ಕಟ್ಟುವಂತೆ ಮಾತುಕತೆಯಾಗಿದ್ದು ಇರುತ್ತದೆ. ಈಗ ಕೆಲವು ದಿವಸಗಳಿಂದ ಕೆಜಿಬಿ ಬ್ಯಾಂಕಿನವರು ಕ್ರಾಪ್ ಲೋನ ತುಂಬಾ ಹಳೆಯದಿರುವದರಿಂದ, ಅದನ್ನು ಕಟ್ಟುವಂತೆ ನೊಟೀಸ್ ಕಳುಹಿಸಿಕೊಡುತ್ತಿರುವದರಿಂದ, ಈ ಕ್ರಾಪ್ ಲೋನನ್ನು ನಮ್ಮ ಭಾವನ ತಮ್ಮ ಕುಪೇಂದ್ರ ಕಟ್ಟಬೇಕಾಗಿರುವದರಿಂದ ಆತನಿಗೆ ಕಟ್ಟುವಂತೆ ಹೇಳಿದಕ್ಕೆ ಆತನು ಹಾಗೂ ಅವನ ಅಕ್ಕ ಮಲ್ಲಮ್ಮ ಇಬ್ಬರು ಕೆಲವು ದಿವಸಗಳಿಂದ ನಮ್ಮ ಭಾವ ಹಾಗೂ ತಂಗಿ ಸುನೀತಾ ಇವರಿಬ್ಬರಿಗೆ ಸಿಕ್ಕಾಪಟ್ಟೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಬರುತ್ತಿದ್ದು, ಅದನ್ನು ನಮ್ಮ ಭಾವ ಸಹನೆ ಮಾಡಿಕೊಂಡು ಬಂದಿದ್ದು ವಿಷಯ ನನಗೆ ಹಾಗೂ ಗ್ರಾಮದ ಹಿರಿಯವರಿಗೆ ಗೊತ್ತಾಗಿ ಸಮಾಧಾನ ಮಾಡಿದ್ದು ಇರುತ್ತದೆ. ದಿನಾಂಕ 21/06/2014 ರಂದು ಬೆಳಿಗ್ಗೆ 11:30 ಗಂಟೆಗೆ ಮತ್ತು ದಿನಾಂಕ 22/06/2014 ರಂದು ಮದ್ಯಾಹ್ನ 1:30 ಗಂಟೆಗೆ ಕುಪೇಂದ್ರ ಹಾಗೂ ಮಲ್ಲಮ್ಮ ಇವರಿಬ್ಬರು ನಮ್ಮ ಭಾವನವರ ಮನೆಯವರೆಗ ಹೋಗಿ ಈ ಕ್ರಾಪ್ ಲೋನಿನ ವಿಷಯದಲ್ಲಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿ ನಮ್ಮ ಭಾವನ ಕಣ್ಣಿಗೆ ಕಂದು ಗಾಯ ಪಡಿಸಿರುತ್ತಾರೆ. ನಮ್ಮ ತಂಗಿಗೆ ಮಲ್ಲಮ್ಮ ಇವಳು ನೂಕಿಸಿಕೊಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: