POLICE BHAVAN KALABURAGI

POLICE BHAVAN KALABURAGI

24 June 2014

Gulbarga District Reported Crimes

ಹಲ್ಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಮಹ್ಮದ ಮೋಸಿನ ತಂದೆ ಗುಲಾಮ್ ನಬಿ ಸಾಃ ನೆ ನಂ. 166, ಮುನ್ಸುಫದಾರ ಲೇಔಟ ಗುಲಬರ್ಗಾ  ರವರು ದಿನಾಂಕಃ 23/06/2014 ರಂದು ತನ್ನ ಮನೆಯ ಹತ್ತಿರ ಇರುವ ಪೋಸ್ಟ ಮ್ಯಾನ್ ಇತನು ಪೈಪನಿಂದ ನೀರನ್ನು ತೆಗೆದುಕೊಳ್ಳುತ್ತಿರುವಾಗ ಫಿರ್ಯಾದಿದಾರರು ಡ್ಯಾಮೇಜ್ ಆದ ಪೈಪನಿಂದ ನೀರು ತೆಗೆಯಬೇಡ ಇದರಿಂದ ರೋಡ್ ಖರಾಬ್ ಆಗುತ್ತದೆ ಅಂದಿದಕ್ಕೆ ಪೋಸ್ಟ ಮ್ಯಾನ್ ಇತನು ನನಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನನಗೆ ಹೊಡೆ ಹತ್ತಿದನು. ಮತ್ತು ಆತನ ಹೆಂಡತಿ ಹಾಗ ಇತರರು ನನಗೆ ಹೊಡೆ ಬಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಮಾಹಾತ್ಮಾ ಬಸವೇಶ್ವರ ನಗರ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಉದಯಕುಮಾರ ತಂದೆ ಪರಮೇಶ್ವರ ಕಣಸೂರ ಸಾಃ ಬಸವೇಶ್ವರ ಕಾಲೋನಿ ಗುಲಬರ್ಗಾ ಇವರ ತಮ್ಮನಾದ ಆನಂದ ಕುಮಾರ ತಂದೆ ಪರಮೇಶ್ವರ ವಯಃ 32 ವರ್ಷ ಇತನು ದಿನಾಂಕ:  09-06-2014 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ಫಿರ್ಯಾದಿಯ ಮನೆಯಿಂದ ಹೊರಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವನು ಇಲ್ಲಿಯವರೆಗೆ ಮರಳಿ ಮನೆಗೆ ಬಂದಿರುವುದಿಲ್ಲಾ. ನನ್ನ ತಮ್ಮನ ಮೊಬೈಲ್ ನಂ. 8971579203 ನೇದ್ದಕ್ಕೆ ಫೋನ್ ಹಚ್ಚಿದಾಗ ನಾಟ್ ರಿಚೇಬಲ್ ಮತ್ತು ಸ್ವಿಚ್ ಆಫ್ ಅಂತಾ ಬರುತ್ತಿದ್ದು ಸಂಬಂಧಿಕರಲ್ಲಿ ಹಾಗು ನಗರದ ಇತರೆ ಕಡೆಗಳಲ್ಲಿ ಹುಡುಕಾಡಿದರೂ ಇರುವಿಕೆಯ ಬಗ್ಗೆ ಮಾಹಿತಿ ಲಭ್ಯವಾಗಿರುವುದಿಲ್ಲಾ. ಅಂಥಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: