POLICE BHAVAN KALABURAGI

POLICE BHAVAN KALABURAGI

13 December 2013

Gulbarga District Reported Crimes

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸುನೀಲಕುಮಾರ  ತಂದೆ ತಿಪ್ಪಣ್ಣಾ ಸಾ:ವಿಧ್ಯಾನಗರ   ಗುಲಬರ್ಗಾ ರವರು ದಿನಾಂಕ 19-11-2013 ರಂದು ಸಾಯಂಕಾಲ 06-30 ಗಂಟೆಗೆ ತಾನು ಮತ್ತು ತಂದೆ ತಿಪ್ಪಣ್ಣಾ ಇವರು ಅಟೋರೀಕ್ಷಾ ನಂ: ಕೆಎ 32 - 9417 ನೆದ್ದರಲ್ಲಿ ಕುಳಿತು ಎಸ್.ಬಿ.ಪೆಟ್ರೋಲ್ ಪಂಪ್ ದಿಂದ ಕೋರ್ಟ ರೋಡ ಕಡೆಗೆ ಹೋಗುತ್ತಿದ್ದಾಗ ಕೆ.ಇ.ಬಿ. ಆಫೀಸ  ಹಿಂದಿನ ರೋಡ ಮೇಲೆ ಅಟೋರೀಕ್ಷಾ ಚಾಲಕ ಅನೀಲಕುಮಾರ ಈತನು ತನ್ನ ಅಟೋರೀಕ್ಷಾವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರೋಡ ಜಂಪಿನಲ್ಲಿ ಕಟ್ ಹೊಡೆದಿದ್ದರಿಂದ ಅಟೋರೀಕ್ಷಾ ಬಾಗಿಲ ಹತ್ತಿರ ಕುಳಿತಿದ್ದ  ತಿಪ್ಪಣ್ಣಾ ಈತನು ಅಟೋ ದಿಂದ ಕೆಳಗೆ ಬಿಳಿಸಿ  ಭಾರಿ ಗುಪ್ತ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಮಾಡಲು ಪ್ರಯತ್ನ :
ನರೋಣಾ ಠಾಣೆ : ಶ್ರೀ  ಪ್ರಲ್ದಾದ ತಂದೆ ಶಾಮರಾವ ಪಾಟೀಲ್ ಉದ್ಯೋಗ ಎಸ್ ಬಿ ಐ ಕಡಗಂಚಿ ಶಾಖೆಯ ವ್ಯವಸ್ಥಾಪಕ ಪ್ಲಾಟ ನಂ 15 . ಎಸ್ ಬಿ ಐ ಕಾಲೋನಿ ಹಳೆ ಜೇವರ್ಗಿ ರಸ್ತೆ ಗುಲಬರ್ಗಾ ದಿನಾಂಕ 12-12-2013 ರಂದು ನಾನು ಕಡಗಂಚಿ ಬ್ಯಾಂಕಿಗೆ ಕರ್ತವ್ಯ ನಿರ್ವಹಿಸಲು ಗುಲಬರ್ಗಾದಿಂದ ಶ್ರೀ.ಗೋವಿಂದ ವಾಮನರಾವ ದೇಶಪಾಂಡೆ [Dy.ಮ್ಯಾನೇಜರ] ಇಬ್ಬರೂ ಕೂಡಿ ಬಸ್ ಮೂಲಕ ಬರುತ್ತಿರುವಾಗ ಮಾರ್ಗ ಮಧ್ಯದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಹತ್ತಿರ  ಬೆಳಿಗ್ಗೆ 9-40 ಕ್ಕೆ ನಮ್ಮ ಶಾಖೆಯ  ಹಣಕಾಸಿನ ಅಧಿಕಾರಿಯಾದ ಕರಬಸಪ್ಪ ತಂದೆ ಈರಪ್ಪ ಗಡಬಳ್ಳಿಯವರು ನನ್ನ ದೂರವಾಣಿಗೆ 9448991852 ಕ್ಕೆ ಕರೆಮಾಡಿ ನಮ್ಮ ಬ್ಯಾಂಕಿನ ಮುಂದಿನ ಬಾಗಿಲಿಗೆ ಒಳಗಿನಿಂದ ಬೋಲ್ಟ ಹಾಕಿದ್ದರಿಂದ ಬಾಗಿಲು ತೆಗೆಯುತ್ತಿಲ್ಲ ಇದರಿಂದ  ಸಂಶಯಗೊಂಡು ಕಟ್ಟಡದ ಸುತ್ತಲು ತಿರುಗಾಡಿ ನೋಡಿದಾಗ ಹಿಂದಿನ ಗೋಡೆ ಕಿಟಕಿಯ ಕಬ್ಬೀಣದ ರಾಡುಗಳನ್ನು ಯಾರೋ ಕಳ್ಳರು ಮುರಿದು ಮಣಿಸಿ ಒಳಗೆ ಪ್ರವೇಶ ಮಾಡಿದಂತೆ ಕಂಡು ಬರುತ್ತಿದೆ ಎಂದು ತಿಳಿಸಿದರು ನಂತರ ಬೆಳಿಗ್ಗೆ 10-00 ಗಂಟೆಗೆ ನಾನು ಶಾಖೆಗೆ ಬಂದು ನೋಡಲಾಗಿ ಮುಖ್ಯ ಬಾಗಿಲಿನ ಒಳಗಡೆ ಬೋಲ್ಟ ಹಾಗಿದ್ದು  ಹಿಂದಿನ ಕಿಟಕಿಯ ರಾಡುಗಳನ್ನು ಯಾರೋ ಮಣಿಸಿದ್ದರು ಆಗ ನಾನು ನರೋಣಾ ಪೊಲೀಸ ಠಾಣೆಗೆ ,ಗುಲಬರ್ಗಾ ಕಂಟ್ರೋಲ್ ರೂಮಗೆ ಮತ್ತು ನಮ್ಮ ಮೇಲಾಧಿಕಾರಿಗೆ ಪೋನ ಮಾಡಿ ತಿಳಿಸಿದ್ದು ಸ್ವಲ್ಪ ಹೊತ್ತಿನಲ್ಲೆ ಪೊಲೀಸರು ಬಂದು ಸಿಬ್ಬಂದಿಯವರು ಬ್ಯಾಂಕ ಒಳಗೆ ಹೋಗಿ ನೋಡಲಾಗಿ ಭದ್ರತಾ ಕೋಣೆ ಮುಂಭಾಗದಲ್ಲಿರುವ ಅಕೌಂಟೆಂಟ ಸೇಫನ ವೆಲ್ಟಿಂಗ ಒಡೆದು ಒಂದು ಭಾಘದ ತಗಡು ಕಟಮಾಡಿದ್ದು ಮತ್ತು ಭದ್ರತಾ ಕೋಣೆಯ ಬಾಗಿಲಿನ ಕೀಲಿ ಹಾಕುವ ಜಾಗದಲ್ಲಿ. ಎರಡು ರಂದ್ರಗಳು ಹಾಕಿದ್ದು ಕಂಡು ಬರುತ್ತದೆ.ಶಾಖೆಯಲ್ಲಿನ ಹಣ ಮತ್ತು ಇತರೆ ಯಾವುದೆ ಬೆಲೆ ಬಾಳುವ ಸಾಮಾಣುಗಳು ಕಳುವು ಆಗಿರುವದಿಲ್ಲ ಸಿ ಸಿ ಟಿ ವಿ ಪ್ರಕಾರ ಈ ಗಟನೆಯ ದಿನಾಂಕ 11-12-2013 ರಂದು ರಾತ್ರಿ 11-45 ಗಂಟೆಯಿಂದ ದಿನಾಂಕ 12-12-2013 ರ ಮುಂಜಾನೆ 5 ಗಂಟೆಯ ಮಧ್ಯದಲ್ಲಿ ಜರುಗಿರುವದು ಕಂಡು ಬರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಕ್ರಮವಾಗಿ ನಾಡ ಪಿಸ್ತೂಲ ಮಾರಾಟ ಮಾಡುತ್ತಿದ್ದವರ ಬಂಧನ :              
ಗ್ರಾಮೀಣ ಠಾಣೆ : ದಿನಾಂಕ 11-12-2013 ರಂದು ರಾಮ ನಗರ ಬಡಾವಣೆಯ ಹತ್ತಿರ ಸೆಂಟ್ರೇಲ್ ಎಕ್ಸೈಜ್ ಕಛೇರಿಯ ಹತ್ತಿರ ಬಯಲು ಜಾಗೆಯಲ್ಲಿ ಇಬ್ಬರು ಅಕ್ರಮವಾಗಿ  ಪಿಸ್ತೂಲುಗಳು ಮಾರಾಟ ಮಾಡುತ್ತಿರುವರೆಂಬ ಬಾತ್ಮಿ ಮೇರೆಗೆ ಮಾನ್ಯ ಸಂತೊಷ ಬಾಬು ಎ.ಎಸ್.ಪಿ ಗ್ರಾಮಾಂತರ ಉಪ ವಿಭಾಗ ಇವರ ಮಾರ್ಗ ದರ್ಶನದಲ್ಲಿ ಶ್ರೀ ಡಿ.ಜಿ ರಾಜಣ್ಣ ಸಿಪಿಐ ಗ್ರಾಮೀಣ ವೃತ್ತ ಗುಲಬರ್ಗಾ, ಶ್ರೀ ಬಾಪುಗೌಡ ಪಿ.ಎಸ್.ಐ ಮಹಾಗಾಂವ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯರವಾದ ಪ್ರಭುಲಿಂಗ, ಅಯುಬ, ಶಿವಕುಮಾರ, ಹುಸೇನ ಬಾಷಾ, ರಾಜಕುಮಾರ, ನರಸಿಂಹಚಾರಿ, ಗುರುಶಾಂತ, ಕಂಠೆಪ್ಪ, ಹಣಮಂತ, ಅನೀಲ, ಆನಂದ, ಕುಪೇಂದ್ರ, ಮಿರ್ಜಾ ಅಮಜದ ಬೇಗ ಮತ್ತು ಭವಾನಸಿಂಗ ಈ ರೀತಿಯಾಗಿ ತಂಡ ರಚನೆ ಮಾಡಿ ಸೆಂಟ್ರಲ್‌ ಎಕ್ಸೈಜ್ ಕಛೇರಿಯ ರಾಮನಗರ ಹತ್ತಿರ ಬಯಲು ಜಾಗೆಯಲ್ಲಿ ಮಧ್ಯಾಹ್ನ ದಾಳಿ ಮಾಡಿ ಆಪಾದಿತರಾದ 1. ದತ್ತು ತಂದೆ ಸಕಾರಾಮ, ಸಾ: ರಾಮ ನಗರ ಗುಲಬರ್ಗಾ, 2. ವಿನೋದ ತಂದೆ ರಾಣಪ್ಪ ವಳಕರ್, ಸಾ: ಸಂಜೀವ ನಗರ ಗುಲಬರ್ಗಾ ಇವರನ್ನು ದಸ್ತಗಿರಿ ಮಾಡಿ, ಸದರಿಯವರಿಂದ ನಾಡ ಪಿಸ್ತೂಲು – 02, ಅಂದಾಜು ಕಿಮ್ಮತ್ತು 1,50,000/- ಹಾಗೂ ಒಂದು ಮೋಟರ ಸೈಕಲ ಅಂದಾಜು ಕಿಮ್ಮತ್ತು 35,000/-  ಹೀಗೆ ಒಟ್ಟು 1,85,000/-ರೂ ಬೆಲೆ ಬಾಳುವ ನಾಡ ಪಿಸ್ತೂಲ್ ಮತ್ತು ಮೊಟಾರ ಸೈಕಲ ಜಪ್ತ ಪಡಿಸಿಕೊಂಡು ಆಪಾದಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿಕೊಡಲಾಗಿದೆ. ಈ ಬಗ್ಗೆ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: