POLICE BHAVAN KALABURAGI

POLICE BHAVAN KALABURAGI

13 December 2013

Gulbarga District Reported Crimes

ಕಳವು ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀ. ಮಹ್ಮದ ಫಸಿಯೊದ್ದಿನ್ ತಂದೆ ಮಹ್ಮದ ನಸೀರೊದ್ದಿನ್ ಶೇಖ ಸಾ|| ಚುನ್ನಭಟ್ಟಿ ಮಕ್ಕಾ ಕಾಲೊನಿ ಗುಲಬರ್ಗಾ ರವರ ಅಕ್ಕಳಾದ ಶಾಹೀನ ಬೇಗಂ ಗಂಟ ಅಬ್ದುಲ ಹಮೀದ ಸಮಸ್ತಿ ಇವರ ಮನೆ ನಮ್ಮ ಮನೆ ಹತ್ತಿರವೇ ಇದ್ದು ನನ್ನ ಅಕ್ಕನ ಮಗನಾದ ಮೊಹೀನ್ ಇತನು ದುಬೈದಲ್ಲಿ ವಾಸವಾಗಿದ್ದು ಅವನಿಗೆ ಭೇಟಿ ಆಗಿ ಬರಲು ನನ್ನ ಅಕ್ಕ ಮತ್ತು ಅಕ್ಕನ ಗಂಡ 17-11-2013 ರಂದು ದುಬೈಗೆ ಹೋಗಿದ್ದು ಅವರ ಮನೆಯಲ್ಲಿ ಯಾರು ಇಲ್ಲದ ಕಾರಣ ನಾನೆ ದಿನಾಲು ಮಲಗಲು ಹೋಗಿ ಬರುತ್ತಿರುವೇನು ದಿನಾಂಕ 12-12-2013 ರಂದು ರಾತ್ರಿ 11.30 ಗಂಟೆ ವರೆಗೆ ನಾನು ನನ್ನ ಅಕ್ಕನ ಮನೆಯಲ್ಲಿ ಇದ್ದು ನಂತರ ಸದರಿ ನಮನೆಯಲ್ಲಿ ಒಂದು ಲೈಟ ಹಾಕಿ ಮನೆಗೆ ಕೀಲಿ ಹಾಕಿಕೊಂಡು ನನ್ನ ಮನೆಗೆ ಮಲಗಿಕೊಳ್ಳಲು ಹೋದೆನು ಇಂದು ದಿನಾಂಕ 13-12-2013 ರಂದು ಬೆಳಿಗ್ಗೆ ಎದ್ದು 8-00 ಗಂಟೆಗೆ ನನ್ನ ಅಕ್ಕನ ಮನೆಯ ಕಂಪೌಂಡಿಗೆ ಹಾಕಿದ ಬೀಗ ತೆಗೆದು ನೂಕಲು ಗೇಟ್ ತೆರೆಯಲಿಲ್ಲಾ ಒಳಗಡೆ ಯಾರೋ ಕೊಂಡಿ ಹಾಕಿದ್ದರಿಂದ ನಾನು ಕಂಪೌಂಡ ಹಾರಿ ಮನೆಯ ಮುಖ್ಯ ಬಾಗಿಲು ತೆರೆಯಲು ನೋಡಿದಾಗ ಬಾಗಿಲ ಕೀಲಿ ಯಾರೋ ಕಟ್ ಮಾಡಲು ಪ್ರಯತ್ನಿಸಿದ್ದು ಅದು ತೆರೆಯದೆ ಇದ್ದಾಗ ಪಕ್ಕದ ಸಿಟ್ಔಟ ಕೋಣೆ ಬಾಗಲದ ಕಿಡಕಿ ಗ್ಲಾಸ ಒಡೆದು ಒಳಗೆ ಕೈ ಹಾಕಿ ಕೊಂಡಿ ತೆರೆದು ಒಳಗೆಡೆ ಪ್ರವೇಶ ಮಾಡಿ ಕಿಚನ್ ಕೋಣೆಯ ಕಡೆಗೆ ಇರುವ ಬಾಗಿಲನ್ನು ಮುರಿದು ಬೆಡ್ ರೂಮಿನ ಬಾಗಿಲಿನಿಂದ ಪ್ರವೇಶ ಮಾಡಿ 2 ಅಲಮಾರಿ ಬೀಗ ಮುರಿದು ಬೆಳ್ಳಿ ಬಂಗಾರದ ಆಭರಣ ನಗದು ಹಣ ಹೀಗೆ ಒಟ್ಟು 1,67,500/- ರೂ ಕಿಮ್ಮತ್ತಿನ ಬೆಲೆಯುಳ್ಳ ಸಾಮಾನು ಯಾರೋ ಕಳ್ಳರು ರಾತ್ರಿ 12.00 ಗಂಟೆಯಿಂದ ಬೆಳಗಿನ ಜಾವ 5.00 ಗಂಟೆ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ,  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: