POLICE BHAVAN KALABURAGI

POLICE BHAVAN KALABURAGI

09 October 2013

ಜೂಜಾಟ ಪ್ರಕರಣಗಳು :
ರಟಕಲ್ ಠಾಣೆ : ದಿನಾಂಕ 08.10.2013 ರಂದು 11.00 ಎ.ಎಂ,ಕ್ಕೆ ದುತ್ತರಗಾ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ ಜೂಜಾಟ ಆಡುತ್ತಿರುವ ಬಗ್ಗೆ ಬಾತ್ಮಿ ಮೇರೆಗೆ ಉಭಯ ಪಂಚರನ್ನು ಹಾಗು ಠಾಣೆಯ ಸಿಬ್ಬಂದಿರವರೊಂದಿಗೆ ದುತ್ತರಗಾ ಗ್ರಾಮದಲ್ಲಿ ಬಾತ್ಮಿ ಸ್ಥಳಕ್ಕೆ ತಲುಪಿ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿಯುವಷ್ಟರಲ್ಲಿ ಒಬ್ಬ ಓಡಿ ಹೋಗಿದ್ದು  4 ಜನ ಸಿಕ್ಕಿದ್ದು ಸದರಿ ಆರೋಪಿತರಿಂದ 1990.00 ರೂ ನಗದು ಹಣ ಹಾಗು 52 ಇಸ್ಫೀಟ ಎಲೆಗಳು ಗುನ್ನೆ ಜಾಗೆಯಲ್ಲಿ ಜಪ್ತಿ ಮಾಡಿಕೊಂಡು  ನಾಲ್ಕು ಜನ ಆರೋಪಿತರು ಹಾಗು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ಸದರಿಯವರ ವಿರುದ್ಧ ರಟಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಟಕಲ್ ಠಾಣೆ : ದಿನಾಂಕ 08.10.2013 ರಂದು 04.00 ಪಿ.ಎಂ, ಸುಮಾರಿಗೆ ಚೆಂಗಟಾ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ ಜೂಜಾಟ ಆಡುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದು ಉಭಯ ಪಂಚರನ್ನು ಹಾಗು ಠಾಣೆಯ ಸಿಬ್ಬಂದಿರವರೊಂದಿಗೆ ಚೆಂಗಟಾ ಗ್ರಾಮದಲ್ಲಿ ಬಾತ್ಮಿ ಸ್ಥಳಕ್ಕೆ ತಲುಪಿ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ 7 ಜನರನ್ನು ಹಿಡಿದು ಸದರಿ ಆರೋಪಿತರಿಂದ 2560.00 ರೂ ನಗದು ಹಣ ಹಾಗು 52ಇಸ್ಫೀಟ ಎಲೆಗಳು ಗುನ್ನೆ ಜಾಗೆಯಲ್ಲಿ ಜಪ್ತಿ ಮಾಡಿಕೊಂಡು  ಜಪ್ತಿ ಪಂಚನಾಮೆ 7 ಜನ ಆರೋಪಿತರು ಹಾಗು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ಸದರಿಯವರ ವಿರುದ್ಧ ರಟಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ  08-10-2013 ರಂದು ರಾತ್ರಿ 08-00 ಗಂಟೆಗೆ ಶ್ರೀ ಕಿರಣ ತಂದೆ ಹೀರೂ ರಾಠೋಡ ಸಾ: ಬಳೂರ್ಗಿ ತಾಂಡಾ, ತಾ: ಅಫಜಲಪೂರ ಮತ್ತು ಅವರ ಗೆಳೆಯ ರಿಯಾಜ ತಂದೆ ಬಾಬು ಪಟೇಲ್ ಇಬ್ಬರು ಊಟ ಮಾಡಲು ಖಾನಾವಳಿಗೆ ಹೋಗುತ್ತಿರುವಾಗ ಬಸವೇಶ್ವರ ವೃತ್ತದ ಹತ್ತಿರ ಹೋಗುತ್ತಿರುವಾಗ ಅಂಬೇಡ್ಕರ ವೃತ್ತದ ಕಡೆಯಿಂದ ಒಬ್ಬ ಮೋಟಾರ ಸೈಕಲ ಸವಾರನು ಅತೀ ವೇಗ ಮತ್ತು ನಿಸ್ಕಾಳಜೀತನದಿಂದ ತನ್ನ ಮೋಟಾರ ಸೈಕಲನ್ನು ಓಡಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ ನನ್ನ ಎಡಪಾದದ ಮೇಲೆ ಹಾಯಿಸಿದನು ಸದರಿ ಮೋಟಾರ ಸೈಕಲ್ ಸವಾರನು ತನ್ನ ಮೊಟಾರ ಸೈಕಲ್ ಸಮೇತ ಓಡಿ ಹೋಗಿರುತ್ತಾನೆ. ಸದರಿ ಮೋಟಾರ ಸೈಕಲ ನಂ. ಕೆಎ-32 - 3521 ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ಇಂದು ದಿನಾಂಕ 08-10-2013 ರಂದು 04-15 ಪಿ.ಎಮ್ ಕ್ಕೆ ಶ್ರೀ ನಾಗಪ್ಪಾ ತಂದೆ ಶರಣಪ್ಪಾ ಹಡಪದ,  ಜಾಃ ತೆಲಗು ಹಡಪದ, ಸಾಃ ಕೆರೆ ಅಂಬಲಗಾ, ತಾಃ ಆಳಂದ ಮತ್ತು ತಮ್ಮೂರಿನ ಭೀಮಾಶಂಕರ ಸುತಾರ ಇಬ್ಬರೂ ನಡೆದುಕೊಂಡು ಬಂಬು ಬಜಾರ ಕಡೆ ಹೋಗುತ್ತಿದ್ದಾಗ ಜಿ.ಡಿ.ಎ ಕಾಲೂನಿ ಹತ್ತಿರ ಇರುವ ದಾಲ್ ಮಿಲ್ ಹತ್ತಿರ ಫಿಲ್ಟರ ಬೆಡ್ ಕಡೆಯಿಂದ ಒಂದು ಮೋಟಾರ ಸೈಕಲ ನಂ. ಕೆ.ಎ 32 ಇ.ಬಿ 2583 ನೇದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ನನ್ನ  ಕಾಲಿಗೆ ಭಾರಿ ಗುಪ್ತಗಾಯ ಪಡಿಸಿ ತನ್ನ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ಶ್ರೀ ಶಂಕ್ರೆಪ್ಪ ತಂ ಗುಂಡಪ್ಪ ಟೈಗರ ಸಾ :ಹರಸೂರ ಇವರು ದಿನಾಂಕ 07-10-2013 ರಂದು  ಹಳ್ಳಕ್ಕೆ ಹೋಗುತ್ತಿದ್ದಾಗ 11.30 ,ಎಮ್,ಕ್ಕೆ ಶಿವಶರಣಪ್ಪ ಮುದ್ದಾ ರವರ ಹೋಲದ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ನಮ್ಮ ಅಣ್ಣ ತಮ್ಮಕಿಯವನಾದ ಮಾಪಣ್ಣ ಇತನ ಮಗ ಇಲೇಶ @ವಿಲಾಸ ಇತನು ತಾನು ತೆಗೆದುಕೊಂಡು ಬಂದಿದ್ದ ಮೋಟಾರ ಸೈಕಲ ನಂ ಕೆ,,32  3525ನೇದ್ದರ ಮೇಲೆ ತನ್ನ ಮಗನಾದ ಸುನೀಲ ಇತನಿಗೆ ಹಿಂದೆ ಕೂಡಿಸಿಕೊಂಡು ಮನೆಕಡೆಗೆ ಬರುತ್ತಿದ್ದು ಮುದ್ದಾರವರ ಹೋಲದ ಹತ್ತಿರ ಇಲೇಶ @ವಿಲಾಸ ಇತನು ತನ್ನ ವಶದಲ್ಲಿದ್ದ ಮೋಟಾರ ಸೈಕಲನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿದ್ದರಿಂದ ಆತನ ಹಿಂದೆ ಕುಳಿತ ತನ್ನ ಮಗ ಸುನೀಲ ಇತನು ರೋಡಿನ ಮೇಲೆ ಜೋರಾಗಿ ಬಿದ್ದಿದರಿಂದ ಆತನ ತಲೆಯ ಮೇಲೆ ಬಲಗಡೆಗೆ ಭಾರಿ ರಕ್ತಗಾಯ ಹಾಗೂ ಭಾರಿ ಒಳಪೆಟ್ಟು ಬೆನ್ನಿಗೆ ಮತ್ತು ಬಲಗಾಲಿಗೆ ಪಾದದ ಹತ್ತಿರ ತರಚೀದ ರಕ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಮಳಖೇಡ ಠಾಣೆ : ದಿನಾಂಕ 08-10-2013 ರಂದು ರಾತ್ರಿ ಶ್ರೀ ನಾಗಪ್ಪ ತಂದೆ ದೇವಪ್ಪ ಇಟಗಿ ಸಾ : ಹುಡಾಬಿ ರವರ  ಮಗನಾದ ಮಾಳಪ್ಪ ಈತನು ದಿನಾಮಕ 07-10-2013 ರಂದು ಮುಂಜಾನೆ 10 ಗಂಟೆಗೆ ದನಗಳನ್ನು ಕಾಯುವ ಕುರಿತು ಹೋಗಿದ್ದು ಮನೆಗೆ ಬಂದಿರುವದಿಲ್ಲ ನಂತರ ದಿನಾಂಕ 08-10-2013 ರಂದು  ನಂತರ ಸೌತ್ ಇಂಡಿಯಾ ಸಿಂಮೆಂಟ್ ಕಂಪನಿಯ ಮೈನ್ಸನಲ್ಲಿ ನಿಂತಿದ್ದ ನೀರಿನಲ್ಲಿ ಹುಡುಕಲಾಗಿ ನನ್ನ ಮಗನ ಶವ ದೋರೆತಿದ್ದುನನ್ನಮಗನು ದಿನಂಕ 07-10-2013 ರಂದು 10 ಎ.ಎಮ್ ದಿಂದ ದಿನಾಂಕ 08-10-2013 ರ ಮುಂಜಾನೆ 8 ಗಂಟೆಯ ಮಧ್ಯದಲ್ಲಿ ನಂತರ ಸೌತ್ ಇಂಡಿಯಾ ಸಿಂಮೆಂಟ್ ಕಂಪನಿಯ ಮೈನ್ಸನಲ್ಲಿ ನಿಂತಿದ್ದ ನೀರಿನಲ್ಲಿ ಆಕಸ್ಮಿಕವಾಗಿ ಬಿದ್ದು  ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಕೊರಳಲ್ಲಿದ್ದ ಜೀರಾ ಮಣಿ ಕಸಿದುಕೊಂಡು ಹೋದ ಪ್ರಕರಣ :
ಜೇವರ್ಗಿ ಠಾಣೆ : ಶ್ರೀಮತಿ ಸಾತಮ್ಮ ಗಂಡ ಶರಣಬಸು ಕೊತ್ತಲಪ್ಪ ಸಾಮಾರಿ ಸಾ: ತಳವಾರ ಓಣಿ ಜೇವರ್ಗಿ ಈಗ ನಾನು ಸುಮಾರು 2 ವರ್ಷಗಳಿಂದ ನನ್ನ ತಾಯಿಯಾದ ಗಂಗಾಬಾಯಿ ಇವಳೊಂದಿಗೆ ಜೇವರ್ಗಿಯಲ್ಲಿಯೇ ವಾಸವಾಗಿರುತ್ತೇನೆ. ದಿನಾಂಕ 08-10-2013 ರಂದು ಮುಂಜಾನೆ ಕೂಲಿ ಕೆಲಸಕ್ಕೆಂದು ಹೋಗಿದ್ದು ಮದ್ಯಾಹ್ನ 3-00 ಗಂಟೆಗೆ ನಮ್ಮ ಓಣಿಯ ಭೀಮು ತಂದೆ ದತ್ತಪ್ಪ ಇತನು ಪೋನ ಮಾಡಿ ತಿಳಿಸಿದ್ದೇನೆಂದರೆ ನಮ್ಮ ಓಣಿಯ ಬಾಬುರಾವ ಇತನು ನಮ್ಮ ತಾಯಿಗೆ ಕುತ್ತಿಗಿಗೆ ಚಾಕುವಿನಿಂದ ಕೊಯ್ದು ಅವರ ಕೊರಳಲ್ಲಿನ ಜೀರಾಮಣಿ ಕಸಿದುಕೊಂಡು ಹೋಗಿರುತ್ತಾನೆ. ನಾನು ನಿಮ್ಮ ತಾಯಿಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಜೇವರ್ಗಿಗೆ ತೆಗದುಕೊಂಡು ಹೋಗುತ್ತಿದ್ದೇನೆ. ಅಂತ ವಿಷಯ ತಿಳಿಸಿದ ಕೂಡಲೆ ನಾನು ಸರಕಾರಿ ಆಸ್ಪತ್ರೆ ಜೇವರ್ಗಿಗೆ ಬಂದು ನೋಡಲಾಗಿ ಆಸ್ಪತ್ರೆಯಲ್ಲಿ ನನ್ನ ತಾಯಿ ಉಪಚಾರ ಪಡೆಯುತ್ತಿದ್ದಳು. ನನ್ನ ತಾಯಿಗೆ ಕುತ್ತಿಗೆ ಸುತ್ತಲೂ ಮತ್ತು ಅವಳ ಎರಡು ಕೈಗಳಿಗೆ ರಕ್ತಗಾಯವಾಗಿತ್ತು. ಅಲ್ಲಿದ್ದ ಭೀಮು ಇತನಿಂದ ತಿಳಿದುಕೊಂಡಿದೆನೆಂದರೆ ಇಂದು ಮದ್ಯಾಹ್ನ 2.30 ಗಂಟೆ ಸುಮಾರಿಗೆ ನಾನು ಮತ್ತು ನಿಮ್ಮ ತಾಯಿ ಗಂಗಾಬಾಯಿ ಇಬ್ಬರೂ ಮನೆಯ ಮುಂದೆ ಮಾತನಾಡುತ್ತ ಕುಳಿತುಕೊಂಡಿದ್ದೇವು ನಮ್ಮ ಓಣಿಯ ಬಾಬುರಾವ ಇತನು ಕುಡಿಯುವದಕ್ಕೆ ನಿಮ್ಮ ತಾಯಿಗೆ ಹಣ ಕೊಡು ಅಂದಾಗ ಹಣ ಇಲ್ಲ ಅಂದಾಗ ರಂಡಿ ಹಣ ಇಲ್ಲ ಅಂತಿ ಅಂದವನೆ ತನ್ನ ಹತ್ತಿರ ಇದ್ದ ಚಾಕುನ್ನು ತೆಗೆದುಕೊಂಡು ಕೊಲೆ ಮಾಡುವ ಉದ್ದೇಶದಿಂದ ನಿಮ್ಮ ತಾಯಿಯ ಕುತ್ತಿಗಿಗೆ ಕೊಯ್ದು ಕೊರಲ್ಲಿನ ಚೀರಾಮಣಿ ಕಸಿದುಕೊಂಡನು. ನಾನು ಬಿಡಿಸದೇ ಹೋದರೆ ನಿಮ್ಮ ತಾಯಿಗೆ ಕೊಲೆ ಮಾಡಿ ಬಿಡುತ್ತಿದ್ದ ಅಂತಾ ತಿಳಿಸಿದನು. ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಅರ್ಜುನ  ಮತ್ತು ಆತನ ಹೆಂಡತಿ ಮನೆಯ ಹೊರಗಡೆ ಮಲಗಿದ್ದು ಎದ್ದು ಮನೆಯ ಒಳಗಡೆ ಹೋಗ ಬೇಕು ಅನ್ನುವಷ್ಟರಲ್ಲಿ ಮನೆಗೆ ಹಾಕಿದ ಕೊಂಡಿ ತೆರೆದ ಬಗ್ಗೆ ನೋಡಿ ನಾನು ಮತ್ತು ನನ್ನ ಹೆಂಡತಿ ಕೂಡ ಮನೆಯ ಒಳಗಡೆ ಹೋಗಿ ನೋಡಲಾಗಿ ಮನೆಯಲ್ಲಿನ ಅಲಮಾರಿಯ ಮೇಲೆ ಇಟ್ಟ ಸೂಟಕೇಸದಲ್ಲಿಟ್ಟದಲ್ಲಿದ್ದ ಬಂಗಾರದ ಆಭರಣಗಳು ಮತ್ತು ದೇವರ ಮೂರ್ತಿ ಹಾಗು ಒಂದು ನೋಕಿಯಾ ಮೊಬೈಲ್ ಪೋನ ಹಿಗೆ ಅ,ಕಿ, 18,900/- ರೂ ನೇದ್ದವುಗಳನ್ನು ಯಾರೊ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ನಮ್ಮ ಮನೆಯ ಬಾಜು ಮನೆಯವರಾದ ಶ್ರಿ ಯಲ್ಲಪ್ಪಾ ತಂದೆ ಹಣಮಂತ ಕಾಡಸಿದ್ದರು ಇವರ ಮನೆಯಲ್ಲಿಟ್ಟದ್ದ ನಗದು ಹಣ 5000/- ಹಾಗೂ ಒಂದು ನೊಕಿಯಾ ಮೊಬೈಲ ಸಟ್ ಸಿಮ್ ನಂ:9902369762 ನೇದ್ದು ಅ.ಕಿ. 1,000/- ನೇದ್ದು ಕೂಡಾ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನಮ್ಮ ಮನೆಯ ಬಾಜು ಮನೆಯವರು ಕೂಡಾ ತಿಳಿಸಿದ್ದು  ಹೀಗೆ ಒಟ್ಟು ಅ,ಕಿ.24,900/- ನೇದ್ದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ಘಟನೆಯು ದಿನಾಂಕ:07-10-2013 ರ 11.45 ಪಿಎಮ್ ದಿಂದ ದಿನಾಂಕ: 08-10-2013 ರ 6.30 ಎಎಮ್ ಸುಮಾರಿನ ಮದ್ಯದ ಅವಧಿಯಲ್ಲಿ ಆಗಿರುತ್ತದೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: