POLICE BHAVAN KALABURAGI

POLICE BHAVAN KALABURAGI

01 May 2013

GULBARGA DISTRICT

                      :: ಪೊಲೀಸ್ ಪ್ರಕಟಣೆ ::

ದಿನಾಂಕ:02-05-2013 ರಂದು ಗುಲಬರ್ಗಾ ಮಹಾ ನಗರಕ್ಕೆ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾದ ಶ್ರೀಮತಿ ಸೋನಿಯಾಗಾಂಧಿ ರವರು ಕಾಂಗ್ರೇಸ್ ಪಕ್ಷದ ವತಿಯಿಂದ ವಿಧಾನಸಭಾ ಚುನಾವಣೆ ಪ್ರಚಾರ ಕುರಿತು ಆಗಮಿಸುತ್ತಿದ್ದು, ಅವರ ಜೊತೆಗೆ ಇನ್ನೂ ಅನೇಕ ಗಣ್ಯ ವ್ಯಕ್ತಿಗಳು ಆಗಮಿಸುತ್ತಿರುವದರಿಂದ ಭದ್ರತಾ ದೃಷ್ಠಿಯಿಂದ ನಾಳೆ ದಿನಾಂಕ:02-05-2013 ರಂದು ಬೆಳಿಗ್ಗೆ 10-30 ಗಂಟೆಯಿಂದ ಮಧ್ಯಾಹ್ನ 1-00 ಗಂಟೆಯವರೆಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆ (ಜಿ.ಜಿ.ಎಚ್) ವೃತ್ತದಿಂದ ಹಳೆ ಡಿ.ಪಿ.ಓ ವರೆಗಿನ ರಸ್ತೆ ಹಾಗೂ ಜಗತ್ ವೃತ್ತದಿಂದ ಗೋವಾ ಹೊಟೇಲ್ ಹಾಗೂ ಮಾನ್ಯ ಧರ್ಮಸಿಂಗ ರವರ ಮನೆಯ ವರೆಗೆ ಇರುವ ರಸ್ತೆಯನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಸಂಪೂರ್ಣವಾಗಿ ನಿರ್ಭಂದಿಸಲಾಗಿದೆ. ಸಾರ್ವಜನಿಕರಿಗೆ ಸುಗಮ ಸಂಚಾರ ಕುರಿತು ಸಂಚಾರಿ ಸಿಬ್ಬಂದಿಯವರನ್ನು ನೇಮಿಸಿ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲಾ ಸರ್ಕಾರಿ ಆಸ್ಪತ್ರೆ ವೃತ್ತದಿಂದ ನೇರವಾಗಿ ಟೌನ ಹಾಲ್ ಕ್ರಾಸ್ ಮುಖಾಂತರ ಅಥವಾ ಅದಕ್ಕೂ ಮೊದಲು ಕುಳಗೇರಿ ಕ್ರಾಸ್ ಮುಖಾಂತರ ಇರುವ ರಸ್ತೆ ಉಪಯೋಗಿಸಬಹುದಾಗಿದೆ. ಹಾಗೂ ಶ್ರೀ ಶರಣಬಸವೇಶ್ವರ ದೇವಸ್ಥಾನದಿಂದ ವೆಂಕವ್ವ ಮಾರ್ಕೆಟ ರಸ್ತೆ ಮುಖಾಂತರ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿರುತ್ತದೆ. ಮತ್ತು ಜಗತ್ ವೃತ್ತದಿಂದ ಪಟೇಲ್ ವೃತ್ತದ ಕಡೆಗೆ ನೇರವಾಗಿ ಸಂಚರಿಸಬಹುದಾಗಿದೆ. ಕಾರಣ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಲು ಕೋರಲಾಗಿದೆ.   

No comments: